• Home
 • »
 • News
 • »
 • state
 • »
 • Janardhana Reddy: ಜನಾರ್ದನ ರೆಡ್ಡಿ ಪಕ್ಷದ ಕಾರ್ಯಕರ್ತರಿಗೆ ಫ್ರೀ ಪೆಟ್ರೋಲ್! ಸಿಂಧನೂರಿನಲ್ಲಿ ಭರ್ಜರಿ ಸ್ವಾಗತ ಕೋರಿದ ಕಾರ್ಯಕರ್ತರು

Janardhana Reddy: ಜನಾರ್ದನ ರೆಡ್ಡಿ ಪಕ್ಷದ ಕಾರ್ಯಕರ್ತರಿಗೆ ಫ್ರೀ ಪೆಟ್ರೋಲ್! ಸಿಂಧನೂರಿನಲ್ಲಿ ಭರ್ಜರಿ ಸ್ವಾಗತ ಕೋರಿದ ಕಾರ್ಯಕರ್ತರು

ಜನಾರ್ದನ ರೆಡ್ಡಿ

ಜನಾರ್ದನ ರೆಡ್ಡಿ

ನೀವು ಭಾರತದ ರಸ್ತೆಗಳ‌ ಮೇಲೆ ಓಡಾಡುತ್ತಿದ್ದೇವಾ? ವಿದೇಶದಲ್ಲಿ ಓಡಾಡ್ತಿದ್ದೇವಾ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಬೇಕು ಹಾಗೆ ಮಾಡ್ತೀನಿ ಎಂದು ಜನಾರ್ದನ ರೆಡ್ಡಿ ಆಶ್ವಾಸನೆ ನೀಡಿದ್ದಾರೆ.

 • News18 Kannada
 • 3-MIN READ
 • Last Updated :
 • Raichur, India
 • Share this:

ರಾಯಚೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ಸಂಸ್ಥಾಪಕ, ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಅವರಿಗೆ ರಾಯಚೂರು (Raichur) ಜಿಲ್ಲೆ ಸಿಂಧನೂರು ಕ್ಷೇತ್ರದ (Sindhanur) ಜನರು ಭರ್ಜರಿ ಸ್ವಾಗತ ಕೋರಿದ್ದಾರೆ. ಸಿಂಧನೂರು ಪಿಡಬ್ಲ್ಯೂಡಿ ಕ್ಯಾಂಪ್ ನಿಂದ ಬಸವೇಶ್ವರ ವೃತ್ದವರೆಗೆ ಬೈಕ್ ರ್ಯಾಲಿ (Bike Rally) ನಡೆಸುವ ಮೂಲಕ ಸ್ವಾಗತ ಕೋರಿದ್ದಾರೆ. ಅಲ್ಲದೇ, ತೆರೆದ ವಾಹನದಲ್ಲಿ ಜನಾರ್ದನ ರೆಡ್ಡಿ ಅವರನ್ನು ಮೆರಣಿಗೆ ಮಾಡಿದ್ದು, ಜನಾರ್ದನ ರೆಡ್ಡಿ ಪಕ್ಷದ ಕಾರ್ಯಕ್ರಮಕ್ಕೆ ಬಂದು ಹೋಗುವವರಿಗೆ ಪೆಟ್ರೋಲ್ ಉಚಿತ (Free Petrol) ನೀಡಲಾಗಿದೆ.


KRPP ಪಕ್ಷದ ಕಾರ್ಯಕ್ರಮ ಹಿನ್ನಲೆಯಲ್ಲಿ ಆಯೋಜಿಸಿದ್ದ ಬೈಕ್ ರ್ಯಾಲಿಯಾಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಬೈಕ್​ ಸವಾರರಿಗೆ ಫ್ರೀ ಪೆಟ್ರೋಲ್​ ವಿತರಣೆ ಮಾಡಲಾಗಿದೆ. ಉಚಿತ ಪೆಟ್ರೋಲ್ ಹಾಕಿಸಿಕೊಂಡು ರ್ಯಾಲಿಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು.


ಇನ್ನು, ಹೊಸ ಪಕ್ಷ ಘೋಷಣೆ ಬಳಿಕ ಕ್ಷೇತ್ರಕ್ಕೆ ಬಂದ ಜನಾರ್ದನ ರೆಡ್ಡಿ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ ಕಾರ್ಯಕರ್ತರು ಸ್ವಾಗತಿಸಿದರು. ಆ ಬಳಿಕ ಸಿಂಧನೂರಿನಲ್ಲಿ ಕ್ಷೇತ್ರದಲ್ಲಿ ನೂತನ ಪಕ್ಷಕ್ಕೆ ಸೇರ್ಪಡೆ ಹಾಗೂ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ನಗರದ ಸ್ತ್ರೀಶಕ್ತಿ ಭವನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಕ್ಷಕ್ಕೆ ಸೇರ್ಪಡೆಯಾದರು.


ಪಕ್ಷವನ್ನು ಅಧಿಕಾರಕ್ಕೆ ತರುವವರೆಗೂ ನಿದ್ರಿಸೋದಿಲ್ಲ


ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಧಿಕಾರಕ್ಕೆ ಬರುವುದಲ್ಲಿ ಸಂದೇಹವಿಲ್ಲ‌. ಸಿಂಧನೂರು ಕ್ಷೇತ್ರದಿಂದಲೇ ನನ್ನ ಪಕ್ಷದ ಮೊದಲ ಸಭೆ ಮಾಡುತ್ತಿದ್ದೇನೆ. ಹಾಗಾಗಿ ನಿಮಗೂ ಮತ್ತು ನನಗೂ ಸಿಂಧನೂರು ಮರೆಯಲಾಗದ ಊರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ರಾಜ್ಯದಲ್ಲಿರುವ ರಾಷ್ಟ್ರೀಯ ಪಕ್ಷಗಳು ತಲೆ ಭಾಗುವಂತೆ ಮಾಡುತ್ತೇನೆ. ನಮ್ಮ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವವರೆಗೆ ನಾನು ನಿದ್ದೆ ಮಾಡೋದಿಲ್ಲ.


ಇದನ್ನೂ ಓದಿ: Janardhan Reddy: ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಮೀನಮೇಷ ಎಣಿಸ್ತಿದ್ಯಾ ಸರ್ಕಾರ? ಹೈ ಕೋರ್ಟ್​​ ಮೊರೆ ಹೋದ ಸಿಬಿಐ


2018 ರಲ್ಲಿಯೇ ಹೊಸ ಪಕ್ಷ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದರೆ ಅಂದು ಬಿಜೆಪಿ ಯಡಿಯೂರಪ್ಪರನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಅಂದು ನಾನು ಪಾರ್ಟಿ ಮಾಡಿದ್ದರೆ ಯಡಿಯೂರಪ್ಪನವರಿಗೆ ಅಡ್ಡ ಬಂದ ಎನ್ನುವ ಅಪವಾದ ಬರುತ್ತಿತ್ತು. ಹಾಗಾಗಿ ನಾನು ಆ ಅಪವಾದ ಹೊರಲು ನಾನು ಸಿದ್ಧನಿರಲಿಲ್ಲ ಎಂದರು. ನನಗಿನ್ನೂ ಸಣ್ಣ ವಯಸ್ಸು ಐದು ವರ್ಷ ಕಾದು ಮಾಡೋಣ ಎಂದು ಇಂದು ಹೊಸ‌ಪಕ್ಷ‌ ಮಾಡಿದ್ದೇನೆ.


ಜನಾರ್ದನ ರೆಡ್ಡಿ


ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು.


ಜನಾರ್ದನ ರೆಡ್ಡಿ ಜೊತೆ ಯಾರು ಬರ್ತಾರೆ ಎಂದೆಲ್ಲ ಮಾತನಾಡ್ತಿದ್ದಾರೆ. ಈಗಾಗಲೇ ಗಂಗಾವತಿಯಲ್ಲಿ ನನ್ನ ಪತ್ನಿ ಮನೆ ಗೃಹ‌ಪ್ರವೇಶ ಮಾಡಿದ್ದಾಳೆ. ನಾನು ಜನರನ್ನ ನಂಬಿ ರಾಜಕೀಯಕ್ಕೆ ಬಂದಿದ್ದೇನೆ. ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು. ನೀನಲ್ಲದೆ ಮತ್ತಾರೂ ಇಲ್ಲಯ್ಯಾ. ಹಾಲಲದ್ದು, ನೀರಲದ್ದು ಅಂತ ಬಸವಣ್ಣ ನವರ ವಚನ ಹೇಳಿದ ರೆಡ್ಡಿ, ಪ್ರಾದೇಶಿಕ ಪಕ್ಷಗಳಿಗೆ ನಮ್ಮ ಭಾಗದ ಜನರ ದುಖಃ ದುಮ್ಮಾನಗಳು ತಿಳಿದಿರುತ್ತವೆ. ಜನರ ಮನೆ ಬಾಗಿಲಿಗೆ ಹೋಗಿ ಕೆಲಸ‌ ಮಾಡುವ ಗುರಿ ಕೆಆರ್​​ಪಿಪಿ ಪಕ್ಷ ಹೊಂದಿದೆ.


ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿ ಕೊಡಿ ಎಂದರೇ


ಸಿಂಧನೂರಿಗೆ ಒಂದೆರಡು ವಾರದಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡ್ತೇನೆ. ಇದರ ಜೊತೆಗೆ ಹಲವಾರು ಕ್ಷೇತ್ರದ ಅಭ್ಯರ್ಥಿಗಳನ್ನೂ ಘೋಷಣೆ ಮಾಡುತ್ತೇನೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿ ಕೊಡಿ ಎಂದರೇ, ದಕ್ಷಿಣದವರು ಬಂಗಾರದ ತಟ್ಟೆಯಲ್ಲಿ ಇಟ್ಟು ಕೊಡ್ತಾರೆ. ಆದರೆ ಅದು ಬೇಡ. ನೀವು ಭಾರತದ ರಸ್ತೆಗಳ‌ ಮೇಲೆ ಓಡಾಡುತ್ತಿದ್ದೇವಾ? ವಿದೇಶದಲ್ಲಿ ಓಡಾಡ್ತಿದ್ದೇವಾ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಬೇಕು. ಹಾಗೆ ಸಿಂಧನೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ. ಒಂದು ಅವಕಾಶ ಮಾಡಿ ಕೊಡಿ ಎಂದು ಮತದಾರರನ್ನ ಬೇಡಿಕೊಂಡರು.


ಜನಾರ್ದನ ರೆಡ್ಡಿ


ಇದನ್ನೂ ಓದಿ: Janardhana Reddy: ಕಾಂಗ್ರೆಸ್​​​​ ಮತ ಬ್ಯಾಂಕ್​​ ಮೇಲೂ ಜನಾರ್ದನ ರೆಡ್ಡಿ ಕಣ್ಣು! ಕಲ್ಯಾಣ ರಾಜ್ಯ ಪಕ್ಷ ಎಂದರೇನು ಅಂತ ತೋರಿಸ್ತೀನಿ ಅಂತ ಸವಾಲು


ಇದೇ ವೇಳೆ, ಬಳ್ಳಾರಿಯಲ್ಲಿ ಮಾಡಿದ ಅಭಿವೃದ್ಧಿಯನ್ನ ಜನತೆಗೆ ತಿಳಿಸಿದ ರೆಡ್ಡಿ, ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತ, ಜನರನ್ನ ಒತ್ತಡದಲ್ಲಿಟ್ಟು ರಾಜಕೀಯ ಮಾಡುವ ನಾಯಕರು ಸಿಂಧನೂರಿನಲ್ಲಿದ್ದಾರೆ. ನಮ್ಮ ಪಕ್ಷ ಬೆಂಬಲಿಸಿ ನೀರಿನ ವಿಚಾರದಲ್ಲಿ ನಿಮಗೆ ಎಳ್ಳಷ್ಟೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ನಮ್ಮ ಮನೆ ಮಗ ಜನಾರ್ದನ ರೆಡ್ಡಿ ಮಾಡಿರುವ ಪಕ್ಷ ಇದು ಎಂದು ಬೆಂಬಲಿಸಿ. ನಾನು ಒಬ್ಬಂಟಿಯಾಗಿದ್ದೇನೆ ಎಂಬುದನ್ನ ತೋರಿಸುವುದಕ್ಕಾಗಿಯೇ ಬೆಂಗಳೂರಿನಲ್ಲಿ ಪ್ರೆಸ್‌ಮೀಟ್‌ ಮಾಡಿದ್ದು. ಜನಾರ್ದನರೆಡ್ಡಿ 6 ಕೋಟಿ ಜನರಲ್ಲಿ ಒಬ್ಬ ಅಂತ ಹೇಳುವ ಮೂಲಕ ತಾನು ಕೋಟಿಗೊಬ್ಬ ಎಂದು ಹೇಳಿದರು.


ಹುಲಿ ಬೇಟೆಗೆ ಬಂದಿಲ್ಲ ಎಂದರೆ ಅದಕ್ಕೆ‌ ಶಕ್ತಿ ಇಲ್ಲ ಎಂದಲ್ಲ


ಅಲ್ಲದೇ, ಜನಾರ್ಧನ ರೆಡ್ಡಿ ಆಸ್ತಿ ಮುಟ್ಟುಗೋಲು ವಿಚಾರ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿ, ಜನಾರ್ದನ ರೆಡ್ಡಿ ಗಾಡಿಗೆ ಡೀಸೆಲ್ ನಿಂದ ಹಿಡಿದು, ಊಟ ಕೂಡ ಜನ ಮಾಡಿಸೋ ಮಟ್ಟಿಗೆ ರೆಡ್ಡಿ ಜೊತೆ ಜನರಿದ್ದಾರೆ. ಇದು ಮೇಲಿನ ನಾಯಕರಿಗೆ ತಿಳಿಯಬೇಕು. ಇಂದಲ್ಲ ನಾಳೆ ನ್ಯಾಯಾಲಯ ನನ್ನ ಪರವಾಗಿ ತೀರ್ಪು ನೀಡುತ್ತೆ. ಜನಾರ್ದನ ರೆಡ್ಡಿ ಅಡ್ಡಾದಿಡ್ಡಿ ಬೆಳೆದಿಲ್ಲ. ಹುಲಿ ಬೇಟೆಗೆ ಬಂದಿಲ್ಲ ಎಂದರೆ ಅದಕ್ಕೆ‌ ಶಕ್ತಿ ಇಲ್ಲ ಎಂದಲ್ಲ. ಅದಕ್ಕೆ ಹಸಿವಾದರೆ ಅದು ಹೊರಗಡೆ ಬಂದು ಹೊಡೆದರೆ ಒಳ್ಳೆಯ ಬೇಟೆಯನ್ನೇ ಹೊಡೆಯುತ್ತೆ. ಹುಲಿ ಭೇಟೆಗೆ ಇಳಿದರೆ ಜಿಂಕೆ ಹಿಂಡಿನಲ್ಲಿ ಹೊಡೆದರೆ ದೊಡ್ಡ ಜಿಂಕೆಯನ್ನೇ ಹೊಡೆಯುತ್ತೆ. ದೊಡ್ಡ ದೊಡ್ಡ ನಾಯಕರಿಗೆ ರೆಡ್ಡಿ ಬೇಕಿಲ್ಲದಿರಬಹುದು. ಆದರೆ ಸಾಮಾನ್ಯ ಜನರಿಗೆ ಜನಾರ್ದನ ರೆಡ್ಡಿ ಬೇಕು ಎಂದು ಹೇಳಿದರು.

Published by:Sumanth SN
First published: