ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Karnataka Assembly Election) ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣೆಯ (Election 2023) ಕಾವು ಜೋರಾಗಿದ್ದು, ಕನ್ನಡ ಚಿತ್ರರಂಗದ (Kannada Cinema Industry) ಘಟಾನುಘಟಿ ನಾಯಕರು ಈ ಬಾರಿ ಎಲೆಕ್ಷನ್ ಅಖಾಡಕ್ಕಿಳಿದು ನೆಚ್ಚಿನ ನಾಯಕರ ಪರ ಅಬ್ಬರದ ಪ್ರಚಾರಕ್ಕಿಳಿದಿದ್ದಾರೆ. ಬಿಜೆಪಿ ನಾಯಕ ಪರ ಸ್ಟಾರ್ ಪ್ರಚಾರಕರಾಗಿ ನಟ ಕಿಚ್ಚ ಸುದೀಪ್ (Actor Sudeep) ಎಲ್ಲೆಡೆ ಅಬ್ಬರಿಸುತ್ತಿದ್ದಾರೆ. ರಾಜ್ಯ ರಾಜಕೀಯದಿಂದಲೇ ದೂರ ಉಳಿದಿದ್ದ ದೊಡ್ಮನೆ ದೊಡ್ಡ ಮಗ ಶಿವಣ್ಣ (Shivaraj Kumar) ಕೂಡ ಪಾಲಿಟಿಕ್ಸ್ಗೆ ಎಂಟ್ರಿ ಕೊಡ್ತಿದ್ದಾರೆ. ಕಾಂಗ್ರೆಸ್ ಪರ ಪ್ರಚಾರಕ್ಕೆ ಶಿವರಾಜ್ ಕುಮಾರ್ ಸಿದ್ಧರಾಗಿದ್ದಾರೆ.
ಸ್ಟಾರ್ ಪ್ರಚಾರಕ್ಕೆ ಕಾಂಗ್ರೆಸ್ ಭರ್ಜರಿ ಸಿದ್ಧತೆ
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅಬ್ಬರ ಆಟ ಶುರುವಾಗಿದೆ. ಸಿನಿಮಾ ಸ್ಟಾರ್ಗಳು ಪ್ರಚಾರದ ಅಖಾಡಕ್ಕಿ ಧುಮುಕ್ಕಿದ್ದು, ರಾಜ್ಯ ರಾಜಕೀಯ ರಂಗೇರಿದೆ. ಇದೀಗ ಬಿಜೆಪಿ ಸ್ಟಾರ್ ಪ್ರಚಾರಾಗಿ ಸುದೀಪ್ ಮತಬೇಟೆಗೆ ಇಳಿದಿದ್ದಾರೆ. ಕಾಂಗ್ರೆಸ್ ಪರ ಚುನಾವಣಾ ಪ್ರಚಾರದ ಅಖಾಡಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಇಳಿಸಲು ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮಧು ಬಂಗಾರಪ್ಪ ಪರ ಶಿವಣ್ಣ ಪ್ರಚಾರ
ಸೋಮವಾರದಿಂದಲೇ (ಮೇ.01) ನಟ ಶಿವಣ್ಣ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ. ಶಿವಮೊಗ್ಗದ ಸೊರಬದ ಕ್ಷೇತ್ರದಲ್ಲಿ ಭಾಮೈದ ಮಧು ಬಂಗಾರಪ್ಪ ಪರ ಶಿವರಾಜ್ ಕುಮಾರ ಮತಯಾಚಿಸಲಿದ್ದಾರೆ. ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸೇರಿರುವ ಮಧು ಬಂಗಾರಪ್ಪ ಅವರನ್ನು ಈ ಬಾರಿ ಗೆಲ್ಲಿಸಲು ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಗೆಲ್ಲಿಸಲು ಪಣ ತೊಟ್ಟಂತಿದೆ.
ಟಗರು ಸಿದ್ದು ಪರ ಟಗರು ಶಿವಣ್ಣ ಪ್ರಚಾರ
ಮಾಜಿ ಸಿಎಂ ಸಿದ್ದರಾಮಯ್ಯ ಪರವೂ ನಟ ಶಿವರಾಜ್ ಕುಮಾರ್ ಪ್ರಚಾರ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಗೆಲುವಿಗಾಗಿ ವರುಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಸಿದ್ದರಾಮಯ್ಯ, ಮತದಾರರನ್ನು ಸೆಳೆಯಲು ನಾನಾ ಪ್ಲಾನ್ ಮಾಡಿದ್ದಾರೆ. ಇದೀಗ ಶಿವಣ್ಣ ಕೂಡ ವರುಣಾದಲ್ಲಿ ಸಿದ್ದರಾಮಯ್ಯ ಪರ ಮತಬೇಟೆಯಾಡಲಿದ್ದಾರೆ.
ಜಗದೀಶ್ ಶೆಟ್ಟರ್ ಪರ ಹ್ಯಾಟ್ರಿಕ್ ಹೀರೋ ಮತಬೇಟಿ
ಶಿವಮೊಗ್ಗ ಮುಗಿಸಿ ವರುಣದಲ್ಲಿ ನಟ ಶಿವರಾಜ್ ಕುಮಾರ್ ಸಿದ್ದರಾಮಯ್ಯ ಪರ ಟಗರು ಶಿವಣ್ಣ ಮತಯಾಚಿಸಿದ ಬಳಿಕ ಬಿಜೆಪಿ ಬಿಟ್ಟು ಬಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪರ ಪ್ರಚಾರ ಮಾಡಲಿದ್ದಾರೆ. ಬಿಜೆಪಿಗೆ ಟಾಂಗ್ ಕೊಡಲು ಕಾಂಗ್ರೆಸ್ ಪಕ್ಷದಿಂದ ನಿಂತು ಶೆಟ್ಟರ್ ಗೆಲ್ಲುವಿನ ಪಣ ತೊಟ್ಟಿದ್ದಾರೆ. ಶಿರಸಿಯಲ್ಲಿ ಭೀಮಣ್ಣ ನಾಯಕ ಮತ್ತು ಅಶೋಕ್ ಖೇಣಿ ಪರ ಕೂಡ ಶಿವಣ್ಣ ಪ್ರಚಾರ ಮಾಡಲು ಮುಂದಾಗಿದ್ದಾರೆ.
ಕಾಂಗ್ರೆಸ್ ಗೂಡು ಸೇರಿದ ಗೀತಾ ಶಿವರಾಜ್ ಕುಮಾರ್
ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಪಕ್ಷ ಎಲ್ಲಿ ಪ್ರಚಾರ ಮಾಡಬೇಕು ಅಂತ ಸೂಚನೆ ನೀಡಿಲ್ಲ. ಇನ್ನು ಎರಡು ಮೂರು ದಿನದಲ್ಲಿ ಪಕ್ಷದ ಪ್ರಚಾರದ (Election Campaign) ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ ಎಂದರು. ಅಲ್ಲದೆ, ಸೊರಬದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುವುದು ಶಿವರಾಜ್ಕುಮಾರ್ ಅವರ ನಿರ್ಧಾರವೇ ಆಗಿದೆ. ಅವರು ಸೊರಬದಲ್ಲಿ ಪ್ರಚಾರ ಮಾಡುತ್ತಾರೆ. ಇನ್ನು ಬೇರೆ ಯಾವ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೆ ಅಂತ ನಾವು ಚರ್ಚೆ ಮಾಡಿಲ್ಲ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ