Ratna Mamani: ಸವದತ್ತಿಯಲ್ಲಿ ವರ್ಕೌಟ್ ಆಗುತ್ತಾ ಅನುಕಂಪದ ಅಲೆ?

ರತ್ನಾ ಮಾಮನಿ, ಬಿಜೆಪಿ ಅಭ್ಯರ್ಥಿ

ರತ್ನಾ ಮಾಮನಿ, ಬಿಜೆಪಿ ಅಭ್ಯರ್ಥಿ

Savadatti Constituency: ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರತ್ನಾ ಮಾಮನಿ ಪರಿಚಯ ಮಾಡಿಕೊಳ್ಳೋಣ.

  • Trending Desk
  • 3-MIN READ
  • Last Updated :
  • Belgaum, India
  • Share this:

ಬೆಳಗಾವಿ: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯು (Karnataka Assembly Election 2023) ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಗೆ ಒಂದು ರೀತಿಯ ಪರೀಕ್ಷೆ ಇದ್ದಂತೆ. ಏಕೆಂದರೆ ಮತ ಹಾಕುವ ಮತದಾರ (Voters) ಅಭ್ಯರ್ಥಿ ತಮ್ಮ ತಮ್ಮ ಕ್ಷೇತ್ರಕ್ಕೆ ಮಾಡಿರುವ ಹಾಗೂ ಇನ್ನುಮುಂದೆ ಮಾಡಲಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿರಿಸಿಕೊಂಡು ಅಭ್ಯರ್ಥಿಗಳ ಆಯ್ಕೆಯನ್ನು ಮಾಡುತ್ತಾರೆ. ಪಕ್ಷಗಳನ್ನು ನೋಡಿ ಮತಹಾಕುವ ಸಂಪ್ರದಾಯ ಮೂಲೆಗೆ ಸರಿದಿದ್ದು ಸೂಕ್ತ ಜನನಾಯಕನನ್ನೇ ಜನರು ಆರಿಸಿಕೊಳ್ಳುತ್ತಿದ್ದಾರೆ ಹಾಗೂ ಚುನಾಯಿತ ಅಭ್ಯರ್ಥಿ ತಮ್ಮ ಕ್ಷೇತ್ರಕ್ಕೆ ಯೋಗ್ಯರೇ ಸಮರ್ಥರೇ ಎಂಬುದನ್ನು ಜನರೇ ನಿಶ್ಚಯಿಸುತ್ತಿದ್ದಾರೆ. ಒಟ್ಟಿನಲ್ಲಿ ಅಭ್ಯರ್ಥಿಗಳಿಗೆ ಚುನಾವಣೆ ಎಂಬುದು ದೊಡ್ಡ ಅಗ್ನಿಪರೀಕ್ಷೆಯಾಗಿದೆ.


ರತ್ನಾ ವಿಶ್ವನಾಥ್ ಮಾಮನಿ ಪರಿಚಯ


ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರತ್ನಾ ಮಾಮನಿ ಪರಿಚಯ ಮಾಡಿಕೊಳ್ಳೋಣ. ಸೌಂದತ್ತಿ ಯಲ್ಲಮ್ಮ, ಸವದತ್ತಿ ಎಂದೂ ಕರೆಯಲಾದ ಈ ಕ್ಷೇತ್ರ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಬೆಳಗಾವಿ (ಲೋಕಸಭಾ ಕ್ಷೇತ್ರ) ಒಳಗೊಂಡಿರುವ 8 ಕ್ಷೇತ್ರಗಳಲ್ಲಿ ಒಂದಾಗಿದೆ.


ಸವದತ್ತಿ ಯಲ್ಲಮ್ಮ ಕ್ಷೇತ್ರ ಪರಿಚಯ


ಕ್ಷೇತ್ರದಲ್ಲಿ ಸಾಮಾನ್ಯ ಮತದಾರರು, ಅನಿವಾಸಿ ಭಾರತೀಯರು ಮತ್ತು ಸೇವಾ ಮತದಾರರು ಸೇರಿದಂತೆ ಒಟ್ಟು 1,89,556 ಮತದಾರರಿದ್ದಾರೆ.


karnataka assembly election 2023 savadatti bjp candidate ratna mamani political profile stg mrq
ರತ್ನಾ ಮಾಮನಿ, ಬಿಜೆಪಿ ಅಭ್ಯರ್ಥಿ


ಸಾಮಾನ್ಯ ಮತದಾರರಲ್ಲಿ 95,518 ಪುರುಷರು, 93,644 ಮಹಿಳೆಯರು ಸೇರಿದ್ದಾರೆ. ಕ್ಷೇತ್ರದಲ್ಲಿ ಮತದಾರರ ಲಿಂಗ ಅನುಪಾತ 97.64 ಮತ್ತು ಅಂದಾಜು ಸಾಕ್ಷರತೆ ಪ್ರಮಾಣ 68% ವಾಗಿದೆ.


ಕ್ಷೇತ್ರದಲ್ಲಿ ಬಿಜೆಪಿಯದ್ದೇ ಮೇಲುಗೈ


2013 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಸ್ಥಾನವನ್ನು 16,042 ಮತಗಳ (12.05%) ಅಂತರದಿಂದ ಗೆದ್ದುಕೊಂಡಿತು, ಒಟ್ಟು ಚಲಾವಣೆಯಾದ ಒಟ್ಟು ಮತಗಳಲ್ಲಿ 34.87% ಗಳಿಸಿತು. 2013 ರಲ್ಲಿ ಕ್ಷೇತ್ರವು 78.96% ರಷ್ಟು ಮತದಾನವಾಗಿತ್ತು.


karnataka assembly election 2023 savadatti bjp candidate ratna mamani political profile stg mrq
ರತ್ನಾ ಮಾಮನಿ, ಬಿಜೆಪಿ ಅಭ್ಯರ್ಥಿ


2008 ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಈ ಸ್ಥಾನವನ್ನು 4,577 ಮತಗಳ (4.19%) ಅಂತರದಲ್ಲಿ ಗೆದ್ದುಕೊಂಡಿತು ಮತ್ತು 44.21% ಮತಗಳನ್ನು ದಾಖಲಿಸಿತು. 2018 ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 80.05% ರಷ್ಟು ಮತದಾನವಾಗಿದೆ.


ಪತಿಯ ದಾರಿಯಲ್ಲಿ ಸಾಗುವ ಆತ್ಮವಿಶ್ವಾಸ


2018 ರ ಚುನಾವಣೆಯಲ್ಲಿ ಆನಂದ್ ಚಂದ್ರಶೇಖರ್ ಮಾಮನಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದು, ಆನಂದ್ ಅವರ ತಂದೆ ಚಂದ್ರಶೇಖರ ಮಾಮನಿ ಅವರು 1994 ರಲ್ಲಿ ಪರಸಗಡದಿಂದ ಜನತಾ ದಳದ ಅಭ್ಯರ್ಥಿಯಾಗಿ ವಿಧಾನಸಭೆಗೆ ಆಯ್ಕೆಯಾದರು. ಆನಂದ್ ಮಾಮನಿ ಅವರು ಮಾರ್ಚ್ 2020 ರಲ್ಲಿ ಕರ್ನಾಟಕ ಅಸೆಂಬ್ಲಿಯ ಉಪ ಸ್ಪೀಕರ್ ಆಗಿ ಆಯ್ಕೆಯಾದರು.


karnataka assembly election 2023 savadatti bjp candidate ratna mamani political profile stg mrq
ರತ್ನಾ ಮಾಮನಿ, ಬಿಜೆಪಿ ಅಭ್ಯರ್ಥಿ


ದಿವಂಗತ ಆನಂದ್ ಮಾಮನಿ ಪತ್ನಿಯಾಗಿರುವ ರತ್ನಾ ಮಾಮನಿ ಈ ಬಾರಿ ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಭರ್ಜರಿ ಮತಪ್ರಚಾರ ಮಾಡುತ್ತಿರುವ ರತ್ನಾ ಮಾಮನಿ ಬಿಜೆಪಿಯನ್ನು ಗೆಲ್ಲಿಸುವ ಉತ್ಸಾಹ ತೋರಿದ್ದಾರೆ ಹಾಗೂ ಮನೆ ಮನೆಗೆ ತೆರಳಿ ಸಭೆ ಸಮಾರಂಭಗಳನ್ನು ಏರ್ಪಡಿಸಿ ಬಿಜೆಪಿ ಮತಹಾಕುವಂತೆ ಮತದಾರರನ್ನು ಓಲೈಸುತ್ತಿದ್ದಾರೆ.


ಸಾಮಾಜಿಕ ತಾಣಗಳಲ್ಲಿಯೂ ಚುನಾವಣೆಯ ಕ್ಷಣ ಕ್ಷಣದ ಮಾಹಿತಿಗಳನ್ನು ನೀಡುತ್ತಿರುವ ರತ್ನಾ ಮಾಮನಿಯವರು ಕ್ಷೇತ್ರದಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂಬ ಗೆಲುವಿನ ನಗು ಬೀರುತ್ತಿದ್ದಾರೆ.




ಬಿಜೆಪಿಗೆ ಮತಹಾಕುವಂತೆ ಮನವಿ


ಪಕ್ಷದ ಕಾರ್ಯಕರ್ತರ ಬೆಂಬಲದೊಂದಿಗೆ ತಮ್ಮ ಪತಿಯ ಹೆಜ್ಜೆಯನ್ನೇ ಹಿಂಬಾಲಿಸುವ ಆಶಯ ಹೊಂದಿರುವ ರತ್ನಾ ಅವರು ಬಿಜೆಪಿಗೆ ಮತಹಾಕುವಂತೆ ಮತದಾರರಲ್ಲಿ ಪರಿಪರಿಯಾಗಿ ವಿನಂತಿಸಿಕೊಂಡಿದ್ದಾರೆ ಹಾಗೂ ಮತದಾರರ ಮನೆ ಮನೆಗೆ ತೆರಳಿ ಬಿಜೆಪಿಗೆ ಅಮೂಲ್ಯವಾದ ಮತವನ್ನು ನೀಡುವಂತೆ ವಿನಂತಿಸಿಕೊಂಡಿದ್ದಾರೆ.


ಇದನ್ನೂ ಓದಿ:  Katta Jagadish Naidu: ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್ ನಾಯ್ಡು ಬಗ್ಗೆ ಗೊತ್ತಿರಬೇಕಾದ ಸಂಗತಿಗಳಿವು!


ಒಟ್ಟಿನಲ್ಲಿ2023 ರ ಚುನಾವಣೆಯು ಭರ್ಜರಿಯಾಗಿಯೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ.

top videos
    First published: