ಕೊಪ್ಪಳ: ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election 2023) ಭರ್ಜರಿ ಸಿದ್ಧತೆ ನಡೆಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಅವರು ಗಂಗಾವತಿಯಲ್ಲಿ (Gangavathi Constituency) ಭರ್ಜರಿ ಚಟುವಟಿಕೆಗಳನ್ನು ನಡೆಸಿದ್ದಾರೆ. ಬಿಜೆಪಿ ಅಲ್ಲದೇ, ಕಾಂಗ್ರೆಸ್ ಪಕ್ಷದ ಮತಗಳ ಮೇಲೂ ಕಣ್ಣೀಟ್ಟಿರುವ ರೆಡ್ಡಿ, ಕ್ಷೇತ್ರದ ವಿವಿಧ ಪ್ರಭಾವಿ ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಪ್ರಭಾವಿ ಕುರುಬ ಸಮುದಾಯದ (Kuruba Community) ಮುಖಂಡರ ಮನೆಗೆ ಜನಾರ್ದನ ರೆಡ್ಡಿ ಭೇಟಿ ನೀಡಿದ್ದಾರೆ. ಕೊಪ್ಪಳ ತಾಲೂಕಿನ ವನಬಳ್ಳಾರಿ ಗ್ರಾಮದ ಮುಖಂಡ, ಸಿದ್ದರಾಮಯ್ಯ (Siddaramaiah) ಆಪ್ತ ಹನುಮಂತ ಅರಸನಕೇರಿನ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಆ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ, ಗಂಗಾವತಿ ಕ್ಷೇತ್ರದ ಅನ್ಸಾರಿ ಅವರಿಗೆ ಶಾಕ್ ನೀಡಲು ರೆಡ್ಡಿ ನೀಡಿದ್ರಾ ಎಂಬ ಚರ್ಚೆ ಕ್ಷೇತ್ರದಲ್ಲಿ ಹೆಚ್ಚಾಗಿದೆ. ಹನುಮಂತ ಅರಸನಕೇರಿ ಅವರು ಕ್ಷೇತ್ರದಲ್ಲಿ ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ.
ಗಂಗಾವತಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಜನಾರ್ದನರೆಡ್ಡಿ, ನನ್ನ ಮೇಲೆ ನನಗೆ ವಿಶ್ವಾಸವಿದೆ. ಜನರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಬರುವ ದಿನಗಳಲ್ಲಿ ರಾಜ್ಯ ಮತ್ತು ದೇಶಕ್ಕೆ ಕಲ್ಯಾಣ ರಾಜ್ಯ ಪ್ರಗತಿಪಕ್ಷ ಏನು ಎಂಬುದನ್ನು ತೋರಿಸಿಕೊಡುತ್ತೇನೆ.
ಇದನ್ನೂ ಓದಿ: Karnataka Politics: ಜನಾರ್ದನ ರೆಡ್ಡಿ ಹೊಸ ಪಕ್ಷದಿಂದ ಬಿಜೆಪಿಗೆ ಹಿನ್ನೆಡೆ? ಇಲ್ಲಿದೆ ವಿಶ್ಲೇಷಣೆ
ನಾಳೆ ಚುನಾವಣೆ ಇದ್ದರೇ ನನಗೆ ಮತ ಹಾಕಲು ಜನರು ಸಿದ್ಧ
ಮಾಧ್ಯಮಗಳು ಈಗಾಗಲೇ ನಾನು ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಎಂದು ಇಡೀ ರಾಜ್ಯದ ಜನರಿಗೆ ತೋರಿಸಿದ್ದಾರೆ. ನಾನು ಮಾಧ್ಯಮಗಳಿಗೆ ಧನ್ಯವಾದ ಹೇಳ್ತೀನಿ. ಜನರು ಪ್ರೀತಿಯಿಂದ ಸ್ವಾಗತ ಮಾಡಲು ಸಿದ್ಧತೆ ನಡೆಸಿದ್ದಾರೆ.
ನಾಳೆ ಚುನಾವಣೆ ಇದ್ದರೇ ನನಗೆ ಮತ ಹಾಕಲು ಜನರು ಸಿದ್ಧರಿದ್ದಾರೆ. ಅವರ ಪ್ರೀತಿ ಪಡೆದ ನಾನು ಬಹಳ ಪುಣ್ಯ ಮಾಡಿದ್ದೀನಿ. ಪ್ರತಿದಿನ ನಾನು ಮಾಧ್ಯಮಗಳಿಗೆ ಸಿಗುವುದು ಕಷ್ಟ ಆಗಬಹುದು. ಆದರೆ ಜನವರಿ 16ರ ಬಳಿಕ ಎಲ್ಲವೂ ಅಧಿಕೃತವಾಗಿ ಆರಂಭವಾಗುತ್ತದೆ. ಯಾರೇ ಪ್ರೀತಿಯಿಂದ ಕರೆದರೂ ಕೂಡ ನಾನು ಅಲ್ಲಿಗೆ ಹೋಗಿ ಬರ್ತಿನಿ. ಬಿಜೆಪಿ, ಕಾಂಗ್ರೆಸ್ ನಾಯಕರ ಮಾತಿಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: BJP ಯಡಿಯೂರಪ್ಪ ಅಧಿಕಾರ ಕಿತ್ತುಕೊಳ್ಳಬಹುದು ಆದ್ರೆ, ಅವ್ರ ಶಕ್ತಿ ಕಿತ್ತುಕೊಳ್ಳಲು ಆಗಲ್ಲ- ಜನಾರ್ದನ ರೆಡ್ಡಿ
ಇನ್ನು, ತಮ್ಮ ನಿವಾಸಕ್ಕೆ ಜನಾರ್ದನರೆಡ್ಡಿ ಭೇಟಿ ಮಾಡಿದ್ದ ಕುರಿತು ಪ್ರತಿಕ್ರಿಯೆ ನೀಡಿದ ಹನುಮಂತಪ್ಪ ಅರಸನಕೇರಿ, ಯಾರಾದರೂಚಮನೆಗೆ ಬರುತ್ತೇವೆ ಎಂದು ಬಂದಾಗ ಬೇಡ ಅನ್ನೋಕಾಗಲ್ಲ. ಆದರೆ ನಾನು ಈಗಲೂ ಕಾಂಗ್ರೆಸ್ ನಲ್ಲಿದ್ದೇನೆ. ಮುಂದೆಯೂ ಕಾಂಗ್ರೆಸ್ ನಲ್ಲಿರುತ್ತೇನೆ. ಇಕ್ಬಾಲ್ ಅನ್ಸಾರಿ ಜೊತೆ ಇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಹನುಮಂತಪ್ಪನ ಸಹೋದರನ ಮದುವೆಗೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ