• Home
  • »
  • News
  • »
  • state
  • »
  • BJP Tweet: ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಮನೆ ಮಾತ್ರ; ಬಿಜೆಪಿ ವ್ಯಂಗ್ಯ

BJP Tweet: ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಮನೆ ಮಾತ್ರ; ಬಿಜೆಪಿ ವ್ಯಂಗ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಇದು ಸಿದ್ದರಾಮಯ್ಯ ಅವರ 40 ವರ್ಷದ ರಾಜಕೀಯ ಜೀವನದ ಸೋಲು. ಸದ್ಯಕ್ಕೆ ಅವರಿಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಮನೆ ಮಾತ್ರ. ಅಲ್ಲೇ ಇರುವುದು ಕ್ಷೇಮ ಎಂದು ಬಿಜೆಪಿ ವ್ಯಂಗ್ಯವಾಡಿದೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರ (ನ. 15): ವಿಧಾನಸಭೆ ಚುನಾವಣೆ (Assembly Election) ಹತ್ತಿರವಾಗ್ತಿದ್ದಂತೆ ಕಾಂಗ್ರೆಸ್, (Congress) ಬಿಜೆಪಿ, ಜೆಡಿಎಸ್ (JDS)​ ವಲಯದಲ್ಲಿ ತಳಮಳ ಶುರುವಾಗಿದೆ. ಅಭ್ಯರ್ಥಿಗಳು ಕ್ಷೇತ್ರದ ಹುಡುಕಾಟದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿದ್ದಾರೆ. ಬಾದಾಮಿ (Badami) ಬಿಟ್ಟು ಸ್ಪರ್ಧೆಗೆ ಬೇರೆ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಕೋಲಾರದಿಂದ (Kolara) ಸಿದ್ದರಾಮಯ್ಯ ಸ್ಪರ್ಧೆ ಫಿಕ್ಸ್​ ಎಂದು ಹೇಳಲಾಗುತ್ತಿದೆ. 


ಸಿದ್ದರಾಮಯ್ಯ ಅವರು ಮನೆಯಲ್ಲಿರುವುದು ಸೂಕ್ತ


ಚುನಾವಣೆಯಲ್ಲಿ ಕ್ಷೇತ್ರ ಸಿಗದೆ ಅಲೆದಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನೆಯಲ್ಲಿರುವುದು ಸೂಕ್ತ ಎಂದು ಬಿಜೆಪಿ ವ್ಯಂಗ್ಯವಾಡಿದೆ. ‌‌ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಬಿಜೆಪಿ, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎನ್ನುತ್ತಿರುವ ಸಿದ್ದರಾಮಯ್ಯ, ಇದೀಗ ತಾವೇ ಗೆಲ್ಲುವ ಕ್ಷೇತ್ರವಿಲ್ಲದೆ ಅಲೆದಾಡುತ್ತಿದ್ದಾರೆ ಎಂದು ಟೀಕಿಸಿದೆ.


ಮಾಜಿ ಸಿಎಂ ಸಿದ್ದರಾಮಯ್ಯ


ಸಿದ್ದು ವಿರುದ್ಧ ಬಿಜೆಪಿ ಟ್ವೀಟ್​


ಇದು ಸಿದ್ದರಾಮಯ್ಯ ಅವರ 40 ವರ್ಷದ ರಾಜಕೀಯ ಜೀವನದ ಸೋಲು. ಸದ್ಯಕ್ಕೆ ಅವರಿಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಮನೆ ಮಾತ್ರ. ಅಲ್ಲೇ ಇರುವುದು ಕ್ಷೇಮ ಎಂದು ಬಿಜೆಪಿ ವ್ಯಂಗ್ಯವಾಡಿದೆ.



ಕೋಲಾರ ದಿಂದ ಸಿದ್ದರಾಮಯ್ಯ ಸ್ಪರ್ಧೆ ಬಹುತೇಕ ಖಚಿತ


ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಡದ ಹಿನ್ನೆಲೆ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕೋಲಾರಕ್ಕೆ ಭೇಟಿ ಕೊಟ್ಟಿದ್ದರು.  ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.


ಕೋಲಾರದಲ್ಲಿ ಸಿದ್ದರಾಮಯ್ಯ ನಿಂತಾಯ್ತು!


ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ರೀನಿವಾಸ್​ ಪ್ರಸಾದ್​, ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲುತ್ತಾರೆ ಅಲ್ಲಾ, ಕೋಲಾರದಲ್ಲಿ ನಿಂತಾಯ್ತು. ದೇವಸ್ಥಾನ, ಮಸೀದಿ, ಚರ್ಚ್​ ಎಲ್ಲಾ ಕಡೆ ಹೋಗಿದ್ದಾರೆ. ಕೋಲಾರ ಸೇಫೆಸ್ಟ್​ ಪ್ಲೇಸ್ ಅಲ್ಲಿ ಆರಾಮಾಗಿ ಗೆದ್ದು ಬರಬಹುದು‌ ಅಂತ ಹೋಗಿದ್ದಾರೆ ಎಂದು ಹೇಳಿದ್ದಾರೆ.


ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ


ಸುರಕ್ಷಿತ ಸ್ಥಳ ಹುಡುಕಿ‌ ಹುಡುಕಿ ಕೊನೆಗೆ ಕೋಲಾರ ಅಂದಿದ್ದಾರೆ. ಸುರಕ್ಷಿತ ಅಲ್ಲದಿದ್ರೆ ಬಾದಾಮಿಯಲ್ಲಿ ಯಾಕ್ ನಿಲ್ಲಲಿಲ್ಲ. ಚಾಮುಂಡೇಶ್ವರಿಯಲ್ಲಿ ಯಾಕ್ ನಿಲ್ಲಲಿಲ್ಲ. ಚಾಮರಾಜಪೇಟೆಯನ್ನು ನೋಡಿ ಆಗಿದೆ. ಕೊನೆಗೆ ಕೋಲಾರ ಸುರಕ್ಷಿತ ಅಂತ ಹೋಗಿದ್ದಾರೆ. ಕೋಲಾರದಲ್ಲಿ ಕುರುಬರು ಮುಸ್ಲಿಂರ ಮತ ಹೆಚ್ಚಾಗಿವೆ. ಹೀಗಾಗಿ ಸುಲಭವಾಗಿ ಗೆದ್ದು ಸಿಎಂ ಆಗಬಹುದು ಅಂತ ಕೋಲಾರಕ್ಕೆ ಹೋಗಿದ್ದಾರೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.


ಸಿದ್ದರಾಮಯ್ಯ ಅಲ್ಲ ಹೈಕಮಾಂಡ್ ಹೇಳಲಿ


ನಾನು ಸಿಎಂ ಆಗಬೇಕಾದರೆ ಕಾಂಗ್ರಸ್ ಗೆ ವೋಟ್ ಹಾಕಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್, ಸಿದ್ದರಾಮಯ್ಯ ಅಲ್ಲ ಹೈಕಮಾಂಡ್ ಹೇಳಲಿ. ಪಕ್ಷದ ಹೈಕಮಾಂಡ್ ಘೋಷಣೆ ಮಾಡಿದರೆ ಅವರು ಸಿಎಂ ಅಭ್ಯರ್ಥಿ. ಹೈಕಮಾಂಡ್ ಮಾಡದೆ ಇವರೇ ಸ್ವಯಂ ಘೋಷಣೆ ಮಾಡಿಕೊಂಡರೆ ನನ್ನ ಪ್ರಕಾರ ಮಾನ್ಯತೆ ಇಲ್ಲ ಎಂದ್ರು.


ಇದನ್ನೂ ಓದಿ: Karnataka Politics: ಸಿದ್ದರಾಮಯ್ಯಗೆ ರಾಜ್ಯದಲ್ಲಿ ಯಾವ ಕ್ಷೇತ್ರನೂ ಸೇಫ್ ಅಲ್ಲ: ಮಾಜಿ ಸಿಎಂಗೆ ಬಿಜೆಪಿ ನಾಯಕನ ಗುದ್ದು


ಗೆಲುವು ಬಹಳ ಕಠಿಣ 


ಕೋಲಾರದಲ್ಲಿ ಸ್ಪರ್ಧೆ ವಿಚಾರಕ್ಕೆ ಮಾತಾಡಿದ ಸುಧಾಕರ್​, ಮಾಜಿ ಮುಖ್ಯಮಂತ್ರಿ ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಸಂವಿಧಾನ ಅವಕಾಶ ಕೊಟ್ಟಿದೆ. ನನಗೆ ಇರುವ ರಾಜಕೀಯ ಅನುಭವದಲ್ಲಿ ಅನುಕೂಲ ಆಗಲ್ಲ. ಅವರಿಗೆ ಗೆಲುವು ಬಹಳ ಕಠಿಣ ಆಗುತ್ತದೆ ಎಂದು ಸುಧಾಕರ್​ ಹೇಳಿದ್ರು.

Published by:ಪಾವನ ಎಚ್ ಎಸ್
First published: