• Home
  • »
  • News
  • »
  • state
  • »
  • H D Kumaraswamy: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಗೆ ಸಿದ್ಧತೆ; ಯಾವಾಗ ಎಲೆಕ್ಷನ್ ಬಂದ್ರು ನಾವ್ ರೆಡಿ

H D Kumaraswamy: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಗೆ ಸಿದ್ಧತೆ; ಯಾವಾಗ ಎಲೆಕ್ಷನ್ ಬಂದ್ರು ನಾವ್ ರೆಡಿ

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

ಬಿಜೆಪಿಯು ಈ ವರ್ಷದ ಡಿಸೆಂಬರ್ ವೇಳೆಗೆ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ನಾವು ಸಿದ್ಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

  • Share this:

ಬೆಂಗಳೂರು (ಜು. 23): 2023ರ ವಿಧಾನಸಭೆ ಚುನಾವಣೆಗೆ (Assembly Election) ರಾಜ್ಯದಲ್ಲಿ ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದೆ. ಸಿಎಂ ಕುರ್ಚಿಗೆ ಪೈಪೋಟಿ ಶುರುವಾಗಿದೆ. ಈ ನಡುವೆ ಜೆಡಿಎಸ್​ ವಕ್ತಾರ ಹಾಗೂ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ (H.D Kumaraswamy) ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಬಿಜೆಪಿಯು ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಗೆ (Election) ಸಿದ್ಧತೆ ಮಾಡುತ್ತಿದೆ ಎಂದು ಹೇಳಿದ್ದಾರೆ. ಅದಕ್ಕಾಗಿಯೇ ತರಾತುರಿಯಲ್ಲಿ ಸಂಪುಟ ಸಭೆ ನಡೆಸಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.


ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ನಾವು ಸಿದ್ಧ


ಸುದ್ದಿಗಾರರ ಜತೆ ಮಾತನಾಡಿದ ಅವರು, ಶುಕ್ರವಾರದ ಸಂಪುಟ ಸಭೆಯನ್ನು ಗಮನಿಸಿದರೆ ಬಿಜೆಪಿಯು ಈ ವರ್ಷದ ಡಿಸೆಂಬರ್ ವೇಳೆಗೆ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ನಾವು ಸಿದ್ಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ಒಕ್ಕಲಿಗರು ಪ್ರಾಮಾಣಿಕರನ್ನೇ ಬೆಂಬಲಿಸುತ್ತಾರೆ 


ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುವುದನ್ನು ವಿರೋಧಿಸಿ ಕಾಂಗ್ರೆಸ್​ನವರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಗಳಿಂದ ಅನುಕಂಪ ಗಿಟ್ಟಿಸಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಲ್ಲ ಪಕ್ಷಗಳೂ ಚುನಾವಣೆ ಬಂದಾಗ ಜಾತಿಯ ಅಸ್ತ್ರ ಬಳಸುತ್ತವೆ. ಆದರೆ, ಒಕ್ಕಲಿಗರು ಸರಿಯಾಗಿ ಯೋಚಿಸಿ ನಿರ್ಧಾರ ಮಾಡುತ್ತಾರೆ. ಯಾವತ್ತೂ ಪ್ರಾಮಾಣಿಕರನ್ನೇ ಬೆಂಬಲಿಸುತ್ತಾರೆ ಎಂದರು.


ಇದನ್ನೂ ಓದಿ: Uttara Kannada: ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಅಭಿಯಾನ, ಪಾಲ್ಗೊಳ್ಳೋದು ಹೇಗೆ?


ಸಿಎಂ ಕುರ್ಚಿಗೆ ಡಿಕೆಶಿ, ಕುಮಾರಸ್ವಾಮಿ ಪೈಪೋಟಿ


2023ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಸಿಎಂ ಕುರ್ಚಿಯ ಕನಸು ಎಲ್ಲಾ ನಾಯಕರಲ್ಲಿಯೂ ಹೆಚ್ಚಾಗಿದೆ. ರಾಮನಗರದ (Ramanagara) ಐತಿಹಾಸಿಕ ಚಾಮುಂಡೇಶ್ವರಿ ಕರಗ ಮಹೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ (H. D Kumaraswamy) - ಡಿ.ಕೆ.ಶಿವಕುಮಾರ್ (D.K Shivakumar) ಸಿಎಂ ಕನಸಿನ ಮುನ್ನೋಟ ಬಹಿರಂಗ ಆಗಿದೆ. ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವೇದಿಕೆಯಲ್ಲಿ ಡಿಕೆಶಿ ಪವರ್ ಫುಲ್ ಭಾಷಣ ಮಾಡಿದ್ರು. ಕುಮಾರಸ್ವಾಮಿಗೂ ಅವಕಾಶ ನೀಡಿದ್ದೀರಿ,  ದೇವೇಗೌಡರಿಗೂ (Deve Gowda) ಅವಕಾಶ ನೀಡಿದ್ದೀರಿ. ನೀವು ಈಗ ನನಗೂ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ


ಕುಮಾರಸ್ವಾಮಿ 2023ಕ್ಕೆ ಸಿಎಂ

 ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮಾತನಾಡಿ, 1994 ರಲ್ಲಿ ದೇವೇಗೌಡರನ್ನ ರಾಮನಗರದಲ್ಲಿ ನಿಲ್ಲಿಸಿ ಗೆಲ್ಲಿಸುತ್ತೀಯ ಎಂದು ಪ್ರಶ್ನೆ ಮಾಡಿದ್ರು. ಆದ್ರೆ ಅವರು ಗೆದ್ದು ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ್ರು. ಈಗ ದೇವೇಗೌಡರಿಗೆ 90 ವರ್ಷ ಆಗಿದೆ. ಆದ್ರೆ ಅವರಿಗೆ ರಾಜ್ಯದ ಚಿಂತೆ, ಕಾಂಗ್ರೆಸ್‌ನವರಿಗೆ ಸೋನಿಯಾ ಗಾಂಧಿ ಚಿಂತೆ, ಬಿಜೆಪಿ ಅವರಿಗೆ ಮೋದಿ ಚಿಂತೆ.  ಜೆಡಿಎಸ್ ನವರಿಗೆ  ರೈತರ ಹಾಗೂ ಕನ್ನಡ ನಾಡಿನ ಜನತೆ ಚಿಂತೆ. ಕುಮಾರಸ್ವಾಮಿ ಅವರ ಹೃದಯ ದಯವೇಧರ್ಮದ ಮೂಲವಯ್ಯ, ದಯವೇ ಧರ್ಮದ ಮಂತ್ರವಯ್ಯ, 2022 ರ ಡಿಸೆಂಬರ್ ಗೆ ಚುನಾವಣೆ ಬರುತ್ತೆ, 2023 ಕ್ಕೆ ಕುಮಾರಸ್ವಾಮಿ ಸಿಎಂ ಆಗ್ತಾರೆ ಎಂದರು.

ದೇವೇಗೌಡರು, ಕುಮಾರಸ್ವಾಮಿ ನಂತರ ನನಗೆ ಅವಕಾಶ - ಡಿಕೆಶಿಮತ್ತೊಂದು ಕಡೆ ಹೆಚ್.ಡಿ.ಕುಮಾರಸ್ವಾಮಿ ಗೆ ಡಿ.ಕೆ.ಶಿವಕುಮಾರ್ ನೇರ ಸವಾಲ್ ಹಾಕಿದರು. ರಾಮನಗರದಲ್ಲೇ ನಿಂತು ಸವಾಲ್ ಹಾಕಿದ ಡಿ.ಕೆ.ಶಿವಕುಮಾರ್ ​ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವೇದಿಕೆಯಲ್ಲಿ ಡಿಕೆಶಿ ಪವರ್ ಫುಲ್ ಭಾಷಣ ಮಾಡಿದ್ರು. ಕುಮಾರಸ್ವಾಮಿಗೂ ಅವಕಾಶ ನೀಡಿದ್ದೀರಿ,  ದೇವೇಗೌಡರಿಗೂ ಅವಕಾಶ ನೀಡಿದ್ದೀರಿ. ನೀವು ಈಗ ನನಗೂ ಅವಕಾಶ ಕೊಡಿ.‌ ನನಗೆ ಯಾವ ಹೂವಿನ ಹಾರ ಬೇಡ.‌ ನಾನು ಇಲ್ಲಿ ಅಭ್ಯರ್ಥಿ ನಿಲ್ಲಿಸುತ್ತೇನೆ. ಅವರನ್ನ ವಿಧಾನಸೌಧಕ್ಕೆ ಕಳುಹಿಸಿಕೊಡಿ, ಅದೇ ನನಗೆ ಹೂವಿನಹಾರ ಎಂದರು.


Published by:Pavana HS
First published: