• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Jan Ki Baat Exit Poll: ಯಾರಿಗೆ ಸಿಗುತ್ತೆ ಜನಮತ? 'ಜನ್‌ ಕಿ ಬಾತ್‌'ನಲ್ಲಿ ಹೊರಬಿತ್ತು ಮತದಾರರ ಮನದಾಳ!

Jan Ki Baat Exit Poll: ಯಾರಿಗೆ ಸಿಗುತ್ತೆ ಜನಮತ? 'ಜನ್‌ ಕಿ ಬಾತ್‌'ನಲ್ಲಿ ಹೊರಬಿತ್ತು ಮತದಾರರ ಮನದಾಳ!

ಜನ್ ಕಿ ಬಾತ್ ಸಮೀಕ್ಷೆ

ಜನ್ ಕಿ ಬಾತ್ ಸಮೀಕ್ಷೆ

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಹಾಗಾದರೆ ಕಾಂಗ್ರೆಸ್ಗೆ ಎಷ್ಟು ಸ್ಥಾನ? ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ? ಪಕ್ಷೇತರ ಅಭ್ಯರ್ಥಿಗಳ ಹಣೆಬರಹವೇನು? ಈ ಎಲ್ಲಾ ಕುತೂಹಲಕ್ಕೆ ಇಲ್ಲಿದೆ ಉತ್ತರ…

 • News18 Kannada
 • 3-MIN READ
 • Last Updated :
 • Karnataka, India
 • Share this:

ಬೆಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka assembly elections) ಮತದಾನ (Voting) ಇದೀಗ ಮುಕ್ತಾಯವಾಗಿದೆ. ವೋಟಿಂಗ್ ಮುಗಿದ ಬೆನ್ನಲ್ಲೇ ವಿವಿಧ ರಾಷ್ಟ್ರೀಯ ವಾಹಿನಿಗಳು ಹಾಗೂ ಸರ್ವೆ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷಾ ವರದಿ (Exit Poll) ಹೊರಬಿದ್ದಿದೆ. ಏಷ್ಯಾನೆಟ್-ಜನ್‌ ಕಿ ಬಾತ್ (Asianet-Jan Ki Baat) ಜಂಟೀ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಇದರ ಪ್ರಕಾರ ಬಿಜೆಪಿ (BJP) ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಹಾಗಾದರೆ ಕಾಂಗ್ರೆಸ್‌ಗೆ (Congress) ಎಷ್ಟು ಸ್ಥಾನ? ಜೆಡಿಎಸ್‌ (JDS) ಕಿಂಗ್ ಮೇಕರ್ ಆಗುತ್ತಾ? ಪಕ್ಷೇತರ ಅಭ್ಯರ್ಥಿಗಳ ಹಣೆಬರಹವೇನು? ಈ ಎಲ್ಲಾ ಕುತೂಹಲಕ್ಕೆ ಇಲ್ಲಿದೆ ಉತ್ತರ…


ಜನ್‌ ಕಿ ಬಾತ್‌ ಫಲಿತಾಂಶವೇನು?


ಬಹುತೇಕ ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್‌ಗೆ ಈ ಬಾರಿ ಅಧಿಕಾರ ಸಿಗಬಹುದು ಅಂತ ಅಭಿಪ್ರಾಯ ಪಟ್ಟಿವೆ. ಆದರೆ ಜನ್‌ ಕಿ ಬಾತ್ ಏಷಿಯಾನೆಟ್ ಸಮೀಕ್ಷೆ ಪ್ರಕಾರ ಬಿಜೆಪಿಗೆ  ಅಧಿಕಾರ ಸಿಗುವ ಸಾಧ್ಯತೆ ಇದ್ದು, ಕಾಂಗ್ರೆಸ್ 2ನೇ ಅತಿದೊಡ್ಡ ಪಕ್ಷವಾಗಲಿದೆ.


ಬಿಜೆಪಿಗೆ ಮತ್ತೆ ಸಿಗುತ್ತಾ ಅಧಿಕಾರ?


ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಬಿಜೆಪಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅವಕಾಶ ಸಿಗುವ ಸಾಧ್ಯತೆ ಇದೆ. ಸಮೀಕ್ಷಾ ವರದಿ ಪ್ರಕಾರ ಬಿಜೆಪಿ 94ರಿಂದ 117 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.


ಜನ್‌ ಕಿ ಬಾತ್‌ ಪ್ರಕಾರ ಯಾರಿಗೆ ಎಷ್ಟು ಸ್ಥಾನ


ಜನ್ ಕಿ ಬಾತ್ ಪ್ರಕಾರ ಬಿಜೆಪಿಗೆ 94-117 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.  ಹಾಗೆಯೇ ಕಾಂಗ್ರೆಸ್ 91-106 ಸ್ಥಾನಗಳನ್ನು ಪಡೆಯಬಹುದು ಎನ್ನಲಾಗಿದೆ. ಅತ್ತ ಜೆಡಿಎಸ್‌ – 14-24 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಇನ್ನು ಪಕ್ಷೇತರರಿಗೆ 00-02 ಸ್ಥಾನಗಳು ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಒಟ್ಟು ಸ್ಥಾನಗಳು224
ಮ್ಯಾಜಿಕ್ ನಂಬರ್113
ಬಿಜೆಪಿ94-117
ಕಾಂಗ್ರೆಸ್91-106
ಜೆಡಿಎಸ್‌14-24
ಇತರೇ00-02


ಮತದ ಶೇಕಡಾವಾರು ಹಂಚಿಕೆ ಎಷ್ಟು?


ಇನ್ನು ಶೇಕಡಾವಾರು ಮತ ಹಂಚಿಕೆ ನೋಡುವುದಾದರೆ ಬಿಜೆಪಿ – ಶೇ. 37.5-39, ಕಾಂಗ್ರೆಸ್ – ಶೇ. 38-40, ಜೆಡಿಎಸ್ – ಶೇ. 14-17 ಮತಗಳನ್ನು ಪಡೆಯಲಿದೆ. ಇನ್ನು ಇತರೇ ಅಭ್ಯರ್ಥಿಗಳು ಶೇ. 8.5-6ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ.

ಬಿಜೆಪಿಶೇ. 37.5-39
ಕಾಂಗ್ರೆಸ್ಶೇ. 38-40
ಜೆಡಿಎಸ್ಶೇ. 14-17
ಇತರೇಶೇ. 8.5-6


ಒಟ್ಟು 2615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

top videos


  ರಾಜ್ಯದ ಒಟ್ಟು 2615 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಯಾರು ತಮ್ಮ ನಾಯಕ ಆಗಬೇಕು, ಯಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲು ಅವಕಾಶ ನೀಡಬೇಕು ಅಂತ ಈಗಾಗಲೇ ಮತದಾರರು ನಿರ್ಧರಿಸಿದ್ದಾರೆ. ಕಣದಲ್ಲಿ ಒಟ್ಟು 2615 ಅಭ್ಯರ್ಥಿಗಳಿದ್ದು, ಪೈಕಿ 2430 ಪುರುಷ ಅಭ್ಯರ್ಥಿಗಳು, 184 ಮಹಿಳಾ ಅಭ್ಯರ್ಥಿಗಳು ಹಾಗೂ ಒಬ್ಬರು ತೃತೀಯ ಲಿಂಗಿ ಅಭ್ಯರ್ಥಿ ಕಣದಲ್ಲಿದ್ದಾರೆ.

  First published: