• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Polling 2023: ಮತದಾನಕ್ಕೆ ಬರ್ತಿದ್ದ ವ್ಯಕ್ತಿ ಆನೆ ದಾಳಿಗೆ ಬಲಿ; ವೋಟ್​ ಹಾಕಲು ಬಂದಿದ್ದ ವ್ಯಕ್ತಿ ಮತಗಟ್ಟೆಯಲ್ಲೇ ಸಾವು!

Karnataka Polling 2023: ಮತದಾನಕ್ಕೆ ಬರ್ತಿದ್ದ ವ್ಯಕ್ತಿ ಆನೆ ದಾಳಿಗೆ ಬಲಿ; ವೋಟ್​ ಹಾಕಲು ಬಂದಿದ್ದ ವ್ಯಕ್ತಿ ಮತಗಟ್ಟೆಯಲ್ಲೇ ಸಾವು!

ಆನೆ ದಾಳಿಗೆ ವ್ಯಕ್ತಿ ಬಲಿ (ಸಾಂದರ್ಭಿಕ ಚಿತ್ರ)

ಆನೆ ದಾಳಿಗೆ ವ್ಯಕ್ತಿ ಬಲಿ (ಸಾಂದರ್ಭಿಕ ಚಿತ್ರ)

ಮಹದೇಶ್ವರ ಬೆಟ್ಟದ ತೋಕೆರೆ ಗ್ರಾಮದ ಪುಟ್ಟಸ್ವಾಮಿ (35) ಮೃತ ದುರ್ದೈವಿಯಾಗಿದ್ದಾರೆ. ಮಹದೇಶ್ವರ ಬೆಟ್ಟದ ಏರನಕಲ್ಲು ಎಂಬಲ್ಲಿ ಘಟನೆ ನಡೆದಿದ್ದು, ಹಳೇ ಮಾರ್ಟಳ್ಳಿಯಿಂದ ತೋಕೆರೆಗೆ ಕಾಲು ದಾರಿಯಲ್ಲಿ ಬರುತ್ತಿದ್ದ ಪುಟ್ಟಸ್ವಾಮಿ ಅವರ ಮೇಲೆ ಆನೆ ದಾಳಿ ಮಾಡಿದೆ.

 • News18 Kannada
 • 4-MIN READ
 • Last Updated :
 • Chamarajanagar, India
 • Share this:

ಚಾಮರಾಜನಗರ: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ಮತದಾನ ಅಂತ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಈ ನಡುವೆ ಹಲವು ಮತಗಟ್ಟೆಗಳಲ್ಲಿ ಜನರು ಸಾಲಿನಲ್ಲಿ ನಿಂತು ಮತದಾನ (Voting) ಮಾಡುತ್ತಿದ್ದಾರೆ. ಸಂಜೆ ವೇಳೆಗೆ ಸೂರ್ಯ ತಾಪ ಕಡಿಮೆಯಾದ ಕಾರಣ ಮತದಾನ ಮಾಡಲು ಜನರು ಬರುತ್ತಿದ್ದಾರೆ. ಈ ನಡುವೆ ಮತದಾನಕ್ಕೆ ಬರುತ್ತಿದ್ದ ವ್ಯಕ್ತಿ ಆನೆ (Elephant) ದಾಳಿಗೆ ಬಲಿಯಾಗಿರುವ ಘಟನೆ ಚಾಮರಾಜನಗರದಲ್ಲಿ (Chamarajanagar) ನಡೆದಿದ್ದು, ಮಹದೇಶ್ವರ ಬೆಟ್ಟದ ತೋಕೆರೆ ಗ್ರಾಮದ ಪುಟ್ಟಸ್ವಾಮಿ (35) ಮೃತ ದುರ್ದೈವಿಯಾಗಿದ್ದಾರೆ. ಮಹದೇಶ್ವರ ಬೆಟ್ಟದ (Mahadeshwara Hills ) ಏರನಕಲ್ಲು ಎಂಬಲ್ಲಿ ಘಟನೆ ನಡೆದಿದ್ದು, ಹಳೇ ಮಾರ್ಟಳ್ಳಿಯಿಂದ ತೋಕೆರೆಗೆ ಕಾಲು ದಾರಿಯಲ್ಲಿ ಬರುತ್ತಿದ್ದ ಪುಟ್ಟಸ್ವಾಮಿ ಅವರ ಮೇಲೆ ಆನೆ ದಾಳಿ ಮಾಡಿದೆ. ಸ್ಥಳದಲ್ಲೇ ವ್ಯಕ್ತಿ ಮೃತಪಟ್ಟಿದ್ದಾರೆ.


ಮತಗಟ್ಟೆಯಲ್ಲೇ ಕುಸಿದು ಬಿದ್ದು ವ್ಯಕ್ತಿ ಸಾವು


ಚಿತ್ರದುರ್ಗದಲ್ಲಿ ಮತಗಟ್ಟೆಗೆ ಆಗಮಿಸಿದ್ದ ವೇಳೆ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೇಣುಕಾಪುರದಲ್ಲಿ ಘಟನೆ ನಡೆದಿದ್ದು, ಮೃತ ವ್ಯಕ್ತಿಯ ಅಮೀರ್ ಸಾಬ್ (56) ಎಂದು ಗುರುತಿಸಲಾಗಿದೆ. ಮೃತರು ರೇಣುಕಾಪುರ ನಿವಾಸಿಯಾಗಿದ್ದು, ಮತಗಟ್ಟೆಯ ಒಳ ಭಾಗದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: Karnataka Exit Poll 2023 Live Updates: ಕರ್ನಾಟಕದಲ್ಲಿ ಯಾರ ಅಧಿಪತ್ಯ? ಕೆಲವೇ ಕ್ಷಣದಲ್ಲಿ ಸಿಗಲಿದೆ ಉತ್ತರ


ಮದುವೆ ಮಂಟಪದಿಂದ ಮತಗಟ್ಟೆಗೆ ದಂಪತಿಗಳು


ಮದುವೆ ಮಂಟಪದಿಂದ ನೇರವಾಗಿ ನೂತನ ದಂಪತಿಗಳು ಮತಗಟ್ಟೆಗೆ ಆಗಮಿಸಿದ್ದು, ನೆಲಮಂಗಲದಲ್ಲಿ ನೂತನ‌ ದಂಪತಿಗಳು ಮತದಾನ ಮಾಡಿದ್ದಾರೆ. ಚಿನ್ಮಯಿ ಹಾಗೂ ಮನೋಜ್‌ ಕುಮಾರ್‌ರಿಂದ ಮತಗಟ್ಟ ಸಂಖ್ಯೆ 175 ರಲ್ಲಿ ಮತದಾನ ಮಾಡಿದ ದಂಪತಿಗಳು.

top videos
  First published: