ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election ) ಬಹುತೇಕ ಕಡೆಗಳಲ್ಲಿ ಶಾಂತಿಯುವಾಗಿ ಮುಕ್ತಯವಾಗಿದೆ. ಆದರೆ ಜಿಲ್ಲೆಯ ಮೂಡುಶೆಡ್ಡೆಯಲ್ಲಿ ಬಿಜೆಪಿ-ಕಾಂಗ್ರೆಸ್ (BJP-Congress) ಕಾರ್ಯಕರ್ತರ ನಡುವೆ ಜಗಳ ನಡೆದಿದೆ. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ (Mangaluru Police Commissioner) ಕುಲದೀಪ್ ಕುಮಾರ್ ಜೈನ್, ಮತದಾನ ಮುಗಿದ ಬಳಿಕ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಪರಸ್ಪರ ಘೋಷಣೆ ಕೂಗಿದ ವೇಳೆ ಗಲಾಟೆ ಆಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಿಸಿ ಹೆಚ್ಚುವರಿ ಭದ್ರತೆ ಹಾಕಲಾಗಿದೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ (144 Section) ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿಗೂ ಗಾಯ
ಅಲ್ಲದೆ, ಮೂಡುಶೆಡ್ಡೆಯಲ್ಲಿ ಚೆಕ್ ಪೋಸ್ಟ್ ಹಾಕಿ ವಾಹನ ತಪಾಸಣೆ ನಡೆಸುತ್ತಿದ್ದೇವೆ. ಬರುವ ಮತ್ತು ಹೊರಗಿನ ವಾಹನಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಘಟನೆಯಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಯಗಳಾಗಿವೆ. ನಮ್ಮ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈಗಾಗಲೇ ಒಂದು ಕೆಎಸ್ ಆರ್ ಪಿ ತುಕುಡಿ ನಿಯೋಜನೆ ಮಾಡಿದ್ದೇವೆ. ಅವಶ್ಯಕತೆ ಇದ್ದಲ್ಲಿ ಮತ್ತಷ್ಟು ಪೊಲೀಸರ ನಿಯೋಜನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Karnataka Exit Poll 2023 LIVE Updates: ಎಕ್ಸಿಟ್ ಪೋಲ್ನಲ್ಲಿ ಯಾವ್ಯಾವ ಪಕ್ಷಕ್ಕೆ ಎಷ್ಟು ಜನ ಮತ? ಫುಲ್ ಅಪ್ಡೇಟ್ಸ್
ಮಂಗಳೂರು ನಗರದ ಹೊರವಲಯದ ವಾಮಂಜೂರು ಸಮೀಪದ ಮೂಡುಶೆಡ್ಡೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ ನಡೆದಿತ್ತು. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಸ್ಥಳಕ್ಕೆ ಬಂದಿದ್ದ ಮೂಡಬಿದಿರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.
ಇವಿಎಂ ಪುಡಿಪುಡಿ
ಇವತ್ತಿನ ಚುನಾವಣೆ ಕೆಟ್ಟ ಕಾರಣಕ್ಕೂ ಸಾಕ್ಷಿಯಾಗಿದೆ. ಬಸವನ ಬಾಗೇವಾಡಿಯ ಮಸಬಿನಾಳದಲ್ಲಿ ಮತಯಂತ್ರ, ವಿವಿಪ್ಯಾಟ್ ಪುಡಿ ಮಾಡಲಾಗಿದೆ. ಹೆಚ್ಚುವರಿ ಇವಿಎಂ ಹಾಗೂ ವಿವಿ ಪ್ಯಾಟ್ನ್ನು ಸಿಬ್ಬಂದಿ ಕಾರಿನಲ್ಲಿ ತರುತ್ತಿದ್ದರು. ಅದನ್ನು ತಪ್ಪಾಗಿ ಭಾವಿಸಿದ ಜನ ದಾಂದಲೆ ಮಾಡಿದ್ದಾರೆ.
ವರುಣಾದಲ್ಲಿ ಸೋಮಣ್ಣಗೆ ಧಿಕ್ಕಾರ
ವರುಣಾ ಬಿಜೆಪಿ ಅಭ್ಯರ್ಥಿ ಸೋಮಣ್ಣ ಬೂತ್ ಪರಿಶೀಲನೆಗೆ ಬಂದಾಗ, ಗಲಾಟೆ ನಡೆದಿದೆ. ಮತಗಟ್ಟೆ ಬಳಿಯೇ ಕೈ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಆಗ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ