• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election Voting 2023: ಚುನಾವಣೆ ಬಹಿಷ್ಕರಿಸಿದ ವಾಟಾಳ್ ನಾಗರಾಜ್! ಚುನಾವಣೆಗೆ ಸ್ಪರ್ಧಿಸಿ, ಈಗ ಮತದಾನದಿಂದ ದೂರ ದೂರ!

Karnataka Election Voting 2023: ಚುನಾವಣೆ ಬಹಿಷ್ಕರಿಸಿದ ವಾಟಾಳ್ ನಾಗರಾಜ್! ಚುನಾವಣೆಗೆ ಸ್ಪರ್ಧಿಸಿ, ಈಗ ಮತದಾನದಿಂದ ದೂರ ದೂರ!

ಚಾಮರಾಜನಗರ ಪಕ್ಷೇತ್ರ ಅಭ್ಯರ್ಥಿ ವಾಟಾಳ್ ನಾಗರಾಜ್​

ಚಾಮರಾಜನಗರ ಪಕ್ಷೇತ್ರ ಅಭ್ಯರ್ಥಿ ವಾಟಾಳ್ ನಾಗರಾಜ್​

ನಾನು ಮತದಾರರಿಗೆ ಒಂದು ನಯಾಪೈಸೆ ಕೊಟ್ಟಿಲ್ಲ, ಚುನಾವಣಾಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ ಎಂದು ವಾಟಾಳ್ ನಾಗರಾಜ್​ ಹೇಳಿದ್ದಾರೆ.

  • Share this:

ಚಾಮರಾಜನಗರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಮತದಾನ ಅಂತ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಇದರ ನಡುವೆ ನಮ್ಮ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ನೀಡಿಲ್ಲ. ನಮ್ಮ ಊರಿನ ರಸ್ತೆಯನ್ನೇ (Road) ಅಭಿವೃದ್ಧಿಪಡಿಸಿಲ್ಲ. ನಮ್ಮ ಬೇಡಿಕೆಗಳನ್ನು ಯಾರು ಈಡೇರಿಸಿಲ್ಲ ಅಂತ ಕೆಲ ಗ್ರಾಮಸ್ಥರು ಮತದಾನ (Voting) ಹಾಕಿದ್ದ ಘಟನೆಗಳು ವರದಿಯಾಗಿದೆ. ಮತದಾನ ಬಹಿಷ್ಕಾರ ಮಾಡಿದ್ದ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ಅಧಿಕಾರಿಗಳು (Officers) ಮತದಾನ ಪ್ರಕ್ರಿಯೆ ನಡೆಸಿದ್ದರು. ಆದರೆ ಚಾಮರಾಜನಗರದಲ್ಲಿ (Chamarajanagar) ಚುನಾವಣೆಗೆ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಯೇ ಚುನಾವಣೆ ಬಹಿಷ್ಕಾರ ಮಾಡಿ, ಮತದಾನದ ಪ್ರಕ್ರಿಯೆಯಿಂದ ದೂರ ಉಳಿದ ಘಟನೆ ನಡೆದಿದೆ.


ಪಕ್ಷೇತರವಾಗಿ ಸ್ಪರ್ಧಿಸಿದ್ದ ವಾಟಾಳ್ ನಾಗರಾಜ್


ಅಂದಹಾಗೇ, ಚುನಾವಣೆ ಸ್ಪರ್ಧೆ ಮಾಡಿ ಭರ್ಜರಿ ಪ್ರಚಾರವನ್ನು ನಡೆಸಿದ್ದ ವಾಟಾಳ್​ ನಾಗರಾಜ್​ ಅವರೇ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ. ಚಾಮರಾಜನಗರ ವಿಧಾನಸಭೆ ಪಕ್ಷೇತರವಾಗಿ ವಾಟಾಳ್ ನಾಗರಾಜ್ ಸ್ಪರ್ಧಿಸಿದ್ದರು.
ಆದರೆ ಮತದಾನ ದಿನ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗಿಯಾಗದೆ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಮತಗಟ್ಟೆಗೆ ಏಜೆಂಟ್​​‌ಗಳನ್ನು ನೇಮಿಸದೆ ಮತದಾನ ಪ್ರಕ್ರಿಯೆಯಿಂದ ವಾಟಾಳ್ ನಾಗರಾಜ್​ ದೂರ ಉಳಿದಿದ್ದಾರೆ.


ಇದನ್ನೂ ಓದಿ: Karnataka Exit Poll 2023 Live Updates: ಕರ್ನಾಟಕದಲ್ಲಿ ಯಾರ ಅಧಿಪತ್ಯ? ಕೆಲವೇ ಕ್ಷಣದಲ್ಲಿ ಸಿಗಲಿದೆ ಉತ್ತರ


ನಾನು ಮತದಾರರಿಗೆ ಒಂದು ನಯಾಪೈಸೆ ಕೊಟ್ಟಿಲ್ಲ


ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಾಟಾಳ್​ ನಾಗರಾಜ್​ ಅವರು, ಇದು ಚುನಾವಣೆಯಲ್ಲ ವ್ಯಾಪಾರ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ನಿನ್ನೆ ರಾತ್ರಿಯಿಡಿ ಮತದಾರರಿಗೆ ಹಣ ಹಂಚಿದ್ದಾರೆ.


ನಾನು ಮತದಾರರಿಗೆ ಒಂದು ನಯಾಪೈಸೆ ಕೊಟ್ಟಿಲ್ಲ, ಚುನಾವಣಾಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ಮಾರಕ. ಚುನಾವಣಾ ವ್ಯವಸ್ಥೆ ಖಂಡಿಸಿ, ಚುನಾವಣೆ ಬಹಿಷ್ಕಾರ ಮಾಡಿದ್ದೇನೆ ಎಂದು ಚಾಮರಾಜನಗರದಲ್ಲಿ ಹೇಳಿದ್ದಾರೆ.

First published: