• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shivanagouda Nayak: ದೇವದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್‌ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

Shivanagouda Nayak: ದೇವದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್‌ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

ಶಿವನಗೌಡ ನಾಯಕ್‌

ಶಿವನಗೌಡ ನಾಯಕ್‌

ಶಾಸಕರಾಗಿ ದೇವದುರ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಸೇವೆ ಸಲ್ಲಿಸುತ್ತಿರುವ ಶಿವನಗೌಡ ನಾಯಕ್ ಅವರ ರಾಜಕೀಯ ವಿವರ ಹೀಗಿದೆ.

  • Trending Desk
  • 2-MIN READ
  • Last Updated :
  • Devadurga, India
  • Share this:

Karnataka Assembly Election 2023: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮೂರು ಪಕ್ಷಗಳು ರಣಕಹಳೆ ಮೊಳಗಿಸಿವೆ. ಅಭ್ಯರ್ಥಿಗಳಂತೂ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುರುಕಾಗುತ್ತಿದ್ದಾರೆ. ವಿರೋಧ ಪಕ್ಷಗಳ ವಿರುದ್ಧ ದಾಳಿ-ವಾಗ್ದಾಳಿ, ಅಭ್ಯರ್ಥಿಗಳ ವಿರುದ್ಧ ಕೆಸರೆರಚಾಟ, ಪ್ರಚಾರ ಭರ್ಜರಿಯಾಗಿ ನಡೆಸುತ್ತಿದ್ದಾರೆ.


ಚುನಾವಣೆ ಹೊಸ್ತಿಲಲ್ಲಿದ್ದ ಪಕ್ಷಗಳಿಗೆ ಟಿಕೆಟ್‌ ಕಗ್ಗಂಟು ದೊಡ್ಡ ತಲೆ ನೋವಾಗಿತ್ತು. ಅದರಲ್ಲೂ ಬಿಜೆಪಿಗೆ ಎಲ್ಲರನ್ನೂ ಸಮಾಧಾನ ಮಾಡಿ ಟಿಕೆಟ್‌ ಹಂಚುವುದರಲ್ಲಿ ಸುಸ್ತಾಗಿ ಬಿಟ್ಟಿತ್ತು. ಪಕ್ಷದವರ ಮಧ್ಯೆಯೇ ಪೈಪೋಟಿ ಇರುವುದರ ಜೊತೆ ಪ್ರಭಾವಿ ನಾಯಕರ ಲಾಬಿ ಬೇರೆ ಪಕ್ಷವನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದೆ.


ಇದನ್ನೂ ಓದಿ: PT Parameshwar Naik: ಹೂವಿನ ಹಡಗಲಿ ಕಾಂಗ್ರೆಸ್‍ ಅಭ್ಯರ್ಥಿ ಪಿಟಿ ಪರಮೇಶ್ವರ್ ನಾಯ್ಕ್‌ ಅವರ ರಾಜಕೀಯ ಹಾದಿ


ಶಿವನಗೌಡ ನಾಯಕ್‌ ಕಿರು ಪರಿಚಯ:


ಶಿವನಗೌಡ ನಾಯಕ್‌ (Shivanagouda Nayak) ಅವರು 14 ಜುಲೈ 2020 ರಂದು ಅರಕೇರಾ, ರಾಯಚೂರು ಜಿಲ್ಲೆಯಲ್ಲಿ ಜನಿಸಿದರು, ಅವರ ತಂದೆಯ ಹೆಸರು ಹನುಮಂತರಾಯ. ಅವರು 10ನೇ ತರಗತಿಯವರಿಗೆ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಅವರು ಭಾರತೀಯ ಜನತಾ ಪಾರ್ಟಿಯಿಂದ ಈ ಬಾರಿ ದೇವದುರ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.


ದೇವದುರ್ಗ ಕ್ಷೇತ್ರದ ಅಭ್ಯರ್ಥಿ ಶಿವನಗೌಡ ನಾಯಕ್‌:


ಪ್ರಸ್ತುತ ಶಿವನಗೌಡ ನಾಯಕ್ ಕರ್ನಾಟಕದ ದೇವದುರ್ಗ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಯಕ್ ಅವರು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕರ್ನಾಟಕ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವರೂ ಆಗಿದ್ದಾರೆ.


ಶಿವನಗೌಡ ಅವರು 2012 ರಿಂದ 2013 ರವರೆಗೆ ಕರ್ನಾಟಕದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಶಿವನಗೌಡ ಅವರು 2023 ರ ವಿಧಾನಸಭಾ ಚುನಾವಣೆಗೆ ದೇವದುರ್ಗ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.


ರಾಯಚೂರು ಜಿಲ್ಲಾ ಪಂಚಾಯತ್ ಕಚೇರಿಯ ಜಲ ನಿರ್ಮಲ ಘಟಕ ಸಭಾಂಗಣದಲ್ಲಿ ನಡೆದ ರಾಯಚೂರು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕಾಮಗಾರಿಗಳು ಉತ್ತಮ ಗುಣಮಟ್ಟದ ರೀತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕ ಕೆ.ಶಿವನಗೌಡ ‌ಸೂಚನೆ ‌ನೀಡಿದ ಸುದ್ದಿ ಈ ಹಿಂದೆ ಭಾರಿ ವೈರಲ್‌ ಆಗಿತ್ತು.


ಇದನ್ನೂ ಓದಿ: Rizwan Arshad: ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್ ಅರ್ಷದ್‌ ಅವರ ರಾಜಕೀಯ ಜೀವನ ಹೀಗಿದೆ


ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ವಿರುದ್ಧ ಶಿವನಗೌಡ ನಾಯಕ್ ವಾಗ್ದಾಳಿ:


ಇತ್ತೀಚೆಗಷ್ಟೇ ಶಿವನಗೌಡ ಅವರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸುತ್ತ ನನ್ನನ್ನು ಸೋಲಿಸುವ ಮೊದಲು ನೀನು ಗೆದ್ದು ತೋರಿಸು ಎಂದು ಕಿಡಿ ಕಾರಿದ್ದರು ಹಾಗೂ ಈ ಬಾರಿ ನಾನು ಒಂದು ವರೆ ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿಕೊಂಡಿದ್ದರು.


ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿಗೆ ಒಬ್ಬರಲ್ಲ, ಏಳು ಜನ ಹೆಂಡತಿಯರು ಇದ್ದಾರೆ, ತಮ್ಮ ಕುಟುಂಬದ ಸಮಸ್ಯೆಯನ್ನೇ ಸರಿಪಡಿಸಿಕೊಳ್ಳಲು ಆಗದ ಕುಮಾರಸ್ವಾಮಿ, ಶಿವನಗೌಡ ನಾಯಕ್​​​ನನ್ನು ಸೋಲಿಸುತ್ತಾನಂತೆ ಅಂತ ವ್ಯಂಗ್ಯವಾಗಿ ಕಿಡಿಕಾರಿದ್ದರು.


ಒಂದು ಕಡೆ ಮಗ ಸೋತ, ಇನ್ನೊಂದು ಕಡೆ ತಂದೆ ದೇವೇಗೌಡರು ಸೋತರು. ಇಷ್ಟಾದರೂ ನಿಮಗೆ ಬುದ್ದಿಯಿಲ್ಲ ಇನ್ನೊಬ್ಬರನ್ನ ಬಂದು ಸೋಲಿಸುತ್ತಾನಂತೆ. ನಿಜವಾಗಲೂ ಗಂಡಸ್ತನ ಇದ್ದರೆ ಈ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನ ಶಕ್ತಿಯನ್ನು ಸಾಬೀತು ಮಾಡಿ ತೋರಿಸು ಎಂದು ಸವಾಲು ಬೇರೆ ಹಾಕಿದ್ದರು.


ಆಸ್ತಿ ಪಾಸ್ತಿ ವಿವರಣೆ:


ತಮ್ಮ ಅಫಿಡವಿಟ್ ನಲ್ಲಿ ಶಿವನಗೌಡ ನಾಯಕ್ ಅವರು ಚರಾಸ್ತಿಗೆ ಸಂಬಂಧಿಸಿದಂತೆ 23 ಲಕ್ಷ ಆದಾಯ, 1, 75000 ನಗದು, 73 ಲಕ್ಷಕ್ಕೂ ಅಧಿಕ ಬ್ಯಾಂಕ್ ಡಿಪಾಸಿಟ್, 13 ಲಕ್ಷಕ್ಕೂ ಅಧಿಕ ಮೌಲ್ಯದ ವಿಮಾ ಇತ್ಯಾದಿ ಹೊಂದಿರುವುದಾಗಿ ಘೋಷಿಸಿದ್ದಾರೆ.


3 ಲಕ್ಷಕ್ಕೂ ಅಧಿಕ ಮೌಲ್ಯದ ವಾಹನಗಳು ಹಾಗೂ 15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಅವರು ಹೊಂದಿರುವುದಾಗಿ ಘೋಷಿಸಿದ್ದಾರೆ.

top videos
    First published: