• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Reason For JDS Loss: ಕಿಂಗ್​ ಮೇಕರ್​ ಕನಸು ಕಾಣ್ತಿದ್ದ ​ಕುಮಾರಣ್ಣಂಗೆ ಶಾಕ್​! 'ದಳಪತಿ'ಗಳ ಸೋಲಿಗೆ ಇದೇ ಕಾರಣ!

Reason For JDS Loss: ಕಿಂಗ್​ ಮೇಕರ್​ ಕನಸು ಕಾಣ್ತಿದ್ದ ​ಕುಮಾರಣ್ಣಂಗೆ ಶಾಕ್​! 'ದಳಪತಿ'ಗಳ ಸೋಲಿಗೆ ಇದೇ ಕಾರಣ!

ಕುಮಾರಸ್ವಾಮಿ

ಕುಮಾರಸ್ವಾಮಿ

ಮತ್ತೊಮ್ಮೆ ರಾಜ್ಯದಲ್ಲಿ ಜೆಡಿಎಸ್ (JDS)​ ದರ್ಬಾರ್ ನಡೆಸೋದು ಬಹುತೇಕ ಖಚಿತ ಅಂತ ಜೆಡಿಎಸ್​ ಕಾರ್ಯಕರ್ತರು ಅಂದುಕೊಂಡಿದ್ದರು. ಅದೆಲ್ಲವನ್ನೂ ಕಾಂಗ್ರೆಸ್​ ಉಲ್ಟಾ ಪಲ್ಟಾ ಮಾಡಿದೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Ele ಶೇ 73.19 ರಷ್ಟು ಮತದಾನವಾಗಿತ್ತು. ಇಂದು ಬೆಳಗ್ಗೆಯಿಂದಲೇ ಮತಎಣಿಕೆ ಭರದಿಂದ ಸಾಗಿತ್ತು. ಒಂದು ಸಲ ಕಾಂಗ್ರೆಸ್  (Congress) ಮುನ್ನಡೆಬಿಜೆಪಿಯಾಗಲಿಯಾದ್ರೆ, ಮತ್ತೊಂದು ಸಲ ಬಿಜೆಪಿ (BJP) ಮುನ್ನಡೆ ಕಾಯ್ದುಕೊಂಡಿತ್ತು. ಕೊನೆಗೂ ಕಾಂಗ್ರೆಸ್​ ಬಹುಮತ ಪಡೆದು ಕರುನಾಡಿನ ಚುಕ್ಕಾಣಿ ಹಿಡಿದುಕೊಂಡಿದೆ.  ಮತ್ತೊಮ್ಮೆ ರಾಜ್ಯದಲ್ಲಿ ಜೆಡಿಎಸ್ (JDS)​ ದರ್ಬಾರ್ ನಡೆಸೋದು ಬಹುತೇಕ ಖಚಿತ ಅಂತ ಜೆಡಿಎಸ್​ ಕಾರ್ಯಕರ್ತರು ಅಂದುಕೊಂಡಿದ್ದರು. ಅದೆಲ್ಲವನ್ನೂ ಕಾಂಗ್ರೆಸ್​ ಉಲ್ಟಾ ಪಲ್ಟಾ ಮಾಡಿದೆ. ಕಾಂಗ್ರೆಸ್​, ಬಿಜೆಪಿ ಪಕ್ಷಕ್ಕೆ ಬಹುಮತ ಬರದಿದ್ರೆ ಜೆಡಿಎಸ್​ ಮುಂದೆ ಬಂದು ಕೈ ಕಟ್ಟಿ ನಿಲ್ಲಬೇಕಿತ್ತು. ಆದರೆ ಈಗ ಆ ಪ್ರಸಂಗ ಬರುವುದೇ ಇಲ್ಲ. ರಾಜ್ಯದಲ್ಲಿ ಈ ಮಟ್ಟಕ್ಕೆ ಗೆಲ್ಲುತ್ತೇವೆ ಅಂತ ಸ್ವತಃ ಕಾಂಗ್ರೆಸ್​ ಪಕ್ಷವೇ ಅಂದುಕೊಂಡಿರಲಿಲ್ಲ ಅನ್ಸುತ್ತೆ.


ಜೆಡಿಎಸ್​ ಸೋಲಿಗೆ ಇದೇ ಕಾರಣ!


ಜೆಡಿಎಸ್​ ಸೋಲಿಗೆ ಹಲವಾರು ಕಾರಣಗಳಿವೆ. ಅದರಲ್ಲಿ ಸ್ಟಾರ್​ ಪ್ರಚಾಕರು ಇಲ್ಲದೇ ಇರುವುದೇ ಕಾರಣ. ಹೌದು, ಎಲ್ಲೇ ಹೋದರೂ ಕೇವಲ ಕುಮಾರಸ್ವಾಮಿ ಹಾಗೂ ಅವರ ಕುಟುಂಬವಷ್ಟೇ ಪ್ರಚಾರ ಮಾಡುತ್ತಿತ್ತು. ಜೆಡಿಎಸ್​ ಪಕ್ಷದಲ್ಲಿ ಇಂಥವರೇ ಅಂತ ಸ್ಟಾರ್​ ಪ್ರಚಾರಕರು ಇಲ್ಲದೇ ಇದ್ದಿದ್ದೇ ಇವರು ಸೋಲಿಗೆ ಮುಖ್ಯ ಕಾರಣ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.


ನಿಖಿಲ್​ಗೆ ರಾಮನಗರ ಟಿಕೆಟ್ ಕೊಟ್ಟಿದ್ದಕ್ಕೆ ಬೇಸರ!


ಇನ್ನೂ ಎಲೆಕ್ಷನ್​ ಅನೌನ್ಸ್​ ಆದಾಗ ರಾಮನಗರದಿಂದ ಯಾರು ಕಣಕ್ಕೆ ಇಳಿಯುತ್ತಾರೆ ಅಂತ ಕುತೂಹಲ ಹೆಚ್ಚಿಸಿತ್ತು. ಅನಿತಾ ಕುಮಾರಸ್ವಾಮಿ ರಾಮನಗರದಿಂದ ಸ್ಫರ್ಧಿಸುವ ಬದಲು ನಿಖಿಲ್​ ಕುಮಾರಸ್ವಾಮಿಗೆ ಟಿಕೆಟ್​ ಕೊಟ್ಟಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈಗ ನಿಖಿಲ್​ ಕುಮಾರಸ್ವಾಮಿ ಕೂಡ ರಾಮನಗರದಲ್ಲಿ ಸೋತಿದ್ದಾರೆ.


ಕುಟುಂಬ ಕಲಹವೂ ಕಾರಣವಾಯ್ತಾ?


ಇನ್ನೂ ರಾಜ್ಯದಲ್ಲಿ ಕುಟುಂಬ ರಾಜಕೀಯ ಅಂದಕೂಡಲೇ ಥಟ್​ ಅಂತ ನೆನಪಾಗೋದೆ ಜೆಡಿಎಸ್ ಪಕ್ಷ. ಕುಮಾರಸ್ವಾಮಿ ಕುಟುಂಬ ರಾಜಕಾರಣ ನೋಡಿರದವರೇ ಇಲ್ಲ. ಕೊನೆ ಹಂತದ ವರೆಗೂ ಹಾಸನ ಟಿಕೆಟ್ ಯಾರ ಪಾಲಾಗುತ್ತೆ ಅಂತ ಗೊತ್ತಿರಲಿಲ್ಲ. ರೇವಣ್ಣ ಪತ್ನಿಗೆ ಹಾಸನ ಟಿಕೆಟ್ ಫೈನಲ್​ ಎನ್ನಲಾಗಿತ್ತು. ಆದರೆ ಕೊನೆಗೆ ಸುಪ್ರೀತ್​ಗೆ ಹಾಸನ ಟಿಕೆಟ್ ಫೈನಲ್ ಆಗಿತ್ತು. ಹಾಸನದಲ್ಲಿ ಸುಪ್ರೀತ್​ ಗೆದ್ದು ಬೀಗಿದ್ದಾರೆ. ಹೊಳೆನರಸಿಪುರದಲ್ಲಿ ಎಚ್.ಡಿ. ರೇವಣ್ಣ ಕೂಡ ಗೆದ್ದಿದ್ದಾರೆ.


ಇದನ್ನೂ ಓದಿ: 113 ಮತಗಳಿಂದ ಗೆದ್ದ ದಿನೇಶ್ ಗುಂಡೂರಾವ್, ಗಾಂಧಿನಗರ ಕ್ಷೇತ್ರದಲ್ಲಿ ಮರು ಮತ ಎಣಿಕೆ!


ಸೋಲಿನ ಬಗ್ಗೆ ಎಚ್​ಡಿಕೆ ಹೇಳಿದ್ದಿಷ್ಟು?


ರಾಜ್ಯದ ಜನತೆಯ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ.




ಈ ಕುರಿತು ಟ್ವೀಟ್‌ ಮೂಲಕ ಹೇಳಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ. ನಮ್ಮ ಪಕ್ಷವನ್ನು ಆಶೀರ್ವದಿಸಿದ ಮಹಾಜನತೆಗೆ ಅಭಿನಂದನೆಗಳು ಎಂದಿದ್ದಾರೆ.


ಗೆದ್ದವರಿಗೆ ಶುಭಾಶಯ ಹೇಳಿದ ದಳಪತಿ!

top videos


    ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರಕಾರಕ್ಕೆ ಶುಭವಾಗಲಿ. ಜನರ ಆಶೋತ್ತರಳಿಗೆ ಸ್ಪಂದಿಸಲಿ ಎಂದು ಹಾರೈಸುತ್ತೇನೆ.  ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರಕಾರಕ್ಕೆ ಶುಭವಾಗಲಿ. ಜನರ ಆಶೋತ್ತರಳಿಗೆ ಸ್ಪಂದಿಸಲಿ ಎಂದು ಹಾರೈಸುತ್ತೇನೆ. ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳಿಗೆ ನನ್ನ ಕೃತಜ್ಞತೆಗಳು. ಯಾವುದೇ ಕಾರಣಕ್ಕೂ ಯಾರೂ ಧೃತಿಗೆಡುವುದು ಬೇಡ, ನಿಮ್ಮ ಜತೆಯಲ್ಲಿ ನಾನಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು