Karnataka Assembly Election 2023: ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಚುನಾವಣಾ ಕಣ ಸಿದ್ಧವಾಗಿದೆ. ಚುನಾವಣಾ ಅಭ್ಯರ್ಥಿಗಳು ಭರದಿಂದ ತಮ್ಮ ಪಕ್ಷದ ಪ್ರಚಾರ ನಡೆಸುತ್ತಿದ್ದು ಕ್ಷೇತ್ರ ಸಂಚಾರ ನಡೆಸಿ ಮತದಾರರ ಮನ ಓಲೈಸುತ್ತಿದ್ದಾರೆ.
ಮತದಾರರು ಕೂಡ ರಾಜಕಾರಣಿಗಳ ಆಮಿಷಕ್ಕೆ ಒಳಗಾಗಬಾರದು ಎಂಬ ಸೂಕ್ತ ನಿರ್ಧಾರವನ್ನು ತಾಳಿದ್ದು, ಪಕ್ಷ ನೋಡಿ ಮತಹಾಕುವುದಿಲ್ಲ ಎಂಬ ತೀರ್ಮಾನವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಬಂದರೆ ಒಳ್ಳೆಯದು, ಪ್ರಸ್ತುತವಿರುವ ಅಭ್ಯರ್ಥಿ ಜನನಾಯಕ ಯಾವ ಬಗೆಯಲ್ಲಿ ಕೆಲಸ ಮಾಡಿದ್ದಾರೆ ಮೊದಲಾದ ವಿಚಾರಗಳನ್ನೆಲ್ಲಾ ವಿಮರ್ಶಿಸಿ ನಂತರವೇ ಓಟು ಹಾಕಲು ಮುಂದಾಗಿದ್ದಾರೆ.
ರಮೇಶ್ ವಿಶ್ವನಾಥ್ ಕತ್ತಿ
ಇಂದಿನ ಲೇಖನದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಚಿಕ್ಕೋಡಿ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವ ರಮೇಶ್ ವಿಶ್ವನಾಥ್ ಕತ್ತಿಯವರ (Ramesh Vishwanath Katti) ಪರಿಚಯ ಹೀಗಿದೆ.
ಇದನ್ನೂ ಓದಿ: Preetham J Gowda: ಜೆಡಿಎಸ್‌ಗೆ ಟಕ್ಕರ್ ಹೊಡೆದು ಮತ್ತೊಮ್ಮೆ ಎಂಎಲ್‌ಎ ಆಗುವ ನಿರೀಕ್ಷೆಯಲ್ಲಿದ್ದಾರೆ ಪ್ರೀತಂ ಜೆ ಗೌಡ!
ರಾಜಕಾರಣಿ ವಿಶ್ವನಾಥ್ ಕತ್ತಿಯವರ ಪುತ್ರರಾದ ರಮೇಶ್ ವಿಶ್ವನಾಥ ಕತ್ತಿ ಚಿಕ್ಕೋಡಿ ಕ್ಷೇತ್ರವನ್ನು ಚುನಾವಣೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ರಾಜಕಾರಣಿಯಾಗಿ ಕೃಷಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲೂ ನಿರತರಾಗಿರುವ ರಮೇಶ್ ಕತ್ತಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಅಂತೆಯೇ ಅನೇಕ ಸಹಕಾರಿ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ್ದಾರೆ.
ರಮೇಶ್ ಕತ್ತಿ ಸೇವೆ ಸಲ್ಲಿಸಿದ ಕ್ಷೇತ್ರಗಳು
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾಗಿ, ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಸಂಕೇಶ್ವರ ಇದರ ಮಾಜಿ ಅಧ್ಯಕ್ಷರಾಗಿಯೂ ರಮೇಶ್ ಕತ್ತಿ ಸೇವೆ ಸಲ್ಲಿಸಿದ್ದಾರೆ.
ಕೃಷಿ ಸೇವಾ ಸಹಕಾರಿ ಬ್ಯಾಂಕ್ ಲಿಮಿಟೆಡ್, ಬೆಲ್ಲದ-ಬಾಗೇವಾಡಿ ಇಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ರಮೇಶ್ ಕತ್ತಿ, ಕರ್ನಾಟಕ ರಂಗ ಭೂಮಿ ಅಭಿವೃದ್ಧಿ ಮತ್ತು ಉತ್ತೇಜನ ಸಹಕಾರಿ ಸಂಘ, ಬೆಳಗಾವಿ ಇದರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್, ಬೆಳಗಾವಿ ಇದರ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದ ರಮೇಶ್ ಕತ್ತಿ, ನ್ಯಾಷನಲ್ ಫೆಡರೇಶನ್ ಆಫ್ ಕೋಪ್. ಶುಗರ್ ಫ್ಯಾಕ್ಟರಿ ಲಿಮಿಟೆಡ್, ದೆಹಲಿ ಇದರ ಮಾಜಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Assembly Election: ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ವೇ ಇಲ್ಲ, ಕೆಲವರು ಮಗ-ಸೊಸೆ ಆಗಿರಬಹುದು ಅಷ್ಟೇ: ಕೆ ಅಣ್ಣಾಮಲೈ
ರಮೇಶ್ ಕತ್ತಿ ಆಸ್ತಿಪಾಸ್ತಿ ವಿವರ ಹೀಗಿದೆ
ರಮೇಶ್ ಕತ್ತಿ ಒಟ್ಟು 8 ಕೋಟಿಗಿಂತಲೂ ಅಧಿಕ ಆಸ್ತಿಪಾಸ್ತಿ ಇರುವುದಾಗಿ ಘೋಷಿಸಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ರೂ 6 ಲಕ್ಷ ಆದಾಯ ಘೋಷಿಸಿದ್ದಾರೆ.
ನಗದು ರೂ 60,000 ಇವರ ಬಳಿ ಇರುವುದಾಗಿ ತಿಳಿಸಿದ್ದು, 1 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಕೃಷಿ ಸೇವಾ ಸಹಕಾರಿ ಸಂಘದಲ್ಲಿ ಡಿಪಾಸಿಟ್ ಮಾಡಿರುವುದಾಗಿ ತಿಳಿಸಿದ್ದಾರೆ. ಬಾಂಡ್‌ಗಳು ಹಾಗೂ ಷೇರುಗಳ ರೂಪದಲ್ಲಿ ರೂ 2 ಕೋಟಿಗಿಂತಲೂ ಹೆಚ್ಚಿನ ಹಣವನ್ನು ತೊಡಗಿಸಿದ್ದಾರೆ.
ಎಲ್‌ಐಸಿ ಹಾಗೂ ಇನ್ನಿತರ ವಿಮೆಗಳ ಮಾಹಿತಿ ನೀಡಿರುವ ಶಾಸಕರು, 3 ಲಕ್ಷದ ಮೌಲ್ಯದ ವಿಮೆ ಇನ್ಶೂರೆನ್ಸ್ ಮಾಡಿಸಿಕೊಂಡಿದ್ದಾರೆ. ವೈಯಕ್ತಿಕ ಸಾಲವಾಗಿ ರೂ 8 ಲಕ್ಷ ಇವರ ಹೆಸರಿನಲ್ಲಿದೆ. ಯಾವುದೇ ವಾಹನಗಳ ವಿವರ ನೀಡಿಲ್ಲ.
ಆಭರಣಗಳ ವಿವರ
ಆಭರಣಗಳ ವಿಷಯಕ್ಕೆ ಬಂದರೆ ರೂ 91 ಲಕ್ಷ ಮೌಲ್ಯದ ಆಭರಣಗಳು ಇವೆ ಎಂದು ರಮೇಶ್ ಕತ್ತಿ ಘೋಷಿಸಿದ್ದಾರೆ. ಇನ್ನಿತರ ಆಸ್ತಿಪಾಸ್ತಿಯಾಗಿ ರೂ 13 ಲಕ್ಷ ಮೌಲ್ಯದ ವಸ್ತುಗಳ ಪಟ್ಟಿ ನೀಡಿದ್ದಾರೆ. ಒಟ್ಟು ಇವೆಲ್ಲವುಗಳ ಮಾರುಕಟ್ಟೆ ಮೌಲ್ಯ ರೂ 5 ಕೋಟಿ ಎಂದು ರಮೇಶ್ ಕತ್ತಿ ವಿವರ ನೀಡಿದ್ದಾರೆ.
ರಮೇಶ್ ಕತ್ತಿ ಚರಾಸ್ತಿ ವಿವರ ಹೀಗಿದೆ
ರಮೇಶ್ ಕತ್ತಿಯವರು ರೂ 1 ಕೋಟಿ ಮೌಲ್ಯದ ಕೃಷಿ ಭೂಮಿ ಹೊಂದಿದ್ದು, ರೂ 92 ಸಾವಿರ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ. ನಿವೇಶನಗಳನ್ನು ರಮೇಶ್ ಕತ್ತಿ ಹೊಂದಿದ್ದು ಇದರ ಮೌಲ್ಯ ರೂ 2 ಕೋಟಿ ಎಂಬ ಮಾಹಿತಿ ನೀಡಿದ್ದಾರೆ. ಇದೆಲ್ಲಾ ಆಸ್ತಿಗಳ ಒಟ್ಟು ಮೌಲ್ಯ ರೂ 3 ಕೋಟಿ ಎಂದು ರಮೇಶ್ ಕತ್ತಿ ದಾಖಲೆ ಒದಗಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ