• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Polls 2023: ‘ರಾತ್ರಿ 12 ಗಂಟೆವರೆಗೂ CD ಬಿಡುಗಡೆ ಮಾಡ್ತೀನಿ ಅಂತ ಬ್ಲ್ಯಾಕ್​ಮೇಲ್’ -ಡಿಕೆಶಿ ವಿರುದ್ಧ ಜಾರಕಿಹೊಳಿ ಹೊಸ ಬಾಂಬ್!

Karnataka Polls 2023: ‘ರಾತ್ರಿ 12 ಗಂಟೆವರೆಗೂ CD ಬಿಡುಗಡೆ ಮಾಡ್ತೀನಿ ಅಂತ ಬ್ಲ್ಯಾಕ್​ಮೇಲ್’ -ಡಿಕೆಶಿ ವಿರುದ್ಧ ಜಾರಕಿಹೊಳಿ ಹೊಸ ಬಾಂಬ್!

ರಮೇಶ್​ ಜಾರಕಿಹೊಳಿ/ಡಿಕೆ ಶಿವಕುಮಾರ್

ರಮೇಶ್​ ಜಾರಕಿಹೊಳಿ/ಡಿಕೆ ಶಿವಕುಮಾರ್

ನಾನು ಒಬ್ಬನೇ ಅಲ್ಲ, ನಾನು ಹೊರಗೆ ಬಂದಿದ್ದೀನಿ‌. ಇನ್ನೂ ನೂರಾರು ಜನ ಸಿಡಿ ಷಡ್ಯಂತ್ರದಲ್ಲಿ ಸಿಲುಕಿದ್ದಾರೆ, ಅವರನ್ನು ಹೊರ ತರುತ್ತೇನೆ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

 • News18 Kannada
 • 3-MIN READ
 • Last Updated :
 • Belgaum, India
 • Share this:

ಬೆಳಗಾವಿ: ಗೋಕಾಕ್ (Gokak)​ ಮತದಾರರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಸತತ ಏಳನೇ ಬಾರಿಗೆ ನಾನು ಚುನಾವಣೆಗೆ (Election) ಸ್ಪರ್ಧೆ ಮಾಡುತ್ತಿದ್ದು, ಚುನಾವಣಾ ಅಧಿಕಾರಿಗಳು ಶಾಂತಿಯುತವಾಗಿ ಮತದಾನ ನಡೆಸಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಪ್ರಧಾನಿ ಮೋದಿ (PM Modi), ಅಮಿತ್​ ಶಾ (Amit Shah) ಹೇಳಿದಂತೆ ಕಾರ್ಯನಿರ್ವಹಿಸಿದ್ದು, 130 ಸ್ಥಾನ ಪಡೆದುಕೊಂಡು ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ (KPCC President) ವಿರುದ್ಧ ಗಂಭೀರ ಆರೋಪ ಮಾಡಿರುವ ರಮೇಶ್ ಜಾರಕಿಹೊಳಿ ಅವರು ನಿನ್ನೆ ರಾತ್ರಿ 12 ಗಂಟೆವರೆಗೂ ನನ್ನನ್ನು ಬ್ಲ್ಯಾಕ್​​ಮೇಲ್​ ಮಾಡಿದ್ದಾರೆ. ನಿನ್ನ ಸಿ.ಡಿ ಬಿಡುಗಡೆ ಮಾಡ್ತೀವಿ ಹೇಳಿ ಬೆದರಿಕೆ ಹಾಕಿದ್ದಾರೆ. ಆದರೆ ನಾನು ಅವುಗಳಿಗೆ ಬಗ್ಗಲಿಲ್ಲ. ಚುನಾವಣೆ ಬಳಿಕ ಸಿ.ಡಿ ಪ್ರಕರಣವನ್ನು (CD Case) ಸಿಬಿಐಗೆ ವಹಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.


ಡಿಕೆ ಶಿವಕುಮಾರ್​ ನನಗೆ ಬ್ಲ್ಯಾಕ್ ಮೇಲ್ ಮಾಡಿದ


ಮತದಾನ ಕೇಂದ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್​ ಜಾರಕಿಹೊಳಿ ಅವರು, ಸಿ.ಡಿ ಬಿಡುಗಡೆ ಮಾಡುತ್ತೇನೆ ಅಂತ ಅಂತ ನಿನ್ನೆ ರಾತ್ರಿ 12:30ರ ವರೆಗೂ ಬ್ಲ್ಯಾಕ್ ಮೇಲ್ ನಡೆಸಿದ್ದರು.


ಇದನ್ನೂ ಓದಿ: Karnataka Election Voting 2023 LIVE: ಕರ್ನಾಟಕ ವಿಧಾನಸಭಾ ಚುನಾವಣೆ- ಆಯೋಗದ ಯಡವಟ್ಟು, ಚಿಕ್ಕಪೇಟೆಯಲ್ಲಿ ಮರುಮತದಾನ?


ಡಿಕೆ ಶಿವಕುಮಾರ್​ ನನಗೆ ಬ್ಲ್ಯಾಕ್ ಮೇಲ್ ಮಾಡಿದ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಹಿಂದೆ ಸರಿಯದೇ ಇದ್ದರೆ ಸುಮ್ಮನೆ ಬಿಡಲ್ಲ ಅಂತ ಬ್ಲ್ಯಾಕ್​​ಮೇಲ್​​ ಮಾಡಿದ್ದರು. ನನ್ನ ಮೇಲೆ ಬಿಜೆಪಿ ಹೈಕಮಾಂಡ್ ವಿಶ್ವಾಸ ಇಟ್ಟಿದೆ. ರಾಜ್ಯದ ಮುಂದಿನ ಸಿಎಂ ಹಾಗೂ ಗೃಹ ಸಚಿವರಿಗೆ ಈಗಲೇ ಮನವಿ ಮಾಡುತ್ತೇನೆ. ಸಿಡಿ ಕೇಸ್ ಸಿಬಿಐಗೆ ವಹಿಸಿದರೆ ಎಲ್ಲರೂ ಹೊರಗೆ ಬರುತ್ತಾರೆ ಎಂದರು.
ಅಲ್ಲದೆ, ಸಿ.ಡಿ ಕೇಸ್ ಸಿಬಿಐಗೆ ವಹಿಸಲು ಮುಂದಾಗಿದೆ. ಹಿತೈಷಿಗಳು ಒಂದು ಸಲಹೆ ನೀಡಿದ್ದರು. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ನಿರ್ಧಾರ ಕೈಗೊಂಡರೆ ಬಿಜೆಪಿವರು ಬ್ಲ್ಯಾಕ್ ಮೇಲ್ ಮಾಡುತ್ತಾರೆ ಅಂತ ಸಂದೇಶ ಹೋಗುತ್ತೆ. ಚುನಾವಣೆ ಮುಕ್ತಾಯದ ಬಳಿಕ ಇನ್ನೊಂದು ತಿಂಗಳಲ್ಲಿ ಸಿ.ಡಿ ಕೇಸ್ ಸಿಬಿಐ ವಹಿಸಲು ಒತ್ತಾಯ ಮಾಡುತ್ತೇನೆ.


ನಾನು ಒಬ್ಬನೇ ಅಲ್ಲ, ನಾನು ಹೊರಗೆ ಬಂದಿದ್ದೀನಿ‌. ಇನ್ನೂ ನೂರಾರು ಜನ ಸಿಡಿ ಷಡ್ಯಂತ್ರದಲ್ಲಿ ಸಿಲುಕಿದ್ದಾರೆ, ಅವರನ್ನು ಹೊರ ತರುತ್ತೇನೆ. ಸಿ.ಡಿ ಬಗ್ಗೆ ತನಿಖೆ ಮಾಡಿಸುವುದು ಒಂದೇ ಕೆಲಸ, ಸಿ.ಡಿ ಗ್ಯಾಂಗ್ ಎಲ್ಲರನ್ನೂ ಬ್ಲ್ಯಾಕ್​​ಮೇಲ್ ಮಾಡುತ್ತಿದೆ. ನಾನು ಡಿಕೆ ಶಿವಕುಮಾರ್​ ಒಳ್ಳೆಯ ಸ್ನೇಹಿತರಾಗಿದ್ದೇವು, ಆದರೆ ವಿಷಕನ್ಯೆಯ ಜಾಲದಿಂದ ಡಿಕೆ ಶಿವಕುಮಾರ್​ ಹೊರ ಬರುವುದು ಒಳ್ಳೆಯದು ಎಂದು ಸಲಹೆ ನೀಡಿದರು.

First published: