• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023 Voting: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಜಗದೀಶ್​ ಶೆಟ್ಟರ್​ ಗೆಲ್ತಾರೆ! ಭವಿಷ್ಯ ನುಡಿದ ಬಿಜೆಪಿ ಸಂಸದೆ!

Karnataka Election 2023 Voting: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಜಗದೀಶ್​ ಶೆಟ್ಟರ್​ ಗೆಲ್ತಾರೆ! ಭವಿಷ್ಯ ನುಡಿದ ಬಿಜೆಪಿ ಸಂಸದೆ!

ಮಾಜಿ ಸಿಎಂ ಜಗದೀಶ್​ ಶೆಟ್ಟರ್

ಮಾಜಿ ಸಿಎಂ ಜಗದೀಶ್​ ಶೆಟ್ಟರ್

ಕಾಂಗ್ರೆಸ್ ನಿಂದ ಸ್ಪರ್ಧೆ ಶೆಟ್ಟರ್​​ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಇದೇ ರೀತಿ ಎಲ್ಲವೂ ಆಗುತ್ತದೆ. ಶೆಟ್ಟರ್ ಅವರು ಗೆದ್ದು ಬರುತ್ತಾರೆ ಎಂದು ಸಂಸದೆ ಮಂಗಳಾ ಅಂಗಡಿ ಅಭಿಪ್ರಾಯಪಟ್ಟಿದ್ದಾರೆ.

  • News18 Kannada
  • 3-MIN READ
  • Last Updated :
  • Belgaum, India
  • Share this:

ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಬೆಳಗಾವಿ (Belagavi) ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಎಲ್ಲರೂ ಮತದಾನ (Voting) ಮಾಡಿ ಎಂದು ಮನವಿ ಮಾಡುತ್ತೇನೆ. ಪ್ರತಿ ವರ್ಷ ಕುಟುಂಬ (Family) ಸಮೇತವಾಗಿ ಬರುತ್ತಿದೆ. ಈ ಬಾರಿ ಒಬ್ಬಳೇ ಬಂದಿದ್ದೇನೆ, ಮಕ್ಕಳು (Children) ಕೂಡ ಬಂದು ಮತದಾನ ಮಾಡ್ತಾರೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿದೆ. ಬೆಳಗಾವಿಯಲ್ಲಿ 13 ರಿಂದ 14 ಸ್ಥಾನಗಳು ಬಿಜೆಪಿ ಜಿಲ್ಲೆಯಲ್ಲಿ ಬರುತ್ತದೆ ಎಂದು ಬೆಳಗಾವಿ ಸಂಸದೆ ಮಂಗಳಾ ಅಂಗಡಿ (Mangala Angadi) ಹೇಳಿದ್ದಾರೆ.


ಹುಬ್ಬಳ್ಳಿಯ ವಿಶ್ವೇಶ್ವರಯ್ಯ ನಗರದ ಮತಕಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಗಳ ಅಂಗಡಿ ಅವರು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್​ ಮತಕ್ಷೇತ್ರದಲ್ಲಿ ಕಾಂಗ್ರೆಸ್​​ನಿಂದ ಸ್ಪರ್ಧೆ ಮಾಡಿರುವ ಬೀಗರಾದ ಜಗದೀಶ್ ಶೆಟ್ಟರ್​ ಅವರ ಸ್ಪರ್ಧೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದರು. ಬೀಗರ ಕ್ಷೇತ್ರದಲ್ಲಿ ಯಾವ ರೀತಿಯ ವಾತಾವರಣವಿದೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಮಂಗಳಾ ಅಂಗಡಿ ಅವರು, ಅವರ ಕ್ಷೇತ್ರದಲ್ಲೂ ಉತ್ತಮ ವಾತಾವರಣ ಇದೆ. ಅವರು ಗೆದ್ದು ಬರ್ತಾರೆ ಎಂದರು.




ಇದನ್ನೂ ಓದಿ: Karnataka Exit Poll 2023 Live Updates: ಎಕ್ಸಿಟ್​ ಪೋಲ್​ಗೆ ಕೆಲವೇ ನಿಮಿಷ ಬಾಕಿ, ಯಾರ ಕೈಗೆ ರಾಜ್ಯ ಚುಕ್ಕಾಣಿ?


ಕಾಂಗ್ರೆಸ್ ನಿಂದ ಸ್ಪರ್ಧೆ ಶೆಟ್ಟರ್​​ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಇದೇ ರೀತಿ ಎಲ್ಲವೂ ಆಗುತ್ತದೆ. ಶೆಟ್ಟರ್ ಅವರು ಗೆದ್ದು ಬರುತ್ತಾರೆ. ಅಲ್ಲಿ ಮೊದಲಿನಿಂದ ಅವರು ಹೆಸರು ಮಾಡಿದ್ದರು. ಅವರದ್ದು ಅಲ್ಲೇ ನಮ್ಮದು ನಮ್ಮ ಕ್ಷೇತ್ರ. ಅವರು ಕಾಂಗ್ರೆಸ್ ನಾನು ಬಿಜೆಪಿ ಬೇರೆ ಏನು ಮಾಡಲು ಆಗೋದಿಲ್ಲ. ನಾನು ಬಿಜೆಪಿಯಲ್ಲೇ ಇದ್ದೇನೆ. ಮುಂದಿನ ಲೋಕಸಭಾ ಚುನಾವಣೆಗೂ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

top videos
    First published: