ಚುನಾವಣಾ ಕಣ ಸರ್ವವಿಧದಲ್ಲಿಯೂ ಸಜ್ಜಾಗಿದೆ. ಎಲ್ಲಾ ಪಕ್ಷಗಳು ಆಡಳಿತದ ಚುಕ್ಕಾಣಿಯನ್ನು ಹಿಡಿಯಬೇಕೆಂಬ ದಿಶೆಯಲ್ಲಿ ಪೈಪೋಟಿಯೊಂದಿಗೆ ಪರಸ್ಪರ ಸ್ಪರ್ಧೆಗಿಳಿದಿವೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ (Karnataka Elections 2023) ಏಕ ಹಂತದ ಚುನಾವಣೆಯನ್ನು ಯೋಜಿಸಲಾಗಿದ್ದು ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಮತದಾರರನ್ನು ಮನವೊಲಿಸುವ ನಿಟ್ಟಿನಲ್ಲಿ ಪಕ್ಷದ ಧುರೀಣರು ನಾನಾ ರೀತಿಯ ಕಸರತ್ತುಗಳನ್ನು ಮಸಲತ್ತುಗಳನ್ನು ನಡೆಸುತ್ತಿದ್ದು ತಮ್ಮ ಪಕ್ಷವೇ ಗೆಲ್ಲಬೇಕೆಂಬ ಅಭಿಲಾಶೆಯಲ್ಲಿ ಮತದಾರರು ಸಜ್ಜಾಗಿದ್ದಾರೆ.
ಈ ವರ್ಷ ಇನ್ನೂ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಒಟ್ಟಿನಲ್ಲಿ ಮತದಾರರು ಚೆನ್ನಾಗಿ ಯೋಚಿಸಿಯೇ ಸೂಕ್ತ ಜನನಾಯಕರನ್ನು ಆರಿಸಲಿದ್ದಾರೆ ಎಂಬ ಅಂಶ ದಟ್ಟವಾಗಿದೆ.
ಇದನ್ನೂ ಓದಿ: Laxman Savadi: ಸವದಿ ಸಿಟ್ಟು, ಡಿಕೆ ಡೈನಾಮೈಟ್, ಸಾಹುಕಾರ್‌ಗೆ ಸ್ಕೆಚ್! ಕುಂದಾನಗರಿ ಕೊತ ಕೊತ!
ಶಾಂತಿನಗರದ ಶಾಸಕ ನಲಪಾಡ್ ಅಹ್ಮದ್ ಹ್ಯಾರಿಸ್ ಕಿರುಪರಿಚಯ
ಇಂದಿನ ಲೇಖನದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ (Congress Candidate) ಹಾಗೂ ಶಾಂತಿನಗರದ ಶಾಸಕ ನಲಪಾಡ್ ಅಹ್ಮದ್ ಹ್ಯಾರಿಸ್ (Shantinagar MLA Nalapad Ahmed Haris) ಪರಿಚಯ ಮಾಡಿಕೊಳ್ಳೋಣ. ಭಾರತದ ಜನಪ್ರಿಯ ಉದ್ಯಮಿ ಹಾಗೂ ರಾಜಕಾರಣಿಯಾಗಿ ಹೆಸರು ಮಾಡಿರುವ ಹ್ಯಾರಿಸ್ ಕ್ರೀಡಾ ಕ್ಷೇತ್ರಗಳಲ್ಲಿಯೂ ಮಾನ್ಯತೆ ಗಳಿಸಿದವರು. 2008 ರಿಂದ ಶಾಂತಿನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಶಾಸಕರ ಬಾಲ್ಯ ಹಾಗೂ ಶಿಕ್ಷಣ
ನಲಪಾಡ್ ಅಹ್ಮದ್ ಹ್ಯಾರಿಸ್ 1967 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಎನ್.ಎ ಮೊಹಮ್ಮದ್. ನಲಪಾಡ್ ಗ್ರೂಪ್ ವ್ಯವಹಾರ, ನಲಪಾಡ್ ಪೈಪ್ಸ್, ನಲಪಾಡ್ ಸುರಕ್ಷಾ, ನಲಪಾಡ್ ಇನ್ಫೋಟೆಕ್ ಮತ್ತು ನಲಪಾಡ್ ಎನರ್ಜಿ ಹೀಗೆ ವೈವಿಧ್ಯಮಯ ಸ್ಥಾಪನೆಗಳನ್ನು ಸ್ಥಾಪಿಸುವತ್ತ ಹ್ಯಾರಿಸ್ ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
ಹ್ಯಾರಿಸ್ ರಾಜಕೀಯ ಜೀವನ ಹೇಗಿದೆ
ನಲಪಾಡ್ ಕುಟುಂಬದ ವ್ಯವಹಾರದ ಮೂಲಕ ಹ್ಯಾರಿಸ್ ಕೇರಳದವರಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಕೆ.ಜೆ.ಜಾರ್ಜ್ ಅವರ ಸಂಪರ್ಕಕ್ಕೆ ಬಂದರು.
2000 ರ ದಶಕದ ಆರಂಭದಲ್ಲಿ, ಹ್ಯಾರಿಸ್ ಕೆ.ಜೆ. ಜಾರ್ಜ್ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ವಿಶ್ವಾಸಾರ್ಹ ಸಹಾಯಕರಾದರು. ಇದರಿಂದ ಅವರ ಸ್ಥಾನ ಉನ್ನತಿಗೆ ಏರಿತು.
41 ನೇ ವಯಸ್ಸಿನಲ್ಲಿ, ಅವರು 2008 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶಾಂತಿ ನಗರದಿಂದ ವಿಧಾನಸಭೆಯ ಸದಸ್ಯರಾಗಿ (MLA) ಆಯ್ಕೆಯಾದರು. ಎನ್ ಎ ಹ್ಯಾರಿಸ್ ಪ್ರತಿಷ್ಠಾನದ ಮೂಲಕ ಹಿಂದುಳಿದ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಒದಗಿಸಿದರು ಮತ್ತು ಉದ್ಯೋಗ ಮೇಳಗಳನ್ನು ಆಯೋಜಿಸಿದರು.
ಇದನ್ನೂ ಓದಿ: BJP Candidate List: ರಾಮದಾಸ್‌ಗಿಲ್ಲ ಟಿಕೆಟ್, ಈಶ್ವರಪ್ಪ ಕ್ಷೇತ್ರಕ್ಕೆ ಯಾರು ಅನ್ನೋದೇ ಸಸ್ಪೆನ್ಸ್!
ಹ್ಯಾರಿಸ್ ಒಟ್ಟು ಆಸ್ತಿಪಾಸ್ತಿ ವಿವರಗಳು
ಹ್ಯಾರಿಸ್ ಒಟ್ಟು ರೂ 190 ಕೋಟಿಯ ಆಸ್ತಿಪಾಸ್ತಿ ಹೊಂದಿದ್ದಾರೆ. ಇವರು ರೂ 7 ಕೋಟಿ ಆದಾಯ ಹೊಂದಿದ್ದಾರೆ. ನಗದು ಹಣವಾಗಿ ರೂ 19 ಲಕ್ಷ ಹೊಂದಿದ್ದು, ವಿಜಯಾ ಬ್ಯಾಂಕ್‌ನಲ್ಲಿ ರೂ 6 ಕೋಟಿ ಡಿಪಾಸಿಟ್ ಇರಿಸಿದ್ದಾರೆ. ಬಾಂಡ್ ಹಾಗೂ ಷೇರುಗಳ ರೂಪದಲ್ಲಿ ರೂ 2 ಕೋಟಿ ಹ್ಯಾರಿಸ್ ಬಳಿ ಇದೆ.
ಹ್ಯಾರಿಸ್ ಅವರು ಪರ್ಸನಲ್ ಲೋನ್ ರೂಪದಲ್ಲಿ ರೂ 97 ಕೋಟಿ ಹೊಂದಿದ್ದಾರೆ. ರೂ 1 ಕೋಟಿ ಮೌಲ್ಯದ ಚಿನ್ನಾಭರಣಗಳಿವೆ. ರೂ 6 ಕೋಟಿಯ ಸ್ವತ್ತುಗಳಿವೆ.
ಶಾಸಕರ ಚರಾಸ್ತಿ ವಿವರ ಹೀಗಿದೆ
ನಲಪಾಡ್ ಹ್ಯಾರಿಸ್ ರೂ 1 ಕೋಟಿ ಬೆಲೆಯ ಕೃಷಿ ಭೂಮಿಯನ್ನು ಹೊಂದಿದ್ದು ರೂ 2 ಕೋಟಿ ಬೆಲೆಯ ಕೃಷಿಯೇತರ ಭೂಮಿ ಹೊಂದಿದ್ದಾರೆ. ರೂ 54 ಕೋಟಿಯ ವಾಣಿಜ್ಯ ಕಟ್ಟಡಗಳು ಶಾಸಕರ ಹೆಸರಿನಲ್ಲಿದೆ.
ರೂ 17 ಕೋಟಿ ಮೌಲ್ಯದ ನಿವಾಸಿ ಕಟ್ಟಡಗಳು ಹ್ಯಾರಿಸ್ ಹೆಸರಿನಲ್ಲಿದೆ. ಈ ಸ್ವತ್ತುಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ರೂ 75 ಕೋಟಿ ಎಂದು ಹ್ಯಾರಿಸ್ ನಮೂದಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ