ಬೆಂಗಳೂರು: ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಅವರು ಪೊಲೀಸರಿಗೆ ಧಮ್ಕಿ ಹಾಕಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ಬೆಂಗಳೂರಿನ (Bengaluru) ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಡಿ ಕೆ ಸುರೇಶ್ ಪೊಲೀಸರಿಗೆ (Police) ಆವಾಜ್ ಹಾಕಿದ್ದು, ಬೊಮ್ಮನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಪರ ಪ್ರಚಾರದ ವೇಳೆ ಘಟನೆ ನಡೆದಿದೆ. ಬೊಮ್ಮನಹಳ್ಳಿ (Bommanahalli ) ಕ್ಷೇತ್ರದ ಹೊಂಗಸಂದ್ರದಲ್ಲಿ ಪ್ರಚಾರದ ವೇಳೆ ಘಟನೆ ನಡೆದಿದ್ದು, ಸ್ಥಳೀಯರ ಮೊಬೈಲ್ (Mobile)ನಲ್ಲಿ ವಿಡಿಯೋ ಸೆರೆಯಾಗಿದೆ. ವಿಡಿಯೋದಲ್ಲಿ ಸಂಸದರು ಮೈಕ್ ಹಿಡಿದು ಪೊಲೀಸರಿಗೆ ಕರೆದು ವಾಹನ ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಏಕವಚನದಲ್ಲಿ ಆವಾಜ್ ಹಾಕಿದ್ದಾರೆ. ಸುರೇಶ್ ಅವರ ಮಾತುಗಳನ್ನು ಕೇಳುತ್ತಿದ್ದಂತೆ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೂಗಾಟ ನಡೆಸಿ ಸಂಭ್ರಮಾಚರಣೆ ಮಾಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
ವಿಡಿಯೋದಲ್ಲಿ ಏನಿದೆ?
ಸಂಸದ ಡಿಕೆ ಸುರೇಶ್ ಅವರು ಪೊಲೀಸ್ ಅಧಿಕಾರಿಗೆ ಕರೆದು ಸೂಚನೆ ನೀಡಿರುವ ಸಂದರ್ಭದಲ್ಲಿ ಏಕವಚನದಲ್ಲೇ ಧಮ್ಕಿ ಹಾಕಿದ್ದಾರೆ. ಹೇ ಇಲ್ಲೊಡಯ್ಯ ಇಲ್ಲಿ, ಸಬ್ ಇನ್ಸ್ಪೆಕ್ಟರಾ? ಸರ್ಕಲ್ ಇನ್ಸ್ಪೆಕ್ಟರಾ ಇರೋದು? ಹೇ.. ಹೇ.. ಹೇ ಪೊಲೀಸ್ ರಸ್ತೆಗೆ ಅಡ್ಡ ಹಾಕಿ ನಿಂತು ಬಿಡ್ತಿನಿ ಹುಷಾರ್ ಆಗಿರು. ಎತ್ತಂಗಡಿ ಆದರೆ ನೀನು ಆಗೋದು ನನಗೆ ಏನು ಇಲ್ಲ. ಜಾಗ ಬಿಟ್ಟುಕೊಟ್ಟು ಪ್ರಚಾರ ನಡೆಸಲು ನಾವು ಬಂದಿದ್ದೇವಾ? ಕ್ಯಾನ್ವಸ್ ಮಾಡೋಕೆ ಅಡ್ಡ ಹಾಕುತ್ತೀಯಾ? ಸಾರ್ವಜನಕರಿಗೆ ತೊಂದರೆ ಆಗಬಾರದು ಅಂತ ನಾವು ಮಾಡುತ್ತಿದ್ದೇವೆ, ಆದರೆ ಇವರದ್ದೇ ಇಲ್ಲಿ ರಾಜಕೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇನ್ನು, ಡಿಕೆ ಸುರೇಶ್ ಆವಾಜ್ಗೆ ಪೊಲೀಸರು ತಬ್ಬಿಬ್ಬಾಗಿದ್ದು, ಸುರೇಶ್ ಆವಾಜ್ ಹಾಕುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರಿಂದ ಜೈಕಾರ ಹಾಕಿದ್ದಾರೆ. ನಿನ್ನೆ ಸಂಜೆ ಘಟನೆ ನಡೆದಿದ್ದು, ಪ್ರಚಾರದ ರ್ಯಾಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಆಗದಂತೆ ವಾಹನಗಳ ಡೈವರ್ಟ್ ಮಾಡುತ್ತಿದ್ದ ಪೊಲೀಸರಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ.
ಡಿಕೆ ಶಿವಕುಮಾರ್ ವಿಡಿಯೋ ವೈರಲ್!
ಕಳೆದ ಕೆಲ ದಿನಗಳ ಹಿಂದೆಯೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೂಡ ಪೊಲೀಸರ ವಿರುದ್ಧ ಅಸಮಾಧಾನ ಹೊರ ಹಾಕಿ ಧಮ್ಕಿ ಹಾಕಿದ್ದರು. ಬೆಂಗಳೂರಿನ ಯಲಹಂಕದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇಶವ ಬಿ. ರಾಜಣ್ಣ ಪರ ಡಿಕೆ ಶಿವಕುಮಾರ್ ಪ್ರಚಾರಕ್ಕೆ ಆಗಮಿಸಿದ್ದರು.
ಈ ವೇಳೆ ಡಿಕೆಶಿ ಪೊಲೀಸರಿಗೆ ಆವಾಜ್ ಹಾಕಿದ್ದರು. “ಇನ್ನು 15 ದಿನದಲ್ಲಿ ಈ ಸರ್ಕಾರ ರಾಜ್ಯದಲ್ಲಿ ಇರೋದಿಲ್ಲ. ಅದಾದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆಗ ನಿಮಗೆ ಏನ್ ಶಿಕ್ಷೆ ಕೊಡಬೇಕೋ ಅದಕ್ಕೆ ಕಾಂಗ್ರೆಸ್ ಬದ್ಧವಾಗಿರುತ್ತೆ” ಅಂತ ವಾರ್ನಿಂಗ್ ನೀಡಿದ್ದರು. ಪೊಲೀಸರಿಗೆ ಡಿಕೆ ಶಿವಕುಮಾರ್ ಆವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ