ಬೆಂಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ಕೆಜಿಎಫ್ ಬಾಬು (KGF Babu), ಕಾಂಗ್ರೆಸ್ (Congress) ಮುಖಂಡ ಮನೋಹರ್ ನಡುವೆ ಜಟಾಪಟಿ ನಡೆದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಿಂದ ಕೆಜಿಎಫ್ ಬಾಬು ಅವರನ್ನು ಅಮಾನತು ಮಾಡಲಾಗಿದೆ. (Karnataka Assembly Election 2023)ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ಕೆ ರೆಹಮಾನ ಖಾನ್ ರಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪಕ್ಷದ ವಿರುದ್ಧವಾಗಿ ಮೂರು ತಿಂಗಳ ಹಿಂದೆಯೇ ನೀಡಿದ್ದ ಬಗ್ಗೆ ಶಿಸ್ತು ಸಮಿತಿ ಈಗಾಗಲೇ ನೋಟಿಸ್ ನೀಡಲಾಗಿತ್ತು. ಇದರ ಹೊರತಾಗಿಯೂ ಮಾಧ್ಯಮಗಳಿಗೆ ಪಕ್ಷದ ನೀತಿ ವಿರುದ್ಧ ಹೇಳಿಕೆ ನೀಡಿರುವ ಕಾರಣ ಹಾಗೂ ನೋಟಿಸ್ಗೆ ಸಮಂಜಸ ಉತ್ತರ ನೀಡದ ಕಾರಣ ನಿಮ್ಮ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ನಿಮ್ಮನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ರೆಹಮಾನ್ ಖಾನ್ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಇಂದು ಬೆಳಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ್ದ ಕೆಜಿಎಫ್ ಬಾಬು, ಕಾಂಗ್ರೆಸ್ಗೆ ಈ ಬಾರಿ 80 ಸೀಟು ಬರೋದಿಲ್ಲ ಎಂದು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಮುಖಂಡ ಮನೋಹರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಕಚೇರಿಯಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಕೆಜಿಎಫ್ ಬಾಬು ವಿರುದ್ಧ ಗಲಾಟೆ ಮಾಡಿದ್ದರು. ಆದ್ರೆ ನೀವು ನನ್ನ ವಿರುದ್ಧ ರೌಡಿಸಂ ಮಾಡ್ತೀದೀರಾ ಎಂದು ಕೆಜಿಎಫ್ ಬಾಬು ಕಿಡಿಕಾರಿದ್ದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೀತು. ಬಳಿಕ ಮಾತಾಡಿದ ಕೆಜಿಎಫ್ ಬಾಬು ಮತ್ತೆ ಕಾಂಗ್ರೆಸ್ 80 ಸ್ಥಾನ ಗೆಲ್ಲಲ್ಲ ಎಂದರು.
ಅಲ್ಲದೇ, ಸಲೀಂ ಅಹಮದ್ ವಿರುದ್ಧವೂ ಕಿಡಿಕಾರಿದ್ದ ಕೆಜಿಎಫ್ ಬಾಬು, ಅವನು ಸಲೀಂ ಅಹಮದ್ ಯಾರು ಅಂತಾನೇ ಗೊತ್ತಿಲ್ಲ. ಸಲೀಂ ಅಹಮದ್ ನೋಡಿ ಯಾರೂ ವೋಟ್ ಹಾಕೋದಿಲ್ಲ. ಸಲೀಂ ಅಹಮದ್ ಏನು ಮೈನಾರಿಟಿ ಲೀಡರ್ ಅಲ್ಲ. ಅವ್ನು ಮುಸ್ಲಿಮೇ ಅಲ್ಲ. ಸಲೀಂ ಅಹಮದ್ಗೆ ಬರೀ ಆಕ್ಟೀಂಗ್ ಅಷ್ಟೇ ಗೊತ್ತು ಅಂತ ಕೆಜಿಎಫ್ ಬಾಬು ಗುಡುಗಿದ್ದರು.
ಇದನ್ನೂ ಓದಿ: KGF Babu: ಕಾಂಗ್ರೆಸ್ ಕಚೇರಿಯಲ್ಲಿ ಕೆಜಿಎಫ್ ಬಾಬು ಆರ್ಭಟ; ಯಾರಿಗಾದ್ರೂ ಧೈರ್ಯ ಇದೆಯಾ ಅಂತ ಸವಾಲು
ಅಷ್ಟಕ್ಕೆ ಸುಮ್ಮನಾಗದ ಕೆಜಿಎಫ್ ಬಾಬು, ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ್ರು. ಮರ್ಯಾದೆಯಿಂದ ಕಳಿಸೋದಿದ್ರೆ ಕಳಿಸಿ.. ಇಲ್ಲದಿದ್ರೆ ರೆಬೆಲ್ ಆಗ್ತೀನಿ.. ನಾನು ಗೆಲ್ಲೋಕೆ ಕಾಂಗ್ರೆಸ್ಸೇ ಬೇಕಿಲ್ಲ ಎನ್ನುವ ಮೂಲಕ ನನಗೆ ಕಾಂಗ್ರೆಸ್ ಅಗತ್ಯವೇ ಇಲ್ಲ ಎಂಬ ಸುಳಿವು ಕೊಟ್ಟಿದ್ದರು.
ಇದನ್ನೂ ಓದಿ: Mangaluru Blast Case: ಕಾಂಗ್ರೆಸ್ ಮುಖಂಡನ ಮಗ ಎನ್ಐಎ ವಶಕ್ಕೆ; ಶಂಕಿತನ ತಂದೆಗೂ 'ಕೈ' ನಾಯಕರಿಗೂ ಲಿಂಕ್!
ಬಹಳ ನೋವಿನಿಂದಲೇ ಕಾಂಗ್ರೆಸ್ ಬಿಡ್ತೀನಿ. ಆದರೆ ಕೆಜಿಎಫ್ ಬಾಬು ಹೆಸರಿನಲ್ಲೇ ಗೆದ್ದು ಬರ್ತಿನಿ. ನಾನು ಶಾಸಕ ಆಗೇ ಆಗ್ತೀನಿ. ಆದರೆ ಸ್ವತಂತ್ರ್ಯವಾಗಿ ಮಾತ್ರ ಸ್ಪರ್ಧೆ ಮಾಡೋದಿಲ್ಲ. ಬೇರೆ ಯಾವುದೇ ಪಕ್ಷ ಟಿಕೆಟ್ ಕೊಡ್ತೀನಿ ಅಂದರೂ ನಾನು ಸ್ಪರ್ಧೆ ಮಾಡಿ ಗೆಲ್ಲುತ್ತೇನೆ. ಆ ಮೂಲಕ ಕಾಂಗ್ರೆಸ್ ನಾಯಕರಿಗೆ ಬುದ್ಧಿ ಕಲಿಸುತ್ತೇನೆ.
ಕಾಂಗ್ರೆಸ್ ಅಭ್ಯರ್ಥಿಗೆ ಡಿಪಾಸಿಟ್ ತಗೊಳ್ಳೋಕೆ ಬಿಡಲ್ಲ
ನಾನು ಎಂಎಲ್ಎ ಆಗಬೇಕು ಅಷ್ಟೇ. ನನ್ನ ಕುಟುಂಬಕ್ಕೆ ಇಟ್ಟಿದ್ದ 350 ಕೋಟಿ ರೂಪಾಯಿ ಚಿಕ್ಕಪೇಟೆಗೆ ಖರ್ಚು ಮಾಡ್ತಿದ್ದೇನೆ. ಡೋರ್ ಟು ಡೋರ್ ಹೋಗಿ ಮನಗೆ ಚೆಕ್ ನಲ್ಲಿ ಹಣ ಹಾಗೂ ಸೀರೆ ಹಂಚುತ್ತಿದ್ದೇನೆ. ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿದ್ರೆ, ಮುಂದೆ ಬೇರೆ ಪಕ್ಷಕ್ಕೆ ಹೋಗಿ ಸ್ಪರ್ಧೆ ಮಾಡ್ತೀನಿ. ಜೆಡಿಎಸ್ ಅಥವಾ ಯಾವುದೇ ಪಕ್ಷಕ್ಕೆ ಹೋಗಿ ಸ್ಪರ್ಧೆ ಮಾಡ್ತೀನಿ. ಅಲ್ಲಿ ಆರ್.ವಿ ದೇವರಾಜ್ಗೆ ಡಿಪಾಸಿಟ್ ತಗೊಳ್ಳೋಕೆ ಬಿಡಲ್ಲ ಎಂದು ಚಿಟಕಿ ಹೊಡೆದು ಎಚ್ಚರಿಕೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ