• Home
  • »
  • News
  • »
  • state
  • »
  • KGF Babu: ಕಾಂಗ್ರೆಸ್ ಕಚೇರಿಯಲ್ಲಿ ಕೆಜಿಎಫ್​ ಬಾಬು ಆರ್ಭಟ; ಯಾರಿಗಾದ್ರೂ ಧೈರ್ಯ ಇದೆಯಾ ಅಂತ ಸವಾಲು

KGF Babu: ಕಾಂಗ್ರೆಸ್ ಕಚೇರಿಯಲ್ಲಿ ಕೆಜಿಎಫ್​ ಬಾಬು ಆರ್ಭಟ; ಯಾರಿಗಾದ್ರೂ ಧೈರ್ಯ ಇದೆಯಾ ಅಂತ ಸವಾಲು

ಕೆಜಿಎಫ್​ ಬಾಬು

ಕೆಜಿಎಫ್​ ಬಾಬು

ಕಾಂಗ್ರೆಸ್​ ಪಕ್ಷದಲ್ಲಿ ಸಿನಿಯಾರಿಟಿ ನೋಡುತ್ತಿದ್ದಾರೆ. ಸಿನಿಯಾರಿಟಿ ನೋಡಿದರೇ ಮುಂದಿನ ಚುನಾವಣೆಯಲ್ಲಿ 80 ಸ್ಥಾನ ಗೆಲ್ಲುವುದಿಲ್ಲ. ನಾವು ಅತಿಯಾದ ಆತ್ಮವಿಶ್ವಾಸದಿಂದ ಇದ್ದೇವೆ ಎಂದು ಕೆಜಿಎಫ್​ ಬಾಬು ಕೆಪಿಸಿಸಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

  • Share this:

ಬೆಂಗಳೂರು: 2023ರ ಎಲೆಕ್ಷನ್​​ನಲ್ಲಿ (Karnataka Assembly Election 2023) ಕಾಂಗ್ರೆಸ್​ನಿಂದ (Congress) ಟಿಕೆಟ್ ಆಕಾಂಕ್ಷಿಯಾಗಿರೋ ಕೆಜಿಎಫ್ ಬಾಬು (KGF Babu) ಕೆಪಿಸಿಸಿ ಕಚೇರಿಯಲ್ಲಿ (KPCC) ಆರ್ಭಟಿಸಿದ್ದಾರೆ. ಕಾಂಗ್ರೆಸ್‌ ಕಚೇರಿಯಲ್ಲಿ ಕೆಜಿಎಫ್ ಬಾಬು, ಕಾಂಗ್ರೆಸ್‌ ಮುಖಂಡ ಮನೋಹರ್ ನಡುವೆ ಜಟಾಪಟಿ ನಡೆದಿದ್ದು, ಕಾಂಗ್ರೆಸ್‌ಗೆ ಈ ಬಾರಿ 80 ಸ್ಥಾನಗಳು ಕೂಡ ಬರೋದಿಲ್ಲ ಎಂಬ ಕೆಜಿಎಫ್ ಬಾಬು ಹೇಳಿಕೆಗೆ ಮನೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಕಚೇರಿಯಲ್ಲಿದ್ದುಕೊಂಡು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಕೆಜಿಎಫ್ ಬಾಬು ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇನ್ನು, ಇದರಿಂದ ರೊಚ್ಚಿಗೆದ್ದ ಕೆಜಿಎಫ್​ ಬಾಬು, ನೀವು ನನ್ನ ವಿರುದ್ಧ ರೌಡಿಸಂ ಮಾಡುತ್ತಿದ್ದೀರಾ ಅಂತ ಆಕ್ರೋಶ ಹಾಕಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆ ಬಳಿಕ ಸ್ಥಳದಲ್ಲಿದ್ದ ಇತರರು ಇಬ್ಬರನ್ನು ಸಮಾಧಾನ ಪಡಿಸಿದ್ದು, ಕಚೇರಿಯಿಂದ ಹೊರ ಬಂದ ಕೆಜಿಎಫ್​ ಬಾಬು ಕಾರು ಹತ್ತಿ ಸ್ಥಳದಿಂದ ತೆರಳಿದ್ದಾರೆ.


ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಜಿಎಫ್ ಬಾಬು, ನಾನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಆರು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಮನೆ ಮನೆಗೂ 5000 ಸಾವಿರ ಕೊಟ್ಟಿದ್ದೇನೆ. ಇದುವರೆಗೂ ಅಧಿಕೃತವಾಗಿ 30 ಕೋಟಿ ರೂಪಾಯಿ ಹಣ ಖರ್ಚು ಮಾಡಿದ್ದೇನೆ. ಇದನ್ನ ಯಾರೂ ಧೈರ್ಯವಾಗಿ ಹೇಳಲ್ಲ. ಆದರೆ ನಾನು ಹೇಳುತ್ತಿದ್ದೇನೆ ಎಂದರು.
ನಾನು ಜನರಿಗಾಗಿ 180 ಕೋಟಿ ಹಣ ಖರ್ಚು ಮಾಡ್ತಿದ್ದೇನೆ


ಅಲ್ಲದೇ, ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಬೆಂಬಲಕ್ಕೆ ಬಂದಿಲ್ಲ. ಕ್ಷೇತ್ರದಲ್ಲಿ ನಾನು 3000 ಮನೆ ಕಟ್ಟಿಕೊಡ್ತಿದ್ದೇನೆ, ಬಡವರು ಬಡವರಾಗಿಯೇ ಇರಬೇಕು ಅಂತ ಕೆಲವರ ಉದ್ದೇಶವಿದೆ. ಆದರೆ ನಾನು ಜನರಿಗಾಗಿ 180 ಕೋಟಿ ಹಣ ಖರ್ಚು ಮಾಡ್ತಿದ್ದೇನೆ. ಕ್ಷೇತ್ರದಲ್ಲಿ ಮನೆ ಕಟ್ಟಿಕೊಡಲು ಆರ್.ವಿ.ದೇವರಾಜ್ ಸಾಹೇಬ್ರು ಸ್ಲಂ ಬೋರ್ಡ್ ನಲ್ಲಿ ಹಣ ಡಿಪಾಸಿಟ್ ಮಾಡಬೇಕು ಅಂತ ಹೇಳುತ್ತಿದ್ದಾರೆ. ಈ ಬಗ್ಗೆ ಅವರು ಕಲಾಸಿಪಾಳ್ಯದಲ್ಲಿ ದೂರು ಕೊಟ್ಟಿದ್ದಾರೆ. ಅವರು ಕೆಲಸ ಮಾಡಲ್ಲ, ಬೇರೆಯವರಿಗೂ ಬಿಡಲ್ಲ. ಹೀಗಾದ್ರೆ ಕ್ಷೇತ್ರ ಉದ್ಧಾರವಾಗುತ್ತಾ ಎಂದು ಪ್ರಶ್ನೆ ಮಾಡಿದರು.


ಇದನ್ನೂ ಓದಿ: Explained: 1,741 ಕೋಟಿ ಕುಬೇರ ಕೆಜಿಎಫ್‌ ಬಾಬು ಯಾರು? ಸ್ಕ್ರ್ಯಾಪ್‌ ಬ್ಯುಸಿನೆಸ್‌ನಿಂದ ರಿಯಲ್‌ ಎಸ್ಟೇಟ್‌ವರೆಗೆ ಬೆಳೆದು ನಿಂತಿದ್ದೇಗೆ?


ರೌಡಿಗಳನ್ನು, ಇ.ಡಿ-ಐ.ಟಿ ಅಧಿಕಾರಿಗಳನ್ನು ಕಳುಹಿಸಿದ್ದಾರೆ


ಇವತ್ತೇ ಕ್ಷೇತ್ರದಲ್ಲಿ ಬಡವರು ಮನೆಗಳನ್ನು ಖಾಲಿ ಮಾಡಿಕೊಟ್ಟರೆ ನಾಳೆ ಬೆಳಗ್ಗೆಯಿಂದ ಅವರಿಗೆ ಹೊಸ ಮನೆ ಕಟ್ಟುವ ಕಾರ್ಯ ಆರಂಭ ಮಾಡಿತ್ತೇನೆ. ಅವರು ಮೂರು ಬಾರಿ ಗೆದ್ದಿದ್ದಾರೆ, ನಾಲ್ಕು ಬಾರಿ ಸೋತಿದ್ದಾರೆ. ಒಂದು ಅವರು ಮಾಡಬೇಕು, ಇಲ್ಲ ನನಗೆ ಬಿಡಬೇಕು. ಅದನ್ನು ಬಿಟ್ಟು ರೌಡಿಗಳನ್ನು ಕಳಿಸೋದು,ಇ.ಡಿ-ಐ.ಟಿ ಕಳುಹಿಸಿದ್ದಾರೆ ಎಂದು ಟೀಕೆ ಮಾಡಿದರು.


ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ನಮ್ಮ ತಾತ, ಮುತ್ತಾತ ಎಲ್ಲರೂ ಇಲ್ಲೇ ಇದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಮನೆ ಮಠ ಬಿಟ್ಟು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಆದರೆ ಇವರು ಕಾಂಗ್ರೆಸ್ ಕಚೇರಿಗೆ ಬರುವ ಮಹಿಳೆಯರಿಗೆ, ಜನರಿಗೆ ಗೌರವ ಕೊಡುತ್ತಿಲ್ಲ. ನಾಯಕರು ಹೇಳಿದ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದರೇ ಮಾತ್ರ ಪಕ್ಷ ಗೆಲ್ಲಲ್ಲು ಸಾಧ್ಯ.


ಚುನಾವಣೆಯಲ್ಲಿ ಕಾಂಗ್ರೆಸ್​ 80 ಸ್ಥಾನ ಕೂಡ ಗೆಲ್ಲೋದಿಲ್ಲ


ಆದರೆ ಇಲ್ಲಿ ಸಿನಿಯಾರಿಟಿ ನೋಡುತ್ತಿದ್ದಾರೆ. ಸಿನಿಯಾರಿಟಿ ನೋಡಿದರೇ ಮುಂದಿನ ಚುನಾವಣೆಯಲ್ಲಿ 80 ಸ್ಥಾನ ಗೆಲ್ಲುವುದಿಲ್ಲ. ನಾವು ಅತಿಯಾದ ಆತ್ಮವಿಶ್ವಾಸದಿಂದ ಇದ್ದೇವೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು. ಕೆಪಿಸಿಸಿಯಲ್ಲಿರುವವರು ಇಲ್ಲಿಗೆ ಬರುವವರಿಗೆ ಗೌರವ ಕೊಡಬೇಕು. ಇಲ್ಲ ಎಂದರೇ ಕಷ್ಟ ಆಗುತ್ತೆ ಎಂದರು. ಈ ಮಾತನ್ನು ಹೇಳುತ್ತಿದ್ದಂತೆ ಕೆಜಿಎಫ್​ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಮನೋಹರ್​, ಪಕ್ಷದ ಕಚೇರಿಯಲ್ಲಿ ಈ ರೀತಿ ಮಾತನಾಡುವಂತಿಲ್ಲ. ಏನೇ ಇದ್ದರೂ ವರಿಷ್ಠರ ಜೊತೆ ಮಾತನಾಡಿ ಎಂದು ಜಗಳಕ್ಕೆ ಇಳಿದರು.


ಇದನ್ನೂ ಓದಿ: ನಾಮಿನೇಷನ್ ಗೆ ಐಷಾರಾಮಿ ಕಾರ್ ನಲ್ಲಿ ಬಂದಿದ್ದ ಕೆಜಿಎಫ್ ಬಾಬು, ಸೋಲಿನ ನಂತ್ರ ಆಟೋ ಹತ್ತಿದ್ರು!


ನಾನು ಪಕ್ಷದ ವಿರುದ್ಧ ಮಾತನಾಡುತ್ತಿಲ್ಲ, ಆದರೆ ವ್ಯಕ್ತಿ ವಿರುದ್ಧ ಮಾತನಾಡುತ್ತಿದ್ದೇನೆ. ನನಗೆ ಅನ್ಯಾಯ ಆಗಿದೆ. ಆದ್ದರಿಂದ ಅದನ್ನು ಹೇಳುತ್ತಿದ್ದೇನೆ ಎಂದು ಕೆಜಿಎಫ್ ಬಾಬು ಏರುಧ್ವನಿಯಲ್ಲಿ ಮಾತನಾಡಿದರು.

Published by:Sumanth SN
First published: