ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪಕ್ಷದ ಸಭೆಯೊಂದರಲ್ಲಿ ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ನೀಡಿರುವ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ (Congress) ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಬಿಜೆಪಿ ವಿರುದ್ಧ ಕಿರಿಕಾರಿ ಟೀಕೆ ಮಾ ಡಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಬಿಜೆಪಿ ಅಜೆಂಡಾ ಏನು ಅಂತ ಕಟೀಲ್ ತೋರಿಸಿಕೊಟ್ಟಿದ್ದಾರೆ. ಉತ್ತರ ಪ್ರದೇಶ ಸಿಎಂಗೆ ಮೊದಲು ಲವ್ ಮಾಡಲು ಹೇಳಿ. ಅವರಿಗೆ ಲವ್ ಬಗ್ಗೆ ಏನೂ ಗೊತ್ತಿಲ್ಲ. ಅವರಿಗೆ ಲವ್ ಮಾಡಿ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಇಬ್ರಾಹಿಂ ಅವರು, ನಳಿನ್ ಕುಮಾರ್ ಕಟೀಲ್ ಪೋಲಿ ಹುಡುಗರು ಮಾತನಾಡುವ ಥರ ಮಾತನಾಡಿದ್ದಾರೆ. ಬಿಜೆಪಿ ಅಜೆಂಡಾ ಏನು ಅಂತ ಕಟೀಲ್ ತೋರಿಸಿಕೊಟ್ಟಿದ್ದಾರೆ.
ಯುಪಿ ಸಿಎಂಗೆ ಮೊದಲು ಲವ್ ಮಾಡೋಕ್ಕೆ ಹೇಳಿ, ಲವ್ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ, ಅವರಿಗೆ ಲವ್ ಮಾಡಿ ಗೊತ್ತಿಲ್ಲ. ಚುನಾವಣೆಯಲ್ಲಿ ಇಂಥವರನ್ನು ಜನರು ಒದ್ದು ಹೊರಗೆ ಹಾಕಬೇಕು. ಮುಂದೆ ಬೆಳೆಯೋ ಮಕ್ಕಳಿಗೆ ಕಟೀಲ್ ಅವರು ಏನು ಪಾಠ ಮಾಡ್ತಿದಾರೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: BJP: ಸೈಲೆಂಟ್ ಸುನೀಲ್ಗಿಲ್ಲ ಬಿಜೆಪಿಗೆ ಎಂಟ್ರಿ; ಫೈಟರ್ ರವಿ ಬಗ್ಗೆ ಮೌನ ಮುರಿಯದ ಕಟೀಲ್
ಸಿ.ಡಿಗಾಗಿ ಬಿಜೆಪಿಯಲ್ಲಿ ಮೂರು ಗುಂಪಾಗಿದ್ದಾರೆ
ಮುಂಬೈನಲ್ಲಿ 12 ಜನರ ವಿಡಿಯೋ ಮಾಡಲಾಗಿದೆ. ಆ 12 ಜನರೂ ಕೋರ್ಟಿಗೆ ಹೋಗಿ ಸ್ಟೇ ತಂದಿದ್ದಾರೆ. ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಸ್ವತಃ ಸ್ಟೇ ತಂದಿದ್ದಾರೆ. ಈ ವಿಡಿಯೋ ವಿಚಾರಕ್ಕೆ ಬಿಜೆಪಿಯಲ್ಲಿ ಮೂರು ಗುಂಪಾಗಿದೆ. ಒಂದು ಗುಂಪು ಆ ಕ್ಯಾಸೇಟ್ ಹೊರಗೆ ತರಬೇಕು ಅಂತ, ಇನ್ನೊಂದು ಟೀಂ ಬೇಡ ಅಂತ. ಮುಂಬೈ ವಿಡಿಯೋ ಪ್ರಕರಣದಲ್ಲಿ ಮೂವರು ಮಂತ್ರಿಗಳು ಶಾಮೀಲಾಗಿದ್ದಾರೆ ಅಂತ ಆರೋಪಿಸಿದ್ದಾರೆ.
ಮುಂಬೈಗೆ ಹೋದವರದ್ದೆ ವಿಡಿಯೋ, ಈ ಬಗ್ಗೆ ಮುಖ್ಯಮಂತ್ರಿ ಗಳು ಹೇಳಬೇಕು. ಮೂವರು ಮಂತ್ರಿಗಳು ಇದರಲ್ಲಿದ್ದಾರೆ. ಅವರನ್ನು ಅಕ್ಕಪಕ್ಕದಲ್ಲಿ ಕೂರಿಸಿಕೊಂಡು ಸಿಎಂ ಮಾತಾಡ್ತಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಈ ಬಗ್ಗೆ ಹೇಳಬೇಕು, ಅಷ್ಟು ಜನರಲ್ಲಿ ಗೋಪಾಲಯ್ಯ ಮಾತ್ರ ಸ್ಟೇ ತಂದಿಲ್ಲ. ಉಳಿದವರು ಎಲ್ಲರೂ ಸ್ಟೇ ತೆಗೆದುಕೊಂಡು ಬಂದಿದ್ದಾರೆ. ಅದಕ್ಕಾಗಿ ಇದು ಆ ಲೇಡಿಗೂ ಇವರಿಗೆ ಏನಾದರೂ ಸಂಬಂಧ ಇದೇಯಾ ಹೇಗೆ ಅಂತಾ ತನಿಖೆ ಮಾಡಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: CM Ibrahim: ಕುಮಾರಸ್ವಾಮಿ ಆಯಸ್ಸು ಗಟ್ಟಿ; ಡಿಸೆಂಬರ್ನಲ್ಲಿ ಚುನಾವಣೆ, 2023ಕ್ಕೆ HDK ಮುಖ್ಯಮಂತ್ರಿ; ಸಿಎಂ ಇಬ್ರಾಹಿಂ
ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?
ಮಂಗಳೂರಿನಲ್ಲಿ ನಡೆದ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ್ದ ನಳಿನ್ ಕುಮಾರ್ ಕಟೀಲ್ ಅವರು, ನಾನು ನಿಮಗೆ ಕೇಳುತ್ತೇನೆ. ರಸ್ತೆ, ಚರಂಡಿಯಂತಹ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಶಾಸಕರಲ್ಲಿ ಏನನ್ನು ಕೇಳಬೇಡಿ.
ವೇದವ್ಯಾಸ ಕಾಮತ್ ಸದನದಲ್ಲಿ ಮಾತನಾಡಲಿಲ್ಲ. ಕಟೀಲ್ ಸಂಸತ್ನಲ್ಲಿ ಮಾತನಾಡಲಿಲ್ಲ ಅಂತ ನೋಡಬೇಡಿ. ನೀವು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಿ. ನಾವು ಜಿಹಾದ್ ತಡೆಯದಿದ್ದರೇ ನಿಮಗೆ ಕಷ್ಟ ಆಗುತ್ತದೆ. ಲವ್ ಜಿಹಾದ್ಗೆ ಬ್ರೇಕ್ ಹಾಕಲು ಬಿಜೆಪಿ ಬೇಕು. ಅಮಿತ್ ಶಾ ಬೇಕು, ಮೋದಿ ಬೇಕು. ಕರ್ನಾಟಕದಲ್ಲಿ ಬೊಮ್ಮಾಯಿ ಬೇಕು. ನಿಮ್ಮನ್ನು ರಕ್ಷಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ. ನಮ್ಮನ್ನು ಮತ್ತೆ ಗೆಲ್ಲಿಸಲು ಕೆಲಸ ಮಾಡಿ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ