ಬೆಂಗಳೂರು: ರಾಜ್ಯ ಚುನಾವಣಾ ಆಯೋಗ (Election Commission) ಸುದ್ದಿಗೋಷ್ಠಿ ಬೆನ್ನಲ್ಲೇ ಬಿಬಿಎಂಪಿ (BBMP) ಮುಖ್ಯ ಆಯುಕ್ತರು, ಬಿಬಿಎಂಪಿ ಚುನಾವಣಾ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಜಂಟಿ ಸುದ್ದಿಗೋಷ್ಠಿ ನಡೆಸಿ ಬೆಂಗಳೂರು ಹಾಗೂ ನಗರ ಜಿಲ್ಲೆ ಚುನಾವಣೆ ಸಿದ್ಧತೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಿಬಿಎಂಪಿ ಕಮಿಷನರ್ (BBMP Commissioner) ತುಷಾರ್ ಗಿರಿನಾಥ್ (Tushar Giri Nath) ಮಾತನಾಡಿ, ಈಗಾಗಲೇ ಚುನಾವಣೆಗೆ ಬೇಕಾದ ತಂಡದ ರಚನೆ ಆಗಿದೆ. ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಮುಖ್ಯವಾಗಿ ಇಲ್ಲಿ ಕೆಲಸ ಮಾಡಲಿದ್ದಾರೆ. 28ರ ಪೈಕಿ 19 ವಿಧಾನಸಭಾ ಕ್ಷೇತ್ರಗಳನ್ನು ಈಗಾಗಲೇ ಎಕ್ಸ್ ಪೆಂಡಿಚರ್ ಕ್ಷೇತ್ರ ಎಂದು ಘೋಷಣೆ ಮಾಡಿದ್ದೇವೆ.
ಬೆಂಗಳೂರಿನಲ್ಲಿ 2 ಲಕ್ಷಕ್ಕೂ ಹೆಚ್ಚು ಯುವ ಮತದಾರರು
ಬೆಂಗಳೂರಿನಲ್ಲಿ ಒಟ್ಟು 95,13,830 ಮತದಾರರಿದ್ದಾರೆ. ಪುರುಷ ಮತದಾರರ ಸಂಖ್ಯೆ 49,26,270, ಮಹಿಳಾ ಮತದಾರರು 45,85,824 ರಷ್ಟಿದ್ದಾರೆ. 18 ರಿಂದ 19ರ ವಯಸ್ಸಿನ 1,08,494 ಯುವ ಮತದಾರರಿದ್ದಾರೆ. 2,36,719 ಮತದಾರರಿಗೆ 80 ವರ್ಷ ವಯಸ್ಸಾಗಿದೆ. 28 ವಿಧಾನಸಭಾ ಕ್ಷೇತ್ರಗಳಿಗೂ ರಿರ್ಟನಿಂಗ್ ಆಫೀಸರ್ ಗಳ ನೇಮಕ ಮಾಡಲಾಗಿದೆ.
ಇದನ್ನೂ ಓದಿ: Karnataka Election Dates 2023 LIVE: ಮೇ 10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ, ಮೇ 13ಕ್ಕೆ ಫಲಿತಾಂಶ
ಸೂಕ್ಷ್ಮ ಮತಗಟ್ಟೆಗಳಲ್ಲಿ Central Para Military Force ನಿಯೋಜನೆ
ನಗರದಲ್ಲಿ ಒಟ್ಟು 8,615 ಮತಗಟ್ಟೆಗಳಿದ್ದು, ಈ ಪೈಕಿ 8,615 ಪೈಕಿ 2,217 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಣೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಕೆಲವು ಸಮಸ್ಯೆಗಳು ಆದ ಆಧಾರದ ಮೇರೆಗೆ ಸೂಕ್ಷ್ಮ ಮತಗಟ್ಟೆ ಎಂದು ಗುರುತು ಮಾಡಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಕೇಂದ್ರ ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜನೆ ಮಾಡಲಾಗುತ್ತದೆ.
ಪಾಲಿಕೆಯಿಂದ ವಿಶೇಷ ಆ್ಯಪ್
ಮತಗಟ್ಟೆಗಳ ಬಳಿ ಜನ ಸಂದಣಿ ತಡೆಯಲು ಆ್ಯಪ್ ಜಾರಿ ಮಾಡಲು ನಿರ್ಧಾರ ಮಾಡಲಾಗಿದೆ. ಇದರ ಬಗ್ಗೆ ವಿಶೇಷವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಿರುವ ಪಾಲಿಕೆ, ಈ ಆ್ಯಪ್ ನಲ್ಲಿ ಮತಗಟ್ಟೆಗಳಲ್ಲಿ ಎಷ್ಟು ಜನರು ಕ್ಯೂ ನಿಂತಿದ್ದಾರೆ? ಪರಿಸ್ಥಿತಿ ಹೇಗಿದೆ ಎಂಬುವದರ ಲೈವ್ ಮಾಹಿತಿ ಜನರು ಪಡೆಯಬಹುದು ಎಂದು ತಿಳಿಸಿದೆ.
3 ಕೋಟಿ 66 ಲಕ್ಷ ಬೆಲೆಬಾಳುವ ಪ್ರಾಪರ್ಟಿ ಸೀಜ್
ಬ್ಯಾಟರಾಯನಪುರದಲ್ಲಿ 3 ಕೋಟಿ 66 ಲಕ್ಷ ಬೆಲೆಬಾಳುವ ಪ್ರಾಪರ್ಟಿ ಸೀಜ್ ಮಾಡಲಾಗಿದೆ. ಬಿಬಿಎಂಪಿ ಸೆಂಟ್ರಲ್ ಒಟ್ಟು 5 ಕಡೆ ಕಾರ್ಯಾಚರಣೆ ನಡೆಸಿ 13,70,750 ರೂಪಾಯಿ ಸೀಜ್ ಮಾಡಲಾಗಿದೆ.
ಬಿಬಿಎಂಪಿ ಉತ್ತರ ಭಾಗದಲ್ಲಿ 2 ಕಡೆ ಕಾರ್ಯಾಚರಣೆ ನಡೆಸಿ 48,060 ರೂಪಾಯಿ ಸೀಜ್ ಮಾಡಲಾಗಿದೆ. ಬಿಬಿಎಂಪಿ ದಕ್ಷಿಣ ಭಾಗದಲ್ಲಿ 15 ಕಡೆ ಕಾರ್ಯಾಚರಣೆ ನಡೆಸಿ 16,10,125 ರೂಪಾಯಿ ಸೀಜ್ ಮಾಡಲಾಗಿದೆ. ಬೆಂಗಳೂರು ನಗರದ 6 ಕಡೆ ಕಾರ್ಯಾಚರಣೆ ನಡೆಸಿ 25,21,000 ರೂಪಾಯಿ ಸೀಜ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಎಲ್ಲಾ ಮತಗಟ್ಟೆಗಳಲ್ಲಿ ಹೊಸ EVM ಬಳಕೆ
ಬಿಬಿಎಂಪಿ ವ್ಯಾಪ್ತಿಯಲ್ಲಿ 68 ಸಾವಿರ ಚುನಾವಣಾ ಸಿಬ್ಬಂದಿಗಳ ಅಗತ್ಯವಿದೆ. ಆದರೆ ನಮ್ಮ ಬಳಿ 37 ಸಾವಿರ ಮ್ಯಾನ್ ಪವರ್ ಈಗಾಗಲೇ ಇದೆ. ಉಳಿದಂತೆ ಸುಮಾರು 40 ಸಾವಿರ ಸಿಬ್ಬಂದಿಗಳ ನಿಯೋಜನೆ ಆಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ನೌಕರರಿಂದ ಇಷ್ಟು ಸಿಬ್ಬಂದಿಗಳ ಪೂರೈಕೆ ಸಾಧ್ಯವಿಲ್ಲ.
ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಕೆಂದ್ರ ಸರ್ಕಾರದ ನಿಗಮ, ಪ್ರಾಧಿಕಾರ, ಮಂಡಳಿ, ಇಲಾಖೆಗಳ ನೌಕರರನ್ನು ಬಳಕೆ ಮಾಡುತ್ತೇವೆ. ಈ ಬಾರಿ ಎಲ್ಲಾ ಮತಗಟ್ಟೆಗಳಲ್ಲಿ ಹೊಸ EVM ಬಳಕೆ ಮಾಡಲಾಗುತ್ತೆ. ಒಟ್ಟು EVM ಗಳಲ್ಲಿ ಶೇಕಡಾ 30 ರಷ್ಟು EVM ಬ್ಯಾಕ್ ಅಪ್ಗೆ ಕಾಯ್ದಿರಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: Karnataka Election 2023: ರಾಜ್ಯಕ್ಕೆ ಗುಜರಾತ್ EVM ಬೇಡ; ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್
ರಾಜಕೀಯ ಜಾಹೀರಾತು ನೀಡಲು ಪರ್ಮಿನಷನ್ ಅಗತ್ಯ
ಟಿವಿ ಹಾಗೂ ಪತ್ರಿಕೆಗಳು ರಾಜಕೀಯ ಜಾಹೀರಾತು ಪ್ರಸಾರ ಮಾಡಲು ರಾಜ್ಯ ಚುನಾವಣಾ ಆಯೋಗ / ಬಿಬಿಎಂಪಿ ಚುನಾವಣಾ ವಿಭಾಗದಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ