• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Belur Gopalkrishna: ಮಂತ್ರಿ ಕನಸು ಕಾಣುತ್ತಿರುವ ಅಭ್ಯರ್ಥಿಯ 'ಕೈ' ಹಿಡಿತಾರಾ ಸಾಗರದ ಜನತೆ?

Belur Gopalkrishna: ಮಂತ್ರಿ ಕನಸು ಕಾಣುತ್ತಿರುವ ಅಭ್ಯರ್ಥಿಯ 'ಕೈ' ಹಿಡಿತಾರಾ ಸಾಗರದ ಜನತೆ?

ಬೇಳೂರು ಗೋಪಾಲಕೃಷ್ಣ

ಬೇಳೂರು ಗೋಪಾಲಕೃಷ್ಣ

Sagar Congress Candidate: ತಮ್ಮ ಕ್ಷೇತ್ರದಿಂದ ಮಂತ್ರಿಗಿರಿಯನ್ನು ಪಡೆಯಲೇಬೇಕು ಎಂದು ಗೋಪಾಲಕೃಷ್ಣ ಬೇಳೂರು ಶ್ರಮಿಸುತ್ತಿದ್ದು, ಸಾಗರ-ಹೊಸನಗರ ಭಾಗದಲ್ಲಿ ಭರ್ಜರಿ ಮತಬೇಟೆಗಿಳಿದಿದ್ದಾರೆ.

 • Trending Desk
 • 4-MIN READ
 • Last Updated :
 • Shimoga, India
 • Share this:

ಬೆಂಗಳೂರು: ಕಾಗೋಡು ತಿಮ್ಮಪ್ಪನಂತಹ (Kagodu Thimmappa) ಧೀಮಂತ ರಾಜಕಾರಣಿಗಳು ಇರುವ ವಿಧಾನಸಭಾ ಕ್ಷೇತ್ರ ಸಾಗರದಲ್ಲಿ (Sagar Assembly Constituency) ಅವರ ನೆರಳಲ್ಲಿ ಬೆಳೆದ ಹಲವು ರಾಜಕಾರಣಿಗಳು ಇದ್ದಾರೆ. ಸಾಗರದ ಪ್ರಭಾವಿ ರಾಜಕಾರಣಿಗಳ ಪಟ್ಟಿಯಲ್ಲಿರುವ ಗೋಪಾಲಕೃಷ್ಣ ಬೇಳೂರು (Gopalkrishna Beluru) ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಹರತಾಳು ಹಾಲಪ್ಪ (Haratalu Halappa) ವಿರುದ್ಧ ತೊಡೆ ತಟ್ಟಿರುವ ಬೇಳೂರು ಕಾಂಗ್ರೆಸ್‌ (Congress) ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.


ಪಕ್ಷಾಂತರಿ ಬೇಳೂರು


ಚುನಾವಣೆ ವೇಳೆ ಪಕ್ಷದಿಂದ ಪಕ್ಷಕ್ಕೆ ಹಾರುವವರ ಸಂಖ್ಯೆಗೇನೂ ಕಡಿಮೆ ಇರುವುದಿಲ್ಲ. ಟಿಕೆಟ್ ಸಿಗದೆ, ಸಿಕ್ಕಿದರೂ ಅದು ಸರಿ ಹೋಗದೆ, ಬೇರೆ ಕ್ಷೇತ್ರಗಳಲ್ಲಿ ಟಿಕೆಟ್ ಹಂಚುವಾಗ ಅವಮಾನ, ಇದ್ದ ಪಕ್ಷದಲ್ಲಿ ಏನೋ ಕುಂದುಕೊರತೆ ಹೀಗೆ ಅಸಮಾಧಾನಗೊಂಡು ಬೇರೆ ಪಕ್ಷಕ್ಕೆ ಪಕ್ಷಾಂತರ ಮಾಡುವುದು ರಾಜಕೀಯದಲ್ಲಿ ಸಹಜ.


ಹೀಗೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾ ರಾಜಕೀಯ ಭದ್ರತೆಯನ್ನು ಇನ್ನೂ ಹುಡುಕುತ್ತಿರುವ ಬೇಳೂರು ಬಿಜೆಪಿ, ಜೆಡಿಎಸ್‌ನಂತರ ಈ ಬಾರಿ ಕಾಂಗ್ರೆಸ್‌ ಪಾಳಯದಿಂದ ಅಖಾಡಕ್ಕೆ ಇಳಿದಿದ್ದಾರೆ.


ಗೋಪಾಲಕೃಷ್ಣ ಬೇಳೂರು ಪರಿಚಯ


ಸಾಗರದ ಬೇಳೂರಿನಲ್ಲಿ ಜನಿಸಿರುವ ಗೋಪಾಲಕೃಷ್ಣ ಅವರ ತಂದೆ ಹೆಸರು ಕೆರಿಯಪ್ಪ. 1981-1982ರಲ್ಲಿ ಪಿಯುಸಿ ಮಾಡಿದ ಬೇಳೂರು ಅಷ್ಟಕ್ಕೆ ವಿದ್ಯಾಭ್ಯಾಸ ಮುಗಿಸಿ ನಂತರ ರಾಜಕೀಯ ಪ್ರವೇಶಿಸಿದರು.


ಬೇಳೂರು ರಾಜಕೀಯ ಹಾದಿ


*ಬಿಜೆಪಿ ಪಕ್ಷದಿಂದ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಬೇಳೂರು ಆಗಿನ ಕಾಲದ ಧೀಮಂತ ಮತ್ತು ಪ್ರಭಾವಿ ರಾಜಕಾರಣಿ ಕಾಗೋಡು ತಿಮ್ಮಪ್ಪನವರನ್ನು ಸೋಲಿಸಿದ್ದರು. ಬಿಜೆಪಿ ಇಂದ ಎರಡು ಬಾರಿ ಅಂದರೆ 2004 ಮತ್ತು 2008 ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.


ಬೇಳೂರು ಗೋಪಾಲಕೃಷ್ಣ


*ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ನೆರಳಿನಲ್ಲಿ ಬೆಳೆದು 2004ರ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು ಬೇಳೂರು.


*ಎಸ್.ಬಂಗಾರಪ್ಪ ಅವರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸ್ಥಾಪಿಸಿದಾಗ ಹರತಾಳು ಹಾಲಪ್ಪ ಅವರೊಂದಿಗೆ ಹೋದವರಲ್ಲಿ ಬೇಳೂರು ಕೂಡ ಒಬ್ಬರು.


*ನಂತರ 2008ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದಾಗ ಬಿಜೆಪಿಯಿಂದ ಜೆಡಿಎಸ್‌ಗೆ ಹಾರಿದ ಬೇಳೂರು ಜೆಡಿಎಸ್ ಪಕ್ಷದಲ್ಲಿ ಚುನಾವಣೆಗೆ ಸ್ಫರ್ಧಿಸಿದರು.


* ಮತ್ತೆ 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್‌ ಸಿಗದೇ ಇದ್ದಾಗ ಮತ್ತೆ ಹಳೇ ಪಕ್ಷ ಬಿಜೆಪಿಗೆ ಮರಳಿದರು. 2013 ರಲ್ಲಿ, ಕಾಗೋಡು ತಿಮ್ಮಪ್ಪ ಅವರು ಮರು ಆಯ್ಕೆಯಾದರು, ಆದಾಗ್ಯೂ ಅವರು 2018 ರಲ್ಲಿ ಬಿಜೆಪಿ ನಾಯಕ ಹರತಾಳು ಹಾಲಪ್ಪ ವಿರುದ್ಧ ಕಳೆದ ಚುನಾವಣೆಯಲ್ಲಿ ಸೋತರು.


*2018ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ನಡುವೆ ಪೈಪೋಟಿ ಇತ್ತು.


ಆಗ ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡಿದ ಬೇಳೂರು ಗೋಪಾಲಕೃಷ್ಣ ಮುನಿಸಿಕೊಂಡು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಹರತಾಳು ಹಾಲಪ್ಪನವರು ಕಾಗೋಡು ತಿಮ್ಮಪ್ಪನವರನ್ನು 8,039 ಮತಗಳ ಅಂತರದಿಂದ ಸೋಲಿಸಿದ್ದರು.


ಕಾಂಗ್ರೆಸ್ ಸೇರಿರುವ ಬೇಳೂರು ಗೋಪಾಲಕೃಷ್ಣ


ಬಿಜೆಪಿಯಲ್ಲಿ ಭಿನ್ನಮತ ತಾರಕಕ್ಕೇರಿದ ನಂತರ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ಭಿನ್ನಮತೀಯ ಗುಂಪಿನಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಶಾಸಕತ್ವದಿಂದ ಅನರ್ಹಗೊಂಡ ಶಾಸಕರಲ್ಲಿ ಬೇಳೂರು ಕೂಡ ಒಬ್ಬರು.


ಇದನ್ನೂ ಓದಿ: Leaders Profile : JDS ಭದ್ರಕೋಟೆಯಲ್ಲಿ ಕಮಾಲ್‌ ಮಾಡುತ್ತಾ ʻಕೈʼ ಪಡೆ? ಗೆಲುವಿನ ನಿರೀಕ್ಷೆಯಲ್ಲಿ ಚೆಲುವರಾಯ ಸ್ವಾಮಿ!


ಕ್ಷೇತ್ರದಲ್ಲಿ ತಮ್ಮದೇ ಆದ ಬೆಂಬಲಿಗರ ಬಳಗವನ್ನು ಹೊಂದಿರುವ ಇವರು ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಬಗ್ಗು ಬಡಿಯಬೇಕು ಎಂದು ಕಾಂಗ್ರೆಸ್‌ ಜೊತೆ ಕೈಜೋಡಿಸಿದ್ದಾರೆ.
ಮಂತ್ರಿಯಾಗುವ ಕನಸು 


ತಮ್ಮ ಕ್ಷೇತ್ರದಿಂದ ಮಂತ್ರಿಗಿರಿಯನ್ನು ಪಡೆಯಲೇಬೇಕು ಎಂದು ಗೋಪಾಲಕೃಷ್ಣ ಬೇಳೂರು ಶ್ರಮಿಸುತ್ತಿದ್ದು, ಸಾಗರ-ಹೊಸನಗರ ಭಾಗದಲ್ಲಿ ಭರ್ಜರಿ ಮತಬೇಟೆಗಿಳಿದಿದ್ದಾರೆ.

top videos


  ಸಾಗರದಲ್ಲಿ ಬಿಜೆಪಿ ಪಕ್ಷದ ಪ್ರಾಬಲ್ಯವಿದ್ದರೂ ಸಹ ಕಾಗೋಡು ತಿಮ್ಮಪ್ಪ ಅವರಿಗೆ ಅನೇಕರು ಬೆಂಬಲ ನೀಡುತ್ತಾರೆ. ಹಳೇ ಜೀವಗಳು ಕಾಗೋಡು ತಿಮ್ಮಪ್ಪನವರನ್ನು ಈಗಲೂ ಸಹ ಉತ್ತಮ ವ್ಯಕ್ತಿಯನ್ನಾಗಿ ನೋಡುತ್ತಿದ್ದಾರೆ. ಹೀಗಾಗಿ ತಿಮ್ಮಪ್ಪನವರ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿ ಬೇಳೂರು ಅವರಿಗೆ ಮತ ನೀಡಬಹುದು ಎನ್ನಲಾಗಿದೆ.

  First published: