ದಾವಣಗೆರೆ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಹೊಸ ಬಾಂಬ್ ಸಿಡಿಸಿದ್ದು, ಇತ್ತೀಚಿಗೆ ಡಿಕೆ ಶಿವಕುಮಾರ್ (DK Shivakumar) ಒಂದು ಹೋಮ ಮಾಡಿಸಿದ್ದಾರೆ. ಆ ಹೋಮದಲ್ಲಿ ಡಿಕೆ ಶಿವಕುಮಾರ್ ಸಂಕಲ್ಪ ಮಾಡಿದ್ದರು. ನನಗೆ ಬಂದ ಮಾಹಿತಿ ಪ್ರಕಾರ ಶಿವಕುಮಾರ್ ಅವರು ಸಿದ್ದರಾಮಯ್ಯ (Siddaramaiah) ಸೋಲಲಿ ಅಂತ ಸಂಕಲ್ಪ ಮಾಡಿಸಿದ್ದಾರೆ. ಇದು ನನಗೆ ಬಂದ ಇಂಟಲಿಜನ್ಸ್ (Intelligence) ಮಾಹಿತಿ, ಇದನ್ನ ನೀವು ಯಾರಿಗೆ ಹೇಳಬೇಡಿ ನಾನು ಹೇಳಲ್ಲ ಎಂದು ದಾವಣಗೆರೆಯ (Davanagere) ಚನ್ನಗಿರಿಯಲ್ಲಿ ಸಿಟಿ ರವಿ ಹೇಳಿದ್ದಾರೆ.
ಇದಕ್ಕೂ ಮುನ್ನ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ ಟಿ ರವಿ ಅವರು, ಈ ಬಾರಿ ಚುನಾವಣೆ ಬಜರಂಗ ಬಲಿ ವರ್ಸಸ್ ತಾಲಿಬಾನ್ ನಡುವಿನ ಚುನಾವಣೆ. ಬಿಜೆಪಿ ಬಜರಂಗ ಬಲಿ ಆರಾಧಿಸುತ್ತೆ, ಕಾಂಗ್ರೆಸ್ ತಾಲಿಬಾನ್ ಆರಾಧಿಸುತ್ತೆ.
ಇದನ್ನೂ ಓದಿ: Karnataka Polls 2023: ‘ನಿಮ್ಮನ್ನು ನೀವೇ ಅಪಹಾಸ್ಯ ಮಾಡಿಕೊಳ್ಳೋದನ್ನ ನಿಲ್ಲಿಸಿ’ -ಸೋನಿಯಾ ಹೇಳಿಕೆ ವಿರುದ್ಧ ಅಣ್ಣಾಮಲೈ ಕಿಡಿ
ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದವರು ತಾಲಿಬಾನ್ ಮಾನಸಿಕತೆಯ ಜನ, ಅಖಂಡ ಶ್ರೀನಿವಾಸ್ ಗೆ ಟಿಕೆಟ್ ಕೊಟ್ಟರೆ ತಾಲಿಬಾನ್ ಗಳಿಗೆ ಸಿಟ್ಟು ಬರುತ್ತೆ ಅಂತ ಅವರ ಟಿಕೆಟ್ ತಪ್ಪಿಸಿದರು. ಇವರು ಹೇಗೆ ಅಖಂಡ ಭಾರತ ನಿರ್ಮಾಣ ಮಾಡಲು ಸಾಧ್ಯ. ಅದಕ್ಕಾಗಿ ಈ ಬಾರಿಯ ಚುನಾವಣೆ ನೀತಿ ಮೇಲಿನ ಚುನಾವಣೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕಾಗಿ ತಾಲಿಬಾನ್ ಜೊತೆ ಕೈಜೋಡಿಸಿದ್ದು ಗುಟ್ಟಾಗಿ ಉಳಿದಿಲ್ಲ. ನಾನು ಸಿದ್ದರಾಮಯ್ಯಗೆ ಸುಮ್ಮನೆ ಹೆಸರಿಟ್ಟಿಲ್ಲ. ಹನುಮ ಜನ್ಮ ಭೂಮಿಯಲ್ಲಿ ಬಜರಂಗ ದಳ ಬ್ಯಾನ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಬಾಲಕ್ಕೆ ಬೆಂಕಿ ಬಿದ್ದಾಗ ಹನುಮ ಲಂಕಾ ದಹನ ಮಾಡಿದ್ದ. ಇನ್ನೂ ಹನುಮಂತನನ್ನು ಕಾಂಗ್ರೆಸ್ ತಡವಿದೆ, ಇಷ್ಟಾದ ಮೇಲೆ ಕಾಂಗ್ರೆಸ್ ಸುಡದೆ ಇದ್ದಿತೆ ಎಂದು ಪ್ರಶ್ನೆ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ