ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು (Election Commission) ಕರ್ನಾಟಕದ (Karnataka) 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕವನ್ನು (Election Date) ಘೋಷಣೆ ಮಾಡಿದ ಬೆನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ್ದಾರೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮೇ 10 ರಂದು ಮತದಾನ (Voting) ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ನಿಮ್ಮ ಭವಿಷ್ಯವನ್ನು ನೀವೇ ಬರೆಯುವ ದಿನ
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್, ಮೇ 10 ಕೇವಲ ಚುನಾವಣೆ ದಿನ ಅಲ್ಲ, ಭ್ರಷ್ಟಾಚಾರವನ್ನು ಕಿತ್ತು ಹಾಕುವ ದಿನ. ಹೊಸ ನಾಡನ್ನು ಕಟ್ಟುವ ದಿನ. ನವ ಕರ್ನಾಟಕವನ್ನ ಕಟ್ಟುವ ದಿನ. ನಿಮ್ಮ ಭವಿಷ್ಯವನ್ನು ನೀವೇ ಬರೆಯುವ ದಿನ. ಬರಲಿದೆ ಕಾಂಗ್ರೆಸ್ ಪಕ್ಷ, ತರಲಿದೆ ಅಭಿವೃದ್ಧಿಯನ್ನು. ಡಬಲ್ ಇಂಜಿನ್ ರಾಜ್ಯದಲ್ಲಿ ಫೇಲ್ ಆಗಿದೆ ಎಂದು ಆರೋಪಿಸಿದರು.
ನಾವು ಚುನಾವನಣೆ ಘೋಷಣೆಗೂ ಮುನ್ನವೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವು. ಗುಜರಾತ್ ನಲ್ಲಿ ಬಳಕೆಯಾದ ಇವಿಎಂ ನಮಗೆ ಬೇಡ ಅಂತ ಪತ್ರದಲ್ಲಿ ತಿಳಿಸಿದ್ದೇವು. ಸದ್ಯ ಹೊಸ ಇವಿಎಂ ರಾಜ್ಯಕ್ಕೆ ತಂದಿದ್ದೀವೆ ಅಂತಾ ಚುನಾವಣೆ ಆಯುಕ್ತರು ಹೇಳಿದ್ದಾರೆ. ಇದಕ್ಕೆ ನಾವು ಧನ್ಯವಾದ ತಿಳಿಸುತ್ತೇವೆ. ರಾಜ್ಯ ಚುನಾವಣೆ ಆಯೋಗದ ಅಧಿಕಾರಿಗಳು ಹೇಳಿದ್ದು, ಮತದಾನಕ್ಕೂ ಮುನ್ನ ನಮ್ಮ ಏಜೆಂಟಗಳಿಂದ 50 ವೋಟ್ ಹಾಕಿಸಿ ಚೆಕ್ ಮಾಡುತ್ತೇವೆ. ಬಳಿಕ ಮತದಾನಕ್ಕೆ ಅವಕಾಶ ಕಲ್ಪಿಸುತ್ತೇವೆ ಅಂತ ಹೇಳಿದ್ದಾರೆ ನೋಡೋಣ ಏನಾಗುತ್ತೆ ಅಂತ ಹೇಳಿದರು.
ಇನ್ನು, ಏಪ್ರಿಲ್ 5 ರಂದು ಕೋಲಾರದಲ್ಲಿ ಸತ್ಯಮೇವ ಜಯತೆ ಸಮಾವೇಶ ನಡೆಯಲಿದೆ. ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲು ಕಾರಣವಾದ ಹೇಳಿಕೆ ನೀಡಿದ ಸ್ಥಳದಿಂದಲೇ ಬೃಹತ್ ಹೊರಟ ನಡೆಸಲಾಗುತ್ತದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ