ಬೆಳಗಾವಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರೆಂಟ್ FREE. ರಾಜ್ಯದ ಪ್ರತಿ ಮನೆಗೂ 200 ಯೂನಿಟ್ ಉಚಿತ. ಇದು ಮೊದಲ ಘೋಷಣೆ, ಇನ್ನೂ 4 ಮಹಾ ಘೋಷಣೆ ಬಾಕಿ ಇದೆ ಅಂತಾನೇ ಕಾಂಗ್ರೆಸ್ 2023 ಕಹಳೆ ಮೊಳಗಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ, ರಾಜ್ಯದ 1.50 ಕೋಟಿ ಜನರಿಗೆ ಉಚಿತವಾಗಿ ವಿದ್ಯುತ್ ಕೊಡುತ್ತೀವಿ. 200 ಯೂನಿಟ್ ವಿದ್ಯುತ್ ಫ್ರೀ ಕೊಡ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯದ ಜನರಿಗೆ ಇನ್ನೂ 4 ಗಿಫ್ಟ್ಗಳಿವೆ ಎಂದ ಡಿಕೆ ಶಿವಕುಮಾರ್
ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಸಿಎಂ ಆರುವ ರೇಸ್ನಲ್ಲಿರುವ ಮುಂಚೂಣಿ ನಾಯಕ ಡಿ.ಕೆ.ಶಿವಕುಮಾರ್ ಪ್ರಣಾಳಿಕೆಗೂ ಮುನ್ನ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ಮನೆಗಳಿಗೂ ಗೃಹಜ್ಯೋತಿ ಹೆಸರಲ್ಲಿ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡೋ ಘೋಷಣೆ ಮಾಡಿದ್ದಾರೆ. ಅಲ್ಲದೇ ರಾಜ್ಯದ ಜನರಿಗೆ ಇನ್ನೂ ನಾಲ್ಕು ಗಿಫ್ಟ್ಗಳಿವೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದರೆ ರಾಜ್ಯದ ಪ್ರತಿ ಮನೆಗೆ ತಿಂಗಳಿಗೆ ತಲಾ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ.
ನಾವು ನುಡಿದಂತೆ ನಡೆಯುವವರು.
ಕರುನಾಡಿಗಾಗಿ ನಮ್ಮೊಂದಿಗೆ ಕೈಜೋಡಿಸಿ. pic.twitter.com/9sdPMMTg0C
— Siddaramaiah (@siddaramaiah) January 11, 2023
ಪ್ರಜಾಧ್ವನಿ ಅಂದ್ರೆ ಕಾಂಗ್ರೆಸ್ ಧ್ವನಿ ಅಲ್ಲ. ಇಡೀ 7 ಕೋಟಿ ಕನ್ನಡಿಗರ ಧ್ವನಿ ಅದು. ನಿಮ್ಮ ಅಭಿಪ್ರಾಯ, ನಿರೀಕ್ಷೆ ಸಲಹೆ ಕೇಳಿ ನಿಮ್ಮ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬಂದರೆ ಜನಪರ ಆಡಳಿತ ಕೊಡುವ ಉದ್ದೇಶ. ಕರ್ನಾಟಕದ ಬಿಜೆಪಿ ಸರ್ಕಾರದ ಕರ್ಮಕಾಂಡ ಜನರ ಮುಂದೂಡುವ ಪ್ರಯತ್ನ.
ಇದನ್ನೂ ಓದಿ: Siddaramaiah: MLC + ಮಂತ್ರಿಗಿರಿ? ಶ್ರೀನಿವಾಸಗೌಡರ ಕ್ಷೇತ್ರ ತ್ಯಾಗದ ಹಿಂದಿನ ಅಸಲಿಯತ್ತು ಏನು? ಆಡಿಯೋ ವೈರಲ್
ಇವರ ಭ್ರಷ್ಟಾಚಾರ, ದುರಾಡಳಿತ, ಜನ ವಿರೋಧಿ ನಿಲುವುಗಳು, ವಚನಭ್ರಷ್ಟತೆ. ಬಿಜೆಪಿಯಷ್ಟು ಸುಳ್ಳು ಹೇಳುವ ರಾಜಕಾರಣಿಗಳು ಕರ್ನಾಟಕದ ಇತಿಹಾಸದಲ್ಲಿ ಯಾರೂ ಬಂದಿರಲಿಲ್ಲ. ಬಿಜೆಪಿ ಎಂದರೇ ಸುಳ್ಳಿನ ಫ್ಯಾಕ್ಟರಿ, ಸುಳ್ಳು ತಯಾರು ಮಾಡುವ ಫ್ಯಾಕ್ಟರಿ. ಸುಳ್ಳೇ ಅವರ ಬಂಡವಾಳ, ಲಘುವಾಗಿ ಮಾತನಾಡ್ತಿಲ್ಲ. ಬಹಳ ಜವಾಬ್ದಾರಿಯುತವಾಗಿ ಮಾತನಾಡುತ್ತಿದ್ದೇನೆ.
ಕಳೆದ ಚುನಾವಣೆಯಲ್ಲಿ 600 ಭರವಸೆ ಕೊಟ್ಟಿದ್ದರು. ಅವರು ಆತ್ಮ ಮುಟ್ಟಿಕೊಂಡು ಹೇಳಲಿ 600ರಲ್ಲಿ 50 ರಿಂದ 60 ಭರವಸೆ ಈಡೇರಿಕೆಗೆ ಸಾಧ್ಯವಾಗಿಲ್ಲ. ಹತ್ತು ಪರ್ಸೆಂಟ್ ಭರವಸೆ ಈಡೇರಿಸದಿದ್ದರೆ ಜನ ಸಹಿಸಲು ಸಾಧ್ಯವಾ? ಇದು ಜನರಿಗೆ ಮಾಡಿದ ವಚನ ಭ್ರಷ್ಟತೆ. ಅಧಿಕಾರಕ್ಕೆ ಬಂದರೆ ರೈತರ ಸೊಸೈಟಿ, ಬ್ಯಾಂಕ್ಗಳ ಒಂದು ಲಕ್ಷ ಸಾಲಮನ್ನಾ ಮಾಡ್ತೀವಿ. ಒಂದು ರೂಪಾಯಿ ಆದರೂ ಮನ್ನಾ ಮಾಡಿದರೇನ್ರಿ ಬಸವರಾಜ ಬೊಮ್ಮಾಯಿ ಎಂದು ಪ್ರಶ್ನಿಸಿದರು.
ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ
1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನ ಮಹಾತ್ಮಾ ಗಾಂಧೀಜಿ ವಹಿಸಿದ್ದು, ಇದೇ ಜಾಗದಲ್ಲಿ ಇವತ್ತು ಅದೇ ವೀರಸೌಧದ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉಚಿತ ವಿದ್ಯುತ್ ಘೋಷಿಸಿದ್ದಾರೆ. ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ ನೀಡಿದ್ದಾರೆ. ಸಂಜೆ ಬೆಳಗಾವಿಯ ರಾಮತೀರ್ಥ ನಗರದ ಅಜುಂಮನ್ ಮೈದಾನದಲ್ಲಿ ಸಮಾವೇಶನೂ ನಡೆಯಿತು.
ಅಧಿಕಾರಕ್ಕಾಗಿ ಉಚಿತ ವಿದ್ಯುತ್ ಘೋಷಣೆ ಅಂತ ಕಾಲೆಳೆದ ಬಿಜೆಪಿ
ಡಿ.ಕೆ.ಶಿವಕುಮಾರ್ ಅವರೇ ನೀವೇ ಇಂಧನ ಸಚಿವರಾಗಿದ್ದಾಗ ರೈತರ ಕೃಷಿಗೆ ಅಗತ್ಯವಾದ ವಿದ್ಯುತ್ ನೀಡಲಿಲ್ಲ. ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡಿ ರೈತರ ಬೆಳೆಗೆ ಕೊಳ್ಳಿ ಇಟ್ಟಿದ್ದಿರಿ. ಈಗ ಅಧಿಕಾರಕ್ಕಾಗಿ ಉಚಿತ ವಿದ್ಯುತ್ ನಾಟಕವಾಡುತ್ತಿದ್ದಿರಿ ಅಂತ ಬಿಜೆಪಿ ಕಾಲೆಳೆದಿದೆ.
ಜನರಿಗೆ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಬೆಲೆ ಏರಿಕೆ ದುನಿಯಾದಲ್ಲಿ ಒಳ್ಳೆಯದೇ. ಇದೊಂದೇ ಅಲ್ಲ. ಇನ್ನೂ 4 ಮಹಾ ಘೋಷಣೆಗಳಿವೆ ಅಂದಿದ್ದಾರೆ ಡಿಕೆ ಶಿವಕುಮಾರ್. ಜನ ಕಾಂಗ್ರೆಸ್ ಪರ ಎಷ್ಟು ಒಲವು ತೋರಿಸ್ತಾರೆ ಅಂತಾ ಚುನಾವಣೆವರೆಗೂ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ