• Home
  • »
  • News
  • »
  • state
  • »
  • Karnataka Congress: 2023ರ ಚುನಾವಣೆ ಗೆಲ್ಲಲು ಕರ್ನಾಟಕ ಕಾಂಗ್ರೆಸ್​ಗೆ ಖರ್ಗೆ ದಶಸೂತ್ರ; ಸಭೆಯಲ್ಲಿ ಮಹತ್ವದ ನಿರ್ಧಾರಗಳು

Karnataka Congress: 2023ರ ಚುನಾವಣೆ ಗೆಲ್ಲಲು ಕರ್ನಾಟಕ ಕಾಂಗ್ರೆಸ್​ಗೆ ಖರ್ಗೆ ದಶಸೂತ್ರ; ಸಭೆಯಲ್ಲಿ ಮಹತ್ವದ ನಿರ್ಧಾರಗಳು

ಕಾಂಗ್ರೆಸ್ ನಾಯಕರ ಸಭೆ

ಕಾಂಗ್ರೆಸ್ ನಾಯಕರ ಸಭೆ

ರಾಜ್ಯ ಕಾಂಗ್ರೆಸ್ ಹಲವು ಜಾಥಾ, ಸಮಾವೇಶಗಳನ್ನು ಆಯೋಜಿಸಲಿದೆ. ಈ ಮೂಲಕ ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರ ನಡೆಸಲು ಪ್ಲಾನ್ ಮಾಡಿಕೊಂಡಿದೆ. ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿರುವ ಹೋರಾಟ, ಯಾತ್ರಗಳ ಪಟ್ಟಿ ಈ ಕೆಳಗಿನಂತಿದೆ

  • News18 Kannada
  • Last Updated :
  • Karnataka, India
  • Share this:

Karnataka Election 2023: ಕರ್ನಾಟಕದಲ್ಲಿ ನಾನೊಂದು ತೀರ, ನೀನೊಂದು ತೀರ ಅಂತಿದ್ದ ಕಾಂಗ್ರೆಸ್ ನಾಯಕರೆಲ್ಲಾ (Karnataka Congress Leaders) ಸೋಮವಾರ ದೆಹಲಿಯಲ್ಲಿ ಒಂದಾಗಿದ್ದರು. 2023ರ ಚುನಾವಣೆ (Election 2023) ಗೆಲ್ಲಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ರಚನೆ ಮಾಡುತ್ತಿರುವ ಚಕ್ರವ್ಯೂಹಕ್ಕೆ ರಾಜ್ಯ ನಾಯಕರು ನಿನ್ನೆಯ ಸಭೆಯಲ್ಲಿ ಬೆಂಬಲ ನೀಡಿದ್ದಾರೆ ಎಂದು ತಿಳಿದು ಬಂದಿದೆ. 2023ರ ವಿಧಾನಸಭಾ ಚುನಾವಣೆ ಹಿನ್ನೆಲೆ ಸೋಮವಾರ ಕಾಂಗ್ರೆಸ್ ಹೈಕಮಾಂಡ್ (Congress High command) ರಾಜ್ಯ ನಾಯಕರ ಸಭೆ ಕರೆದಿತ್ತು. ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​ದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ 14 ನಾಯಕರು ಭಾಗಿಯಾಗಿದ್ದರು. ಈ ಸಭೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಮುಖ 10 ನಿರ್ಣಯಗಳನ್ನು ತೆಗೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.


ಹಿಮಾಚಲ ಪ್ರದೇಶ ಗೆದ್ದ ಜೋಶ್​​ನಲ್ಲಿ ಕಾಂಗ್ರೆಸ್​ ತೇಲಾಡ್ತಿದೆ. ಬಿಜೆಪಿಯನ್ನ ಬಗ್ಗುಬಡಿದು ಕರುನಾಡಲ್ಲೂ ಯುದ್ಧ ಗೆಲ್ಲೋದಕ್ಕೆ ಕಾಂಗ್ರೆಸ್​ ಕಲಿಗಳೆಲ್ಲಾ ನಿನ್ನೆ ಒಗ್ಗಟ್ಟಾಗಿದ್ದರು. ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್​​ ಕಲಿಗಳೆಲ್ಲಾ ಒಟ್ಟಾಗಿ ಸೇರಿ 2023ಗೆ ಕಾಂಗ್ರೆಸ್​ ಗೆಲ್ಲಿಸೋಕೆ ರಣತಂತ್ರಗಳನ್ನ ಹೆಣೆದಿದ್ದಾರೆ.


ಸಭೆಯಲ್ಲಿ ಎಲ್ಲರೂ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ. ಇದರ ಆಧಾರದ ಮೇಲೆ ಕೆಲವು ನಿರ್ಧಾರಗಳನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿದೆ ಎನ್ನಲಾಗಿದೆ.


karnataka Assembly 2023 congress take decision in meeting mrq
ಕಾಂಗ್ರೆಸ್ ನಾಯಕರ ಸಭೆ


ಕಾಂಗ್ರೆಸ್ 10 ನಿರ್ಧಾರಗಳು


1.ಬಿಕ್ಕಟ್ಟು ಬಿಟ್ಟು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು.


2.ನಾನೇ ಲೀಡರ್ ಅಂತ ಹೇಳದೇ,  ಟೀಂ ವರ್ಕ್ ಮರೆಯಬಾರದು.


3.ಸರ್ಕಾರದ ವೈಫಲ್ಯ ಪತ್ತೆ ಮಾಡಿ ದಾಖಲೆ ಸಮೇತ ಜನರ ಮುಂದಿಡಿ.


4.ಅಭ್ಯರ್ಥಿಗಳ ಆಯ್ಕೆ ನಿಮ್ಮದು - ಟಿಕೆಟ್​​ ಘೋಷಣೆ ಹೈಕಮಾಂಡ್​ನದ್ದು


5.ಈಗಿಂದ್ಲೇ ಪ್ರಚಾರ ಶುರುಮಾಡಬೇಕು. ಯಾತ್ರೆ, ಸಭೆ, ಸಮಾವೇಶದತ್ತ ಗಮನಕೊಡಿ


6.ಧರ್ಮ, ಜಾತಿ ಆಧರಿಸಿ ಜನರ ಓಲೈಸಬೇಕು. ಅವಹೇಳನ ಮಾತುಗಳನ್ನ ನಿಲ್ಲಿಸಿ


7.ಜಾತಿ, ಹಣ, ಜನ ಬೆಂಬಲ ಇದ್ರೆ ಮಣೆ - ಇಲ್ಲದವ್ರಿಗೆ ಪಕ್ಷ ಕಟ್ಟೋ ಹೊಣೆ


8.ಒಂದು ಕ್ಷೇತ್ರಕ್ಕೆ 2-3 ಆಕಾಂಕ್ಷಿಗಳಿದ್ರೆ ಸಮೀಕ್ಷೆ ಮೇಲೆ ಟಿಕೆಟ್​ ನೀಡಲಾಗುತ್ತೆ ಎಂದು ಹೇಳಿ.


9.ಬಿಜೆಪಿ ವಿರುದ್ಧ ಹೋರಾಡೋಣ, ಜೆಡಿಎಸ್​ ಬಗ್ಗೆ ಸಾಫ್ಟ್​ ಆಗಿರೋಣ


10.ಕರ್ನಾಟಕ ಗೆದ್ರಷ್ಟೇ ಶ್ರಮಕ್ಕೆ ಪ್ರತಿಫಲ. ಇಲ್ಲದಿದ್ರೆ 5 ವರ್ಷ ಏನೂ ಇಲ್ಲ


ಹೀಗೆ ದಶಸೂತ್ರಗಳನ್ನ ಸಿದ್ಧ ಮಾಡಿಕೊಂಡಿರುವ ಕಾಂಗ್ರೆಸ್ ಕರ್ನಾಟಕ ಚುನಾವಣೆ ರಂಗ ಪ್ರವೇಶ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಈ ಹಿಂದೆ ಸಿದ್ದರಾಮೋತ್ಸವ, ಮೇಕೆದಾಟು ಮತ್ತು ಭಾರತ್ ಜೋಡೋ ಯಾತ್ರೆ ಮಾದರಿಯಲ್ಲಿಯೇ ಸಮಾವೇಶಗಳನ್ನು ಆಯೋಜಿಸುವ ಕುರಿತು ಚರ್ಚೆಗಳು ನಡೆದಿವೆ ಎನ್ನಲಾಗಿದೆ.


ಇದನ್ನೂ ಓದಿ: Belagavi: ಮೀಸಲಾತಿ ಘೋಷಿಸಿದರೆ ಸಿಎಂಗೆ ಸನ್ಮಾನ, ಇಲ್ಲದಿದ್ದರೆ ಉಗ್ರ ಹೋರಾಟ: 7 ದಿನಗಳ ಗಡುವು ಕೊಟ್ಟ ಬಸವ ಜಯಮೃತ್ಯುಂಜಯ
 ಹಾಲಿ ಶಾಸಕರಿಗೆ ಬಹುತೇಕ ಟಿಕೆಟ್ ಫಿಕ್ಸ್


ಇಷ್ಟೆಲ್ಲದರ ಜೊತೆಗೆ ಹಾಲಿ ಕಾಂಗ್ರೆಸ್​ ಶಾಸಕರಿಗೆ ಟಿಕೆಟ್​ ಫೈನಲ್​ ಮಾಡಿದ್ದಾರೆ. ಕಡಿಮೆ ಅಂತರದಲ್ಲಿ ಸೋತವರಿಗೆ, 2018ರಲ್ಲಿ ಸೋತಿದ್ರೂ 2023ರಲ್ಲಿ ಮತ್ತೆ ಗೆಲ್ತಾರೆ ಅನ್ನೋ ಮಾಜಿಗಳಿಗೆ ಹೆಚ್ಚು ಕಡಿಮೆ ಟಿಕೆಟ್​ ಖಾಯಂ ಆಗಿದ್ದು ಅಧಿಕೃತ ಘೋಷಣೆ ಆಗಬೇಕಿದೆ.


ಒಗ್ಗಟ್ಟಿನ ಹೋರಾಟ


ರಾಜ್ಯ ಕಾಂಗ್ರೆಸ್ ಹಲವು ಜಾಥಾ, ಸಮಾವೇಶಗಳನ್ನು ಆಯೋಜಿಸಲಿದೆ. ಈ ಮೂಲಕ ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರ ನಡೆಸಲು ಪ್ಲಾನ್ ಮಾಡಿಕೊಂಡಿದೆ. ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿರುವ ಹೋರಾಟ, ಯಾತ್ರಗಳ ಪಟ್ಟಿ ಈ ಕೆಳಗಿನಂತಿದೆ


ಇದನ್ನೂ ಓದಿ:  Karnataka Politics: ಅಣ್ಣ-ತಮ್ಮ, ಅಪ್ಪ-ಮಗನಿಗೆ ಸಿಗಲ್ಲ ಟಿಕೆಟ್​! ಬಿಜೆಪಿಯಲ್ಲಿ ಕುಟುಂಬ ರಾಜಕೀಯಕ್ಕೆ ಬ್ರೇಕ್​- ಯತ್ನಾಳ್​


1.ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಹೋರಾಟ


2.ರಾಜ್ಯದುದ್ದಕ್ಕೂ 40% ಕಮಿಷನ್​ ವಿರುದ್ಧ ಜಾಥಾ


3.ಮುಂದಿನ‌ 75 ದಿನಗಳು ಪರಿಣಾತ್ಮಕ ಹೋರಾಟ


4.ಜನವರಿ ಮೊದಲ ವಾರದಿಂದ ನಾಯಕರ ಜಂಟಿಯಾತ್ರೆ


5.ಡಿ. 30ಕ್ಕೆ ವಿಜಯಪುರದಲ್ಲಿ ಕೃಷ್ಣಾ ನದಿ ಹೋರಾಟ


6.ಜ. 2ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ಹೋರಾಟ


7.ಜ. 8ರಂದು ಚಿತ್ರದುರ್ಗದಲ್ಲಿ SC,ST ಸಮಾವೇಶ


8.ರಾಜ್ಯದ 224 ಕ್ಷೇತ್ರಗಳಲ್ಲೂ ಮಹಾಯಾತ್ರೆ

Published by:Mahmadrafik K
First published: