• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Ashok Kheny: ಬೀದರ್ ದಕ್ಷಿಣದ ಕಾಂಗ್ರೆಸ್‌ ಅಭ್ಯರ್ಥಿ, ಉದ್ಯಮಿ ಅಶೋಕ್ ಖೇಣಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಕಿರು ಪರಿಚಯ

Ashok Kheny: ಬೀದರ್ ದಕ್ಷಿಣದ ಕಾಂಗ್ರೆಸ್‌ ಅಭ್ಯರ್ಥಿ, ಉದ್ಯಮಿ ಅಶೋಕ್ ಖೇಣಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಕಿರು ಪರಿಚಯ

Ashok Kheny

Ashok Kheny

ಬೀದರ್ ದಕ್ಷಿಣದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ಅಶೋಕ್ ಖೇಣಿಗೆ ವಿಜಯಲಕ್ಷ್ಮೀಯ ಕೃಪಾಕಟಾಕ್ಷ ದೊರೆಯುವುದೇ? ಉದ್ಯಮಿಯೂ ಆಗಿರುವ ಅಶೋಕ್ ಖೇಣಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಅವರ ಕಿರುಪರಿಚಯ

 • Share this:

ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದ ಅಭ್ಯರ್ಥಿಗಳು ಭರ್ಜರಿಯಿಂದಲೇ ತಯಾರಿ ನಡೆಸುತ್ತಿದ್ದಾರೆ. ಓಟು ಹಾಕುವವರ ಮನ ಗೆಲ್ಲುವುದಕ್ಕಾಗಿ ಮನೆ ಮನೆಗೆ ತೆರಳಿ ತಮಗೇ ಮತ ಹಾಕುವಂತೆ, ತಾವು ಪ್ರತಿನಿಧಿಸುತ್ತಿರುವ ಪಕ್ಷವನ್ನೇ ಆಡಳಿತಕ್ಕೆ ತರುವಂತೆ ಯಾಚಿಸುತ್ತಿದ್ದಾರೆ.


ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನೆಲ್ಲಾ ಮಾಡುತ್ತೇವೆ ಎಂಬ ಆಶ್ವಾಸನೆಯನ್ನು ನೀಡುತ್ತಿದ್ದಾರೆ ಹಾಗೂ ಮತದಾರರ ಮನಗೆಲ್ಲಲು ಶತಪ್ರಯತ್ನ ಮಾಡುತ್ತಿದ್ದಾರೆ.


ಇಂದಿನ ಲೇಖನದಲ್ಲಿ ಬೀದರ್ ದಕ್ಷಿಣದ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಕಣಕ್ಕಿಳಿದಿರುವ ಉದ್ಯಮಿ ಅಶೋಕ್ ಖೇಣಿ (Ashok Kheny) ಕುರಿತು ತಿಳಿದುಕೊಳ್ಳೋಣ.


ಇದನ್ನೂ ಓದಿ: GD Harish Gowda: ಹುಣಸೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜಿಡಿ ಹರೀಶ್ ಗೌಡ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪೂರ್ಣ ವಿವರ


ಖ್ಯಾತ ಉದ್ಯಮಿ ಅಶೋಕ್ ಶಂಕರಪ್ಪ ಖೇಣಿಯ ಕಿರು ಪರಿಚಯ


ಅಶೋಕ್ ಶಂಕರಪ್ಪ ಖೇಣಿ ಅವರು ಭಾರತೀಯ ಚಲನಚಿತ್ರ ನಿರ್ಮಾಪಕ, ನಟ, ನಿರ್ದೇಶಕ, ಉದ್ಯಮಿ, ರಾಜಕಾರಣಿ ಮತ್ತು ಕರ್ನಾಟಕ ಬುಲ್ಡೋಜರ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ.


ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್‌ಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಬೆಂಗಳೂರಿನಲ್ಲಿರುವ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.


9 ಮೇ 2013 ರಿಂದ 15 ಮೇ 2018 ರವರೆಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು, ಬೀದರ್ ದಕ್ಷಿಣದ ಶಾಸಕರೂ ಹೌದು.


ಅಶೋಕ್ ಖೇಣಿ ಬಾಲ್ಯ ಹಾಗೂ ಶಿಕ್ಷಣ


ಅಶೋಕ್ ಖೇಣಿಯವರ ತಂದೆ ದಿವಂಗತ ಮಹಾರುದ್ರಪ್ಪ ಖೇಣಿ. ಖ್ಯಾತ ಕೈಗಾರಿಕೋದ್ಯಮಿಯಾಗಿರುವ ಖೇಣಿಯವರು 1974 ರಲ್ಲಿ ವೂಸ್ಟರ್ ಪಾಲಿಟೆಕ್ನಿಕ್ ಕಾಲೇಜ್ (ವೂಸ್ಟರ್ ಮ್ಯಾಸಚೂಸೆಟ್ಸ್) USA ನಿಂದ M.S ಸ್ನಾತಕೋತ್ತರ ಪದವೀಧರರಾಗಿದ್ದಾರೆ.


ಖೇಣಿ ಅವರು 1987 ರ ಅಲ್ಪಸಂಖ್ಯಾತ ಸಮುದಾಯದ ಪ್ರಶಸ್ತಿಯಿಂದ ವರ್ಷದ ಅತ್ಯುತ್ತಮ ಉದ್ಯಮಿ ಪ್ರಶಸ್ತಿಯನ್ನು ಪಡೆದವರು ಅಂತೆಯೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ.


ಇದನ್ನೂ ಓದಿ: Vijayanand Kashappanavar: ಹುನಗುಂದ ಮತ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಕುರಿತ ಪರಿಚಯ ಲೇಖನ ಇಲ್ಲಿದೆ


ಖೇಣಿಯವರ ಆಸ್ತಿಪಾಸ್ತಿಗಳ ವಿವರ


ಅಶೋಕ್ ಖೇಣಿ ಒಟ್ಟು ರೂ 190 ಕೋಟಿ ಮೌಲ್ಯದ ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ನೀಡಿದ್ದು, ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ರೂ 3 ಕೋಟಿ ಆದಾಯವನ್ನು ಉಲ್ಲೇಖಿಸಿದ್ದಾರೆ.


ಖೇಣಿಯವರ ಚರಾಸ್ತಿ ವಿವರ


ಖೇಣಿಯವರು ನಗದು ರೂಪದಲ್ಲಿ ರೂ 50,000 ಹಣವನ್ನು ಇರಿಸಿಕೊಂಡಿರುವುದಾಗಿ ತಿಳಿಸಿದ್ದು, ರೂ 6 ಲಕ್ಷದ ಮೌಲ್ಯದ ಹಣವನ್ನು ಆಕ್ಸಿಸ್ ಬ್ಯಾಂಕ್‌ನಲ್ಲಿ ಡಿಪಾಸಿಟ್ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ಬಾಂಡ್ ಹಾಗೂ ಷೇರುಗಳ ಮಾಹಿತಿ ಕೂಡ ನೀಡಿದ್ದು, ರೂ 21 ಕೋಟಿ ಮೌಲ್ಯದ ಷೇರು ಹಾಗೂ ಬಾಂಡ್‌ಗಳು ಇವರ ಬಳಿ ಇವೆ. ಪೋಸ್ಟಲ್ ಸೇವಿಂಗ್ಸ್ ಆಗಿ ರೂ 9 ಕೋಟಿ ಖೇಣಿಯವರ ಹೆಸರಿನಲ್ಲಿದೆ. ಅಂತೆಯೇ ಎಲ್‌ಐಸಿ ಹಾಗೂ ಇನ್ನಿತರ ವಿಮೆಗಳ ಮೊತ್ತ 9 ಕೋಟಿಯಾಗಿದೆ.


ರೂ 66 ಕೋಟಿ ಪರ್ಸನಲ್ ಲೋನ್ ಖೇಣಿ ಹೆಸರಿನಲ್ಲಿದೆ. ರೂ 99 ಲಕ್ಷದ ವಾಹನಗಳನ್ನು ಅಶೋಕ್ ಖೇಣಿ ಹೊಂದಿದ್ದಾರೆ. ಆಭರಣವಾಗಿ ರೂ 1 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದಾರೆ. ಇದೆಲ್ಲಾ ವಸ್ತುಗಳ ಒಟ್ಟು ಮೌಲ್ಯ ರೂ 109 ಕೋಟಿ ಎಂಬುದಾಗಿ ಖೇಣಿ ತಿಳಿಸಿದ್ದಾರೆ.


ಖೇಣಿಯವರ ಸ್ಥಿರಾಸ್ತಿ ವಿವರ ಹೀಗಿದೆ


ಅಶೋಕ್ ಖೇಣಿಯವರು ಕೃಷಿ ಭೂಮಿಯನ್ನು ಹೊಂದಿಲ್ಲ. ಆದರೆ ರೂ 27 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ ಇವರ ಹೆಸರಿನಲ್ಲಿದೆ. ವಾಣಿಜ್ಯ ಕಟ್ಟಡಗಳು ಇವರ ಹೆಸರಿನಲ್ಲಿದ್ದು ಅದರ ಮೌಲ್ಯ ರೂ 19 ಕೋಟಿ ಎಂಬ ವಿವರ ನೀಡಿದ್ದಾರೆ.

top videos  ಅಂತೆಯೇ ವಸತಿ ಸಂಕೀರ್ಣಗಳನ್ನು ಖೇಣಿಯವರು ಹೊಂದಿದ್ದು ಮೌಲ್ಯ ರೂ 60 ಕೋಟಿ ಎಂಬ ವಿವರ ನೀಡಿದ್ದಾರೆ. ಇವೆರಡರ ಒಟ್ಟು ಮಾರುಕಟ್ಟೆ ಮೌಲ್ಯ ರೂ 80 ಕೋಟಿ ಎಂಬ ವಿವರ ಲಭ್ಯವಾಗಿದೆ.

  First published: