• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rizwan Arshad: ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್ ಅರ್ಷದ್‌ ಅವರ ರಾಜಕೀಯ ಜೀವನ ಹೀಗಿದೆ

Rizwan Arshad: ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್ ಅರ್ಷದ್‌ ಅವರ ರಾಜಕೀಯ ಜೀವನ ಹೀಗಿದೆ

ರಿಜ್ವಾನ್ ಅರ್ಷದ್

ರಿಜ್ವಾನ್ ಅರ್ಷದ್

ಕಾಂಗ್ರೆಸ್‌ನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ರಾಜಕಾರಣಿ ರಿಜ್ವಾನ್ ಅರ್ಷದ್ ಅವರ ಪರಿಚಯ ವಿವರ ಹೀಗಿದೆ.

  • Share this:

Karnataka Election 2023: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ (Assembly Election) ಮೇಲೇಯೇ ಇದೀಗ ಪ್ರತಿಯೊಬ್ಬ ಚಿತ್ತ ನೆಟ್ಟಿದೆ. ಎಲ್ಲಾ ಪಕ್ಷಗಳು ಆಡಳಿತದ ಚುಕ್ಕಾಣಿಯನ್ನು ಹಿಡಿಯಬೇಕೆಂಬ ದಿಶೆಯಲ್ಲಿ ಪೈಪೋಟಿಯೊಂದಿಗೆ ಸಜ್ಜಾಗಿವೆ. ಅಭ್ಯರ್ಥಿಗಳು ಕೂಡ ಭರದಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ತಮ್ಮ ತಮ್ಮ ಪಕ್ಷವನ್ನು ಪ್ರತಿನಿಧಿಸುತ್ತಾ ಜನಸಾಮಾನ್ಯರಲ್ಲಿ ಮತಯಾಚಿಸುತ್ತಿದ್ದಾರೆ.


224 ವಿಧಾನಸಭಾ ಕ್ಷೇತ್ರಗಳಲ್ಲಿ ಏಕ ಹಂತದ ಚುನಾವಣೆ


ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಏಕ ಹಂತದ ಚುನಾವಣೆಯನ್ನು ಯೋಜಿಸಲಾಗಿದ್ದು ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ 5,21,73,579 ನೋಂದಾಯಿತ ಮತದಾರರಿದ್ದಾರೆ. ಈ ವರ್ಷ ಇನ್ನೂ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಒಟ್ಟಿನಲ್ಲಿ ಮತದಾರರು ಚೆನ್ನಾಗಿ ಯೋಚಿಸಿಯೇ ಸೂಕ್ತ ಜನನಾಯಕರನ್ನು ಆರಿಸಲಿದ್ದಾರೆ ಎಂಬ ಅಂಶ ದಟ್ಟವಾಗಿದೆ.


ಪ್ರತೀ ಚುನಾವಣೆಯಲ್ಲೂ ಅಭ್ಯರ್ಥಿಗಳ ಆಶ್ವಾಸನೆಯಿಂದ ಬೇಸತ್ತಿರುವ ಪ್ರಜೆಗಳು ತಮಗೆ ಎಂತಹ ನಾಯಕ ಬೇಕು ಎಂಬ ಲೆಕ್ಕಾಚಾರವನ್ನು ಹಾಕುವಷ್ಟು ಜಾಣರಾಗಿದ್ದಾರೆ. ಯಾವ ಪಕ್ಷ ಬಂದರೆ ರಾಜ್ಯಕ್ಕೆ ಒಳಿತು ಕ್ಷೇತ್ರಕ್ಕೆ ಒಳಿತು ಎಂಬ ಯೋಜನೆಯನ್ನು ಹಾಕಿಕೊಂಡಿದ್ದಾರೆ.


ಇದನ್ನೂ ಓದಿ: Dr K Annadani: ಗೆದ್ದೇ ಗೆಲ್ಲುವ ಛಲದಲ್ಲಿರುವ ಮಳವಳ್ಳಿ ಶಾಸಕ ಡಾ ಕೆ ಅನ್ನದಾನಿಯವರ ಬಗ್ಗೆ ನಿಮಗೆಷ್ಟು ಗೊತ್ತು?


ರಿಜ್ವಾನ್ ಅರ್ಷದ್ ಬಾಲ್ಯ ಹಾಗೂ ಶಿಕ್ಷಣ


ಇಂದಿನ ಲೇಖನದಲ್ಲಿ ಕಾಂಗ್ರೆಸ್‌ನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಜಕಾರಣಿ ರಿಜ್ವಾನ್ ಅರ್ಷದ್ ಅವರ ಪರಿಚಯ ಮಾಡಿಕೊಳ್ಳೋಣ.


ಡಿಸೆಂಬರ್ 2019 ರಲ್ಲಿ ಶಿವಾಜಿನಗರ ವಿಧಾನಸಭೆಯಿಂದ ಉಪಚುನಾವಣೆಯಲ್ಲಿ ಗೆದ್ದ ನಂತರ ಅವರು ಮೊದಲ ಬಾರಿಗೆ ಶಾಸಕರಾದರು. ಇವರ ತಂದೆ ಆರ್ ಕ್ಯೂ ಅರ್ಷದ್ ವಕೀಲರಾಗಿ ಸೇವೆ ಸಲ್ಲಿಸಿದವರು. ಮೈಸೂರಿನ ಸೈಂಟ್ ಫಿಲೋಮಿನಾಸ್ ಕಾಲೇಜಿನಿಂದ ಬಿ.ಕಾಮ್ ಪದವಿಯನ್ನು ಪಡೆದುಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ರಾಜಕೀಯದ ಆಸಕ್ತಿ ಬೆಳೆಸಿಕೊಂಡ ರಿಜ್ವಾನ್ ಅರ್ಷದ್ ಅವರು 1995-96 ರಲ್ಲಿ NSUI ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.


1997-98 ರಲ್ಲಿ, ಅವರು ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಆಯ್ಕೆಯಾದರು. ಭಾರತೀಯ ಯುವ ಕಾಂಗ್ರೆಸ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ (2004-2010) ಮತ್ತು ರಾಷ್ಟ್ರೀಯ ಕಾರ್ಯದರ್ಶಿ, ಭಾರತೀಯ ಯುವ ಕಾಂಗ್ರೆಸ್ ನವದೆಹಲಿಯ ಉಪಾಧ್ಯಕ್ಷರಾಗಿ ವೃತ್ತಿಜೀವನ ಆರಂಭಿಸಿದರು. ರಿಜ್ವಾನ್ ಅರ್ಷದ್ ಅವರು 5 ಡಿಸೆಂಬರ್ 2019 ಉಪಚುನಾವಣೆಯಲ್ಲಿ ಗೆದ್ದ ನಂತರ ಶಿವಾಜಿನಗರ ವಿಧಾನಸಭೆಯ ಶಾಸಕರಾಗಿದ್ದಾರೆ.


ರಿಜ್ವಾನ್ ಅರ್ಷದ್ ಆಸ್ತಿಪಾಸ್ತಿ ವಿವರ


ರಿಜ್ವಾನ್ ಅರ್ಷದ್ ರೂ 15 ಕೋಟಿ ಆಸ್ತಿಪಾಸ್ತಿ ಹೊಂದಿದ್ದು, ಬ್ಯುಸಿನೆಸ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರೂ 14 ಲಕ್ಷದ ಆದಾಯವನ್ನು ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಸೂಚಿಸಿದ್ದಾರೆ.


ನಗದು ರೂಪದಲ್ಲಿ ರೂ 8 ಲಕ್ಷವಿರಿಸಿಕೊಂಡಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರೂ 32 ಲಕ್ಷ ಸೇವಿಂಗ್ಸ್ ಖಾತೆ ಹೊಂದಿದ್ದಾರೆ. ಎಲ್‌ಐಸಿ ಹಾಗೂ ಇತರ ವಿಮೆ ರೂಪದಲ್ಲಿ ರೂ 9 ಲಕ್ಷ ಮೌಲ್ಯದ ಹಣ ಜಮೆಯಾಗಿದೆ.


ಇದನ್ನೂ ಓದಿ: Sudan Crisis: ಸುಡಾನ್‌ ಸಂಘರ್ಷಕ್ಕೆ 200 ಮಂದಿ ಬಲಿ, 1800 ಜನಕ್ಕೆ ಗಾಯ! ಅಂತರ್ಯುದ್ಧದಲ್ಲಿ ಸಿಲುಕಿ 31 ಕನ್ನಡಿಗರ ಪರದಾಟ!


ಪರ್ಸನಲ್ ಲೋನ್ ಹಾಗೂ ಚಿನ್ನಾಭರಣಗಳು


ಪರ್ಸನಲ್ ಲೋನ್ ಆಗಿ ರೂ 66 ಲಕ್ಷ ರಿಜ್ವಾನ್ ಅವರ ಹೆಸರಿನಲ್ಲಿದ್ದು ರೂ 16 ಲಕ್ಷ ಬೆಲೆಯ ವಾಹನಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ರೂ 30 ಲಕ್ಷ ಮೌಲ್ಯದ ಚಿನ್ನಾಭರಣಗಳು ಇವರ ಬಳಿ ಇವೆ ಎಂಬ ವಿವರಣೆ ನೀಡಿದ್ದಾರೆ. ಈ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ ರೂ 1 ಕೋಟಿ ಎಂಬ ಮಾಹಿತಿ ನೀಡಿದ್ದಾರೆ.


ಶಾಸಕರ ಸ್ಥಿರಾಸ್ತಿ ವಿವರ


ರಿಜ್ವಾನ್ ಯಾವುದೇ ಕೃಷಿ ಭೂಮಿಯನ್ನು ಹೊಂದಿಲ್ಲ ಕೃಷಿಯೇತರ ಭೂಮಿಯಾಗಿ ರೂ 31 ಲಕ್ಷದ ಜಾಗ ಇವರ ಹೆಸರಿನಲ್ಲಿದೆ. ರೂ 6 ಲಕ್ಷ ಮೌಲ್ಯದ ವಾಣಿಜ್ಯ ಸಂಕೀರ್ಣ ಶಾಸಕರ ಹೆಸರಿನಲ್ಲಿದೆ ಅಂತೆಯೇ 7 ಕೋಟಿ ಮೌಲ್ಯದ ನಿವೇಶನ ಕಟ್ಟಡಗಳು ರಿಜ್ಞಾನ್ ಅವರ ಹೆಸರಿನಲ್ಲಿದೆ ಎಂಬ ಮಾಹಿತಿ ನೀಡಿದ್ದಾರೆ. ಈ ಎಲ್ಲಾ ವಸ್ತುಗಳ ಮಾರುಕಟ್ಟೆ ಬೆಲೆ ರೂ 14 ಕೋಟಿ ಎಂಬುದಾಗಿ ರಿಜ್ಞಾನ್ ಅರ್ಷದ್ ಮಾಹಿತಿ ನೀಡಿದ್ದಾರೆ.

First published: