• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Sudha Shivaramegowda: ಪತಿಯ ಬದಲಾಗಿ ಪತ್ನಿಗೆ ಟಿಕೆಟ್; ನಾಗಮಂಗಲ ಅಖಾಡದಲ್ಲಿರುವ ಬಿಜೆಪಿ ಅಭ್ಯರ್ಥಿಯ ಪರಿಚಯ

Sudha Shivaramegowda: ಪತಿಯ ಬದಲಾಗಿ ಪತ್ನಿಗೆ ಟಿಕೆಟ್; ನಾಗಮಂಗಲ ಅಖಾಡದಲ್ಲಿರುವ ಬಿಜೆಪಿ ಅಭ್ಯರ್ಥಿಯ ಪರಿಚಯ

ಸುಧಾ ಶಿವರಾಮೇಗೌಡ, ನಾಗಮಂಗಲ ಬಿಜೆಪಿ ಅಭ್ಯರ್ಥಿ

ಸುಧಾ ಶಿವರಾಮೇಗೌಡ, ನಾಗಮಂಗಲ ಬಿಜೆಪಿ ಅಭ್ಯರ್ಥಿ

Nagamangala Constituency: ಈ ಕ್ಷೇತ್ರದ ಟಿಕೆಟ್‌ಗಾಗಿ ಬಿಜೆಪಿಯಿಂದ ಇನ್ನಿಬ್ಬರು ಅಭ್ಯರ್ಥಿಗಳಾದ ಫೈಟರ್ ರವಿ ಹಾಗೂ ಜೆಡಿಎಸ್‌ನಿಂದ ಉಚ್ಛಾಟನೆಗೊಂಡು ಬಿಜೆಪಿ ಸೇರಿದ ಎಲ್.ಆರ್ ಶಿವರಾಮೇಗೌಡ ಪೈಪೋಟಿ ನಡೆಸಿದ್ದರು.

  • Trending Desk
  • 4-MIN READ
  • Last Updated :
  • Karnataka, India
  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ನಾಮಪತ್ರ (Nomination) ಹಿಂಪಡೆಯುವ ಗಡುವು ಮುಗಿದಿದೆ. ಒಟ್ಟಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ (Voters) ದಿನಗಣನೆ ಶುರುವಾಗಿದ್ದು ಮೇ 10 ಕ್ಕೆ ಚುನಾವಣೆ ನಡೆಯಲಿದ್ದು ಮೇ 13 ರಂದು ಚುನಾವಣೆ ಫಲಿತಾಂಶ (Elections Results) ಘೋಷಣೆ ಹೊರಬೀಳಲಿದೆ. ಪ್ರತಿಯೊಂದು ಪಕ್ಷದ ಅಭ್ಯರ್ಥಿಗಳು ಕೂಡ ನಾ ಮುಂದು ತಾ ಮುಂದು ಎಂದು ಚುನಾವಣಾ ಪ್ರಚಾರ (Election Campaign) ಕೈಗೊಂಡಿದ್ದು ಮತದಾರರನ್ನು ತಮ್ಮ ಪಕ್ಷಗಳತ್ತ ಸೆಳೆಯುವ ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಈ ಬಾರಿಯ ಚುನಾವಣೆಯು ಅಭ್ಯರ್ಥಿಗಳಿಗೆ ಅಗ್ನಿಪರೀಕ್ಷೆ ಎಂದೆನಿಸಿರುವುದು ನಿಜವಾಗಿದೆ.


ನಾಗಮಂಗಲ ವಿಧಾನಸಭಾ ಕ್ಷೇತ್ರ


ನಾಗಮಂಗಲ ವಿಧಾನಸಭಾ ಕ್ಷೇತ್ರವು (Nagamangala Assembly Constituency) ಕರ್ನಾಟಕದ 31 ಜಿಲ್ಲೆಗಳ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಮಹಾಭಾರತದ ಕಾಲದಿಂದಲೂ ದೊಡ್ಡ ಧಾರ್ಮಿಕ ಮಹತ್ವವನ್ನು ಹೊಂದಿರುವ ಪಟ್ಟಣವಾಗಿದೆ.


karnataka-assembly-election-2023-nagamangala-constituency-bjp-candidate-sudha-shivaramegowda-political-profile-stg-mrq
ಸುಧಾ ಶಿವರಾಮೇಗೌಡ, ನಾಗಮಂಗಲ ಬಿಜೆಪಿ ಅಭ್ಯರ್ಥಿ


ನಾಗಮಂಗಲ ವಿಧಾನಸಭಾ ಕ್ಷೇತ್ರವು ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರದಲ್ಲಿ ಬಿಜೆಪಿಯು ತನ್ನ ಅಭ್ಯರ್ಥಿ ಸುಧಾ ಶಿವರಾಮೇ ಗೌಡ (Sudha Shivarame Gowda, BJP Candidate) ಅವರನ್ನು ಕಣಕ್ಕಿಳಿಸಿದೆ. ಅಂತೆಯೇ ಕಾಂಗ್ರೆಸ್‌ನಿಂದ ಚಲುವರಾಯಸ್ವಾಮಿ (Chaluvarayaswamy) ಕಣಕ್ಕಿಳಿದಿದ್ದರೆ ಜೆಡಿಎಸ್‌ನ ಸುರೇಶ್ ಗೌಡ (Suresh Gowda) ಪೈಪೋಟಿಯಾಗಿ ಸ್ಪರ್ಧಿಸುತ್ತಿದ್ದಾರೆ.


ಕ್ಷೇತ್ರದಲ್ಲಿರುವ ಮತದಾರರೆಷ್ಟು?


ಈ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ 1,05,198 ಪುರುಷ ಮತದಾರರು ಹಾಗೂ 1,04,065 ಮಹಿಳಾ ಮತದಾರರಿದ್ದಾರೆ. ಒಟ್ಟು 2,09,278 ಮತದಾರರ ಪೈಕಿ ನಾಗಮಂಗಲ ಕ್ಷೇತ್ರದಲ್ಲಿ 8,000 ಲಿಂಗಾಯತ ಮತದಾರರಿದ್ದರೆ, ಮುಸ್ಲಿಂ ಮತದಾರರು 10,000, ಪರಿಶಿಷ್ಟ ಜಾತಿ (SC) 30,000 ಇದ್ದಾರೆ. ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ವಿಶ್ವಕರ್ಮ ಕ್ರಮವಾಗಿ 4,000 ಮತದಾರರನ್ನು ಒಳಗೊಂಡಿದೆ.


karnataka-assembly-election-2023-nagamangala-constituency-bjp-candidate-sudha-shivaramegowda-political-profile-stg-mrq
ಸುಧಾ ಶಿವರಾಮೇಗೌಡ, ನಾಗಮಂಗಲ ಬಿಜೆಪಿ ಅಭ್ಯರ್ಥಿ


2018 ರಲ್ಲಿ, ಜನತಾ ದಳದಿಂದ (ಜೆಡಿಎಸ್) ಸುರೇಶ್ ಗೌಡ ಅವರು ಒಟ್ಟು 67,729 ಮತಗಳ ಮೌಲ್ಯದೊಂದಿಗೆ ಎರಡನೇ ಸ್ಥಾನವನ್ನು ಗಳಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ನಿಂದ ಎನ್ ಚಲುವರಾಯಸ್ವಾಮಿ ಅವರನ್ನು ಸೋಲಿಸುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ವಿಜೇತರಾಗಿ ಆಯ್ಕೆಯಾದರು.


ಒಟ್ಟು 112,396 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಏತನ್ಮಧ್ಯೆ, ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಗೌಡ ಡಾ. ಪಾರ್ಥಸಾರಥಿ ವಿ. ಅವರು ಒಟ್ಟು 1,915 ಮತಗಳನ್ನು ಗಳಿಸಿದರು.




2008 ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಈ ಸ್ಥಾನವನ್ನು 5,493 ಮತಗಳ (3.92%) ಅಂತರದಲ್ಲಿ ಗೆದ್ದುಕೊಂಡಿತು ಮತ್ತು 49.4% ಮತಗಳನ್ನು ದಾಖಲಿಸಿತು. 2018 ರ ಚುನಾವಣೆಯಲ್ಲಿ ಈ ಕ್ಷೇತ್ರವು 87.16% ರಷ್ಟು ಮತದಾನವಾಗಿದೆ.


ಬಿಜೆಪಿ ಅಭ್ಯರ್ಥಿ ಸುಧಾ ಶಿವರಾಮೇ ಗೌಡ


ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಸುಧಾ ಶಿವರಾಮೇಗೌಡರಿಗೆ ಪಕ್ಷ ಅಚ್ಚರಿಯ ನಡೆಯಲ್ಲಿ ಟಿಕೆಟ್ ನೀಡಿದೆ. ಈ ಕ್ಷೇತ್ರದ ಟಿಕೆಟ್‌ಗಾಗಿ ಬಿಜೆಪಿಯಿಂದ ಇನ್ನಿಬ್ಬರು ಅಭ್ಯರ್ಥಿಗಳಾದ ಫೈಟರ್ ರವಿ ಹಾಗೂ ಜೆಡಿಎಸ್‌ನಿಂದ ಉಚ್ಛಾಟನೆಗೊಂಡು ಬಿಜೆಪಿ ಸೇರಿದ ಎಲ್.ಆರ್ ಶಿವರಾಮೇಗೌಡ ಪೈಪೋಟಿ ನಡೆಸಿದ್ದರು.


ಆದರೆ ಅವರಿಬ್ಬರನ್ನೂ ಬಿಟ್ಟು ಪಕ್ಷ ಮಹಿಳಾ ಅಭ್ಯರ್ಥಿ ಸುಧಾ ಶಿವರಾಮೇಗೌಡ ಅವರಿಗೆ ಟಿಕೆಟ್ ನೀಡಿದೆ. ತುರುವೇಕೆರೆ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಎಚ್ ರಾಮಕೃಷ್ಣಯ್ಯನವರ ಪುತ್ರಿಯಾದ ಸುಧಾ ಶಿವರಾಮೇಗೌಡ ಎಲ್.ಆರ್ ಶಿವರಾಮೇಗೌಡ ಅವರ ಪತ್ನಿಯೂ ಹೌದು.


karnataka-assembly-election-2023-nagamangala-constituency-bjp-candidate-sudha-shivaramegowda-political-profile-stg-mrq
ಸುಧಾ ಶಿವರಾಮೇಗೌಡ, ನಾಗಮಂಗಲ ಬಿಜೆಪಿ ಅಭ್ಯರ್ಥಿ


ಇದನ್ನೂ ಓದಿ: Karnataka Election 2023: ರಾಯಬರೇಲಿ, ಅಮೇಥಿಯನ್ನೇ ಬಿಟ್ಟಿಲ್ಲ ಕನಕಪುರವನ್ನು ಬಿಡ್ತೀವಾ? ಡಿಕೆಶಿ ಅಡ್ಡದಲ್ಲಿ ಸಿ ಟಿ ರವಿ ಗುಡುಗು


ಜೆಡಿಎಸ್‌ನ ಜಿ. ಮಾದೇಗೌಡರ ವಿರುದ್ಧ ಹಗುರವಾಗಿ ಮಾತನಾಡಿದ ಕಾರಣ ಶಿವರಾಮೇಗೌಡರವನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಕಳೆದ ವಾರದಲ್ಲಿ ಎಲ್‌.ಆರ್ ಶಿವರಾಮೇಗೌಡ ಬಿಜೆಪಿ ಸೇರಿದ್ದರು ಆದರೆ ಪಕ್ಷ ಅವರಿಗೆ ಟಿಕೆಟ್ ನೀಡದೆಯೇ ಅವರ ಪತ್ನಿ ಸುಧಾ ಶಿವರಾಮೇಗೌಡರಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ.

First published: