Anand Mamani: ಉಪಸಭಾಪತಿ ಅನಂದ್ ಮಾಮನಿ ಆರೋಗ್ಯ ಸ್ಥಿತಿ ಗಂಭೀರ

ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಎರಡು ದಿನಗಳ ಹಿಂದೆ ಚೆನ್ನೈಗೆ ಶಿಫ್ಟ್ ಮಾಡಲಗಿತ್ತು. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವ ಹಿನ್ನೆಲೆ ನಾಳೆ ಅಥವಾ ನಾಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ (Bengaluru Private Hospital) ಶಿಪ್ಟ್ ಮಾಡುವ ಸಾಧ್ಯತೆ ಇದೆ.

ಆನಂದ್ ಮಾಮನಿ

ಆನಂದ್ ಮಾಮನಿ

  • Share this:
ಕರ್ನಾಟಕ ವಿಧಾನಸಭೆಯ ಉಪ ಸಭಾಪತಿ ಆನಂದ್ ಮಾಮನಿ (Karnataka assembly deputy speaker Anand Mamani) ಆರೋಗ್ಯದಲ್ಲಿ ಏರುಪೇರಾಗಿದ್ದು, ಚೆನ್ನೈನ (Chennai) ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಗಿದೆ. ಆನಂದ ಮಾಮನಿ ಸವದತ್ತಿ (Savadatti constituency) ಯಲ್ಲಮ್ಮ ಕ್ಷೇತ್ರದ ಶಾಸಕರಾಗಿದ್ದು, ಕಳೆದ ಕೆಲ ದಿನಗಳಿಂದ ಕ್ಯಾನ್ಸರ್​ನಿಂದ (Cancer) ಬಳಲುತ್ತಿದ್ದಾರೆ. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಎರಡು ದಿನಗಳ ಹಿಂದೆ ಚೆನ್ನೈಗೆ ಶಿಫ್ಟ್ ಮಾಡಲಾಗಿತ್ತು. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವ ಹಿನ್ನೆಲೆ ನಾಳೆ ಅಥವಾ ನಾಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ (Bengaluru Private Hospital) ಶಿಪ್ಟ್ ಮಾಡುವ ಸಾಧ್ಯತೆ ಇದೆ.

ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ

ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಆನಂದ್ ಮಾಮನಿ ಅವರ ಆರೋಗ್ಯವನ್ನು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಕರೆ ಮಾಡಿ ವಿಚಾರಿಸಿದ್ದಾರೆ. ಸಕ್ಕರೆ ಕಾಯಿಲೆ, ತೀವ್ರ ಕತ್ತು ನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಸದ್ಯ ಆನಂದ್ ಮಾಮನಿ ಅವರು ಸಂಪೂರ್ಣ ವಿಶ್ರಾಂತಿಯಲ್ಲಿದ್ದಾರೆ. ಎರಡು ದಿನಗಳಲ್ಲಿ ಮಾಮನಿ ಅವರು ಬೆಂಗಳೂರಿಗೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.

ಸೆ. 23ಕ್ಕೆ ಎಸ್​ಟಿ ಸಮಾವೇಶಕ್ಕೆ ಸಿದ್ಧತೆ

ಸೆಪ್ಟೆಂಬರ್ ‌23ಕ್ಕೆ ಬಳ್ಳಾರಿಯಲ್ಲಿ ಬಿಜೆಪಿ ಎಸ್​ಟಿ ಸಮಾವೇಶ ಮಾಡಲು ನಿರ್ಧಾರ ಮಾಡಿದೆ. ಸಮಾವೇಶ ಯಶಸ್ವಿಗೊಳಿಸಲು ಬಿಜೆಪಿ ನಾಯಕರು ಪಣ ತೊಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel)​ ಸಮಾವೇಶ ಸಿದ್ದತಾ ಸಭೆ ನಡೆಸಿದ್ದಾರೆ.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಸ್​​ಟಿ ಸಮಾವೇಶ ಸಿದ್ದತೆ ಸಂಬಂಧ ಮಾತುಕತೆ ನಡೆಸಿದ್ದಾರೆ. ಸಮಾವೇಶಕ್ಕೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನ ಕರೆತರುವ ಪ್ಲಾನ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ:  Taxi Drivers: ಗಣೇಶೋತ್ಸವ ಮುಗಿದ್ರು ತೆಗೆದಿಲ್ಲ ಈದ್ಗಾ ಮೈದಾನದ ಬೀಗ! ಬೀದಿ ಪಾಲಾದ ಟ್ಯಾಕ್ಸಿ ಚಾಲಕರು

ಸಿಎಂ, ಬಿಎಸ್​ವೈ ಭೇಟಿ ಮಾಡಿದ ಜಮೀರ್​

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Congress MLA Zameer Ahmed)  ಸಿಎಂ ಬೊಮ್ಮಾಯಿ ಹಾಗು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಚಾಮರಾಜಪೇಟೆ ಕ್ಷೇತ್ರದ ಅಭಿವೃದ್ಧಿ ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಿ ಮನವಿ ಸಲ್ಲಿಸಿದ್ದೇನೆ. ಚಾಮರಾಜಪೇಟೆಯ ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದೇನೆಂದು ಜಮೀರ್ ಅಹ್ಮದ್ ಮಾಹಿತಿ ನೀಡಿದ್ದಾರೆ. ಬಿಜೆಪಿಯ ಇಬ್ಬರು ನಾಯಕರನ್ನು ಜಮೀರ್ ಅಹ್ಮದ್ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Karnataka assembly deputy speaker Anand Mamani admitted chennai hospital mrq
ಬಸವರಾಜ್ ಬೊಮ್ಮಾಯಿ ಮತ್ತು ಜಮೀರ್ ಅಹ್ಮದ್


ಅಕ್ರಮ ತೆರವಿಗೆ ಸಚಿವರ ಆಕ್ಷೇಪ

ತೆರವು ಸರಿ ಇಲ್ಲ ಎಂದು ಕ್ಯಾಬಿನೆಟ್​ನಲ್ಲಿ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗೆ ಏಕಾಏಕಿ ಒತ್ತುವರಿ ತೆರವು ಮಾಡಿ‌ದ್ದರಿಂದ ಜನರ ಎದುರು ನಾವು ಕೆಟ್ಟವರಾಗಬೇಕಾ? ಮುಂದಿನ ದಿನಗಳಲ್ಲಿ ಬಿಬಿಎಂಪಿ ಎಲೆಕ್ಷನ್ ಕೂಡ ಇದೆ. ಕಂದಾಯ ಇಲಾಖೆ, ಬಿಬಿಎಂಪಿಯ ಕಾರ್ಯಾಚರಣೆ ಮುಂದುವರಿಸಬೇಡಿ ಎಂದು‌ ಸಚಿವರಿಂದ ಆಕ್ಷೇಪ ಮಾಡಿದ್ದಾರೆ. ಸಚಿವರೊಬ್ಬರ ಆಕ್ಷೇಪಕ್ಕೆ ಕೆಲ ಸಚಿವರು ವಿರೋಧ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Corruption: ಬಾವ ಸುಂದರೇಶ್ ಹೆಸರಿನಲ್ಲಿ CT Ravi 800 ಕೋಟಿ ಆಸ್ತಿ: ಕಾಂಗ್ರೆಸ್ ಆರೋಪ

ತೆರವಿಗೆ ಹೈಕೋರ್ಟ್​ ತಡೆಯಾಜ್ಞೆ

ಮುನ್ನೇಕೊಳಲು ರಾಜಕಾಲುವೆ ಒತ್ತುವರಿ ತೆರವಿಗೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ನೀಡಿದ್ದು, ವರ್ತೂರಿನ ಮುನ್ನೇಕೊಳಲಿನ ಸರ್ವೆ ನಂಬರ್​ 35/1 ರ ಜಮೀನು ಖಾಸಗಿ ಸ್ವತ್ತೆಂದು ಅರ್ಜಿದಾರರು ಅನಿಲ್ ವಾದಿಸಿದ್ದಾರೆ. ಯಾವುದೇ ನೋಟಿಸ್ ನೀಡದೆ ತೆರವು ಮಾಡಲಾಗ್ತಿದೆ ಎಂದು ಆರೋಪ ಮಾಡಿದ್ದು, ಸೆಪ್ಟೆಂಬರ್​ 16 ರವರೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶ ಮಾಡಿದೆ.
Published by:Mahmadrafik K
First published: