Karnataka Assembly Election 2023: ರಂಗೇರುತ್ತಿದೆ ಕರುನಾಡ ಚುನಾವಣಾ ಅಖಾಡ; ಟಿಕೆಟ್ ಫೈಟ್ ಬಲು ಜೋರು!

ಬಿಜೆಪಿ ಇಂದು ಖಾಸಗಿ ರೆಸಾರ್ಟ್​​ನಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಸಾಲು ಸಾಲು ಮೀಟಿಂಗ್ ನಡೆಸಲಿದೆ. ಜೆಡಿಎಸ್ ಮಾತ್ರ ಎರಡೂ ರಾಷ್ಟ್ರೀಯ ಪಕ್ಷಗಳ ಪಟ್ಟಿ ಬಿಡುಗಡೆಗೆ ಕಾಯುತ್ತಿದೆ.

ಬೆಂಗಳೂರು: ಕರ್ನಾಟಕ ವಿಧಾನಸಭಾ ಕ್ಷೇತ್ರಕ್ಕೆ (Karnataka Assembly Election 2023) ಮುಹೂರ್ತ ನಿಗದಿಯಾಗಿದ್ದು, ಘೋಷಿತ ಮತ್ತು ಆಕಾಂಕ್ಷಿಗಳು ಚನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಮತ್ತೊಂದೆಡೆ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಚಿನ್ನ, ಬೆಳ್ಳಿ, ಹಣವನ್ನು (Gift Politics) ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕಾಂಗ್ರೆಸ್ (Congress) ಎರಡನೇ ಪಟ್ಟಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿಕೊಂಡಿದೆ. ಬಿಜೆಪಿ (BJP) ಇಂದು ಖಾಸಗಿ ರೆಸಾರ್ಟ್​​ನಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಸಾಲು ಸಾಲು ಮೀಟಿಂಗ್ ನಡೆಸಲಿದೆ. ಜೆಡಿಎಸ್ (JDS) ಮಾತ್ರ ಎರಡೂ ರಾಷ್ಟ್ರೀಯ ಪಕ್ಷಗಳ ಪಟ್ಟಿ ಬಿಡುಗಡೆಗೆ ಕಾಯುತ್ತಿದೆ.

ಮತ್ತಷ್ಟು ಓದು ...
01 Apr 2023 18:39 (IST)

ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ನಿವಾಸದ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಅಕ್ಕಿ, ಬೆಳೆ ಸೇರಿದಂತೆ ದಿನಸಿ ಪದಾರ್ಥಗಳು ಪತ್ತೆಯಾಗಿದ್ದು, ಮತದಾರರಿಗೆ ಹಂಚಲು ದಿನಸಿ ಪದಾರ್ಥಗಳನ್ನ ಶೇಖರಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ಪೊಲೀಸರ ‌ಜೊತೆಗೂಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ.

01 Apr 2023 18:00 (IST)

ರೆಡ್ಡಿ ಅಬ್ಬರದ ಪ್ರಚಾರ

ಕೊಪ್ಪಳಕೊಪ್ಪಳದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಗಂಗಾವತಿ, ಇಂದರಗಿ, ಕೂಕನಪಳ್ಳಿ, ಒನಬಳ್ಳಾರಿಯಲ್ಲಿ ಕೆಆರ್​ಪಿಪಿ ಪಕ್ಷದಿಂದ ಪ್ರಚಾರ ಮಾಡುತ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ರೆಡ್ಡಿ ಜನರು ಭವ್ಯ ಸ್ವಾಗತ ಕೋರುತ್ತಿದ್ದಾರೆ.

01 Apr 2023 17:35 (IST)

ಚುನಾವಣೆ ಅಖಾಡದಿಂದ ಹಿಂದೆ ಸರಿದ ಯತೀಂದ್ರ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಈ ನಡುವೆ ತಾವು ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಅಂತ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ತಂದೆಯವರ ಕೊನೆ ಚುನಾವಣೆ, ಆದ್ದರಿಂದ ವರುಣಾದಲ್ಲಿ ನಿಲ್ಲಬೇಕು ಎಂಬುದು ಜನರ ಆಶಯ, ತಂದೆಯ ಪರವಾಗಿ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.

01 Apr 2023 16:43 (IST)

ತೀರ್ಥಹಳ್ಳಿ ಟಿಕೆಟ್​ ಆಕ್ಷಾಂಕ್ಷಿಗಳ ನಡುವೆ ಡಿಕೆಶೀ ಸಂಧಾನ ಸಭೆ

ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ‌ಆಯ್ಕೆ ಕಗ್ಗಂಟು
ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಸಂಧಾನ ಸಭೆ
ಸಭೆಗೆ ಆಗಮಿಸಿರುವ ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ
ಟಿಕೆಟ್ ಆಕಾಂಕ್ಷಿಗಳೊಂದಿಗೆ ಸಮನ್ವಯ ಮಾತುಕತೆ ನಡೆಸುತ್ತಿರುವ ಡಿಕೆ ಶಿವಕುಮಾರ್
ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡ ನಡುವೆ ಪ್ರಬಲ ಪೈಪೋಟಿ

01 Apr 2023 16:07 (IST)

ಕೋಲಾರ ಸ್ಪರ್ಧೆ ಕುರಿತ ಗೊಂದಲಕ್ಕೆ ತೆರೆ ಎಳೆದ ಸಿದ್ದರಾಮಯ್ಯ

ಕೋಲಾರ, ವರಣಾ ಎರಡೂ ಕಡೆ ಚುನಾವಣೆಗೆ ನಿಲ್ಲುತ್ತೇನೆ
ಮನೆದೇವರು ಅಂತ ಹೇಳಿದ್ದಕ್ಕೆ ಎರಡು ಕಡೆ ಚುನಾವಣೆಗೆ ನಿಲ್ಲುತ್ತಿಲ್ಲ
2 ಕ್ಷೇತ್ರದಲ್ಲಿ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿದರೆ ಸ್ಪರ್ಧೆ
ಕೋಲಾರ ಕ್ಷೇತ್ರದ ಜನರ ಪ್ರೀತಿಗೆ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ

01 Apr 2023 15:36 (IST)

ಮೇ 10ರ ಮತದಾನ ದಿನದಂದು ಎಲ್ಲಾ ಉದ್ಯೋಗಿಗಳಿಗೆ ವೇತನ ಸಹಿತ ರಜೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ದಿನ ಅಂದರೆ ಮೇ 10ರಂದು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡುವಂತೆ ಕೇಂದ್ರ ಚುನಾವಣಾ ಆಯೋಗ (ಇಸಿಐ) ಸೂಚನೆ ನೀಡಿದೆ. ಮಾರ್ಚ್​​ 31ರಂದು ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಅಧಿಕಾರಿಗೆ ಇಸಿಐ ನಿರ್ದೇಶನ ನೀಡಿದ್ದು, 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 135 ಬಿ ಅಡಿ ವೇತನ ಸಹಿತ ರಜೆಯನ್ನು ಉದ್ಯೋಗಿಗಳಿಗೆ ನೀಡಲು ಆದೇಶಿಸಲಾಗಿದೆ.

01 Apr 2023 15:04 (IST)

ಸೋಮಣ್ಣನೂ ಬೇಡ ರುದ್ರೇಶೂ ಬೇಡ

ಸೋಮಣ್ಣನೂ ಬೇಡ ರುದ್ರೇಶೂ ಬೇಡ

ಚಾಮರಾಜನಗರ ಬಿಜೆಪಿ ಯಲ್ಲಿ ಮತ್ತೆ ಮುಂದುವರಿದ ಗೊಂದಲ
ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಹೊರಗಿನವರಿಗೆ ಟಿಕೆಟ್ ನೀಡದಂತೆ ಕೂಗು ಕೇಳಿ ಬಂದಿದೆ
ಸಚಿವ ವಿ.ಸೋಮಣ್ಣ ಹಾಗೂ ಯಡಿಯೂರಪ್ಪ ಆಪ್ತ ರುದ್ರೇಶ್ ಈಗಾಗಲೇ ಚಾಮರಾಜನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ
ಸೋಮಣ್ಣನೂ ಬೇಡ ರುದ್ರೇಶೂ ಬೇಡ
ಸೋಮಣ್ಣ ಅಥವಾ ರುದ್ರೇಶ್​​ಗೆ ಟಿಕೆಟ್ ನೀಡಲು ಸ್ಥಳೀಯ ಆಕಾಂಕ್ಷಿಗಳ ತೀವ್ರ ವಿರೋಧ

01 Apr 2023 14:55 (IST)

ನಿರ್ಮಾಪಕ ಕೆ ಮಂಜುಗೆ ನಿರಾಸೆ

ಜೆಡಿಎಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ನಿರ್ಮಾಪಕ ಕೆ ಮಂಜುಗೆ ನಿರಾಸೆ
ಪದ್ಮನಾಭನಗರ ಜೆಡಿಎಸ್ ಟಿಕೆಟ್ ಹಂಚಿಕೆ ಗೊಂದಲಕ್ಕೆ ತೆರೆ
ಟಿಕೆಟ್ ಗೊಂದಲ ಕುರಿತು ಇಂದು ಬೆಳಗ್ಗೆ ನ್ಯೂಸ್ 18 ಸುದ್ದಿಪ್ರಸಾರ ಮಾಡಿತ್ತು..
ನ್ಯೂಸ್ 18 ವರದಿ ಬಳಿಕ ಟಿಕೆಟ್ ಹಂಚಿಕೆ ಗೊಂದಲಕ್ಕೆ ತೆರೆ ಎಳೆದ ದೇವೇಗೌಡರು
ಪದ್ಮನಾಭನಗರ ಜೆಡಿಎಸ ಟಿಕೆಟ್ ಬಂಜಾರಪಾಳ್ಯ ಮಂಜುನಾಥ್ ಗೆ ಘೋಷಣೆ
ನಿವಾಸ ದಿಂದ ಹೊರ ಬಂದು ಕಾರ್ಯಕರ್ತರ ಮುಂದೆ ಟಿಕೆಟ್ ಘೋಷಣೆ ಮಾಡಿದ ದೇವೇಗೌಡರು..
ಬಂಜಾರಪಾಳ್ಯ ಮಂಜುನಾಥ್ ಮಗ ಕಾರ್ತಿಕ್ ಗೌಡ ಬದಲಿಗೆ
ತಂದೆ ಮಂಜುನಾಥ್ ಗೆ ಚುನಾವಣೆಗೆ ನಿಲ್ಲುವಂತೆ ಸೂಚನೆ

01 Apr 2023 14:39 (IST)

ಕೋಲಾರದಲ್ಲಿ ನಿಲ್ಲಲು ತಯಾರಿದ್ದೇನೆ

ಕೋಲಾರ, ಚಿಕ್ಕಬಳ್ಳಾಪುರ, ಬೆಂ ಗ್ರಾ ಜಿಲ್ಲೆಯಿಂದ ನಾನು ಮಾನಸಿಕವಾಗಿ ಕೋಲಾರದಲ್ಲಿ ನಿಲ್ಲಲು ತಯಾರಿದ್ದೇನೆ
– ಆದರೆ ಹೈ ಕಮಾಂಡ್ ನಿರ್ಧಾರವೇ ಅಂತಿಮ
ಕೋಲಾರದಲ್ಲಿ ಸಿದ್ದರಾಮಯ್ಯ ಹೇಳಿಕೆ

01 Apr 2023 14:25 (IST)

ರಣ್​ದೀಪ್ ಸಿಂಗ್ ಸುರ್ಜೇವಾಲ ಭಾಷಣಕ್ಕೆ ಅಡ್ಡಿ

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಆಗ್ರಹ
ಕೋಲಾರ ಕ್ಷೇತ್ರ ಇಂದೇ ಘೋಷಿಸುವಂತೆ ಕಾಂಗ್ರೆಸ್ ಕಾರ್ಯಕರ್ತರ ಬಿಗಿ ಪಟ್ಟು
ರಣ್​ದೀಪ್ ಸಿಂಗ್ ಸುರ್ಜೇವಾಲ ಭಾಷಣಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು
ಕೋಲಾರದ ನಂದಿನಿ ಪ್ಯಾಲೇಸ್ ನಲ್ಲಿ ಕಾಂಗ್ರೆಸ್ ಪೂರ್ವಭಾವಿ ಸಭೆ

01 Apr 2023 14:18 (IST)

ಕಾಂಗ್ರೆಸ್ ಸತ್ಯಮೇವ ಜಯತೆ ಸಮಾವೇಶ

ಏ. 9 ರಂದು ಕೋಲಾರದಲ್ಲಿ ಕಾಂಗ್ರೆಸ್ ಸತ್ಯಮೇವ ಜಯತೆ ಸಮಾವೇಶ ಹಿನ್ನಲೆ
ಕೋಲಾರದ ನಂದಿನಿ ಪ್ಯಾಲೆಸ್ ನಲ್ಲಿ ಕೈ ನಾಯಕರ ಪೂರ್ವಭಾವಿ ಸಭೆ ಆರಂಭ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​ದೀಪ್ ಸಿಂಗ್ ಸುರ್ಜೇವಾಲಾ, ಮಾಜಿ CM ಸಿದ್ದರಾಮಯ್ಯ, ಸಲೀಂ ಅಹ್ಮದ್, ಅಭಿಶೇಕ್ ದತ್ತ, Kh ಮುನಿಯಪ್ಪ ಭಾಗಿ
ಸಿದ್ದರಾಮಯ್ಯ ಆಗಮಿಸಿದ ಕೂಡಲೇ ಮುಂದಿನ ಕೋಲಾರ MLA ಎಂದು ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು
ಸಭೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಭಾಗಿ

01 Apr 2023 14:07 (IST)

ಬಿಜೆಪಿ ಶಾಸಕ ಉದಯ್ ಗರುಡಾಚಾರ್ ನಮಾಜ್

ಚುನಾವಣೆ ಹೊತ್ತಲ್ಲಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ನಮಾಜ್ ಮಾಡಿದ ವಿಚಾರ
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಬಿಜೆಪಿ ಕಾಲೆಳೆದಿದ್ದ ಕಾಂಗ್ರೆಸ್ ಮುಖಂಡರು
ಇದೀಗ ನಮಾಜ಼್ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಶಾಸಕ ಉದಯ್ ಗರುಡಾಚಾರ್
ಎಲೆಕ್ಷನ್ ಗಿಮಿಕ್ಸ್ ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್ ಮುಖಂಡರು
ಭಾರತ ದೇಶ ಒಂದು ಜ್ಯಾತ್ಯಾತೀತ ದೇಶ, ಇಲ್ಲಿ ಹಿಂದೂಗಳು, ಮುಸ್ಲಿಮರು, ಸಿಖ್ಖರು ಎಲ್ಲಿಗೂ ಅವಕಾಶ ಇದೆ
ನಾನೊಬ್ಬ ಬ್ರಾಹ್ಮಣ, ಬೆಳಗ್ಗೆ ಸ್ನಾನ ಮುಗಿಸಿ ಸಂಧ್ಯಾವಂದನೆ ಮಾಡುತ್ತೇನೆ
ಒಮ್ಮೆ ಮನೆಯಿಂದ ಹೊರಗಡೆ ಬಂದರೆ ನನ್ನ ಕಣ್ಣಿಗೆ ಎಲ್ಲರೂ ಒಂದೇ
ಕ್ರಿಸ್ಮಸ್ ಸಮಯದಲ್ಲಿ ನಾನು ಚರ್ಚ್ ಗೆ ಹೋಗುತ್ತೇನೆ, ಶ್ರೀರಾಮನವಮಿ ಆಚರಿಸಿದ್ದೇನೆ
ಭಾರತ ಭವ್ಯ ಭಾರತ ಆಗಬೇಕು ಅಂದ್ರೆ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು
ನರೇಂದ್ರ ಮೋದಿ, ಅಮಿತ್ ಶಾ, ನಮ್ಮ ಸಂಘದ ಮೋಹನ್ ಭಾಗವತ್ ಎಲ್ಲರೂ ಇದನ್ನೇ ಹೇಳಿದ್ದಾರೆ
ಹೀಗಾಗಿ ನಾನು ಜಾಮೀಯ ಮಸೀದಿಗೆ ಹೋಗಿದ್ದಕ್ಕೆ ಬೇರೆ ಅರ್ಥ ಇಲ್ಲ ಎಂದ ಶಾಸಕ ಗರುಡಾಚಾರ್

ಶಾಸಕ ಉದಯ್ ಗರುಡಾಚಾರ್

01 Apr 2023 13:55 (IST)

ಇಂದು ಕಟೀಲ್ ನೇತೃತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ

01 Apr 2023 13:43 (IST)

₹3 ಲಕ್ಷ ಮೌಲ್ಯದ ‘ಮದ್ಯ’ ವಶಕ್ಕೆ

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ವಿವಿಧ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಓರ್ವನನ್ನು ಬಂಧಿಸಿ ವಿಚಾರಣೆ ಮಾಡ್ತಿದ್ದಾರೆ. ಶಿವಮೊಗ್ಗದ ದೇವಬಾಳ-ಯಡವಾಳ ಬಳಿ 3 ಲಕ್ಷದ 21 ಸಾವಿರದ ಮೌಲ್ಯದ ಮದ್ಯವನ್ನು ಅಧಿಕಾರಿಗಳ ಸೀಜ್ ಮಾಡಿದ್ದಾರೆ.

01 Apr 2023 13:25 (IST)

ಏಪ್ರಿಲ್ 3ರಂದು ಎರಡನೇ ಪಟ್ಟಿ ರಿಲೀಸ್​​ಗೆ ಸಿದ್ಧತೆ

ಜೆಡಿಎಸ್ ನ ಎರಡನೇ ಪಟ್ಟಿ ಬಿಡುಗಡೆಗೆ ಕಸರತ್ತು
ಮಾಜಿ ಪಿಎಂ ಹೆಚ್ ಡಿ ದೇವೇಗೌಡರ ಜೊತೆ ಹೆಚ್​​ಡಿಕೆ ಸಮಾಲೋಚನೆ
ಪಟ್ಟಿ ಬಿಡುಗಡೆಗೂ ಮುನ್ನ ಸ್ಥಳೀಯ ನಾಯಕರ ಅಭಿಪ್ರಾಯವನ್ನೂ ಪಡೆಯುತ್ತಿರುವ ಹೆಚ್​ಡಿ ಕುಮಾರಸ್ವಾಮಿ
ಏ .3ರ ಸೋಮವಾರದಂದು ಎರಡನೇ ಪಟ್ಟಿ ರಿಲೀಸ್ ಗೆ ಸಿದ್ಧತೆ
70 ಕ್ಕೂ ಹೆಚ್ಚು ಕ್ಷೇತ್ರಗಳ ಎರಡನೇ ಪಟ್ಟಿ

01 Apr 2023 13:14 (IST)

4.50 ಕೋಟಿ ರೂ. ಮೌಲ್ಯದ ಸೀರೆ ವಶಕ್ಕೆ ಪಡೆದ ದೊಡ್ಡಪೇಟೆ ಪೊಲೀಸರು

ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ.
ಶಿವಮೊಗ್ಗದ ಹಲವು ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ದಾಳಿ- ಅಕ್ರಮವಾಗಿ ಸಂಗ್ರಹಿಸಿದ್ದ ವಸ್ತುಗಳು ವಶಕ್ಕೆ.
4.50 ಕೋಟಿ ರೂ. ಮೌಲ್ಯದ ಸೀರೆ ವಶಕ್ಕೆ ಪಡೆದ ದೊಡ್ಡಪೇಟೆ ಪೊಲೀಸರು
ಸೂಕ್ತ ದಾಖಲೆಯಿಲ್ಲದೇ, ಅನಧಿಕೃತವಾಗಿ ಸಂಗ್ರಹಿಸಿದ್ದ ಹಿನ್ನಲೆ ವಶಕ್ಕೆ
ತುಂಗಾನಗರ ಠಾಣಾ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ ಹಣ ವಶ
ಬೊಲೆರೋ ವಾಹನದಲ್ಲಿ ಸಾಗಿಸುತ್ತಿದ್ದ 1.40 ಕೋಟಿ ರೂ. ಹಣ ವಶಕ್ಕೆ ಪಡೆದ ಪೊಲೀಸರು

01 Apr 2023 13:03 (IST)

ಕಾಫಿನಾಡ ಕಾಂಗ್ರೆಸ್ ನಲ್ಲಿ ಮೂಲ-ವಲಸಿಗ ವಾರ್

ಚಿಕ್ಕಮಗಳೂರು : ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಮಾತಿನ ಚಕಮಕಿ
ಕಾಫಿನಾಡ ಕಾಂಗ್ರೆಸ್ ನಲ್ಲಿ ಮೂಲ-ವಲಸಿಗ ವಾರ್
ಕಾಂಗ್ರೆಸ್ ಕಚೇರಿಯಲ್ಲಿ ಮೂಲ ಕಾಂಗ್ರೆಸ್ಸಿಗರ‌ ಸಭೆ
ಸಭೆಯಲ್ಲಿ ಅರ್ಜಿ ಹಾಕದವರ ಹೆಸರು ಎಂದು ಪ್ರಶ್ನೆ
ಅರ್ಜಿ ಹಾಕಿರುವವರ ಹೆಸರೇಳಿ, ಅವರಿಗೆ ಟಿಕೆಟ್ ಕೊಡಬೇಕು
ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಆಕ್ರೋಶದ ಆರ್ಭಟ
ಕಾಫಿನಾಡ ಕಾಂಗ್ರೆಸ್​​ನಲ್ಲಿ ಹೆಚ್.ಡಿ.ತಮ್ಮಯ್ಯ ವಿರುದ್ದ ಆಕ್ರೋಶ

01 Apr 2023 12:49 (IST)

ಜೆಡಿಎಸ್ ಶಾಲು ಸುಟ್ಟು ಆಕ್ರೋಶ ಹೊರಹಾಕಿದ ಬಿಜೆಪಿ ಕಾರ್ಯಕರ್ತರು

 

ಜೆಡಿಎಸ್ ಟಿಕೆಟ್ ಆಕಾಂಕ್ಷಿ ಜೈಸಿಂಗ್ ರಾಠೋಡ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರಿಂದ ಮೋದಿ ಪರ ಘೋಷಣೆ
ಮೋದಿ ಪರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಾಳೆಗಾಂವ್ ತಾಂಡಾದಲ್ಲಿ ಘಟನೆ
ಜೆಡಿಎಸ್ ಕಾರ್ಯಕರ್ತರು ಹಾಕಿದ ಶಾಲು ಕಸಿದು ಸುಟ್ಟು ಹಾಕಿದ ಬಿಜೆಪಿ ಕಾರ್ಯಕರ್ತರು
ಜೆಡಿಎಸ್ ಶಾಲು ಸುಟ್ಟು ಆಕ್ರೋಶ ಹೊರಹಾಕಿದ ಬಿಜೆಪಿ ಕಾರ್ಯಕರ್ತರು

01 Apr 2023 12:28 (IST)

ಸಿದ್ದು ಸವದಿಗೆ ಟಾಂಗ್

ತೇರದಾಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ನೇಕಾರರ ಅಸ್ತ್ರ ಪ್ರಯೋಗ
ಬಾಗಲಕೋಟೆ ಜಿಲ್ಲೆ ತೇರದಾಳ ಕ್ಷೇತ್ರ
ಹಾಲಿ ಶಾಸಕ ಸಿದ್ದು ಸವದಿ ಈ ಬಾರಿಯ ಪ್ರಬಲ ಆಕಾಂಕ್ಷಿ
ತೇರದಾಳ ಕ್ಷೇತ್ರದಲ್ಲಿ ನೇಕಾರರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಶುರುವಾದ ಭಿತ್ತಿ ಪತ್ರ ಅಭಿಯಾನ
ನೇಕಾರ ಸಮುದಾಯದ ಬಿಜೆಪಿ ಪ್ರಬಲ ಆಕಾಂಕ್ಷಿ ರಾಜು ಅಂಬಲಿ ಹಾಗೂ ಬೆಂಬಲಿಗರಿಂದ ಬಿತ್ತಿಪತ್ರ ಅಭಿಯಾನ..
ಬಿತ್ತಿ ಪತ್ರದಲ್ಲಿ ಪರೋಕ್ಷವಾಗಿ ಸಿದ್ದು ಸವದಿಗೆ ಟಾಂಗ್

01 Apr 2023 12:22 (IST)

ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 13 ಕೇಸ್ ದಾಖಲು

ರಾಮನಗರ ಜಿಲ್ಲೆಯ ಚೆಕ್ ಪೋಸ್ಟ್​ಗಳಲ್ಲಿ ಸ್ಕ್ಯಾಡ್ ಟೀಂನಿಂದ ಭರ್ಜರಿ ಬೇಟೆ
ರಾಮನಗರ ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 13 ಕೇಸ್ ದಾಖಲು
ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ನಲ್ಲಿ ಪೋಲಿಸರ ತಪಾಸಣೆ ವೇಳೆ ಸೀಜ್
75 ಸಾವಿರ ಮೌಲ್ಯದ 82 ಲೀ ಮದ್ಯ 2 ಲಕ್ಷ ಮೌಲ್ಯದ ಮಾದಕ ವಸ್ತುಗಳು‌ ಹಾಗೂ 14 ಲಕ್ಷದ 50 ಸಾವಿರ ರೂ ಹಣ ವಶಕ್ಕೆ
ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಚೆಕ್ ಪೋಸ್ಟ್ ನಲ್ಲಿ ಫುಲ್ ಅಲರ್ಟ್
ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ಚೆಕ್ ಪೋಸ್ಟ್ ನಲ್ಲಿ ಪೋಲಿಸರ ಹದ್ದಿನ ಕಣ್ಣು