Veeranna Charantimath: ಈ ಬಾರಿಯೂ ಅಗ್ನಿಪರೀಕ್ಷೆಯಲ್ಲಿ ಗೆಲ್ತಾರಾ ಬಿಜೆಪಿ ಶಾಸಕ?

ವೀರಣ್ಣ ಚರಂತಿಮಠ, ಬಿಜೆಪಿ ಶಾಸಕ

ವೀರಣ್ಣ ಚರಂತಿಮಠ, ಬಿಜೆಪಿ ಶಾಸಕ

Veerabhadrayya Charantimath: ಹತ್ತನೇ ತರಗತಿ ಅಧ್ಯಯನ ನಡೆಸಿರುವ ಶಾಸಕರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಾಮಾಜಿಕ ತಾಣಗಳಲ್ಲಿಯೂ ಸಕ್ರಿಯರಾಗಿರುವ ವೀರಭದ್ರಯ್ಯ ಭರದಿಂದಲೇ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

  • Trending Desk
  • 5-MIN READ
  • Last Updated :
  • Bagalkot, India
  • Share this:

ಬೆಂಗಳೂರು: ಮೇ 10 ರಂದು ನಡೆಯಲಿರುವ ಚುನಾವಣೆಗಾಗಿ (Assembly Election 2023) ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಭರದಿಂದ ಮತಪ್ರಚಾರ (Election Campaign) ನಡೆಸುತ್ತಿದ್ದು ಜನಸಾಮಾನ್ಯರ ಮನವೊಲಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ತಮ್ಮ ಪಕ್ಷವೇ ಗೆಲ್ಲಬೇಕೆಂಬ ಛಲದಲ್ಲಿ ಅನೇಕ ಗಿಮಿಕ್‌ಗಳನ್ನು ನಡೆಸುವ ಅಭ್ಯರ್ಥಿಗಳು (Election Candidates) ಶ್ರೀ ಸಾಮಾನ್ಯರ ಮನೆ ಮನೆಗೆ ತೆರಳಿ ಪರಿಪರಿಯಾಗಿ ವಿನಂತಿಸಿಕೊಳ್ಳುತ್ತಿದ್ದಾರೆ. ಮತದಾರ (Voters) ಕೂಡ ಇದೀಗ ಪಕ್ಷಗಳನ್ನು (Political Parties) ನೋಡದೇ ಅಭ್ಯರ್ಥಿ ಕ್ಷೇತ್ರಕ್ಕೆ ಮಾಡಿರುವ ಹಲವಾರು ಕಾರ್ಯಗಳು, ಸಮಾಜ ಸೇವೆಗಳನ್ನು ನೋಡಿಯೇ ವೋಟು ಹಾಕುವುದಾಗಿ ನಿರ್ಧರಿಸಿರುವಂತೆ ಕಂಡುಬರುತ್ತಿದೆ.

ಇನ್ನು ನಮಗೆ ಚಳ್ಳೆ ಹಣ್ಣುತಿನ್ನಿಸಲಾಗದು ಎಂದು ನೇರವಾಗಿಯೇ ತಿಳಿಸಿರುವ ಜನರು ಸೂಕ್ತ ನಾಯಕರಿಗೆ ಮತ ಒತ್ತುವುದಾಗಿ ಪ್ರಟಿಸಿದ್ದಾರೆ.

ಒಟ್ಟಿನಲ್ಲಿ ಮೇ 10 ರ ಚುನಾವಣೆಯು ಅಭ್ಯರ್ಥಿಗಳಿಗೆ ಅಗ್ನಿಪರೀಕ್ಷೆ ಎಂದೆನಿಸಿದ್ದು, ಚುನಾವಣಾ ವೃತ್ತಿಭವಿಷ್ಯ ಬಹಿರಂಗಗೊಳ್ಳಲಿದೆ.

ಬಾಗಲಕೋಟೆ ಕ್ಷೇತ್ರದ ಅಭ್ಯರ್ಥಿ ವೀರಭದ್ರಯ್ಯ ಚರಂತಿಮಠ

ಇಂದಿನ ಲೇಖನದಲ್ಲಿ ಬಾಗಲಕೋಟೆಯಿಂದ (Bagalkot Assembly Constituency) ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ವೀರಭದ್ರಯ್ಯ ಚರಂತಿಮಠ (ವೀರಣ್ಣ ಚರಂತಿಮಠ) (Veerabhadrayya Charantimath) ಅವರ ಪರಿಚಯ ಮಾಡಿಕೊಳ್ಳೋಣ.

59 ರ ಹರೆಯದ ವೀರಭದ್ರಯ್ಯ ಚರಂತಿಮಠ ರಾಜಕೀಯದಲ್ಲಿ ಖ್ಯಾತರಾದವರು ಹಾಗೆಯೇ ಸಮಾಜಮುಖಿ ಕೆಲಸ ಕಾರ್ಯಗಳಿಂದ ಸಮರ್ಥ ರಾಜಕಾರಣಿ ಎಂದೇ ಗುರುತಿಸಿಕೊಂಡವರು.

Veeranna Charantimath family, Veeranna Charantimath property, Veeranna Charantimath colleges, Veeranna Charantimath, Veeranna Charantimath contact number, Veeranna Charantimath constituency, Veeranna Charantimath, Veeranna Charantimath house, Veeranna Charantimath campaign, kannada news, karnataka news, ವೀರಣ್ಣ ಚರಂತಿಮಠ ಆಸ್ತಿ, ಬಿಜೆಪಿ ಶಾಸಕ ವೀರಣ್ಣ ಚರಂತಿಮಠ, ವೀರಣ್ಣ ಚರಂತಿಮಠ ಕಾಲೇಜುಗಳು , Veeranna Charantimath political, Veeranna Charantimath bio data
ವೀರಣ್ಣ ಚರಂತಿಮಠ, ಬಿಜೆಪಿ ಶಾಸಕ

ಬಾಗಲಕೋಟೆ ಕ್ಷೇತ್ರದಿಂದ ಚುನಾವಣಾ ಅಖಾಡಾಕ್ಕೆ ನಿಂತಿರುವ ವೀರಭದ್ರಯ್ಯ ವ್ಯಾಪಾರ ಮಾಲೀಕರಾಗಿ ವೃತ್ತಿ ನಡೆಸುತ್ತಿದ್ದಾರೆ. ಹತ್ತನೇ ತರಗತಿ ಅಧ್ಯಯನ ನಡೆಸಿರುವ ಶಾಸಕರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಾಮಾಜಿಕ ತಾಣಗಳಲ್ಲಿಯೂ ಸಕ್ರಿಯರಾಗಿರುವ ವೀರಭದ್ರಯ್ಯ ಭರದಿಂದಲೇ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಬಾಗಲಕೋಟೆಯ ಜನರ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತವರು

ಬಾಗಲಕೋಟೆಯ ಜನರಿಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಡಲು ನೆರವಾಗಿರುವ ವೀರಭದ್ರಯ್ಯ ತಮ್ಮ ಫೇಸ್‌ಬುಕ್ ತಾಣದಲ್ಲಿ ತಾವು ಸಕ್ರಿಯರಾಗಿ ಭಾಗವಹಿಸಿರುವ ಕಾರ್ಯಕ್ರಮಗಳ ಮಾಹಿತಿಗಳನ್ನು ನೀಡಿದ್ದಾರೆ.

Veeranna Charantimath family, Veeranna Charantimath property, Veeranna Charantimath colleges, Veeranna Charantimath, Veeranna Charantimath contact number, Veeranna Charantimath constituency, Veeranna Charantimath, Veeranna Charantimath house, Veeranna Charantimath campaign, kannada news, karnataka news, ವೀರಣ್ಣ ಚರಂತಿಮಠ ಆಸ್ತಿ, ಬಿಜೆಪಿ ಶಾಸಕ ವೀರಣ್ಣ ಚರಂತಿಮಠ, ವೀರಣ್ಣ ಚರಂತಿಮಠ ಕಾಲೇಜುಗಳು , Veeranna Charantimath political, Veeranna Charantimath bio data
ವೀರಣ್ಣ ಚರಂತಿಮಠ, ಬಿಜೆಪಿ ಶಾಸಕ

ಮಹಿಳೆಯರಿಗೆ ಹೊಲಿಗೆ ಯಂತ್ರ, ಯುವಕರಿಗಾಗಿ ಸ್ವಾವಲಂಬಿಗಳಾಗಿ ದುಡಿಯಲು ಬೈಕ್‌, ಹೀಗೆ ಬಾಲಕೋಟೆಯವರಿಗಾಗಿ ಅನೇಕ ಸಮಾಜ ಮುಖಿ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಚರಂತಿಮಠ ಅವರ ಆಸ್ತಿಪಾಸ್ತಿ ವಿವರ ಹೀಗಿದೆ

ಒಟ್ಟು ರೂ 15 ಕೋಟಿ ಆಸ್ತಿ ಇರುವುದಾಗಿ ಘೋಷಿಸಿರುವ ವೀರಭದ್ರಯ್ಯ ರೂ 4 ಲಕ್ಷ ಆದಾಯವನ್ನು ಆದಾಯ ತೆರಿಗೆ ರಿಟರ್ನ್‌ನಲ್ಲಿ ಉಲ್ಲೇಖಿಸಿದ್ದಾರೆ. ಕೆಲವೊಂದು ಆರೋಪಗಳು ಇವರ ಮೇಲೆ ದಾಖಲಾಗಿದೆ.

ರೂ 1 ಲಕ್ಷ ನಗದು ಹಣ ಇರುವುದಾಗಿ ವೀರಭದ್ರಯ್ಯ ಘೋಷಿಸಿದ್ದು, ಆಕ್ಸಿಸ್ ಬ್ಯಾಂಕ್‌ನಲ್ಲಿ ರೂ 1 ಕೋಟಿ ಡಿಪಾಸಿಟ್ ಮಾಡಿರುವುದಾಗಿ ತಿಳಿಸಿದ್ದಾರೆ. ಬಾಂಡ್ ಹಾಗೂ ಷೇರುಗಳ ರೂಪದಲ್ಲಿ ರೂ 55 ಲಕ್ಷವಿರಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

Veeranna Charantimath family, Veeranna Charantimath property, Veeranna Charantimath colleges, Veeranna Charantimath, Veeranna Charantimath contact number, Veeranna Charantimath constituency, Veeranna Charantimath, Veeranna Charantimath house, Veeranna Charantimath campaign, kannada news, karnataka news, ವೀರಣ್ಣ ಚರಂತಿಮಠ ಆಸ್ತಿ, ಬಿಜೆಪಿ ಶಾಸಕ ವೀರಣ್ಣ ಚರಂತಿಮಠ, ವೀರಣ್ಣ ಚರಂತಿಮಠ ಕಾಲೇಜುಗಳು , Veeranna Charantimath political, Veeranna Charantimath bio data
ವೀರಣ್ಣ ಚರಂತಿಮಠ, ಬಿಜೆಪಿ ಶಾಸಕ

ಆಭರಣ ಹಾಗೂ ಎಲ್‌ಐಸಿ ಇನ್ನಿತರ ವಿಮೆಗಳ ಮಾಹಿತಿ

ಎಲ್‌ಐಸಿ ಇತರ ವಿಮೆಯ ರೂಪದಲ್ಲಿ ರೂ 11 ಲಕ್ಷವಿರಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ವೈಯಕ್ತಿಕ ಸಾಲವಾಗಿ ರೂ 92 ಲಕ್ಷವಿದೆ ಎಂಬ ಮಾಹಿತಿ ನೀಡಿದ್ದಾರೆ.

ರೂ 18 ಲಕ್ಷ ಮೌಲ್ಯದ ಚಿನ್ನಾಭರಣಗಳಿರುವುದಾಗಿ ಶಾಸಕರು ಮಾಹಿತಿ ನೀಡಿದ್ದು ರೂ 5 ಲಕ್ಷ ಮೌಲ್ಯದ ಪೀಠೋಪಕರಣ ವಸ್ತುಗಳ ವಿವರ ಒದಗಿಸಿದ್ದಾರೆ. ಇದೆಲ್ಲಾ ವಸ್ತುಗಳ ಒಟ್ಟು ಮೌಲ್ಯ ರೂ 3 ಕೋಟಿ ಎಂದು ಶಾಸಕರು ತಿಳಿಸಿದ್ದಾರೆ.

ಸ್ಥಿರಾಸ್ತಿ ವಿವರ ಈ ರೀತಿ ಇದೆ

ರೂ 3 ಕೋಟಿ ಮೌಲ್ಯದ ಕೃಷಿಭೂಮಿ ಇರುವುದಾಗಿ ಶಾಸಕರು ಘೋಷಿಸಿದ್ದು, ಕೃಷಿಯೇತರ ಭೂಮಿಯಾಗಿ ರೂ 2 ಕೋಟಿಯ ಭೂಮಿಯ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Kusuma Hanumantharayappa: ಎರಡನೇ ಬಾರಿ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿಗೆ ಸಿಗುತ್ತಾ ಗೆಲುವು? ಮುನಿರತ್ನ ವಿರುದ್ಧ ಸ್ಪರ್ಧೆ ಮಾಡಿರುವ ಕ್ಯಾಂಡಿಡೇಟ್ ಪರಿಚಯ ಇಲ್ಲಿದೆ

top videos

    ರೂ 1 ಕೋಟಿ ಬೆಲೆಯ ವಾಣಿಜ್ಯ ಕಟ್ಟಡಗಳನ್ನು ಶಾಸಕರು ಹೊಂದಿದ್ದಾರೆ. ಅಂತೆಯೇ 4 ಕೋಟಿ ಮೌಲ್ಯದ ವಸತಿ ಕಟ್ಟಡಗಳನ್ನು ಇವರು ಹೊಂದಿದ್ದಾರೆ. ಒಟ್ಟು ಈ ಎಲ್ಲಾ ವಸ್ತುಗಳ ಬೆಲೆ ರೂ 11 ಕೋಟಿ ಎಂದು ವೀರಭದ್ರಯ್ಯ ಘೋಷಿಸಿದ್ದಾರೆ.

    First published: