• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shrimanth Balasaheb Patil: ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ವಿವರ

Shrimanth Balasaheb Patil: ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ವಿವರ

ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್

ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್

ಕಾಗವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಬಾಳಾ ಸಾಹೇಬ್ ಪಾಟೀಲ್ ಅವರ ರಾಜಕೀಯ ಜೀವನದ ಕುರಿತ ವಿವರ ಇಲ್ಲಿದೆ.

  • Share this:

Karnataka Assembly Election 2023: ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದ್ದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ಹಾಗೂ ಚುನಾವಣಾ ಫಲಿತಾಂಶ ಪ್ರಕಟಣೆ ಮೇ 13 ರಂದು ನಡೆಯಲಿದೆ.


ಈ ಬಾರಿಯ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ಭರದಿಂದ ಪ್ರಚಾರ ನಡೆಸುತ್ತಿದ್ದಾರೆ ಹಾಗೂ ಮತದಾರರನ್ನು ಓಲೈಸುತ್ತಿದ್ದಾರೆ.


ಜನಸಾಮಾನ್ಯರ ವಿಶ್ವಾಸ ಗೆಲ್ಲಲು ಅಭ್ಯರ್ಥಿಗಳ ಸರ್ಕಸ್


ತಮ್ಮ ಪಕ್ಷವೇ ಗೆಲ್ಲಬೇಕು ಹಾಗೂ ಅಧಿಕಾರಕ್ಕೆ ಬರಬೇಕೆಂಬ ನಿಟ್ಟಿನಲ್ಲಿ ಹಗಲು ರಾತ್ರಿ ಪರಿಶ್ರಮ ಪಡುತ್ತಿರುವ ಅಭ್ಯರ್ಥಿಗಳು ಕ್ಷೇತ್ರ ಸಂಚಾರ ನಡೆಸಿ ಜನರಿಗೆ ತಮ್ಮ ಪಕ್ಷ ಮಾಡಿರುವ ಕೆಲಸಗಳ ಬಗ್ಗೆ ನೆನಪಿಸುತ್ತಿದ್ದಾರೆ. ಭಾಷಣಗಳನ್ನು ಏರ್ಪಡಿಸಿ ಜನರ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ ಅಂತೆಯೇ ಆಶ್ವಾಸನೆಗಳನ್ನು ನೀಡಿ ಶ್ರೀಸಾಮಾನ್ಯರ ವಿಶ್ವಾಸ ಗೆಲ್ಲುತ್ತಿದ್ದಾರೆ.


ಇದನ್ನೂ ಓದಿ: SP Rishyanth: ಶಾಮನೂರು ಕುಟುಂಬದ ಮೇಲೆ ಕೇಸ್ ಮಾಡಿದ್ದ ದಾವಣಗೆರೆ ಎಸ್‌ಪಿ ದಿಢೀರ್ ವರ್ಗಾವಣೆ!


ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್ ರಾಜಕೀಯ ಏಳುಬೀಳುಗಳ ಪರಿಚಯ ಹೀಗಿದೆ


ಇಂದಿನ ಲೇಖನದಲ್ಲಿ ಬಿಜೆಪಿಯ ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್ ಪರಿಚಯ ಮಾಡಿಕೊಳ್ಳೋಣ. ಬೆಳಗಾವಿಯ ಕಾಗವಾಡ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವ ಬಾಳಾಸಾಹೇಬ್ ಪಾಟೀಲ್ (Shrimanth Balasaheb Patil) ಹಿರಿಯ ರಾಜಕಾರಣಿ ಎಂದೆನಿಸಿದ್ದಾರೆ.


2018 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿ ಕಾಗವಾಡದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. ಬಳಿಕ 2019 ರಲ್ಲಿ ಎಚ್.ಡಿ ಕುಮಾರಸ್ವಾಮಿ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡ 17 ಕಾಂಗ್ರೆಸ್ ಮತ್ತು ಜೆಡಿ (ಎಸ್) ಶಾಸಕರಲ್ಲಿ ಅವರು ಒಬ್ಬರಾಗಿದ್ದರು. ಬಾಳಾಸಾಹೇಬ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಯಿತು ಹಾಗೂ ಈ ಸಮಯದಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು.


ಇದನ್ನೂ ಓದಿ: Katta Jagadish Naidu: ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್ ನಾಯ್ಡು ಬಗ್ಗೆ ಗೊತ್ತಿರಬೇಕಾದ ಸಂಗತಿಗಳಿವು!


ಶಾಸಕರ ಶಿಕ್ಷಣ


ಕಾಗವಾಡದಿಂದ ಮರು ಚುನಾವಣೆಯಲ್ಲಿ ಗೆದ್ದ ಬಾಳಾ ಸಾಹೇಬ್ 2020 ರಲ್ಲಿ ಬಿ.ಎಸ್. ಯಡಿಯೂರಪ್ಪನವರ ಮಂತ್ರಿ ಮಂಡಲಕ್ಕೆ ಸೇರ್ಪಡೆಗೊಂಡರು. ಶಾಸಕರು ಮಹಾತ್ಮಾ ಪುಲೆ ಕೃಷಿ ವಿದ್ಯಾ ಪೀಠ ರಾಹುರಿಯಿಂದ ಪದವಿ ಪಡೆದುಕೊಂಡಿದ್ದಾರೆ. ಇವರ ತಂದೆ ಬಾಳಾಸಾಹೇಬ್ ಪಾಟೀಲ್.


ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್ ಆಸ್ತಿಪಾಸ್ತಿ ವಿವರ ಈ ರೀತಿ ಇದೆ


ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್ ಒಟ್ಟು 15 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಒಟ್ಟು ಆದಾಯ ವಿವರವನ್ನು ನೀಡಿದ್ದು ರೂ 8 ಲಕ್ಷ ಎಂದು ತಿಳಿಸಿದ್ದಾರೆ. ನಗದು ರೂಪದಲ್ಲಿ ರೂ 80 ಲಕ್ಷ ಅಂತೆಯೇ ಬ್ಯಾಂಕ್‌ನಲ್ಲಿ ಡಿಪಾಸಿಟ್ ಆಗಿ ರೂ 47 ಲಕ್ಷವಿರಿಸಿರುವುದಾಗಿ ಶಾಸಕರು ಮಾಹಿತಿ ನೀಡಿದ್ದಾರೆ.


ಬಾಂಡ್‌ಗಳು ಹಾಗೂ ಷೇರುಗಳು


ಬಾಂಡ್ ಹಾಗೂ ಷೇರುಗಳ ರೂಪದಲ್ಲಿ ರೂ 2 ಕೋಟಿ ಹಣ ಹೂಡಿಕೆ ಮಾಡಿರುವುದಾಗಿ ಶ್ರೀಮಂತ್ ಪಾಟೀಲ್ ತಿಳಿಸಿದ್ದು, ಎಲ್ಐಸಿ ಹಾಗೂ ಇತರ ವಿಮೆಯ ರೂಪದಲ್ಲಿ ರೂ 26 ಲಕ್ಷವಿರುವುದಾಗಿ ಘೋಷಿಸಿದ್ದಾರೆ. ವೈಯಕ್ತಿಕ ಸಾಲ ಇವರ ಹೆಸರಿನಲ್ಲಿ ರೂ 6 ಕೋಟಿ ಇದೆ ಎಂಬ ಮಾಹಿತಿ ನೀಡಿದ್ದಾರೆ. ರೂ 34 ಲಕ್ಷ ಬೆಲೆಯ ವಾಹನಗಳನ್ನು ಶ್ರೀಮಂತ್ ಪಾಟೀಲ್ ಹೊಂದಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.


ಚಿನ್ನಾಭರಣಗಳ ವಿವರ ಈ ರೀತಿ ಇದೆ


ರೂ 39 ಲಕ್ಷ ಮೌಲ್ಯದ ಚಿನ್ನಾಭರಣಗಳ ಮಾಹಿತಿ ನೀಡಿರುವ ಶಾಸಕರು ಈ ಎಲ್ಲಾ ವಸ್ತುಗಳ ಪ್ರಸ್ತುತ ಮೌಲ್ಯ ರೂ 11 ಕೋಟಿ ಎಂಬ ವಿವರ ಒದಗಿಸಿದ್ದಾರೆ.


ಶಾಸಕರ ಸ್ಥಿರಾಸ್ತಿ ವಿವರ ಹೀಗಿದೆ


ಶ್ರೀಮಂತ ಪಾಟೀಲ್ ಕೃಷಿ ಭೂಮಿಯಾಗಿ ರೂ 2 ಕೋಟಿ ಮೌಲ್ಯದ ಭೂಮಿ ಹೊಂದಿದ್ದು, ಯಾವುದೇ ಕೃಷಿಯೇತರ ಭೂಮಿ ಹೊಂದಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

top videos


    ನಿವೇಶನ ಕಟ್ಟಡಗಳ ಮಾಹಿತಿ ನೀಡಿದ್ದು ರೂ 2 ಕೋಟಿ ಎಂಬ ಹೇಳಿಕೆ ನೀಡಿದ್ದಾರೆ. ಇವರು ಯಾವುದೇ ವಾಣಿಜ್ಯ ಕಟ್ಟಡಗಳನ್ನು ಹೊಂದಿಲ್ಲ. ಈ ಎಲ್ಲಾ ವಸ್ತುಗಳ ಒಟ್ಟು ಮಾರುಕಟ್ಟೆ ಮೌಲ್ಯ ರೂ 4 ಕೋಟಿ ಎಂದು ಶಾಸಕರು ತಿಳಿಸಿದ್ದಾರೆ.

    First published: