• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections: ಮತದಾನ ಮಾಡಿ ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ವ್ಯಕ್ತಿ ಸಾವು

Karnataka Elections: ಮತದಾನ ಮಾಡಿ ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ವ್ಯಕ್ತಿ ಸಾವು

ಮೃತವ್ಯಕ್ತಿ ಜಯಣ್ಣ

ಮೃತವ್ಯಕ್ತಿ ಜಯಣ್ಣ

ಮತದಾನ ಮಾಡಿ ಮತಕೇಂದ್ರದಿಂದ ಹೊರ ಬಂದಿದ್ದ ವ್ಯಕ್ತಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.

  • News18 Kannada
  • 5-MIN READ
  • Last Updated :
  • Hassan, India
  • Share this:

ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections) ಮತದಾನ ಬರದಿಂದ ಸಾಗಿದ್ದು, ಹಲವು ಭಾಗಗಳಲ್ಲಿ ಬಿರುಬಿಸಿಲಿನ ನಡುವೆಯೂ ಜನರು ಉತ್ಸಾಹದಿಂದ ಮತ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು (Right) ಚಲಾಯಿಸುತ್ತಿದ್ದಾರೆ. ಈ ನಡುವೆ ಮತದಾನ ಮಾಡಿದ ಕೆಲವೇ ಕ್ಷಣಗಳ ಬಳಿಕ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 49 ವರ್ಷದ ಜಯಣ್ಣ ಎಂದು ಗುರುತಿಸಲಾಗಿದೆ. ಮತದಾನ ಮಾಡಲು ಮತಕೇಂದ್ರಕ್ಕೆ (Polling Booth) ಬಂದಿದ್ದ ಜಯಣ್ಣ ಸಾರತಿ ಸಾಲಿನಲ್ಲಿ ನಿಂತುಕೊಂಡು ತಮ್ಮ ಹಕ್ಕು ಚಲಾಯಿಸಿದ್ದರು. ಆದರೆ ಮತದಾನ ಬಳಿಕ ಮತಕೇಂದ್ರದಿಂದ ಹೊರ ಬಂದ ಅವರು ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ (Heart Attack) ಜಯಣ್ಣ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಮತದಾನಕ್ಕೆ ಬಂದಿದ್ದ ವೃದ್ಧೆ ಸಾವು


ಇನ್ನು, ಮತದಾನಕ್ಕೂ ಮುನ್ನ ವೃದ್ಧೆ ಸಾವನ್ನಪ್ಪಿರುವ ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮತ ಚಲಾವಣೆಗೆ ಬಂದಿದ್ದ 68 ವರ್ಷದ ಪಾರವ್ವ ಸಿದ್ನಾಳ್ ಮೃತ ದುರ್ದೈವಿಗಳಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಝರ್ವಿ ಗ್ರಾಮದಲ್ಲಿ ಘಟನೆ ನಡೆದಿದೆ.


ಇದನ್ನೂ ಓದಿ: Manjamma Jogathi: ವಿಜಯನಗರದಲ್ಲಿ ಹಕ್ಕು ಚಲಾಯಿಸಿದ ಚುನಾವಣಾ ರಾಯಭಾರಿ ಮಂಜಮ್ಮ ಜೋಗತಿ


ಕೈ-ಕಮಲ ಕಾರ್ಯಕರ್ತರ ನಡುವೆ ಗಲಾಟೆ


ಇತ್ತ, ಕಾಂಗ್ರೆಸ್ ಹಾಗೂ ಬಿಜೆಪಿ‌ ಕಾರ್ಯಕರ್ತರ ನಡುವೆ ಗಲಾಟೆ ನಡೆದಿರುವ ಘಟನೆ ರಾಯಚೂರಿನ ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಘಟನೆ. ಬಿಜೆಪಿ ಪಕ್ಷದ ಬಾವುಟ ವಿಚಾರದಲ್ಲಿ ಗಲಾಟೆ ನಡೆದಿದ್ದು, ಲಿಂಗಸಗೂರು ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಮಾನಪ್ಪ ವಜ್ಜಲ್ ಕಾರಿಗೆ ಬಿಜೆಪಿ ಬಾವುಟ ಅಳವಡಿಕೆ ಮಾಡಿದ್ದ ಕಾರಿನಲ್ಲೇ ಮತದಾನ ಮಾಡಲು ಮುಂದಾಗಿದ್ದ ಕಾರಣ ಗಲಾಟೆ ನಡೆದಿದೆ ಎನ್ನಲಾಗಿದೆ.




ಬಿಜೆಪಿ ಬಾವುಟ ಇರುವ ಕಾರು ಮತಗಟ್ಟೆ ಬಳಿ ಬರುವುದನ್ನು ಕಾಂಗ್ರೆಸ್​​ ಮುಂಖಡರು ವಿರೋಧ ಮಾಡಿ ಅಧಿಕಾರಿಗಳನ್ನ ಪ್ರಶ್ನಿಸಿದ್ದಾರೆ. ಆ ಬಳಿಕ ಮಾನಪ್ಪ ವಜ್ಜಲ್ ಮತ್ತು ಕೈ ಮುಖಂಡರ ನಡುವೆ ‌ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಮಧ್ಯ ಪ್ರವೇಶ ಮಾಡಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಸಿಗೊಳಿಸಿದ್ದಾರೆ.

top videos
    First published: