• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Jagadish Shettar: ಬಿಜೆಪಿ ಹೈಕಮಾಂಡ್‌ಗೆ ಶೆಟ್ಟರ್ ಡೆಡ್‌ಲೈನ್, ನಾಳೆ 11ರ ನಂತರ ಬಿಗ್ ಬ್ರೇಕಿಂಗ್ ನ್ಯೂಸ್!

Jagadish Shettar: ಬಿಜೆಪಿ ಹೈಕಮಾಂಡ್‌ಗೆ ಶೆಟ್ಟರ್ ಡೆಡ್‌ಲೈನ್, ನಾಳೆ 11ರ ನಂತರ ಬಿಗ್ ಬ್ರೇಕಿಂಗ್ ನ್ಯೂಸ್!

ಬಿಜೆಪಿಗೆ ಜಗದೀಶ್ ಶೆಟ್ಟರ್ ಡೆಡ್‌ಲೈನ್!

ಬಿಜೆಪಿಗೆ ಜಗದೀಶ್ ಶೆಟ್ಟರ್ ಡೆಡ್‌ಲೈನ್!

ಬಿಜೆಪಿ ಹೈಕಮಾಂಡ್‌ಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಡೆಡ್‌ಲೈನ್ ಕೊಟ್ಟಿದ್ದಾರೆ. ಬೆಳಗ್ಗೆ 11 ಗಂಟೆವರೆಗೆ ಟಿಕೆಟ್ ಘೋಷಣೆ ಮಾಡಬೇಕು ಅಂತ ತಾಕೀತು ಮಾಡಿದ್ದಾರೆ.

 • News18 Kannada
 • 3-MIN READ
 • Last Updated :
 • Hubli-Dharwad (Hubli), India
 • Share this:

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagdish Shettar) ಬಿಜೆಪಿ ಹೈಕಮಾಂಡ್ (BJP high command) ವಿರುದ್ಧವೇ ಗರಂ ಆಗಿದ್ದಾರೆ. ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ (Hubli Dharwad Central Assembly Constituency) ಟಿಕೆಟ್ ಪಡೆಯಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ಜಗದೀಶ್ ಶೆಟ್ಟರ್, ಇದೀಗ ಬಿಜೆಪಿ ಹೈಕಮಾಂಡ್‌ಗೆ ಡೆಡ್‌ಲೈನ್ (Deadline) ಕೊಟ್ಟಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆ ಒಳಗೆ ಟಿಕೆಟ್ ಘೋಷಣೆ ಮಾಡಬೇಕು ಅಂತ ತಾಕೀತು ಮಾಡಿದ್ದಾರೆ. ನಾನು ಪಾಸಿಟಿವ್ ಆಗಿ ಯೋಚನೆ ಮಾಡ್ತೀನಿ. ಈಗಲೂ ಆಶಾಭಾವ ಹೊಂದಿದ್ದೇನೆ. ಇವತ್ತಿಗೆ ಎರಡು ದಿನ ಆಯ್ತು. ನಾಳೆ ನನಗೆ ಟಿಕೆಟ್  ಘೋಷಣೆ ಆಗದೆ ಹೋದ್ರೆ ನಾನು ಯೋಚನೆ ಮಾಡ್ತೀನಿ ಅಂತ ಎಚ್ಚರಿಸಿದ್ದಾರೆ.


ನಾಳೆ ಬೆಳಗ್ಗೆ 11 ಗಂಟೆವರೆಗೆ ಡೆಡ್‌ಲೈನ್


ನಾಳೆ ಬೆಳಗ್ಗೆ 11 ಗಂಟೆವರೆಗೂ ಶೆಟ್ಟರ್ ಡೆಡ್‌ಲೈನ್ ಕೊಟ್ಟಿದ್ದಾರೆ. ನಾನು ಅಭಿಮಾನಿಗಳ ಸಭೆ ಮಾಡಿ ಅಂತೀಮ ತೀರ್ಮಾನ. ನಾಳೆ ಅಭಿಮಾನಿಗಳು ಬರ್ತಾರೆ, ಸಭೆ ಮಾಡ್ತೀನಿ. ಅಲ್ಲಿ ಮುಂದೆ ಏನ್ ಮಾಡಬೇಕು ಅಂತ ನಿರ್ಧಾರ ಮಾಡುತ್ತೀನಿ ಎಂದಿದ್ದಾರೆ.
ಜಗದೀಶ್ ಶೆಟ್ಟರ್‌ಗೆ ಅಪಮಾನ ಆಗಿದೆ ಅಂತಿದ್ದಾರೆ


ವರಿಷ್ಠರನ್ನು ಭೇಟಿ ಮಾಡಿದ್ದೀನಿ, ಅವರು ಪಾಸಿಟಿವ್ ರೆಸ್ಪಾನ್ಸ್ ಮಾಡಿದ್ದಾರೆ. ನಾಳೆ‌ 11ರ ವರೆಗೂ ನೋಡ್ತೀನಿ. ನಂತರ ಸಭೆ ಮಾಡಿ ತೀರ್ಮಾನ ಮಾಡ್ತೀನಿ ಅಂತ ಹೇಳಿದ್ರು. ಇನ್ನು ಬೇರೆ ಜಿಲ್ಲೆಯಿಂದಲೂ ಜನ ‌ಬರ್ತೀದಾರೆ. ಎಲ್ಲರಿಗೂ ಜಗದೀಶ್ ಶೆಟ್ಟರ್ ಗೆ ಅಪಮಾನ ಆಗಿದೆ ಅಂತೀದಾರೆ.


ಇದನ್ನೂ ಓದಿ: Laxman Savadi: ಸವದಿ ಸಿಟ್ಟು, ಡಿಕೆ ಡೈನಾಮೈಟ್‌, ಸಾಹುಕಾರ್‌ಗೆ ಸ್ಕೆಚ್‌! ಕುಂದಾನಗರಿ ಕೊತ ಕೊತ!


ನನಗೂ ಒಂದು ಲಿಮಿಟ್ ಇರುತ್ತದೆ!


ಮೂರನೇ ಲಿಸ್ಟ್ ಗೆ ಎಲ್ಲಿವರೆಗೆ ಕಾಯ್ತೀರಿ? ಈಗ ಬಾರಿ ಇರೋದೇ 12 ಕ್ಷೇತ್ರ. ನನಗೂ ಒಂದು ಲಿಮಿಟ್ ಇರತ್ತೆ, ನಾಳೆವರೆಗೂ ಹೋಪ್ಸ್ ಇದೆ. ನಾಳೆ ನೋಡಿ ತೀರ್ಮಾನ ಮಾಡ್ತೀನಿ ಅಂತ ಶೆಟ್ಟರ್ ಹೇಳಿದ್ರು.


ಕಾಡಿಬೇಡಿ ಟಿಕೆಟ್ ಕೇಳಿಲ್ಲ


ನನಗೆ ಅಲ್ಲ ಇದು ಮತದಾರರಿಗೂ ಮಾಡಿದ ಅಪಮಾನ. ಇದು ಹುಬ್ಬಳ್ಳಿ ಧಾರವಾಡಕ್ಕೆ ಸೀಮಿತ ಅಲ್ಲ. ರಾಜ್ಯದ ಎಲ್ಲ ಕಡೆ ಇಂದ ಕರೆ ಮಾಡ್ತೀದಾರೆ.. ನಾನು ಕಾಡಿ ಬೇಡಿ ಟಿಕೆಟ್ ಕೇಳಲ್ಲ, ವರಿಷ್ಠರು ಫೋನ್ ಮಾಡಿದ್ದಕ್ಕೆ ಹೋಗಿದ್ದೆ. ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿರೋದಕ್ಕೆ ಹೋಗಿದ್ದೆ. ನಾಳೆವರೆಗೂ ವೇಟ್ ಮಾಡ್ತೀನಿ ಅಂತ ಶೆಟ್ಟರ್ ಖಡಕ್ ಆಗಿ ಹೇಳಿದ್ದಾರೆ.


ಜೋಶಿ ವಿರುದ್ಧ ಅಸಮಾಧಾನ


ಪಾಲಿಕೆ ಸದಸ್ಯರು ಬೇಜರಾಗಿ ರಾಜೀನಾಮೆ ಕೊಟ್ಟಿದ್ದಾರೆ, ಅವರಿಗೆ ಅಭಿನಂದನೆ ಅಂತ ಶೆಟ್ಟರ್ ಹೇಳಿದ್ದಾರೆ. ಪ್ರಹ್ಲಾದ್ ಜೋಶಿ ಅವರು ರಾಷ್ಟ್ರೀಯ ಅಧ್ಯಕ್ಷರ ಮುಂದೆ ಹೇಳಿದ್ದಾರೆ. ಇಲ್ಲ ಅಂತಲ್ಲ ,ಆದ್ರೆ ರಿಸಲ್ಟ್ ಏನು ಬಂದಿಲ್ಲ ಅಂತ ಪರೋಕ್ಷವಾಗಿ ಕೇಂದ್ರ ಸಚಿವರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ರು.


ಇದನ್ನೂ ಓದಿ: Laxman Savadi: ಬಿಜೆಪಿ ವಿರುದ್ಧ ಸಮರ ಸಾರಿರುವ ಲಕ್ಷ್ಮಣ ಸವದಿ ಯಾರು? ಪ್ರಭಾವಿ ನಾಯಕನ ರಾಜಕೀಯ ಏಳುಬೀಳು ಹೇಗಿತ್ತು?


ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ

top videos


  ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡಲ್ಲ, ನಾನೇ ಸ್ಪರ್ಧೆ ಮಾಡ್ತೀನಿ ಎಂದ ಶೆಟ್ಟರ್, ಕಾಂಗ್ರೆಸ್ ಆಗಲಿ ಬೇರೆ ಯಾರೇ ಆಗಲಿ ನಮ್ಮ ಜೊತೆ ಸಂಪರ್ಕ ‌ಮಾಡಿಲ್ಲ. ನಮ್ಮ ಕುಟುಂಬದವರು ಸ್ಪರ್ಧೆ ಮಾಡೋದಿಲ್ಲ ಅಂತ ಶೆಟ್ಟರ್ ಸ್ಪಷ್ಟಪಡಿಸಿದರು.

  First published: