• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Jagadish Shettar: ‘ಟಿಕೆಟ್​ ಕೊಡ್ತೀರಾ? ಇಲ್ವಾ?’ -ಮತ್ತೆ ರಾತ್ರಿ 8:30ಕ್ಕೆ ಡೆಡ್​​​ಲೈನ್ ಮುಂದೂಡಿದ ಜಗದೀಶ್ ಶೆಟ್ಟರ್!​

Jagadish Shettar: ‘ಟಿಕೆಟ್​ ಕೊಡ್ತೀರಾ? ಇಲ್ವಾ?’ -ಮತ್ತೆ ರಾತ್ರಿ 8:30ಕ್ಕೆ ಡೆಡ್​​​ಲೈನ್ ಮುಂದೂಡಿದ ಜಗದೀಶ್ ಶೆಟ್ಟರ್!​

ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್

ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ ಮತ್ತು ಸಿಎಂ ಬೊಮ್ಮಾಯಿ ಸಂದೇಶ ಕೊಟ್ಟಿದ್ದು, ಇದಕ್ಕೊಂದು ಪರಿಹಾರ ಹುಡುಕೋದಾಗಿ ಸಮಯ ಕೇಳಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

  • News18 Kannada
  • 2-MIN READ
  • Last Updated :
  • Dharwad, India
  • Share this:

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagdish Shettar) ಬಿಜೆಪಿ ಹೈಕಮಾಂಡ್ (BJP high command) ವಿರುದ್ಧವೇ ಗರಂ ಆಗಿದ್ದಾರೆ. ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ (Hubli Dharwad Central Assembly Constituency) ಟಿಕೆಟ್ ಪಡೆಯಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ಜಗದೀಶ್ ಶೆಟ್ಟರ್,  ಈಗಾಗಲೇ ಎರಡು ಬಾರಿ ಬಿಜೆಪಿ ಹೈಕಮಾಂಡ್​​ಗೆ ಡೆಡ್‌ಲೈನ್ (Deadline) ಕೊಟ್ಟಿದ್ದರು. ಮೊದಲು ನಾಳೆ ಬೆಳಗ್ಗೆ 11 ಗಂಟೆ ಒಳಗೆ ಟಿಕೆಟ್ ಘೋಷಣೆ ಮಾಡಬೇಕು ಅಂತ ತಾಕೀತು ಮಾಡಿದ್ದಾರೆ. ಇಂದು ಸಂಜೆವರೆಗೂ ಕಾದು ನೋಡೋಣಾ ಅಂತ ಹೇಳಿದ್ದರು. ಸದ್ಯ ಈಗ ಸುದ್ದಿಗೋಷ್ಠಿ ನಡೆಸಿ, ಹೈಕಮಾಂಡ್​ ಸಮಯ ಕೇಳಿದೆ, ರಾತ್ರಿ 8:30ರ ವರೆಗೂ ಕಾದು ನೋಡೋಣಾ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. 


ಹುಬ್ಬಳ್ಳಿ - ಬೆಂಬಲಿಗರ ಸಭೆ ಕರೆದಿದ್ದೆ, ಅವರ ಭಾವನೆಗಳನ್ನು ಹೇಳಿದ್ದಾರೆ. ನಮ್ಮ ನಿರ್ಧಾರಕ್ಕೆ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ನಡೆಯ ಬಗ್ಗೆ ಆಪ್ತರೊಂದಿಗೆ ಚರ್ಚೆ ನಡೆಯುತ್ತಿದೆ. ಇದೇ ವೇಳೆ ಹೈಕಮಾಂಡ್ ಸಂದೇಶ ಕೊಟ್ಟಿದೆ.


ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ ಮತ್ತು ಸಿಎಂ ಬೊಮ್ಮಾಯಿ ಸಂದೇಶ ಕೊಟ್ಟಿದ್ದು, ಇದಕ್ಕೊಂದು ಪರಿಹಾರ ಹುಡುಕೋದಾಗಿ ಸಮಯ ಕೇಳಿದ್ದಾರೆ. ಅವರೊಂದಿಗೆ ಸಭೆ ಮಾಡಿದ ನಂತರ ಅಂತಿಮ ನಿರ್ಧಾರ ಮಾಡಲಾಗುತ್ತಿದೆ. ನನ್ನ ಪ್ರಶ್ನೆ ಇಷ್ಟೇ, ಟಿಕೆಟ್ ಕೊಡ್ತಾರಾ ಇಲ್ವಾ ಅನ್ನೋದೆ ಆಗಿದೆ ಎಂದು ಜಗದೀಶ್ ಶೆಟ್ಟರ್​​ ಹೇಳಿದ್ದಾರೆ.


ಇದನ್ನೂ ಓದಿ: Karnataka Election 2023: ಮಾಜಿ ಡಿಸಿಎಂ ಪರಮೇಶ್ವರ್​​ ಕಾಲಿಗೆ ಬಿದ್ದ ವಿಜಯೇಂದ್ರ, ಬಿಎಸ್‌ವೈ ಪುತ್ರನಿಗೆ ಕಾಂಗ್ರೆಸ್ ನಾಯಕನ ಆಶೀರ್ವಾದ!


ನಿಂತರೆ ನಾನೇ ನಿಲ್ಲಬೇಕು, ಕುಟುಂಬದ ಸದಸ್ಯರಿಗೆ ಟಿಕೆಟ್ ಬೇಡ ಎಂದಿದ್ದೇನೆ. ಜಗದೀಶ್ ಶೆಟ್ಟರ್ ನಿಲ್ಲೋದಕ್ಕೆ ಸಮಸ್ಯೆ ಏನು ಅಂತ ಕೇಳಿದ್ದೇನೆ. ಉಸಿರು ಗಟ್ಟಿದಂತಾಗುತ್ತಿದೆ. ನಾನು ಮಾತ್ರ ಅಲ್ಲ ರಾಜ್ಯದಲ್ಲಿ ಜನರೂ ಕೇಳುತ್ತಿದ್ದಾರೆ.




ಮುಂದಿನ‌ ಸಿದ್ಧತೆ ಬಗ್ಗೆ ತಯಾರಿ ಮಾಡಿಕೊಂಡಿದ್ದೇನೆ. ಹೈಕಮಾಂಡ್ ಗೆ ಇದೊಂದು ಅವಕಾಶ ಕೊಟ್ಟಿದ್ದೇನೆ. ಅವರು ಏನು ಹೇಳುತ್ತಾರೆ ಹೇಳಲಿ. ಶಾಸಕನಾಗಿ ಕೆಲಸ ಮಾಡಲು ಕೇಳಿದ್ದೇನೆ. ಸ್ಪೀಕರ್ ಅವರ ಭೇಟಿಗೂ ಸಮಯ ಕೇಳಿದ್ದೆ, ಈ ಎಲ್ಲಾ ಬೆಳವಣಿಗೆಗಳು ಆಗಿದ್ದರಿಂದ ಸ್ವಲ್ಪು ವಿಳಂಬ ಆಗಿದೆ ಎಂದು ಸ್ಪಷ್ಟಪಡಿಸಿದರು.

top videos
    First published: