ಕರ್ನಾಟಕದ ಕಿತ್ತೂರು ಕರ್ನಾಟಕ ಪ್ರದೇಶ ಮತ್ತು ವಿಧಾನಸಭಾ ಕ್ಷೇತ್ರವಾದ ಧಾರವಾಡವು ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದ್ದು, ಇದನ್ನು ಅರೆ ನಗರ (Sub Urban) ಪ್ರದೇಶವೆಂದು ವಿಂಗಡಿಸಲಾಗಿದೆ. ವಿದ್ಯಾ ಕಾಶಿ ಎಂದು ಖ್ಯಾತಿ ಗಳಿಸಿರುವ ಧಾರವಾಡದಲ್ಲಿ (Dharwad) ಈ ಬಾರಿಯ ವಿಧಾನಸಭಾ ಚುನಾವಣೆಯ ಹವಾ ಜೋರಾಗಿದೆ. ಮನೆ ಮನೆ ಪ್ರಚಾರ ಕೈಗೊಂಡ ಪ್ರತಿಯೊಬ್ಬ ಅಭ್ಯರ್ಥಿಗಳು ಮತಬೇಟೆಯಲ್ಲಿ ನಿರತರಾಗಿದ್ದಾರೆ. ಬಿಸಿಲು ಲೆಕ್ಕಿಸದೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು ಪ್ರಚಾರ (Campaign) ಕೈಗೊಳ್ಳುತ್ತಿದ್ದಾರೆ.
ಪ್ರತಿ ಬಾರಿಯೂ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ಬೀಳಲಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅಮೃತ್ ಅಯ್ಯಪ್ಪ ದೇಸಾಯಿ ಅವರು ಜಯಶೀಲರಾಗಿದ್ದರು. ಈ ಬಾರಿಯೂ ಜಯಗಳಿಸುವುದಾಗಿ ಪಣತೊಟ್ಟಿರುವ ಅಮೃತ್ ದೇಸಾಯಿ ಅವರು ಜನಪರ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಈ ಮೊದಲು ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ಅಮೃತ್ ದೇಸಾಯಿ ಅವರು, 2013ರ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಸೋತಿದ್ದರು. ಇನ್ನು 2018ರಲ್ಲಿ ಬಿಜೆಪಿ ಸೇರ್ಪಡೆಗೊಂಡು ವಿನಯ್ ಕುಲಕರ್ಣಿ ಅವರನ್ನು ಸುಮಾರು 20 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
ಇದನ್ನೂ ಓದಿ:Karnataka Election 2023: ಈ ಬಾರಿ ಬಿಜೆಪಿ 150 ಸ್ಥಾನ ಪಡೆದು ಅಧಿಕಾರಕ್ಕೆ ಬರುತ್ತೆ: ನಳಿನ್ ಕುಮಾರ್ ಕಟೀಲ್
2023ರ ಚುನಾವಣೆಯಲ್ಲೂ ಸ್ಪರ್ಧೆಗಿಳಿದಿರುವ ಬಿಜೆಪಿ ಅಭ್ಯರ್ಥಿಯಾಗಿರುವ ಇವರು ಮನೆ ಮನೆ ಪ್ರಚಾರ ಕೈಗೊಂಡಿದ್ದು, ಬಿಜೆಪಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಅಮೃತ್ ಅಯ್ಯಪ್ಪ ದೇಸಾಯಿ ಅವರ ಊರು, ಶಿಕ್ಷಣ, ರಾಜಕೀಯ ಬದುಕು, ಯಾರ ವಿರುದ್ಧ ಕಣಕ್ಕಿಳಿದಿದ್ದಾರೆ, ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆಯೇ ಹೀಗೆ ಅನೇಕ ಮಾಹಿತಿಗಳು ಇಲ್ಲಿದೆ.
ವೈಯಕ್ತಿಕ ಜೀವನ
ಅಮೃತ್ ಅಯ್ಯಪ್ಪ ದೇಸಾಯಿ ಅವರು ಧಾರವಾಡ ಜಿಲ್ಲೆಯ ಗರಗದ ಹಂಗರ್ಕಿ ಎಂಬಲ್ಲಿ ಜೂನ್ 20 1977ರಲ್ಲಿ ಜನಿಸಿದರು. ತಂದೆ ಅಯ್ಯಪ್ಪ ದೇಸಾಯಿ. ಇವರು ಒಂದರಿಂದ 8ನೇ ತರಗತಿಯವರೆಗೆ ಧಾರವಾಡದ ಕೆ.ಇ ಬೋರ್ಡ್ ಶಾಲೆಯಲ್ಲಿ, 1993ರಲ್ಲಿ 9ನೇ ತರಗತಿಯಿಂದ ಎಸ್‍ಎಸ್‍ಎಲ್‍ಸಿವರೆಗೆ ಆಲೂರು ವೆಂಕಟರಾವ್ ಸ್ಮಾರಕ ಪ್ರೌಢಶಾಲೆಯಲ್ಲಿ ಓದಿದರು. ಇನ್ನು ಪಿಯುಸಿ ಮತ್ತು ಬಿ.ಕಾಂ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಡೆದುಕೊಂಡಿದ್ದಾರೆ. ಪತ್ನಿ ಹೆಸರು ಪ್ರಿಯಾ ಅಮೃತ ದೇಸಾಯಿ.
ರಾಜಕೀಯ ಪಯಣ
2018ರಿಂದ ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಗೆಲುವನ್ನು ಸಾಧಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಪುನಃ ಬಿಜೆಪಿಯು ಇವರಿಗೆ ಈ ಬಾರಿಯ ವಿಧಾನ ಸಭಾ ಚುನಾವಣೆಯ ಧಾರವಾಡ ಗ್ರಾಮೀಣ ಪ್ರದೇಶದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಆಸ್ತಿ ವಿವರ
ಅಮೃತ್ ಅಯ್ಯಪ್ಪ ದೇಸಾಯಿ ಅವರು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಈ ಪ್ರಯುಕ್ತ 8,58,00,000 ಆಸ್ತಿ ಘೋಷಣೆ ಮಾಡಿದ್ದಾರೆ.
ಕ್ರಿಮಿನಲ್ ಪ್ರಕರಣ
ಬಿಜೆಪಿ ಪಕ್ಷದ ಏಳಿಗೆಗಾಗಿ ಶ್ರಮಿಸುತ್ತಿರುವ ಶಾಸಕ ಅಮೃತ್ ದೇಸಾಯಿ ಅವರ ಮೇಲೆ ಇದುವರೆಗೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ.
ಇದನ್ನೂ ಓದಿ: Karnataka Election 2023: ಕೊನೆಯ ಹಂತದ ಚುನಾವಣೆ ಪ್ರಚಾರ ಯಾರಿಗೆ? ಎಷ್ಟು ನಿರ್ಣಾಯಕ?
ಈ ಬಾರಿ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳು
ಕಳೆದ ಬಾರಿ 2013 ರಿಂದ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ್ ಅಯ್ಯಪ್ಪ ದೇಸಾಯಿ ಅವರು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರನ್ನು ಸೋಲಿಸಿದ್ದರು. ಆದರೆ ಈ ಬಾರಿ ವಿನಯ್ ಕುಲಕರ್ಣಿ ಅವರು ಕ್ರಿಮಿನಲ್ ಪ್ರಕರಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ದೀಪಕ್ ಚಿಂಚೋರೆ ಅವರಿಗೆ ನೀಡಲಾಗಿದೆ. ಹಾಗಾಗಿ ಈ ಬಾರಿ ಅಮೃತ್ ಅಯ್ಯಪ್ಪ ದೇಸಾಯಿ, ದೀಪಕ್ ಚಿಂಚೋರೆ ಮತ್ತು ಮಂಜುನಾಥ್ ಲಕ್ಷ್ಮಣ್ ಹಗೇದಾರ್ ಅವರ ನಡುವೆ ಪೈಪೋಟಿ ಎದುರಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ