• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Preetham J Gowda: ಜೆಡಿಎಸ್‌ಗೆ ಟಕ್ಕರ್‌ ಹೊಡೆದು ಮತ್ತೊಮ್ಮೆ ಎಂಎಲ್‌ಎ ಆಗುವ ನಿರೀಕ್ಷೆಯಲ್ಲಿದ್ದಾರೆ ಪ್ರೀತಂ ಜೆ ಗೌಡ!

Preetham J Gowda: ಜೆಡಿಎಸ್‌ಗೆ ಟಕ್ಕರ್‌ ಹೊಡೆದು ಮತ್ತೊಮ್ಮೆ ಎಂಎಲ್‌ಎ ಆಗುವ ನಿರೀಕ್ಷೆಯಲ್ಲಿದ್ದಾರೆ ಪ್ರೀತಂ ಜೆ ಗೌಡ!

ಹಾಸನ, ಶಾಸಕ ಪ್ರೀತಂಗೌಡ

ಹಾಸನ, ಶಾಸಕ ಪ್ರೀತಂಗೌಡ

ಮತ್ತೊಮ್ಮೆ ಎಂಎಲ್‌ಎ ಆಗುವ ಹಂಬಲದಲ್ಲಿ ಇರುವ ಬಿಜೆಪಿಯ ಯುವ ಹಾಗೂ ಕ್ರಿಯಾಶೀಲ ರಾಜಕಾರಣಿ ಪ್ರೀತಂ ಗೌಡ ಅವರ ಕುರಿತ ರಾಜಕೀಯ ಜೀವನದ ವಿವರ ಇಲ್ಲಿದೆ.

 • Share this:

Karnataka Assembly Election 2023: ಎಚ್‌.ಡಿ. ರೇವಣ್ಣ ಮತ್ತು ಜೆಡಿಎಸ್‌ ಪ್ರಾಬಲ್ಯ ಹೊಂದಿರುವ ಹಾಸನದಲ್ಲಿ ಕಳೆದ ಬಾರಿ ಬಿಜೆಪಿ (BJP) ಅಭ್ಯರ್ಥಿ ಗೆದ್ದು, ಕೇಸರಿ ಧ್ವಜ ಹಾರಿಸಿದ್ದರು. ಈ ಬಾರಿಯು ಕೂಡ ಅದೇ ಹಾಸನ ಕ್ಷೇತ್ರದಿಂದ ವಿಜೇತ ಪ್ರೀತಂ ಜೆ.ಗೌಡ (Preetham J Gowda) ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಶಾಸಕ, ಯುವ ಹಾಗೂ ಕ್ರಿಯಾಶೀಲ ರಾಜಕಾರಣಿ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.


ಪ್ರೀತಂ ಜೆ. ಗೌಡ


ನವೆಂಬರ್ 4, 1981 ರಲ್ಲಿ ಜನಿಸಿದ ಪ್ರೀತಂ ಜೆ. ಗೌಡ ರಾಜಕೀಯದಲ್ಲಿ ಪಳಗುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಭದ್ರಕೋಟೆ ಎನಿಸಿಕೊಂಡಿದ್ದ ಜಿಲ್ಲೆಯಲ್ಲಿ ಕಮಲದ ಬಾವುಟ ಹಾರಿಸಿ ಹಾಸನ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ತಮ್ಮ ಇಷ್ಟು ವರ್ಷದ ಶಾಸಕ ಅಧಿಕಾರಾವಧಿಯಲ್ಲಿ ಮೇಧಾವಿ ರಾಜಕಾರಣಿ ಎಂಬುದನ್ನು ಚಿಕ್ಕ ವಯಸ್ಸಿನಲ್ಲಿಯೇ ನಿರೂಪಿಸಿದ್ದಾರೆ.


ಇದನ್ನೂ ಓದಿ: Mohiuddin Bava: ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ‘ತೆನೆ’ ಹಿಡಿದ ಮೊಯ್ದೀನ್ ಬಾವ! ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ!


ರಾಜಕೀಯ ಜೀವನ


ಯುವ ಹಾಗೂ ಕ್ರಿಯಾಶೀಲ ಅಭ್ಯರ್ಥಿ ಪ್ರೀತಂ ಗೌಡ ಹಾಸನ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಮೂಲಕ ರಾಜಕೀಯ ವಲಯವನ್ನೇ ಕಳೆದ ಬಾರಿ ಚುನಾವಣೆಯಲ್ಲಿ ನಿಬ್ಬೆರಗಾಗಿಸಿದ್ದರು. ಶಿರಾ ಹಾಗೂ ಕೆ. ಆರ್‌. ಪೇಟೆ ಉಪ ಚುನಾವಣೆ ಸಂದರ್ಭದಲ್ಲಿ ಪಕ್ಷ ವಹಿಸಿದ್ದ ಜವಾಬ್ದಾರಿ ಹೊತ್ತು ಸಮರ್ಥವಾಗಿ ನಿಭಾಯಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.


ಶಾಸಕ ಪ್ರೀತಂ ಜೆ.ಗೌಡ ಶಾಸಕನಾಗಿರುವ ಕಾರಣ, ಈ ವರ್ಷದ ಈ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದರು. ಪಕ್ಷಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮೆಚ್ಚಿ ಮತ್ತು ಕಳೆದ ಗೆಲುವನ್ನೇ ಮುಂದುವರೆಸುವ ಭರವಸೆಯಲ್ಲಿ ಬಿಜೆಪಿ ವರಿಷ್ಠರು ಮತ್ತೆ ಈ ಬಾರಿ ಟಿಕೆಟ್‌ ನೀಡಿದ್ದಾರೆ.


ನಾಮಪತ್ರ ಸಲ್ಲಿಕೆ ವೇಳೆ ಶಕ್ತಿ ಪ್ರದರ್ಶನ


ನಾಮಪತ್ರ ಸಲ್ಲಿಕೆ ವೇಳೆ ಜನಬಲ ಪ್ರದರ್ಶಿಸಿದ ಶಾಸಕ ಪ್ರೀತಂ ಗೌಡ, ಸುಮಾರು 50 ಸಾವಿರ ಜನರೊಂದಿಗೆ ನಾಮಪತ್ರಕ್ಕೂ ಮುನ್ನ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು.


ಬೆಳಗ್ಗೆ 9 ಗಂಟೆಗೆ ನಗರದ ಸಾಲಗಾಮೆ ರಸ್ತೆಯ ಜಿಲ್ಲಾ ಕ್ರೀಡಾಂಗಣ ಎದುರು ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ಹಾಸನ ವಿಧಾನಸಭಾ ಕ್ಷೇತ್ರದ ನಗರ ಹಾಗೂ ನಾನಾ ಗ್ರಾಮಗಳಿಂದ ಬಂದಿದ್ದ ಪ್ರೀತಂ ಗೌಡರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು, ಅಲ್ಲಿಂದ ನಗರದ ಎನ್.ಆರ್. ವೃತ್ತದವರೆಗಿನ ಮೆರವಣಿಗೆ ನಡೆಸಿದರು. ಯುವಕರು, ಮಹಿಳೆಯರು ಸೇರಿ ಸಾವಿರಾರು ಮಂದಿ ಭಾಗಿಯಾಗಿದ್ದರು.


ಇದನ್ನೂ ಓದಿ: N Cheluvarayaswamy: JDS ಭದ್ರಕೋಟೆಯಲ್ಲಿ ಕಮಾಲ್‌ ಮಾಡುತ್ತಾ ʻಕೈʼ ಪಡೆ? ಗೆಲುವಿನ ನಿರೀಕ್ಷೆಯಲ್ಲಿ ಚೆಲುವರಾಯ ಸ್ವಾಮಿ!


ಜೆಡಿಎಸ್‌ ಜೊತೆ ನೇರ ಪೈಪೋಟಿ


ಬಿಜೆಪಿ ಶಾಸಕ ಪ್ರೀತಂ ಗೌಡ ಮತ್ತು ಸಂಸದ ಪ್ರಜ್ವಲ್‌ ವಿರುದ್ಧ ಯಾವಾಗಲೂ ಗುದ್ದಾಟ ನಡೆಯುತ್ತಲೇ ಇರುತ್ತದೆ. ಜೆಡಿಎಸ್‌ ಅನ್ನು ನೇರ ಪ್ರತಿಸ್ಪರ್ಧೆ ಎನ್ನುವ ಪ್ರೀತಂ ಈ ಬಾರಿಯೂ ತೆನೆಹೊತ್ತ ಪಕ್ಷವನ್ನು ಧೂಳಿಪಟ ಮಾಡುವ ಹಂಬಲದಲ್ಲಿದ್ದಾರೆ.


ಹಾಸನ ವಿಮಾನ ನಿಲ್ದಾಣ ಕಾಮಗಾರಿ ವಿವಾದ ಸೇರಿದಂತೆ ಜೆಡಿಎಸ್‌ ತೆಗೆಯುವ ಎಲ್ಲ ತಕರಾರಿಗೂ ಸಮರ್ಥವಾಗಿ ಟಾಂಗ್‌ ನೀಡುತ್ತಲೇ ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಳ್ಳುತ್ತಲೇ ಬಂದಿದ್ದಾರೆ.


2018 ರಲ್ಲೂ ಜಯ


2018 ರಲ್ಲಿ ಭಾರತೀಯ ಜನತಾ ಪಾರ್ಟಿಯ ಜೆ ಪ್ರೀತಮ್ ಗೌಡ ಗೆಲುವು ಸಾಧಿಸಿದ್ದರು. ಜನತಾ ದಳ (ಜಾತ್ಯತೀತ)ಯ ಎಚ್. ಎಸ್ ಪ್ರಕಾಶ್ 13006 ಮತಗಳ ಅಂತರದಿಂದ ಪ್ರೀತಂ ವಿರುದ್ಧ ಸೋಲನ್ನು ಅನುಭವಿಸಿದ್ದರು. ಈ ಬಾರಿ ಅಗಿಲೆ ಯೊಗೀಶ್ (ಎಎಪಿ) ಬನವಾಸಿ ರಂಗಸ್ವಾಮಿ (ಕಾಂಗ್ರೆಸ್)‌ ಜೊತೆ ಜೆ.ಪ್ರೀತಮ್‌ ಗೌಡ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

top videos


  ಬಿಜೆಪಿಯಿಂದ ಮತ್ತೊಮ್ಮೆ ಎಂಎಲ್‌ಎ ಆಗಲು ಬಯಸುತ್ತಿರುವ ಪ್ರೀತಂ ಗೌಡರನ್ನು ಗೆಲ್ಲಿಸ್ತಾರೋ ಇಲ್ಲವೋ ಎಂಬುದಕ್ಕೆ ಚುನಾವಣೆ ನಡೆದ ಮೂರೇ ದಿನಕ್ಕೆ ಉತ್ತರ ಸಿಗಲಿದೆ.

  First published: