ಮುಂದಿನ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಜನತಾದಳ ಪಕ್ಷದ (Janata Dal Secular) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಚುನಾವಣೆಗೆ ಅಧಿಕೃತವಾಗಿ ರಣಕಹಳೆ ಮೊಳಗಿಸಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (EX CM HD Kumaraswamy) ಅವರು, ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ (JDS) ಪಕ್ಷದ ಕುರಿತಂತೆ ಟೀಕೆ ಮಾಡಿದ್ದ ಬಿಜೆಪಿ (BJP) ನಾಯಕರಿಗೆ ತಿರುಗೇಟು ನೀಡಿ ಮಾತನಾಡಿದ್ದು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಗೆಲುವು ಪಡೆಯಲಿದ್ದು, ಆಗ ನೀವು ಅರ್ಜಿಗಳನ್ನು ಹಿಡಿದುಕೊಂಡು ನಮ್ಮ ಬಳಿಯೇ ಬರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೇ ಗೆಲುವು ಪಡೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಹೊಟ್ಟೆಪಡು ಮಾಡಿಕೊಂಡಿದ್ದೀರಿ. ಮೈತ್ರಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಅಂದು ನಿಮ್ಮ ಪ್ರಧಾನ ಮಂತ್ರಿ ಏಕೆ ರಾಜೀನಾಮೆ ಕೊಟ್ಟು ನಮ್ಮ ಜೊತೆ ಸೇರಿ ಸರ್ಕಾರ ರಚನೆ ಮಾಡಿ ಅಂತ ಆಹ್ವಾನ ಕೊಟ್ಟಿದ್ದು ಏಕೆ ಅಂತ. 2023ಕ್ಕೆ ಮಿಸ್ಟರ್ ಅಶೋಕ್, ಮಿಸ್ಟರ್ ಸಂತೋಷ್ ನೀವು ಜನತಾದಳದ ಬಳಿಗೆ ಬರಬೇಕು. ಎಚ್ಚರಿಕೆಯಿಂದ ಇರಿ.
ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದರೇ, ನಾವು ಸುಮ್ಮನೆ ಇರೋದಿಲ್ಲ. ಅಷ್ಟು ಸುಲಭವಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಉಳಿಯೋದಿಲ್ಲ, ರಾಜ್ಯದಿಂದ ಬಿಜೆಪಿಯನ್ನು ಹೊರ ಹಾಕಲು ತೀರ್ಮಾನ ಮಾಡಿದ್ದೀನಿ. ನಾಡಿನ ಜನರ ವಿಶ್ವಾಸ ಗಳಿಸುವ ನೈತಿಕತೆ ಉಳಿಸಿಕೊಂಡಿದ್ದೇನೆ. ಜನರ ಕಷ್ಟಗಳನ್ನು 10 ದಿನ ಸದನ ನಡೆಸಿ ಪರಿಹಾರ ಮಾಡ್ತೀರಾ? ಎಷ್ಟು ದಿನ ಸದನ ಸರಿಯಾಗಿ ನಡೆಸಲು ಅವಕಾಶ ಕೊಟ್ಟಿದ್ದೀರಿ. ನಿಮ್ಮಿಂದ ನಾವು ಕಲಿಯಲು ಬೇಕಿಲ್ಲ.
2023ನೇ ವಿಧಾನಸಭೆ ಚುನಾವಣೆಯ @JanataDal_S ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಪಕ್ಷದ ರಾಜ್ಯ ಅಧ್ಯಕ್ಷರಾದ ಶ್ರೀ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಪಕ್ಷದ ಸಂಸದೀಯ ಮಂಡಳಿ ಹಾಗೂ ರಾಷ್ಟೀಯ ಅಧ್ಯಕ್ಷರಾದ ಶ್ರೀ @H_D_Devegowda ಅವರ ಅನುಮೋದನೆ ಮೇರೆಗೆ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. pic.twitter.com/LC1JUel5JX
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 19, 2022
ನಿಮ್ಮಿಂದ ಕಲಿಯುವುದು ಏನಿದೆ?
ಈಗಲೂ ಬೆಳಗ್ಗೆ ಎಂದರೇ ಜನರು ಸಹಾಯಕ್ಕೆ ನನ್ನ ಮನೆಗೆ ಬರ್ತಾರೆ. ಆದರೆ ನಿಮ್ಮ ಮನೆಗೆ ಬರುತ್ತಾರಾ ಒಮ್ಮೆ ನೋಡಿ. ಇದುವರೆಗೂ ರೈತರ ಪ್ರತಿಭಟನೆ ಮಾಡಿದರೆ ಹೋಗಿ ಮಾತನಾಡಿದ್ದೀರಾ? ಕನ್ನಡಿಗರಿಂದ, ಕನ್ನಡಿಗರ ಆದೇಶದ ಮೇರೆಗೆ ನಡೆಯುವ ಸರ್ಕಾರ ನಡೆಸಲು ಜವಾಬ್ದಾರಿ ತೆಗೆದುಕೊಂಡು ಇಂದು ನಾನು ಬೆಳಗಾವಿಗೆ ಬಂದಿಲ್ಲ. ತಿನ್ನೋ ಅನ್ನದಲ್ಲೂ, ಬಟ್ಟೆಯಲ್ಲೂ ಧರ್ಮ ನೋಡ್ತೀರಿ. ನಿಮ್ಮಂತಹವರ ಬಳಿ ಇಂದ ನಾವು ಕಲಿಯಬೇಕಾ ಅಂತ ಕಿಡಿಕಾರಿದರು.
ರಾಜ್ಯವನ್ನ ಲೂಟಿ ಮಾಡಿದ್ದೀರಿ
ಮುಂದಿನ ಚುನಾವಣೆಯಲ್ಲಿ ಗೆದ್ದು ಜನತಾ ದಳದ ಸರ್ಕಾರ ಅಧಿಕಾರಕ್ಕೆ ಬಂದರೇ ಅರ್ಜಿ ಹಿಡಿದುಕೊಂಡು ಬಿಜೆಪಿ ನಾಯಕರು ನಮ್ಮ ಬಳಿಯೇ ಬರಬೇಕು ಅಂತ ಹೇಳುತ್ತಿದ್ದೇನೆ. ಚುನಾವಣೆ ಮೂರು ತಿಂಗಳು ಇದೇ, ಈಗ ಅನುದಾನ ಘೋಷಣೆ ಮಾಡಿದರೇ ಒಂದು ಹೆಜ್ಜೆ ಕೂಡ ಮುಂದೇ ಹೋಗೋದಿಲ್ಲ. ನಮ್ಮ ಪಂಚರತ್ನ ಯಾತ್ರೆ ಬಗ್ಗೆ ಲಘುವಾಗಿ ಮಾತನಾಡಿದರೆ ನೆಟ್ಟಗೆ ಇರೋದಿಲ್ಲ. ಜನರ ಕಷ್ಟ ನೋಡಿ ನಮಗೆ ಕಣ್ಣೀರು ಬರುತ್ತೆ. ಆದರೆ ಮಿಸ್ಟರ್ ಸಂತೋಷ್ ಲೂಟಿ ಮಾಡಿ ರಾಜ್ಯದ ಜನರ ಹಣವನ್ನು ತೆಗೆದುಕೊಂಡು ಹೋಗಿ ತೆಲಂಗಾಣದಲ್ಲಿ ಶಾಸಕರನ್ನು ಖರೀದಿ ಮಾಡಲು ಹೋಗಿದ್ದೀರಿ. ಕರ್ನಾಟಕದಲ್ಲಿ ನಡೆದಂತೆ ಎಲ್ಲಾ ರಾಜ್ಯದಲ್ಲೂ ನಡೆಯುವುದಿಲ್ಲ.
ಇದನ್ನೂ ಓದಿ: Cylinder Gas: 500 ರೂಪಾಯಿಗೆ ಸಿಲಿಂಡರ್ ಗ್ಯಾಸ್! ಹೊಸ ದರ ಘೋಷಿಸಿದ ಸಿಎಂ
ಶಿಕಾರಿಪುರದ ಟಿಕೆಟ್ ಯಾರಿಗೆ ಬರ್ತಿರಿ
ಶಿಕಾರಿಪುರದಲ್ಲಿ ಮುಂದಿನ ಚುನಾವಣೆಗೆ ಯಾರಿಗೆ ಟಿಕೆಟ್ ಕೊಡ್ತೀರಾ? ಬೆಳಗಾವಿಯಲ್ಲಿ ಯಾವ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದ್ದೀರಿ? ನಮ್ಮ ಬಗ್ಗೆ ಅಪ್ಪ-ಮಗ ಅಂತ ಟೀಕೆ ಮಾಡ್ತೀರಿ. ಮೊದಲು ನಿಮ್ಮ ಪಕ್ಷದಲ್ಲಿ ಏನಾಗುತ್ತಿದೆ ಅಂತ ನೋಡಿಕೊಂಡು ನಮ್ಮ ಬಗ್ಗೆ ಮಾತನಾಡಲಿ. ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡುವ ನೈತಿಕರೆ ಏನಿದೆ ಎಂದು ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ