• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mithun Rai: ಬಿಜೆಪಿ ಭದ್ರಕೋಟೆಯಲ್ಲಿ ಡಿಕೆಶಿ ಆಪ್ತ; ಕಾಂಗ್ರೆಸ್‌ಗೆ ಸಿಹಿ ಕೊಡ್ತಾರಾ ಯುವ ರಾಜಕಾರಣಿ?

Mithun Rai: ಬಿಜೆಪಿ ಭದ್ರಕೋಟೆಯಲ್ಲಿ ಡಿಕೆಶಿ ಆಪ್ತ; ಕಾಂಗ್ರೆಸ್‌ಗೆ ಸಿಹಿ ಕೊಡ್ತಾರಾ ಯುವ ರಾಜಕಾರಣಿ?

ಮಿಥುನ್ ರೈ, ಕಾಂಗ್ರೆಸ್ ಅಭ್ಯರ್ಥಿ

ಮಿಥುನ್ ರೈ, ಕಾಂಗ್ರೆಸ್ ಅಭ್ಯರ್ಥಿ

Mudbidri: ಮಿಥುನ್‌ ರೈ ಉಡುಪಿ ಕೃಷ್ಣ ಮಠದ ಜಮೀನನ್ನು ಮುಸಲ್ಮಾನ ದೊರೆ ದಾನವಾಗಿ ನೀಡಿದ್ದ ಎಂಬ ಹೇಳಿಕೆ ನೀಡಿದ್ದು, ಇದು ಸದ್ಯ ಕರಾವಳಿಯಲ್ಲಿ ಕಾಂಗ್ರೆಸ್‌ ಪರ ಇದ್ದ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ.

  • Share this:

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಕಾಂಗ್ರೆಸ್​ ಪಕ್ಷ ಕಹಳೆ ಮೊಳಗಿಸಿದ್ದು,‌ ಅಳೆದು-ತೂಗಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಈ ಬಾರಿ ಗೆಲ್ಲಲೇ ಬೇಕು ಅಂತಾ ಹೊರಟಿರುವ ಕಾಂಗ್ರೆಸ್‌ ರಾಜಕೀಯ ಧುರೀಣರು ಸೇರಿ ಯುವ ಮತ್ತು ಹೊಸ ಮುಖಗಳಿಗೂ ಟಿಕೆಟ್‌ನೀಡಿದೆ. ಚುನಾವಣೆ ವಿಚಾರ ಬಂದಾಗ ಮಂಗಳೂರು (Mangaluru) ಕ್ಷೇತ್ರವನ್ನು ಬಿಜೆಪಿಯ (BJP) ಭದ್ರಕೋಟೆ ಎಂದೇ ಕರೆಯಲಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿಯಿಂದ ಏಕೈಕ ಕಾಂಗ್ರೆಸ್ ಪ್ರತಿನಿಧಿ ಯು.ಟಿ. ಖಾದರ್ (Former Minister UT Khader) . ಮಾತ್ರ ಗೆಲುವು ಸಾಧಿಸಿದ್ದರು.


ಇದನ್ನೇ ಸವಾಲಾಗಿ ತೆಗೆದುಕೊಂಡಿರುವ ಕೈ ಪಡೆ ಕಮಲ ಕಲಿಗಳ ಕಾರುಬಾರು ಕ್ಷೇತ್ರದಲ್ಲಿ ಅಬ್ಬರಿಸಲು ಸಿದ್ಧತೆ ನಡೆಸಿದ್ದಾರೆ.


karnataka assembly election 2023 moodabidri constituency congress candidate muithun rai political profile stg mrq
ಮಿಥುನ್ ರೈ, ಕಾಂಗ್ರೆಸ್ ಅಭ್ಯರ್ಥಿ


ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಸಹ ಭದ್ರಕೋಟೆಯಲ್ಲಿ ತನ್ನ ಧ್ವಜ ಹಾರಿಸಲು ಸಿದ್ಧತೆ ನಡೆಸುತ್ತಿದೆ.


ಚುನಾವಣಾ ಸಮರಕ್ಕೆ ಸಜ್ಜಾಗಿರುವ ಮೂಡಬಿದ್ರೆ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಜಯ ಗಳಿಸಿದ್ದರು.


karnataka assembly election 2023 moodabidri constituency congress candidate muithun rai political profile stg mrq
ಮಿಥುನ್ ರೈ, ಕಾಂಗ್ರೆಸ್ ಅಭ್ಯರ್ಥಿ


ಹಾಗಾದರೆ ಬಿಜೆಪಿಗೆ ಸವಾಲು ಹಾಕಲು ಸಜ್ಜಾಗಿರುವ ಕಾಂಗ್ರೆಸ್‌ ಅಭ್ಯರ್ಥಿ ಯಾರು? ಅವರ ರಾಜಕೀಯ ಹಿನ್ನೆಲೆ ಏನು ನೋಡೋಣ.


ಮೂಡುಬಿದರೆ ಕ್ಷೇತ್ರದಿಂದ ಯುವ ರಾಜಕಾರಣಿ ಮಿಥುನ್‌ರೈ


ವಿವಾದಾತ್ಮಕ ಹೇಳಿಕೆ ನೀಡುತ್ತಾ, ಬಿಜೆಪಿ ಪಕ್ಷವನ್ನು ದೂರುತ್ತಾ, ರಾಜಕಾರಣದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಯುವ ರಾಜಕಾರಣಿ, ಡಿ.ಕೆ ಶಿವಕುಮಾರ್‌ (KPCC President DK Shivakumar) ಆಪ್ತ ಮಿಥುನ್‌ ರೈ  (Mithun Rai) ಈ ಬಾರಿ ಕಾಂಗ್ರೆಸ್‌ನಿಂದ ಮೂಡುಬಿದರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.


karnataka assembly election 2023 moodabidri constituency congress candidate muithun rai political profile stg mrq
ಮಿಥುನ್ ರೈ, ಕಾಂಗ್ರೆಸ್ ಅಭ್ಯರ್ಥಿ


ಬಿಜೆಪಿಯ ಮೇಲುಗೈ ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅನ್ನು ಗೆಲ್ಲಿಸುವ ಬಯಕೆಯಿಂದ ಕೈ ನಾಯಕರು ಯುವ ರಾಜಕಾರಣಿಗೆ ಮಣೆ ಹಾಕಿದ್ದಾರೆ.


ಮಿಥುನ್‌ ರೈ


ಡಾ.ಮಹಾಬಲ ರೈ ಅವರ ಮಗ ಮಿಥುನ್‌ರೈ ಮಂಗಳೂರು ನಗರ ದಕ್ಷಿಣ-203 ಮೂಡುಬಿದರೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ 34 ವರ್ಷದ ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್‌ನಲ್ಲಿ 2007-08 ರ ಸಾಲಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.


ಕಳೆದ ಬಾರಿಯ 2018 ರ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಉಮಾನಾಥ್ ಎ ಕೊಟ್ಯಾನ್ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ ಅಭ್ಯರ್ಥಿ ಕೆ. ಅಭಯಚಂದ್ರ ಜೈನ್ 29799 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.


karnataka assembly election 2023 moodabidri constituency congress candidate muithun rai political profile stg mrq
ಮಿಥುನ್ ರೈ, ಕಾಂಗ್ರೆಸ್ ಅಭ್ಯರ್ಥಿ


ಪ್ರಸ್ತುತ ಈ ಬಾರಿ ಅಖಾಡದಿಂದ ಸೋತ ಅಭ್ಯರ್ಥಿ ಅಭಯಚಂದ್ರ ಜೈನ್ ಅವರನ್ನು ಕೈ ಬಿಟ್ಟು ಹೊಸ ಪ್ರತಿನಿಧಿ, ಪಕ್ಷದಲ್ಲಿ ಗುರುತಿಸಿಕೊಂಡ ಮಿಥುನ್‌ ರೈಗೆ ಪಕ್ಷ ಟಿಕೆಟ್‌ನೀಡಿದೆ.


ಆಸ್ತಿ-ಪಾಸ್ತಿ ಮತ್ತು ಕ್ರಿಮಿನಲ್‌ ಆರೋಪಗಳು


ಯೂತ್‌ ಕಾಂಗ್ರೆಸ್‌ಮುಖಂಡ ರೈ ಚುನಾವಣೆ ಅಧಿಕಾರಿಗಳಿಗೆ 3 ಕೋಟಿಗಿಂತ ಆಸ್ತಿ ವಿವರದ ಬಗ್ಗೆ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ಎಂ. ರೈ ವಿವರಣೆ ನೀಡಿದ್ದಾರೆ.


ಯುವ ರಾಜಕಾರಣಿ ವಿರುದ್ಧ ಕೆಲವು ಕ್ರಿಮಿನಲ್‌ಆರೋಪಗಳು ಸಹ ಇವೆ. ಕ್ರಿಮಿನಲ್ ಬೆದರಿಕೆಗಾಗಿ ಶಿಕ್ಷೆಗೆ ಸಂಬಂಧಿಸಿದ 1 ಆರೋಪಗಳು (IPC ಸೆಕ್ಷನ್-506), ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನಕ್ಕೆ ಸಂಬಂಧಿಸಿದ 1 ಆರೋಪಗಳು (IPC ಸೆಕ್ಷನ್-504) ಸೇರಿದಂತೆ ಕೆಲ ಕೇಸ್‌ಗಳು ಇವರ ಮೇಲಿದೆ.




ಉಡುಪಿ ಕೃಷ್ಣ ಮಠಕ್ಕೆ ಸಂಬಂಧಪಟ್ಟಂತೆ ಮಿಥುನ್ ರೈ ಮೊನ್ನೆ ಮೊನ್ನೆ ಒಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು, ಚರ್ಚೆಗೂ ಕಾರಣವಾಗಿದೆ. ಇದನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ರೈ ಮತ್ತು ಕೈ ವಿರುದ್ಧ ಟೀಕೆಗಿಳಿದಿದ್ದಾರೆ.


ಮಿಥುನ್‌ ರೈ ವಿವಾದಾತ್ಮಕ ಹೇಳಿಕೆ


ಮಿಥುನ್‌ ರೈ ಉಡುಪಿ ಕೃಷ್ಣ ಮಠದ ಜಮೀನನ್ನು ಮುಸಲ್ಮಾನ ದೊರೆ ದಾನವಾಗಿ ನೀಡಿದ್ದ ಎಂಬ ಹೇಳಿಕೆ ನೀಡಿದ್ದು, ಇದು ಸದ್ಯ ಕರಾವಳಿಯಲ್ಲಿ ಕಾಂಗ್ರೆಸ್‌ ಪರ ಇದ್ದ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ.


karnataka assembly election 2023 moodabidri constituency congress candidate muithun rai political profile stg mrq
ಕಾಂಗ್ರೆಸ್


ಇದನ್ನೂ ಓದಿ:  Dhruvanarayan ಪುತ್ರನ ಕಣ್ಣೀರು ಒರೆಸಿ, ಗೆಲುವಿನ ಮಾಲೆ ಹಾಕ್ತಾರಾ ನಂಜನಗೂಡಿನ ಜನತೆ?


ಕಳೆದ ಬಾರಿ ಕ್ಷೇತ್ರದಲ್ಲಿ ಒಂದೇ ಒಂದು ಸೀಟ್‌ಗೆದ್ದ ಕಾಂಗ್ರೆಸ್‌ಗೆ ಹೇಗಾದರೂ ಕೆಲ ಸೀಟ್‌ಗಳನ್ನು ಇಲ್ಲಿಂದ ಗೆಲ್ಲುವುದು ಅನಿವಾರ್ಯವಾಗಿದ್ದು, ಪಕ್ಷವನ್ನು ಆಡಳಿತ ಪಕ್ಷವನ್ನಾಗಿ ಮಾಡಲು ಮಿಥುನ್‌ ರೈ ಪಾತ್ರ ಕೂಡ ಇದೆ.

First published: