ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ದಿನಾಂಕ ಘೋಷಣೆಯಾಗಿದೆ, ಇದರೊಂದಿಗೆ ಅಖಾಡ ಸಜ್ಜಾಗಿದೆ. ಅಭ್ಯರ್ಥಿಗಳು ರಣಕಣವವನ್ನು ಸಜ್ಜುಗೊಳಿಸುತ್ತಿದ್ದಾರೆ. ಆದರೆ ಇದರ ನಡುವೆಯೇ ಗೆಲ್ಲುವ ಕುದುರೆಗಳ (Horse) ಆಪರೇಷನ್‌ಗೆ ಮೂರು ಪಕ್ಷಗಳ ಸರ್ಕಸ್ ಜೋರಾಗಿದೆ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಮೂರು ಪಕ್ಷಗಳು ತಂತ್ರಗಾರಿಕೆಯನ್ನು ಭರ್ಜರಿಯಾಗಿ ನಡೆಸುತ್ತಿವೆ. ಇತ್ತ ತಮ್ಮ ರಾಜಕೀಯ ಭವಿಷ್ಯಕ್ಕಾಗಿ (Political Future) ಹಲವು ಜನ ನಾಯಕರು ಪಕ್ಷಾಂತರ ಪರ್ವವನ್ನ ಆರಂಭಿಸಿದ್ದಾರೆ. ಹೌದು, ಒಂದೆಡೆ ಚುನಾವಣೆ ಘೋಷಣೆಯಾಗುತ್ತಿದ್ದರೆ ಮತ್ತೊಂದೆಡೆ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ ಈ ಒಂದು ಮಾತು ರಾಜ್ಯ ರಾಜಕೀಯದಲ್ಲಿ ಬಾಂಬ್ ಸ್ಫೋಟವಾದಷ್ಟೇ ಸಂಚಲನ ಸೃಷ್ಟಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ (DK Shivakumar) ಎಂತಹ ಪರಿಸ್ಥಿತಿ ಬಂದಿದೆ ಅಂದರೆ, ಅವರು ನಮ್ಮ ಶಾಸಕರಿಗೆ ಫೋನ್ (Phone) ಮಾಡಿ ಬನ್ನಿ ಬನ್ನಿ ಅಂತಿದ್ದಾರೆ, ಆದರೆ ಅವರು ಯಾರೂ ಕೂಡ ಪಕ್ಷ ಬಿಟ್ಟು ಹೋಗಲ್ಲ ಅಂತ ಆರೋಪಿಸಿದ್ದಾರೆ.
‘ಬಿಜೆಪಿ ಶಾಸಕರಿಗೆ ಡಿಕೆಶಿ ಪದೇ ಪದೇ ಕರೆ’
ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಸವರಾಜ ಬೊಮ್ಮಾಯಿ ಅವರು, ಡಿಕೆ ಶಿವಕುಮಾರ್‌ಗೆ ಎಂತಹ ಪರಿಸ್ಥಿತಿ ಬಂದಿದೆ ಅಂದರೆ ಅವರು ನಮ್ಮ ಶಾಸಕರಿಗೆ ಫೋನ್ ಮಾಡಿ ಬನ್ನಿ ಬನ್ನಿ ಅಂತಿದ್ದಾರೆ. ಇನ್ನೂ 100 ಆಗುವ ಪಟ್ಟಿಯಲ್ಲಿ ನಿಮಗಾಗಿ ಕಾಯುತ್ತಿದ್ದೇವೆ, ಬನ್ನಿ ಬನ್ನಿ ಎಂದು ಶಿವಕುಮಾರ್ ಹೇಳಿದ್ದರಂತೆ. ವಲಸೆ ಬಂದ ಸಚಿವರೇ ಅಲ್ಲ ಎಲ್ಲಾ ಶಾಸಕರಿಗೂ ಕರೆಯುತ್ತಿದ್ದಾರೆ. ಆದರೆ ಅವರು ಯಾರು ಪಕ್ಷ ಬಿಟ್ಟು ಹೋಗಲ್ಲ. ಅವರು ನಾವು ಹೋಗಲ್ಲ ಅಂತ ನನಗೆ ಹೇಳಿದ್ದಾರೆ ಎಂದು ಬಾಂಬ್ ಸಿಡಿಸಿದ್ದರು.
ಇದನ್ನೂ ಓದಿ: Karnataka Election 2023: ಮನೆಯಿಂದಲೇ ಮತದಾನ ಮಾಡುವವರಿಗೆ ಇಲ್ಲಿದೆ ಮಾಹಿತಿ; ನೀವು ಓದಲೇ ಬೇಕಾಗಿರುವ ಸುದ್ದಿ!
‘ಆಪರೇಷನ್ ಹಸ್ತ’ದ ಬಗ್ಗೆ ನಾಯಕರ ಜಟಾಪಟಿ
ಇನ್ನು ಆಪರೇಷನ್ ಹಸ್ತದ ವಿಚಾರ ಕಳೆದ ಕೆಲ ದಿನಗಳಿಂದ ಸಖತ್ ಸೌಂಡ್ ಮಾಡಿದೆ. ಸಚಿವ ನಾರಾಯಣಗೌಡ ಕಾಂಗ್ರೆಸ್ ಬಿಡುವ ಬಗ್ಗೆ ಈಗಾಗಲೇ ಅಂತಿಮವಾಗಿದೆ ಎನ್ನಲಾಗಿತ್ತು. ಆದರೆ ನಾರಾಣಯಗೌಡಗೆ ಅಮಿತ್ ಶಾ ಬ್ರೇಕ್ ಹಾಕಿದ್ದರು. ಅಲ್ಲದೆ ಬೈರತಿ ಬಸವರಾಜ್ ಕೂಡ ಪಕ್ಷ ಬಿಡುತ್ತಾರೆ ಎನ್ನಲಾಗಿತ್ತು. ಆದರೆ ಅದೂ ಸುಳ್ಳಾಯ್ತು. ಈ ನಡುವೆ ಇಂದು ಸಿಎಂ ಹೇಳಿದ ಒಂದು ಮಾತು ಆಪರೇಷನ್ ಹಸ್ತ ನಡೆಯುತ್ತಿರುವುದು ಸತ್ಯ ಅನ್ನೋ ವಿಚಾರವನ್ನ ಮತ್ತಷ್ಟು ದೃಢಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ