• Home
 • »
 • News
 • »
 • state
 • »
 • HD Kumaraswamy: ಬಿಜೆಪಿ ವಿರುದ್ಧ ಹೊಸ ಬಾಂಬ್​ ಸಿಡಿಸಿದ ಹೆಚ್​ಡಿಕೆ; ಸ್ಯಾಂಟ್ರೋ ರವಿ ಹೆಸರೇಳಿ ನಾನು ಹಿಟ್ ಅಂಡ್ ರನ್ ಅಲ್ಲ ಎಂದ ಮಾಜಿ ಸಿಎಂ

HD Kumaraswamy: ಬಿಜೆಪಿ ವಿರುದ್ಧ ಹೊಸ ಬಾಂಬ್​ ಸಿಡಿಸಿದ ಹೆಚ್​ಡಿಕೆ; ಸ್ಯಾಂಟ್ರೋ ರವಿ ಹೆಸರೇಳಿ ನಾನು ಹಿಟ್ ಅಂಡ್ ರನ್ ಅಲ್ಲ ಎಂದ ಮಾಜಿ ಸಿಎಂ

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

ಬಾಂಬೆಗೆ ಶಾಸಕರನ್ನು ಮೋಜು ಮಸ್ತಿ ಮಾಡಲು ಸ್ಯಾಂಟ್ರೋ ರವಿ ಕರೆದೊಯ್ದಿದ್ದ. ಇಲ್ಲಿಂದ 12 ಮಂದಿ ಹೆಣ್ಣುಮಕ್ಕಳನ್ನೂ ಬಾಂಬೆಗೆ ಕರೆದೊಯ್ದಿದ್ದರು ಅಂತ ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ. ಆಪರೇಷನ್ ಕಮಲದ (Operation Kamala) ವೇಳೆ ಬಾಂಬೆಯ ರೆಸಾರ್ಟ್​​ನಲ್ಲಿ (Resort Politics) ಶಾಸಕರು ಇದ್ದ ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ. ಬಾಂಬೆ ರೆಸಾರ್ಟ್​​ನಲ್ಲಿದ್ದವರಿಗೆ ಸ್ಯಾಂಟ್ರೋ ರವಿ ಪರಿಚಯ ಇದೆ ಅಂತ ಹೇಳಿದ್ದಾರೆ. ಬಾಂಬೆಗೆ (Mumbai) ಶಾಸಕರನ್ನು ಮೋಜು ಮಸ್ತಿ ಮಾಡಲು ಸ್ಯಾಂಟ್ರೋ ರವಿ ಕರೆದೊಯ್ದಿದ್ದ. ಇಲ್ಲಿಂದ 12 ಮಂದಿ ಹೆಣ್ಣುಮಕ್ಕಳನ್ನೂ ಬಾಂಬೆಗೆ ಕರೆದೊಯ್ದಿದ್ದರು ಅಂತ ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.


  ಬಾಂಬೆ ರೆಸಾರ್ಟ್​ ಪಾಲಿಟಿಕ್ಸ್​​ ಬಗ್ಗೆ ಸ್ಪೋಟಕ ಹೇಳಿಕೆ


  ಬೆಂಗಳೂರಿನ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಈ ರಾಜ್ಯ ಬಿಜೆಪಿಯಿಂದ ಉಳಿಯಲು ಸಾಧ್ಯನಾ? ಸ್ಯಾಂಟ್ರೋ ರವಿ ಜೊತೆ ಯಾವ ಮಂತ್ರಿ ಗಳ ಸಂಪರ್ಕ ಇಲ್ಲ ಅಂತಾ ಹೇಳಿ? ಈ ಬಗ್ಗೆ ಸಿಎಂ ಬೊಮ್ಮಾಯಿ ಸತ್ಯ ಹೊರಗೆ ಇಡ್ತೀರಾ ಅಂತ ಪ್ರಶ್ನಿಸಿದ್ದಾರೆ.


  ತನಿಖೆ ನಡೆಸುವಂತೆ ಸಿಎಂ ಬೊಮ್ಮಾಯಿ ಸವಾಲ್


  ನಾನು ಇಲ್ಲಿವರೆಗೂ ಬಾಯಿ ಮುಚ್ಚಿಕೊಂಡಿದ್ದೆ, ನಾನು ಏನು ಹಿಟ್ ಅಂಡ್ ರನ್ ಅಲ್ಲ. ಈ ಸ್ಯಾಂಟ್ರೋ ರವಿಯನ್ನು ಇಟ್ಟುಕೊಂಡು ಆ ಹೆಣ್ಣು ಮಕ್ಕಳು ಕರೆದುಕೊಂಡು ಹೋಗಿದ್ದೀರಿ ಅಲ್ವಾ, ಇದರ ಬಗ್ಗೆ ತನಿಖೆ ಮಾಡಿಸಿರಿ ಎಂದು ಸಿಎಂ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು. ಅಲ್ಲದೇ ಸ್ಯಾಂಟ್ರೋ ರವಿ ಜೊತೆಗಿನ ಬಿಜೆಪಿ ನಾಯಕರ ಇರುವ ಫೋಟೋ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.
  ಬಿಜೆಪಿ ನಾಯಕರಿಗೆ ಸ್ಯಾಂಟ್ರೋ, ಆಡಿ, ಜಾಗ್ವಾರ್ ಥರದವರೇ ಕಾಣ್ತಾರೆ


  ನ್ಯೂ ಇಯರ್​ ಪಾರ್ಟಿ ಆಯ್ತು ಅಲ್ವಾ? ಅವಾಗ ಎಷ್ಟು ಡ್ರಗ್ಸ್ ಸಪ್ಲೈ ಆಗಿದೆ ಹೇಳಿ? ಇದು ಇವರ ಅಧಿಕಾರದಲ್ಲಿ ನಡೆಯುತ್ತಿರುವ ಆಡಳಿತ. ಪೊಲೀಸರನ್ನು ಮಾರಾಟದ ವಸ್ತುಗಳಾಗಿ ಮಾಡಿಕೊಂಡಿದ್ದಾರೆ. ಬಿಜೆಪಿ ನಾಯಕರಿಗೆ ಸ್ಯಾಂಟ್ರೋ, ಆಡಿ, ಜಾಗ್ವಾರ್ ಥರದವರೇ ಕಾಣ್ತಾರೆ ಎಂದು ವ್ಯಂಗ್ಯವಾಡಿದರು. ರಾಜ್ಯ ರಕ್ಷಣೆ ಇವರಿಂದ ಸಾಧ್ಯಾನಾ? ಅಮಿತ್ ಶಾ ಬಂದು ಈ ರಾಜ್ಯ ರಕ್ಷಣೆ ಮಾಡ್ತಾರಾ ಎಂದು ಪ್ರಶ್ನಿಸಿದರು.


  ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿದ ಕುಮಾರಸ್ವಾಮಿ


  ಸಿಎಂ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಾಯಿ ಮರಿ ತರ ಗಡಗಡ ಅಂತ ನಡುಗುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿದ ಕುಮಾರಸ್ವಾಮಿ ಅವರು, ಅವರು ಹಾಗೇ ಅಂತಾ ಸಿದ್ದರಾಮಯ್ಯಗೆ ಇವಾಗ ಗೊತ್ತಾಗಿದೆ. ನಾನು ಯಾವತ್ತೋ ಈ ಮಾತನ್ನು ಹೇಳಿದ್ದೀನಿ ಎಂದರು.


  ಇದನ್ನೂ ಓದಿ: JDS Pancharatna Yatra: ಎಲ್ಲಾ ವಿರೋಧಿಗಳ ಷಡ್ಯಂತ್ರಕ್ಕೆ ನಾನು ಬಲಿಯಾದೆ; ಲೋಕ ಸೋಲು ಸ್ಮರಿಸಿದ ನಿಖಿಲ್ ಕುಮಾರಸ್ವಾಮಿ


  ಆರೋಪಿ ಗೋಪಿ ಮೂಲಕ 50-60 ಕೋಟಿ ರೂಪಾಯಿ ಸಂಗ್ರಹ


  ಇನ್ನು, ಉದ್ಯಮಿ ಪ್ರದೀಪ್ ಆತ್ಮಹತ್ಯೆ ಕೇಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪೊಲೀಸ್ ಇಲಾಖೆಯಲ್ಲಿ ಆರೋಪಿ ಗೋಪಿ ಮೂಲಕ 50-60 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಅರವಿಂದ ಲಿಂಬಾವಳಿ ಸಚಿವರಾಗಿದ್ದಾಗ ಬಿಲ್ಡರ್ ಗಳ ಬಳಿ ನಂಬರ್ ಒನ್ ಮತ್ತು ನಂಬರ್ ಟೂ ಗೆ ಇಂತಿಷ್ಟು ಪರ್ಸೆಂಟೇಜ್ ಸಂಗ್ರಹ ಮಾಡ್ತಿದ್ದರು.


  ಯಾರು ಆ ನಂಬರ್ ಒನ್ ಮತ್ತು ನಂಬರ್ ಟೂ? ಈಗ ಯಾಕೆ ಸಚಿವ ಸ್ಥಾನದಿಂದ ಲಿಂಬಾವಳಿಯನ್ನ ತೆಗೆದರು? ಅಮಿತ್ ಶಾ ಬಂದು ರಾಜ್ಯ ಉದ್ಧಾರ ಮಾಡ್ತಾರಾ? ಬಿಜೆಪಿ ನಾಯಕರು ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗ್ತಿದಾರೆ? ಪೊಲೀಸ್​ ಇನ್ಸ್​​ಪೆಕ್ಟರ್​ ಹುದ್ದೆಗೆ ಒಂದು ಕೋಟಿ ರೂಪಾಯಿ ನಡೆಯುತ್ತಿದೆ. ಸ್ಯಾಂಟ್ರೋ ರವಿ ಹಿಂದೆ ದೊಡ್ಡ ಇತಿಹಾಸ ಇದೆ ಎಂದು ತಿಳಿಸಿದರು.


  ಇದನ್ನೂ ಓದಿ: JDS Pancharatna Yatra: 33 ದಿನ 500ಕ್ಕೂ ಹೆಚ್ಚು ಕ್ರೈನ್ ಹಾರ; ಮಾಜಿ ಸಿಎಂ ಹೆಚ್​ಡಿಕೆ ಹೆಸರಿಗೆ ಏಷ್ಯಾ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್!


  ದಶಪಥ ರಸ್ತೆಗೆ ಯಾವ ಹೆಸರಾದರೂ ಇಟ್ಟುಕೊಳ್ಳಲಿ


  ಬೆಂಗಳೂರು-ಮೈಸೂರು ದಶಪಥ ರಸ್ತೆಯ ವೈಮಾನಿಕ ಸಮೀಕ್ಷೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ದಶಪಥ ರಸ್ತೆ ಕಾಮಗಾರಿಗೆ ಚಾಲನೆ ಕೊಟ್ಟಿದ್ದು ನಾನು, ಒಂಭತ್ತು ಸಭೆ ಮಾಡಿ ಕೆಲಸಕ್ಕೆ ಚಾಲನೆ ಕೊಟ್ಟಿದ್ದೆ. ಶಪಥ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನೂರಾರು‌ ಕೋಟಿ ಅವ್ಯವಹಾರ ಆಗಿದೆ. ಈ ಅವ್ಯವಹಾರ ಬಗ್ಗೆ ಜೆಡಿಎಸ್ ಸರ್ಕಾರ ಬಂದರೇ ತನಿಖೆ ಮಾಡಿಸುತ್ತೇವೆ.


  ದಶಪಥ ರಸ್ತೆಯ ನಿರ್ಮಾಣದಲ್ಲಿ ಕುಮಾರಸ್ವಾಮಿ, ರೇವಣ್ಣ ಪಾತ್ರವೂ ಜಾಸ್ತಿ ಇದೆ. ಈಗ ಬಂದು ವೈಮಾನಿಕ ಸಮೀಕ್ಷೆ ಮಾಡೋದು ದೊಡ್ಡದಲ್ಲ. ದಶಪಥ ರಸ್ತೆಗೆ ಯಾವ ಹೆಸರಾದರೂ ಇಟ್ಟುಕೊಳ್ಳಲಿ ಬಿಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  Published by:Sumanth SN
  First published: