ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ (Congress Candidate List) ನಾಲ್ಕನೇ ಪಟ್ಟಿ ಇಂದು ಬಿಡುಗಡೆಯಾಗಿದೆ. ಅಂತಿಮ ಪಟ್ಟಿ ಬಿಡುಗಡೆ ಮುನ್ನವೇ ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಅವರಿಗೆ ಧಾರವಾಡ-ಹುಬ್ಬಳ್ಳಿ ಸೆಂಟ್ರಲ್ (Dharwad-Hubballi Central) ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಬಿ ಫಾರಂ ಪಡೆದುಕೊಂಡು ಹುಬ್ಬಳ್ಳಿಗೆ ಹೋಗಿದ್ದರು. ಇದೀಗ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಇನ್ನೂ 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳು ಬಾಕಿ ಉಳಿಸಿಕೊಂಡಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನವಾಗಿದೆ. ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಇಂದು ಕ್ಷೇತ್ರಕ್ಕೆ ಟಿಕೆಟ್ ಘೋಷಣೆ
ಹುಬ್ಬಳ್ಳಿ-ಧಾರವಾಡ ಕೇಂದ್ರ- ಜಗದೀಶ್ ಶೆಟ್ಟರ್
ಹುಬ್ಬಳ್ಳಿ ಧಾರವಾಡ ಪೂರ್ವ - ದೀಪಕ್ ಚಿಂಚೋರೆ
ಶಿಗ್ಗಾಂವಿ –ಮಹಮ್ಮದ್ ಯೂಸುಫ್ ಸವಣೂರು
ಲಿಂಗಸೂಗುರು – ಡಿಎಸ್ ಹೊಲಗೇರಿ
ಹರಿಹರ – ನಂದಗಾವಿ ಶ್ರೀನಿವಾಸ್
ಶ್ರವಣಬೆಳಗೊಳ - ಎಂಎಂ ಗೋಪಾಲಸ್ವಾಮಿ
ಚಿಕ್ಕಮಗಳೂರು – ಎಚ್ಡಿ ತಮ್ಮಯ್ಯ
ಬಾಕಿ ಉಳಿದ 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು
ಪುಲಕೇಶಿ ನಗರ
ಶಿಡ್ಲಘಟ್ಟ
ಸಿವಿ ರಾಮನ್ ನಗರ
ಮುಳಬಾಗಿಲು
ರಾಯಚೂರು ನಗರ
ಅರಕಲಗೂಡು
ಮಂಗಳೂರು ಉತ್ತರ
ಕೆ ಆರ್ ಪುರಂ
ಇನ್ನು ಬಾಕಿ ಉಳಿದಿರುವ 8 ಕ್ಷೇತ್ರಗಳಲ್ಲಿ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಇಲ್ಲ ಎನ್ನಲಾಗುತ್ತಿದೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಭಾರೀ ಪೈಪೋಟಿ ಇರುವ ಕಾರಣ ಯಾರನ್ನು ಫೈನಲ್ ಮಾಡಿಲ್ಲ. ಅರಕಲಗೂಡಿನಲ್ಲಿ ಎಂ.ಟಿ.ಕೃಷ್ಣೇಗೌಡ ಮತ್ತು ಶ್ರೀಧರ ಗೌಡ ನಡುವೆ ಭಾರೀ ಪೈಪೋಟಿ ಇದೆ. ಎಂ.ಟಿ.ಕೃಷ್ಣೇಗೌಡ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೂಲಕ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದು, ಟಿಕೆಟ್ ಖಚಿತ ಎಂದು ನಂಬಿಕೊಂಡು ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದ್ದರೆ, ಶ್ರೀಧರಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದು, ಚುನಾವಣೆಗೆ ಸಿದ್ಧತೆ ಮಾಡಿ ಕೊಂಡಿದ್ದಾರೆ. ಹಾಗಾಗಿ ಟಿಕೆಟ್ ಘೋಷಣೆ ಕಾಂಗ್ರೆಸ್ ಕಗ್ಗಂಟಾಗಿದೆ.
ಬೆಂಗಳೂರಿನ ಪುಲಕೇಶಿ ನಗರ, ಸರ್ ಸಿ ವಿ ರಾಮನ್ ನಗರದಲ್ಲಿ ಸಿದ್ದರಾಮಯ್ಯ ಹಾಗೂ ಕೆಆರ್ ಪುರಂ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿಲ್ಲ. ಇಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳಲ್ಲಿ ಗುರುತಿಸಿಕೊಂಡವವರು ಆಕಾಂಕ್ಷಿಗಳಾಗಿರುವುದರಿಂದ ಕಗ್ಗಂಟಾಗಿ ಉಳಿದುಕೊಂಡಿದೆ. ಮೂಲಗಳ ಮಾಹಿತಿ ಪ್ರಕಾರ ಕೆಆರ್ ಪುರಂ ಕ್ಷೇತ್ರದಲ್ಲಿ ಅಭ್ಯರ್ಥಿಗಳೆ ಸಿಕ್ಕಿಲ್ಲ ಎಂದು ತಿಳಿದಿಬಂದಿದೆ.
ಇನ್ನು ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕೂಡ ಇಬ್ಬರು ಲೀಡರ್ಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಮೊಹಿದ್ದೀನ್ ಬಾವv/s ಇನಾಯತ್ ಅಲಿ ಇಬ್ಬರಲ್ಲಿ ಸ್ಪರ್ಧೆ ಇರುವುದರಿಂದ ಈ ಕ್ಷೇತ್ರ ಟಿಕೆಟ್ಅನ್ನು ಕಾಯ್ದಿರಿಸಲಾಗಿದೆ. ಕೋಲಾರದ ಮುಳಬಾಗಿಲಿನಲ್ಲಿ ಸೂಕ್ತ ಅಭ್ಯರ್ಥಿ ಸಿಕ್ಕಿಲ್ಲ ಎನ್ನಲಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಮಪ್ಪ ಬದಲಿಗೆ ಶ್ರೀನಿವಾಸ್ ನಂದಿಗಾವಿಗೆ ಟಿಕೆಟ್ ನೀಡಲಾಗಿದೆ. ರಾಮಪ್ಪ ಕಳೆದ 15 ದಿನಗಳಿಂದ ಕಾಂಗ್ರೆಸ್ ನಾಯಕರ ಮನೆ, ಕಛೇರಿ ಅಲೆದಾಟ ಮಾಡಿದರೂ ಟಿಕೆಟ್ ಕೈತಪ್ಪಿದೆ. ಇಂದು ಕೂಡ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರನ್ನ ಭೇಟಿ ಮಾಡಿದ್ದರು. ಆದರೂ ರಾಮಪ್ಪ ಬದಲಿಗೆ ನಂದಗಾವಿ ಶ್ರೀನಿವಾಸ್ಗೆ ಹರಿಹರ ಟಿಕೆಟ್ ಘೋಷಣೆ ಮಾಡಲಾಗಿದೆ. ಕುರುಬ ಸಮುದಾಯದ ರಾಮಪ್ಪಗೆ ಅವರದ್ದೇ ಸಮುದಾಯದ ಸ್ವಾಮೀಜಿ ಟಿಕೆಟ್ ನೀಡದಂತೆ ಹೇಳಿದ್ದ ಕಾರಣ ಟಿಕೆಟ್ ಮಿಸ್ ಆಗಿದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ