• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shashikala Jolle: 3ನೇ ಬಾರಿಯೂ ನಿಪ್ಪಾಣಿ ಜನ ಶಶಿಕಲಾ ಜೊಲ್ಲೆಯ ಕೈ ಹಿಡೀತಾರಾ?ಸಚಿವೆಯ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ

Shashikala Jolle: 3ನೇ ಬಾರಿಯೂ ನಿಪ್ಪಾಣಿ ಜನ ಶಶಿಕಲಾ ಜೊಲ್ಲೆಯ ಕೈ ಹಿಡೀತಾರಾ?ಸಚಿವೆಯ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ

ಶಶಿಕಲಾ ಜೊಲ್ಲೆ

ಶಶಿಕಲಾ ಜೊಲ್ಲೆ

ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಅವರು ಈ ಬಾರಿ ಕೂಡ ಇದೇ ಕ್ಷೇತ್ರದಿಂದ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹಾಗಿದ್ದರೆ ಇವರ ರಾಜಕೀಯ ಜೀವನ ಹೇಗಿದೆ? ಆಸ್ತಿಪಾಸ್ತಿ ಏನ್ ಮಾಡ್ಕೊಂಡಿದ್ದಾರೆ? ಇಲ್ಲಿದೆ ವಿವರ

  • Trending Desk
  • 3-MIN READ
  • Last Updated :
  • Belgaum, India
  • Share this:

Karnataka Election 2023: ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ತಾವೇನೂ ಕಮ್ಮಿ ಇಲ್ಲ ಎನ್ನುವಂತೆ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ಈವರೆಗೆ ಅದೆಷ್ಟೋ ಮಹಿಳಾ ಅಭ್ಯರ್ಥಿಗಳು ಇತಿಹಾಸ ಸೃಷ್ಟಿಸಿರುವ ನಿದರ್ಶನಗಳಿವೆ.


ಹೀಗೆ ಮಹಿಳಾ ಪ್ರಭಾವಿ ರಾಜಕರಾಣಿಯಲ್ಲಿ ಒಬ್ಬರು, ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ (Shashikala Annasaheb Jolle) . ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ನಿಪ್ಪಾಣಿ ಕ್ಷೇತ್ರದ ಪ್ರಭಾವಿ ಮಹಿಳಾ ಶಾಸಕಿ.


ಶಶಿಕಲಾ ಜೊಲ್ಲೆ ಬಾಲ್ಯ


20 ನವೆಂಬರ್ 1969ರಲ್ಲಿ ಬೆಳಗಾವಿ ಜಿಲ್ಲೆಯ ಭೀವಶಿಯಲ್ಲಿ ಜನಿಸಿ ಶಶಿಕಲಾ 1985ರಲ್ಲಿ ಹೈಸ್ಕೂಲ್‌ ಶಿಕ್ಷಣವನ್ನು ಘಟಪ್ರಭಾದಲ್ಲಿ ಪೂರ್ಣಗೊಳಿಸಿದರು. ಹೀಗೆ ಓದು ಎಲ್ಲಾ ಮುಗಿಸಿ 1989ರಲ್ಲಿ ಅಣ್ಣಾ ಸಾಹೇಬ್ ಶಂಕರ್ ಜೊಲ್ಲೆಯನ್ನು ವಿವಾಹವಾದರು.


ಇದನ್ನೂ ಓದಿ: GK Venkata Shiva Reddy: 5ನೇ ಬಾರಿ ಗೆಲುವಿನ ಸಿದ್ಧತೆ ನಡೆಸುತ್ತಿರುವ ವೆಂಕಟಶಿವಾರೆಡ್ಡಿ, ಹೀಗಿದೆ ಅವರು ನಡೆದು ಬಂದ ಹಾದಿ


ರಾಜಕೀಯದಲ್ಲಿ ಶಶಿಕಲ್ಲಾ ಜೊಲ್ಲೆ ಪತಿಯೂ ಸಕ್ರಿಯ


ಶಶಿಕಲಾ ಜೊಲ್ಲೆ ಮತ್ತು ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಇಬ್ಬರೂ ಕ್ರಮವಾಗಿ ನಿಪ್ಪಾಣಿ ಮತ್ತು ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು.


ಆದರೆ, ಅಣ್ಣಾಸಾಹೇಬ ಜೊಲ್ಲೆ ಎರಡನೇ ಬಾರಿಗೆ ಗಣೇಶ್ ಹುಕ್ಕೇರಿ ವಿರುದ್ಧ ಸೋತರೆ, ಶಶಿಕಲಾ ಜೊಲ್ಲೆ ಜಯಶಾಲಿಯಾದರು. ಅಣ್ಣಾಸಾಹೇಬ ಜೊಲ್ಲೆ ನಂತರ 2019ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿ ಆಯ್ಕೆಯಾದರು.


ರಾಜಕೀಯ ಹಾದಿ


  • 2008 ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಇವರು 38,585 ಮತಗಳನ್ನು ಪಡೆಯುವ ಮೂಲಕ ಸೋಲುಂಡರು

  • ನಂತರ 2013ರಲ್ಲಿ ಮತ್ತೆ ಅಸೆಂಬ್ಲಿ ಎಲೆಕ್ಷನ್‌ ಎದುರಿಸಿದ ಇವರು ಕಾಂಗ್ರೆಸ್‌ನ ಪಾಂಡುರಂಗ ಪಾಟೀಲ್ ಸೋಲಿಸಿ ಮೊದಲ ಬಾರಿಗೆ ಶಾಸಕಿಯಾದರು.

  • ಮತ್ತೆ ಅವರು 2018 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 87,006 ಮತಗಳನ್ನು ಪಡೆದು ನಿಪ್ಪಾಣಿಯಿಂದ ಮರು ಆಯ್ಕೆಯಾದರು. ಈ ಚುನಾವಣೆಯಲ್ಲಿ ಶಶಿಕಲಾ ಜೊಲ್ಲೆ ಅವರು ಕಾಂಗ್ರೆಸ್ ಪಕ್ಷದ ಕಾಕಾ ಸಾವೋ ಪಾಟೀಲ್ ಮತ್ತು ಬಿಎಸ್ಪಿಯ ಈಶ್ವರ್ ಕಾಮತ್ ಅವರನ್ನು ಸೋಲಿಸಿದ್ದರು.

  • ಆಗಸ್ಟ್ 2019 ರಂದು ಅವರು ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇರ್ಪಡೆಯಾದರು. ಮತ್ತು ಇವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಸಬಲೀಕರಣ ಖಾತೆ ಹೊಣೆ ನೀಡಲಾಗಿತ್ತು.

  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರ್ಪಡೆಯಲ್ಲೂ ಸ್ಥಾನ ಪಡೆದ ಇವರು ಮುಜರಾಯಿ, ವಕ್ಪ್ ಮತ್ತು ಹಜ್ ಖಾತೆಯ ಹೊಣೆ ನಿಭಾಯಿಸುತ್ತಿದ್ದರು.


ಇದನ್ನೂ ಓದಿ: Dr K Annadani: ಗೆದ್ದೇ ಗೆಲ್ಲುವ ಛಲದಲ್ಲಿರುವ ಮಳವಳ್ಳಿ ಶಾಸಕ ಡಾ ಕೆ ಅನ್ನದಾನಿಯವರ ಬಗ್ಗೆ ನಿಮಗೆಷ್ಟು ಗೊತ್ತು?


ಆರೋಪಗಳು


ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿದ್ದ ವೇಳೆ ಶಶಿಕಲಾ ಜೊಲ್ಲೆ ಮೊಟ್ಟೆ ಖರೀದಿಯಲ್ಲಿ ಕಿಕ್‌ಬ್ಯಾಕ್ ಪಡೆದ ಆರೋಪ ಹೊಂದಿದ್ದರು. ಮೊಟ್ಟೆ ಖರೀದಿಯ ಟೆಂಡರ್‌ಗೆ ಸಂಬಂಧಿಸಿದಂತೆ 1 ಕೋಟಿಗೂ ಹೆಚ್ಚು ಹಣಕ್ಕಾಗಿ ಬೇಡಿಕೆ ಇಟ್ಟ ಆರೋಪ ಶಶಿಕಲಾ ಜೊಲ್ಲೆ ವಿರುದ್ಧ ಕೇಳಿ ಬಂದಿತ್ತು.


ಗರ್ಭಿಣಿಯರಿಗೆ ನೀಡುವ ಮಾತೃಪೂರ್ಣ ಯೋಜನೆಯಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ವಿರುದ್ಧ ಬೆಳಗಾವಿ ಲೋಕಾಯುಕ್ತ ಕಚೇರಿಗೆ ವಕೀಲರಾದ ಸುರೇಂದ್ರ ಉಗಾರೆ ದೂರು ಕೂಡ ನೀಡಿದ್ದರು. ಆದರೆ ಈ ವಿಷಯವಾಗಿ ಶಶಿಕಲಾ ಜೊಲ್ಲೆ ಇದು ನನ್ನ ವಿರುದ್ಧದ ಪಿತೂರಿ ಎಂದು ಸ್ಪಷ್ಟನೆ ನೀಡಿದ್ದರು.




ನಿಪ್ಪಾಣಿ ಅಖಾಡದಲ್ಲಿ ಯಾರ ಜೊತೆ ಸ್ಪರ್ಧೆಗಿಳಿದಿದ್ದಾರೆ ಜೊಲ್ಲೆ


ಈ ಬಾರಿ ನಿಪ್ಪಾಣಿ ಕ್ಷೇತ್ರದಿಂದ ಎಎಪಿ ಪಕ್ಷದಿಂದ ರಾಜೇಶ ಅಣ್ಣಾಸಾಹೇಬ ಬಸವಣ್ಣ, ಕಾಂಗ್ರೆಸ್‌ನಿಂದ ಕಾಕಾ ಸಾಹೇಬ್ ಪಾಟೀಲ್ ವಿರುದ್ಧ ಶಶಿಕಲಾ ಜೊಲ್ಲೆ ಕಣಕ್ಕಿಳಿದಿದ್ದಾರೆ.

top videos
    First published: