• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Assembly Election 2023: ಮುಕ್ತಾಯವಾಯ್ತು ಮತದಾನ, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ!

Karnataka Assembly Election 2023: ಮುಕ್ತಾಯವಾಯ್ತು ಮತದಾನ, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ!

ಕರ್ನಾಟಕ ವಿಧಾನಸಭಾ ಚುನಾವಣೆ

ಕರ್ನಾಟಕ ವಿಧಾನಸಭಾ ಚುನಾವಣೆ

ಕೆಲವು ಕಡೆ ಗಲಾಟೆ, ಕಾರ್ಯಕರ್ತರ ನಡುವೆ ಘರ್ಷಣೆ, ಕೈಕೊಟ್ಟ ಮತಯಂತ್ರ, ಕೆಲವೆಡೆ ಗೊಂದಲ ಹೊರತುಪಡಿಸಿ, ಬಹುತೇಕ ಶಾಂತಿಯುತವಾಗಿ ಚುನಾವಣೆ ಮುಕ್ತಾಯವಾಗಿದೆ.

  • News18 Kannada
  • 4-MIN READ
  • Last Updated :
  • Karnataka, India
  • Share this:

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ (Karnataka assembly elections) ಇದೀಗ ಮುಕ್ತಾಯವಾಗಿದೆ. ರಾಜ್ಯಾದ್ಯಂತ ಮತದಾರರು (Voters) ಅತೀ ಉತ್ಸಾಹದಿಂದಲೇ ಮತಗಟ್ಟೆಗೆ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದ್ದಾರೆ. ಕೆಲವು ಕಡೆ ಗಲಾಟೆ, ಕಾರ್ಯಕರ್ತರ ನಡುವೆ ಘರ್ಷಣೆ, ಕೈಕೊಟ್ಟ ಮತಯಂತ್ರ, ಕೆಲವೆಡೆ ಗೊಂದಲ ಹೊರತುಪಡಿಸಿ, ಬಹುತೇಕ ಶಾಂತಿಯುತವಾಗಿ ಚುನಾವಣೆ ಮುಕ್ತಾಯವಾಗಿದೆ. ಕೆಲವು ನವ ಜೋಡಿಗಳು ಮದುವೆ ಮುಗಿಸಿ ನೇರವಾಗಿ ಮತಗಟ್ಟೆಗೆ ಬಂದು ಮತಚಲಾಯಿಸಿದ್ರೆ, ಕೆಲವೆಡೆ ರೋಗಿಗಳು ಆ್ಯಂಬುಲೆನ್ಸ್‌ನಲ್ಲಿ ಬಂದು ವೋಟ್ ಮಾಡಿದ್ದಾರೆ.  


ಒಟ್ಟು 2615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ


ರಾಜ್ಯದ ಒಟ್ಟು 2615 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಯಾರು ತಮ್ಮ ನಾಯಕ ಆಗಬೇಕು, ಯಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲು ಅವಕಾಶ ನೀಡಬೇಕು ಅಂತ ಈಗಾಗಲೇ ಮತದಾರರು ನಿರ್ಧರಿಸಿದ್ದಾರೆ. ಕಣದಲ್ಲಿ ಒಟ್ಟು 2615 ಅಭ್ಯರ್ಥಿಗಳಿದ್ದು, ಈ ಪೈಕಿ 2430 ಪುರುಷ ಅಭ್ಯರ್ಥಿಗಳು, 184 ಮಹಿಳಾ ಅಭ್ಯರ್ಥಿಗಳು ಹಾಗೂ ಒಬ್ಬರು ತೃತೀಯ ಲಿಂಗಿ ಅಭ್ಯರ್ಥಿ ಕಣದಲ್ಲಿದ್ದಾರೆ.


ಒಟ್ಟು 58,282 ಮತಕೇಂದ್ರಗಳಲ್ಲಿ ವೋಟಿಂಗ್


ಇನ್ನು ರಾಜ್ಯಾದ್ಯಂತ ವೋಟಿಂಗ್‌ಗಾಗಿ ಒಟ್ಟು 58,282 ಮತಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. 84,119 ಮತಗಟ್ಟೆಯ ಭದ್ರತಾ ಸಿಬ್ಬಂದಿ, 2959 ವಿಶೇಷ ಸಿಬ್ಬಂದಿ ನಿಯೋಜಿಸಲಾಗಿತ್ತು. ಇನ್ನು ಮತದಾರರ ಸಂಖ್ಯೆ – 5.21 ಕೋಟಿ ಇದ್ದು, ಈ ಪೈಕಿ ಪುರುಷ ಮತದಾರರ ಸಂಖ್ಯೆ – 2.62 ಕೋಟಿ, ಮಹಿಳಾ ಮತದಾರರ ಸಂಖ್ಯೆ – 2.59 ಕೋಟಿ ಇತ್ತು. ವಿಶೇಷ ಅಂದ್ರೆ 112 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿತ್ತು. ಇನ್ನು ಫಸ್ಟ್ ಟೈಮ್ ವೋಟರ್‌ಗಳ ಸಂಖ್ಯೆ – 9.17 ಲಕ್ಷ,  100 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ – 16,976 ಇತ್ತು. ಈ ಎಲ್ಲವುಗಳ ನಡುವೆ ಶಾಂತಿ ಭದ್ರತೆಗಾಗಿ 2.2 ಲಕ್ಷ ಪೊಲೀಸರನ್ನು ನಿಯೋಜಿಸಲಾಗಿತ್ತು.


ಅಲ್ಲಲ್ಲಿ ಜಗಳ, ಕೆಲವೆಡೆ ಘರ್ಷಣೆ


ರಾಜ್ಯದಲ್ಲಿ ಇಂದು ಅನೇಕ ಕಡೆ ಶಾಂತಿಯುತ ಮತದಾನ ನಡೆದ್ರೆ ಇನ್ನೂ ಕೆಲವೆಡೆ ಪಕ್ಷಗಳ ಕಾರ್ಯಕರ್ತರ ಮಧ್ಯೆ ಜಗಳವೂ ನಡೆದಿದೆ. ಸಣ್ಣಪುಟ್ಟ ಕಾರಣಗಳಿಗಾಗಿ ಮತದಾನದ ದಿನವೇ ಹೊಯ್‌ಕೈ ನಡೆದ ಘಟನೆ ವರದಿಯಾಗಿದೆ.


ರೇಣುಕಾಚಾರ್ಯ ಕಾರ್‌ಗೆ ಮುತ್ತಿಗೆ!


ನೀತಿ ಸಂಹಿತೆ ಉಲ್ಲಂಘಿಸಿ ನ್ಯಾಮತಿ ಯರಗನಾಳ್ ಗ್ರಾಮಕ್ಕೆ ಭೇಟಿ ನೀಡಿದ್ದ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರ ಕಾರ್‌ಗೆ ಕೈ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ವೇಳೆ ಶಾಸಕರ ಕಾರ್ ಮುತ್ತಿಗೆ ಹಾಕಿದ್ದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯ ಗಲಾಟೆಯೂ ನಡೆಯಿತು. ಗಲಾಟೆ ಜೋರಾಗ್ತಿದ್ದಂತೆ ಶಾಸಕ ರೇಣುಕಾಚಾರ್ಯ ಅವರು ಅಲ್ಲಿಂದ ಕಾಲ್ಕಿತ್ತರು.


ಇದನ್ನೂ ಓದಿ: Karnataka Exit Poll 2023 Live Updates: ಎಕ್ಸಿಟ್​ ಪೋಲ್​ಗೆ ಕೆಲವೇ ನಿಮಿಷ ಬಾಕಿ, ಯಾರ ಕೈಗೆ ರಾಜ್ಯ ಚುಕ್ಕಾಣಿ?


ಪೊಲೀಸ್ ಪೇದೆ ಮೇಲೆ ಹಲ್ಲೆ!


ಪೊಲೀಸ್ ಪೇದೆ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಆರೋಪ ಮಧುಗಿರಿ ತಾಲೂಕಿನ ಎಚ್ ಬಸವನಹಳ್ಳಿ ಮತಗಟ್ಟೆ ಬಳಿ ಕೇಳಿ ಬಂದಿದೆ. ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆ ಬಳಿ ಬಂದು ಪ್ರಚಾರ ಮಾಡುತಿದ್ದರು. ಈ ವೇಳೆ ಮತಗಟ್ಟೆಯಿಂದ ದೂರ ಹೋಗುವಂತೆ ಪೇದೆ ಹೇಳಿದ್ದಾರೆ. ಪೊಲೀಸ್ ಪೇದೆ ಮಾತಿಗೆ ಪ್ರತಿರೋಧ ಒಡ್ಡಿದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿ ಪೇದೆಯನ್ನೇ ಅಟ್ಟಾಡಿಸಿದ್ದಾರೆ.

First published: