• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Nagesh Manolkar: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗೆದ್ದು ಬೀಗ್ತಾರಾ ರಮೇಶ್ ಜಾರಕಿಹೊಳಿ ಆಪ್ತ?

Nagesh Manolkar: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗೆದ್ದು ಬೀಗ್ತಾರಾ ರಮೇಶ್ ಜಾರಕಿಹೊಳಿ ಆಪ್ತ?

ನಾಗೇಶ್ ಮನೋಳ್ಕರ್ ವರ್ಸಸ್ ಲಕ್ಷ್ಮಿ  ಹೆಬ್ಬಾಳ್ಕರ್

ನಾಗೇಶ್ ಮನೋಳ್ಕರ್ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್

Belagavi Rural: ರಮೇಶ್ ಜಾರಕಿಹೊಳಿಯವರ ಬೆಂಬಲ ಕೂಡ ನಾಗೇಶ್ ಅವರಿಗಿದ್ದು ಅವರ ನಿರ್ದೇಶನದಲ್ಲಿಯೇ ಚುನಾವಣಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

  • Trending Desk
  • 5-MIN READ
  • Last Updated :
  • Belgaum, India
  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಪ್ರತಿಯೊಂದು ಪಕ್ಷದ ಅಭ್ಯರ್ಥಿಗಳು (Election Candidates) ಸಿದ್ಧವಾಗುತ್ತಿದ್ದು, ಭರದಿಂದ ಮತಯಾಚನೆ (Election Campaign) ನಡೆಸುತ್ತಿದ್ದಾರೆ. ಕರ್ನಾಟಕ ವಿಧಾನಸಭೆಯ ಎಲ್ಲಾ 224 ಸದಸ್ಯರನ್ನು ಆಯ್ಕೆ ಮಾಡಲು 10 ಮೇ 2023 ರಂದು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಮೇ 13 ರಂದು ಮತ ಎಣಿಕೆ ನಡೆಯಲಿದ್ದು ಚುನಾವಣೆ ಫಲಿತಾಂಶ (Election Results) ಪ್ರಕಟವಾಗಲಿದೆ.


ಕರ್ನಾಟಕ ವಿಧಾನಸಭೆಯ ಅಧಿಕಾರಾವಧಿಯು 24 ಮೇ 2023 ರಂದು ಕೊನೆಗೊಳ್ಳಲಿದೆ. ಹಾಗಾಗಿ ಈ ಬಾರಿಯ ಚುನಾವಣೆ ಹೆಚ್ಚು ಪ್ರಮುಖ ಎಂದೆನಿಸಲಿದ್ದು, ಅಭ್ಯರ್ಥಿಗಳು ಬಿರುಸಿನ ಮತಪ್ರಚಾರದಲ್ಲಿ ತೊಡಗಿದ್ದಾರೆ.


ನಾಗೇಶ್ ಅಣ್ಣಪ್ಪ ಮನೋಳ್ಕರ್


ಇಂದಿನ ಲೇಖನದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಬೆಳಗಾವಿ ಗ್ರಾಮಾಂತರ ಅಭ್ಯರ್ಥಿ(Belagavi Rural Constituency) ನಾಗೇಶ್ ಅಣ್ಣಪ್ಪ ಮನೋಳ್ಕರ್ (Nagesh Annappa Manolkar) ಪರಿಚಯ ಮಾಡಿಕೊಳ್ಳೋಣ. 52 ರ ಹರೆಯದ ನಾಗೇಶ್ ಮನೋಳ್ಕರ್ ದ್ವಿತೀಯ ಪಿಯುಸಿಯವರೆಗೆ ಶಿಕ್ಷಣ ಪೂರೈಸಿದ್ದಾರೆ.


ರಾಜಕೀಯದಲ್ಲಿ ಸಕ್ರಿಯವಾಗಿರುವ ನಾಗೇಶ್ ಇದರೊಂದಿಗೆ ಕೃಷಿ ಹಾಗೂ ಬ್ಯುಸಿನೆಸ್ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡವರು.


ರಮೇಶ್ ಜಾರಕಿಹೊಳಿ ಆಪ್ತರೂ ಆಗಿರುವ ನಾಗೇಶ್ ಸಾಮಾಜಿಕ ಕೆಲಸಕಾರ್ಯಗಳಲ್ಲಿ ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದಾರೆ.


karnataka-assembly-election-2023-belagavi-rural-bjp-candidate-nagesh-manolkar-political-profile-stg-mrq
ಲಕ್ಷ್ಮಿ ಹೆಬ್ಬಾಳ್ಕರ್


ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುರಿತು


ಬೆಳಗಾವಿ ಗ್ರಾಮೀಣ ಅಸೆಂಬ್ಲಿ ಕ್ಷೇತ್ರವು ಭಾರತದ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಬೆಳಗಾವಿ (ಲೋಕಸಭಾ ಕ್ಷೇತ್ರ) ಒಳಗೊಂಡಿರುವ 8 ಕ್ಷೇತ್ರಗಳಲ್ಲಿ ಒಂದಾಗಿದೆ.


ಕ್ಷೇತ್ರದಲ್ಲಿ ಸಾಮಾನ್ಯ ಮತದಾರರು, ಅನಿವಾಸಿ ಭಾರತೀಯರು ಮತ್ತು ಸೇವಾ ಮತದಾರರು ಸೇರಿ ಒಟ್ಟು 2,34,076 ಮತದಾರರಿದ್ದಾರೆ. ಸಾಮಾನ್ಯ ಮತದಾರರಲ್ಲಿ 1,18,057 ಪುರುಷರು, 1,14,364 ಮಹಿಳೆಯರು ಮತ್ತು 19 ಇತರರು ಒಳಗೊಂಡಿದೆ. ಅಂದಾಜು ಸಾಕ್ಷರತೆ ಪ್ರಮಾಣ 77% ವಾಗಿದೆ.


2013 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಈ ಸ್ಥಾನವನ್ನು 1,335 ಮತಗಳ (0.88%) ಅಂತರದಿಂದ ಗೆದ್ದುಕೊಂಡಿತು, ಒಟ್ಟು ಚಲಾವಣೆಯಾದ ಒಟ್ಟು ಮತಗಳಲ್ಲಿ 25.2% ಗಳಿಸಿತು. 2013 ರಲ್ಲಿ ಕ್ಷೇತ್ರವು 74% ರಷ್ಟು ಮತದಾನವಾಗಿತ್ತು.


ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರವು ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಂಗಡಿ ಸುರೇಶ್ ಚನ್ನಬಸಪ್ಪ ಅವರು ಬೆಳಗಾವಿ ಲೋಕಸಭಾ (MP) ಸ್ಥಾನದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಡಾ.ಸಾಧುನವರ್ ಅವರನ್ನು ಸೋಲಿಸುವ ಮೂಲಕ 391304 ಮತಗಳ ಅಂತರದಿಂದ ಗೆದ್ದರು.


ರಮೇಶ್ ಜಾರಕಿಹೊಳಿ ವರ್ಸಸ್​ ಲಕ್ಷ್ಮಿ ಹೆಬ್ಬಾಳ್ಕರ್


ನಾಗೇಶ್ ಅಣ್ಣಪ್ಪ ಆಸ್ತಿಪಾಸ್ತಿ ವಿವರ


ರೂ 77,89,645 ಚರಾಸ್ತಿ ಹೊಂದಿದ್ದು ರೂ 65747000 ಸ್ಥಿರಾಸ್ತಿ ಹೊಂದಿದ್ದಾರೆ. ಇತ್ತೀಚೆಗೆ ಚುನಾವಣೆ ನೀತಿ ಉಲ್ಲಂಘಿಸಿ ಮತದಾರರಿಗೆ ಹಂಚಲು ನೂರಾರು ಟಿಫಿನ್ ಬಾಕ್ಸ್‌ಗಳನ್ನು ಜಪ್ತಿ ಮಾಡಿಕೊಂಡಿದ್ದ ಅಧಿಕಾರಿಗಳು ನಾಗೇಶ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.


ಅಂತೆಯೇ ಬಾಡೂಟ ಆಯೋಜನೆ ಹಿನ್ನೆಲೆಯಲ್ಲಿ ಕೂಡ ಅಭ್ಯರ್ಥಿ ಮೇಲೆ ಕೇಸು ದಾಖಲಿಸಲಾಗಿತ್ತು. ಸಾಮಾಜಿಕ ತಾಣಗಳಲ್ಲಿಯೂ ಹೆಚ್ಚು ಸಕ್ರಿಯರಾಗಿರುವ ನಾಗೇಶ್ ಮನೋಳ್ಕರ್ ಚುನಾವಣಾ ಪ್ರಚಾರಕ್ಕಾಗಿ ಭರದಿಂದಲೇ ಸಜ್ಜಾಗಿದ್ದಾರೆ.




ಸಾಮಾಜಿಕ ತಾಣದಲ್ಲಿಯೂ ಸಕ್ರಿಯ ಮತಯಾಚನೆ


ಫೇಸ್‌ಬುಕ್, ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿಯೂ ಪಕ್ಷದ ಹಾಗೂ ಕ್ಷೇತ್ರದ ಚುನಾವಣಾ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದು ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಬೇಕೆಂಬ ನಿಟ್ಟಿನಲ್ಲಿ ಹಗಲು ರಾತ್ರಿ ಪರಿಶ್ರಮವಹಿಸಿ ಮತಯಾಚಿಸುತ್ತಿದ್ದಾರೆ.


ರಮೇಶ್ ಜಾರಕಿಹೊಳಿಯವರ ಬೆಂಬಲ ಕೂಡ ನಾಗೇಶ್ ಅವರಿಗಿದ್ದು ಅವರ ನಿರ್ದೇಶನದಲ್ಲಿಯೇ ಚುನಾವಣಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ:  Karnataka Election 2023: ಸಿದ್ದುಗೆ ಪಕ್ಷದ ಚಿಹ್ನೆ ಇರೋ ಬ್ಯಾಡ್ಸ್​​ ಹಾಕಿದ ಡಿಕೆಶಿ; ಹೆಗಲ ಮೇಲೆ ಕೈ ಹಾಕಿಕೊಂಡು ಸಖತ್ ಪೋಸ್!


ಶ್ರೀಸಾಮಾನ್ಯನ ಕೈಯಲ್ಲಿಯೇ ಹೆಚ್ಚಿನ ಅಭ್ಯರ್ಥಿಗಳ ಭವಿಷ್ಯದ ಬರಹ ಅಡಗಿದ್ದು, ಯಾವ ಕ್ಷೇತ್ರದಲ್ಲಿ ಯಾರು ವಿಜಯಿಗಳಾಗುತ್ತಾರೆ ಎಂಬುದು ಫಲಿತಾಂಶದ ದಿನ ತಿಳಿದುಬರುತ್ತದೆ. ಅಂತೂ ಜನರು ಸೂಕ್ತವಾದ ನಾಯಕರನ್ನೇ ತಮಗಾಗಿ ಆರಿಸಿಕೊಳ್ಳುತ್ತಾರೆ ಎಂಬುದು ಚುನಾವಣೆಯಲ್ಲಿ ನಿಜವಾಗಲಿದೆ.

First published: