• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Malikayya Guttedar: ಅಫಜಲಪುರ ಪಟ್ಟಣದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ರಾಜಕೀಯ ಪರಿಚಯ ಇಲ್ಲಿದೆ

Malikayya Guttedar: ಅಫಜಲಪುರ ಪಟ್ಟಣದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ರಾಜಕೀಯ ಪರಿಚಯ ಇಲ್ಲಿದೆ

ಮಾಲೀಕಯ್ಯ ಗುತ್ತೇದಾರ್‌

ಮಾಲೀಕಯ್ಯ ಗುತ್ತೇದಾರ್‌

ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣವನ್ನು ಪ್ರತಿನಿಧಿಸುವ ಮಾಲೀಕಯ್ಯ ಗುತ್ತೇದಾರ್‌ ಅವರ ರಾಜಕೀಯ ಜೀವನದ ಬಗ್ಗೆ ನಿಮಗೆಷ್ಟು ಗೊತ್ತಿದೆ? ಇಲ್ಲಿದೆ ಅವರ ಸಂಕ್ಷಿಪ್ತ ಪರಿಚಯ

  • Trending Desk
  • 4-MIN READ
  • Last Updated :
  • Gulbarga, India
  • Share this:

Karnataka Assembly Election 2023: ಮೇ 10 ರಂದು ನಡೆಯಲಿರುವ ಚುನಾವಣೆಗಾಗಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಭರದಿಂದ ಮತಪ್ರಚಾರ ನಡೆಸುತ್ತಿದ್ದು ಜನಸಾಮಾನ್ಯರ ಮನವೊಲಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ತಮ್ಮ ಪಕ್ಷವೇ ಗೆಲ್ಲಬೇಕೆಂಬ ಛಲದಲ್ಲಿ ಅನೇಕ ಗಿಮಿಕ್‌ಗಳನ್ನು ನಡೆಸುವ ಅಭ್ಯರ್ಥಿಗಳು ಶ್ರೀ ಸಾಮಾನ್ಯರ ಮನೆ ಮನೆಗೆ ತೆರಳಿ ಪರಿಪರಿಯಾಗಿ ವಿನಂತಿಸಿಕೊಳ್ಳುತ್ತಿದ್ದಾರೆ.


ಬಿಜೆಪಿಯ ಅಭ್ಯರ್ಥಿಗಳು ಸಹ ಚುನಾವಣೆಯಲ್ಲಿ ತಲ್ಲೀನರಾಗಿದ್ದು, ಮತ್ತೆ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯದ 224 ಕ್ಷೇತ್ರಗಳು ಮತ್ತು ಅದರ ಅಭ್ಯರ್ಥಿಗಳು ಒಂದೊಂದು ರೀತಿಯಲ್ಲಿ ವಿಶೇಷವಾಗಿದ್ದಾರೆ. ಅದರಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ (Afzalpur) ಪಟ್ಟಣ ಕ್ಷೇತ್ರ ಹೇಗಿದೆ, ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಿದ್ದಾರೆ? ಅಭ್ಯರ್ಥಿ ಹಿನ್ನೆಲೆ ಏನು ನೋಡೋಣ.


ಕಲಬುರಗಿ ಜಿಲ್ಲೆಯ ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಗುತ್ತೇದಾರ ಸಹೋದರರ ನಡುವಿನ ಸಂಧಾನ ಮಾತುಕತೆ ವಿಫಲವಾಗಿದ್ದು, ಸಹೋದರರ ನಡುವೆ ಇಲ್ಲಿ ಮೆಗಾ ಫೈಟ್ ಶುರುವಾಗಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಅಫಜಲಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ (Malikayya Guttedar) ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದರೆ, ಅವರ ಸ್ವಂತ ತಮ್ಮ ನಿತಿನ್ ಗುತ್ತೇದಾರ ಈ ಬಾರಿ ಅದೇ ಅಫಜಲಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.


ಇದನ್ನೂ ಓದಿ: Katta Jagadish Naidu: ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್ ನಾಯ್ಡು ಬಗ್ಗೆ ಗೊತ್ತಿರಬೇಕಾದ ಸಂಗತಿಗಳಿವು!


ಮಾಲೀಕಯ್ಯ ಗುತ್ತೇದಾರ್‌ ಅವರ ಕಿರು ಪರಿಚಯ


ಮಾಲೀಕಯ್ಯ ವಿ ಗುತ್ತೇದಾರ್ ಅವರು13 ಮೇ 1956 ರಂದು ಸೊಲ್ಲಾಪುರದಲ್ಲಿ ಜನಿಸಿದ್ದು,ಗುಲ್ಬರ್ಗಾ ಜಿಲ್ಲೆಯ ಅಫ್ಜಲ್‌ಪುರ ಪಟ್ಟಣವನ್ನು ಪ್ರತಿನಿಧಿಸುವ ಕರ್ನಾಟಕ ವಿಧಾನಸಭೆಯ ಭಾರತೀಯ ಸದಸ್ಯರಾಗಿದ್ದಾರೆ.


ಕರ್ನಾಟಕದ ಮಾಜಿ ಸಚಿವ ಮತ್ತು ಕಲಬುರಗಿ ಜಿಲ್ಲೆಯ ಹಿರಿಯ ನಾಯಕರಾದ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು ಆದರೆ 9 ಏಪ್ರಿಲ್ 2018 ರಂದು ಬಿಜೆಪಿ ಸೇರಿದರು. ಅವರು ಇತ್ತೀಚೆಗೆ 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಮ್‌ವೈ ಪಾಟೀಲ್ ವಿರುದ್ಧ ಸೋತಿದ್ದರು.


ಮಾಲಿಕಯ್ಯ ವೆಂಕಯ್ಯ ಗುತ್ತೇದಾರ್ ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆರು ಬಾರಿ ಆಯ್ಕೆಯಾಗಿದ್ದಾರೆ. ಆದರೆ ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅಂದರೆ ೨೦೧೮ ರ ರಾಜ್ಯ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಅವರು ಬಿಜೆಪಿ ಪಕ್ಷವನ್ನು ಸೇರಿದರು. ಪ್ರಸ್ತುತ ಬಿಜೆಪಿಯಿಂದಲೇ ಮತ್ತೆ ಚುನಾವಣಕಾ ಅಖಾಡಾಗೆ ಇಳಿದಿದ್ದಾರೆ.


ಮಾಲೀಕಯ್ಯ ಗುತ್ತೇದಾರ್ ನಿವ್ವಳ ಮೌಲ್ಯ


ಮಾಲೀಕಯ್ಯ ಗುತ್ತೇದಾರ್ ಶ್ರೀಮಂತ ಶಾಸಕರಲ್ಲಿ ಒಬ್ಬರು ಮತ್ತು ಅತ್ಯಂತ ಜನಪ್ರಿಯ ಶಾಸಕರಲ್ಲಿ ಒಬ್ಬರು. ವಿಕಿಪೀಡಿಯಾ, ಫೋರ್ಬ್ಸ್ ಮತ್ತು ಬಿಸಿನೆಸ್ ಇನ್ಸೈಡರ್ ವಿಶ್ಲೇಷಣೆಯ ಪ್ರಕಾರ, ಮಾಲೀಕಯ್ಯ ಗುತ್ತೇದಾರ್ ಅವರು $ 5 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.


ತಮ್ಮ ಅಫಿಡವಿಟ್ ನಲ್ಲಿ ಮಾಲಿಕಯ್ಯ ಅವರು ಚರಾಸ್ತಿಗೆ ಸಂಬಂಧಿಸಿದಂತೆ 38 ಸಾವಿರಕ್ಕೂ ಅಧಿಕ ನಗದು, 15 ಲಕ್ಷಕ್ಕೂ ಅಧಿಕ ಬ್ಯಾಂಕ್ ಡಿಪಾಸಿಟ್, ೧೮ ಲಕ್ಷಕ್ಕೂ ಅಧಿಕ ಮೌಲ್ಯದ ವಿಮಾ ಇತ್ಯಾದಿ ಹೊಂದಿರುವುದಾಗಿ ಘೋಷಿಸಿದ್ದು 54 ಲಕ್ಷಕ್ಕೂ ಅಧಿಕ ರೂಪಾಯಿಗಳ ಸಾಲ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.


24 ಲಕ್ಷಕ್ಕೂ ಅಧಿಕ ಮೌಲ್ಯದ ವಾಹನಗಳು ಹಾಗೂ 46 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಅವರು ಹೊಂದಿರುವುದಾಗಿ ಘೋಷಿಸಿದ್ದಾರೆ.


ಸ್ಥಿರಾಸ್ತಿಗೆ ಸಂಬಂಧಿಸಿದಂತೆ, 15 ಲಕ್ಷ ಮೌಲ್ಯದ ಕೃಷಿ ಭೂಮಿ ಹಾಗೂ ಐದು ಲಕ್ಷ ಮೌಲ್ಯದ ಕೃಷಿಯೇತರ ಭೂಮಿಯನ್ನು ಹೊಂದಿರುವುದಾಗಿ ಘೋಷಿಸಿಕೊಂಡಿರುವ ಗುತ್ತೇದಾರ್ ಯಾವುದೇ ವಾಣಿಜ್ಯ ಕಟ್ಟಡಗಳನ್ನು ಹೊಂದಿಲ್ಲದಿರುವುದಾಗಿ ಹೇಳಿದ್ದಾರೆ.


ಇನ್ನು ಅಣ್ಣ ಮಾಲೀಕಯ್ಯ ಗುತ್ತೇದಾರ ವಿರುದ್ದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನಿತಿನ್ ಗುತ್ತೇದಾರ ನಾಮಪತ್ರ ವಾಪಾಸ್ ಪಡೆಯಲು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಹಾಗಾಗಿ ಅಫಜಲಪುರ ವಿಧಾನ ಸಭಾ ಚುನಾವಣಾ ಕಣದಲ್ಲಿ ಸಹೋದರರ ಸವಾಲ್ ಜೋರಾಗಿದ್ದು, ಕಣ ರಂಗೇರಿದೆ.


ಇದನ್ನೂ ಓದಿ: SP Rishyanth: ಶಾಮನೂರು ಕುಟುಂಬದ ಮೇಲೆ ಕೇಸ್ ಮಾಡಿದ್ದ ದಾವಣಗೆರೆ ಎಸ್‌ಪಿ ದಿಢೀರ್ ವರ್ಗಾವಣೆ!


ಇನ್ನು ಈ ಹಿಂದೆ ಮಾಲಿಕಯ್ಯ ಅವರು ತಮ್ಮನೇ ಉತ್ತರಾಧಿಕಾರಿ ಎಂದು ಹೇಳಿರುವ ಬಗ್ಗೆ ಕೇಳಿದಾಗ ಅದಕ್ಕವರು ಅದು ಈಗಲೂ ಸತ್ಯವಾದ ಮಾತಾಗಿದ್ದು ಅದು 2023 ಕ್ಕೆ ಅಂತ ನಾನು ಎಲ್ಲೂ ಹೇಳಿಲ್ಲ ಎಂದಿದ್ದಾರೆ.


ಅಲ್ಲದೆ, ಹಾಗೇನಾದ್ರೂ ಸಾಬೀತು ಮಾಡಿದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಕಿರಿಯ ಸಹೋದರ ನಿತಿನ್ ಗುತ್ತೇದಾರಗೆ ಅಣ್ಣ ಮಾಲೀಕಯ್ಯ ಗುತ್ತೇದಾರ ಸವಾಲು ಹಾಕಿದ್ದಾರೆ.


ನಾನು ಮಾಡಿರುವ ಅಭಿವೃದ್ಧಿ ಕೆಲಸ ಮತ್ತು ಪಕ್ಷದ ಕಾರ್ಯಕರ್ತರ ಶ್ರಮದಿಂದ ಈ ಬಾರಿ ನನ್ನ ಗೆಲುವು ಖಚಿತ ಎನ್ನುವುದು ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ವಿಶ್ವಾಸದ ಮಾತು.

First published: