ಎರಡು ದಿನ ಹಾಳಾಯ್ತು ಸಮಯ; ಜನರಿಗೆ ಉಪಯೋಗವಿಲ್ಲದ ಪರಿಷತ್ ಕಲಾಪ – ಒಂದು ಪ್ರಶ್ನೆಗೆ ಆಗುವ ವೆಚ್ಚವೆಷ್ಟು ಗೊತ್ತಾ?

ಪರಿಷತ್ ಕಲಾಪದಲ್ಲಿ ಒಂದೊಂದು ಪ್ರಶ್ನೋತ್ತರವೂ ಅತ್ಯಮೂಲ್ಯವಾದುದು. ಇಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸದಸ್ಯರು ಎತ್ತುವ ಪ್ರಶ್ನೆಗೆ ಗಂಭೀರ ಉತ್ತರ ಕಂಡುಕೊಳ್ಳುವ ಯತ್ನ ನಡೆಯುತ್ತದೆ.

Vijayasarthy SN | news18
Updated:February 12, 2019, 4:28 PM IST
ಎರಡು ದಿನ ಹಾಳಾಯ್ತು ಸಮಯ; ಜನರಿಗೆ ಉಪಯೋಗವಿಲ್ಲದ ಪರಿಷತ್ ಕಲಾಪ – ಒಂದು ಪ್ರಶ್ನೆಗೆ ಆಗುವ ವೆಚ್ಚವೆಷ್ಟು ಗೊತ್ತಾ?
ಬೆಂಗಳೂರಿನ ವಿಧಾನಸೌಧ
Vijayasarthy SN | news18
Updated: February 12, 2019, 4:28 PM IST
- ಜನಾರ್ದನ ಹೆಬ್ಬಾರ್,

ಬೆಂಗಳೂರು(ಫೆ. 12): ಕರ್ನಾಟಕ ರಾಜಕಾರಣ ರಾಡಿಯಂತಾಗಿದೆ. ರಾಜ್ಯದ ಸಮಸ್ಯೆಗಳ ಗಂಭೀರ ಚರ್ಚೆ ಮತ್ತು ಪರಿಹಾರ ಮಾರ್ಗೋಪಾಯಗಳಿಗೆ ವೇದಿಕೆಯಾದ ವಿಧಾನಪರಿಷತ್ ಇತ್ತೀಚಿನ ದಿನಗಳಲ್ಲಿ ಗಾಂಭೀರ್ಯ ಕಳೆದುಕೊಳ್ಳುತ್ತಿದೆ. ಕಳೆದೆರಡು ದಿನಗಳ ಪರಿಷತ್ ಕಲಾಪಗಳೇ ಇದಕ್ಕೆ ಸಾಕ್ಷಿಯಾಗಿವೆ. ಸಾರ್ವಜನಿಕ ಸಮಸ್ಯೆ ಬಗ್ಗೆ ಎರಡು ದಿನದಲ್ಲಿ ನಡೆದದ್ದು ಕೆಲವೇ ನಿಮಿಷಗಳ ಚರ್ಚೆ. ನಿನ್ನೆಯಂತೂ ಒಂಚೂರೂ ಚರ್ಚೆಯಾಗಲಿಲ್ಲ. ಇವತ್ತು ಪ್ರಶ್ನೋತ್ತರ ಕಲಾಪ ಅರ್ಧದಲ್ಲೇ ಮೊಟಕುಗೊಂಡಿತು. ಕುಡಿಯುವ ನೀರಿನ ಘಟಕದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿಯು ಸದನ ಸಮಿತಿ ರಚನೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿತು. ಆದರೆ, ಬಿಜೆಪಿ ಎತ್ತಿದ ಈ ಪ್ರಶ್ನೆಗೆ ಪರಿಷತ್​ನಲ್ಲಿ ಒಂದು ನಿರ್ಧಾರಕ್ಕೆ ಬರುವ ಮುನ್ನವೇ ನಾಳೆಗೆ ಕಲಾಪ ಮುಂದೂಡಲಾಯಿತು. ಸಾಕಷ್ಟು ಪ್ರಶ್ನೋತ್ತರಗಳು ಬಾಕಿ ಉಳಿದಿದ್ದವು. ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಇತ್ಯಾದಿ ಎಲ್ಲವೂ ಬಾಕಿ ಉಳಿಯಿತು. ಬಜೆಟ್ ಮೇಲೆ ಚರ್ಚೆಯೂ ಆಗಬೇಕಿತ್ತು. ಆದರೆ, ಏನೂ ನಡೆಯದೇ ಸುಮ್ಮನೆ ಸಮಯ ವ್ಯರ್ಥವಾಯಿತು.

ಇದನ್ನೂ ಓದಿ: ಹುತಾತ್ಮ ಯೋಧನ ನೆನಪು; ತೊದಲು ನುಡಿಯಲ್ಲೇ ಆರ್ಮಿಯನ್ನು ಗುಣಗಾನ ಮಾಡಿದ ವೀರಕನ್ನಡಿಗನ ಮಗಳು..!

ಅಧಿವೇಶನ ನಡೆಯುವುದು ಸುಮ್ಮನೆ ಅಲ್ಲ. ಇವತ್ತು ಹೋದ ಸಮಯವನ್ನು ನಾಳೆ ತುಂಬಿಸುತ್ತೇನೆಂದರೆ ಅದು ಸಾಧ್ಯವಿಲ್ಲ. ವರ್ಷದ 12 ತಿಂಗಳೂ ಅಧಿವೇಶನ ನಡೆಯುವುದಿಲ್ಲ. ಐದು ವರ್ಷದ ವಿಧಾನಸಭೆಯ ಅವಧಿಯಲ್ಲಿ ಒಟ್ಟು 16 ಅಧಿವೇಶನಗಳು ನಡೆಯುತ್ತವೆ. ಒಂದೊಂದು ಅಧಿವೇಶನ 8-15 ದಿನಗಳವರೆಗೆ ನಡೆಯುತ್ತವೆ. ಹೀಗಾಗಿ, ಅಧಿವೇಶನದ ಒಂದೊಂದು ದಿನವೂ ಅಮೂಲ್ಯವೇ ಆಗಿದೆ. ಪ್ರತೀ ದಿನ 15 ಚುಕ್ಕೆಸಹಿತ ಪ್ರಶ್ನೆ (Starred question) ಹಾಗೂ 15 ಚುಕ್ಕೆರಹಿತ (Un-starred) ಪ್ರಶ್ನೆಗಳಿಗೆ ಅವಕಾಶ ಇರುತ್ತದೆ.

ಇದನ್ನೂ ಓದಿ: ಶಾಸಕರ ಅಪಹರಣ ಮಾಡಿದ್ದೀರಾ? ಅತೃಪ್ತರ ಮುಖಂಡ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್ ನೋಟೀಸ್

ಅಧಿವೇಶನದಲ್ಲಿ ಒಂದು ಪ್ರಶ್ನೆಗೆ ಸರಾಸರಿಯಾಗಿ 1 ಲಕ್ಷ ರೂ ಖರ್ಚಾಗುತ್ತದೆ. ಅಧಿವೇಶನದ ಒಂದು ದಿನಕ್ಕೆ ಸುಮಾರು 20 ಲಕ್ಷ ರೂಪಾಯಿ ವೆಚ್ಚವಾಗುವ ಅಂದಾಜು ಇದೆ. ಅಧಿವೇಶನದಲ್ಲಿ ಭಾಗವಹಿಸುವ ಪರಿಷತ್ ಸದಸ್ಯರ ದಿನವೊಂದರ ಭತ್ಯೆ ಎರಡೂವರೆ ಸಾವಿರ ರೂಇದೆ. ಸಚಿವಾಲಯದ ಸಿಬ್ಬಂದಿಗೆ ದಿನಕ್ಕೆ 500 ರೂ. ಭತ್ಯೆ ಕೊಡಲಾಗುತ್ತದೆ. ಸಚಿವಾಲಯದ ಸಿಬ್ಬಂದಿ ಬರೋಬ್ಬರಿ 2,500ರಷ್ಟು ಇದ್ದಾರೆ. ಹಾಗೆಯೇ, ಮಾರ್ಷಲ್​ಗಳಿಗೆ ದಿನಕ್ಕೆ 1 ಸಾವಿರ ರೂ ಭತ್ಯೆ ಇದೆ. ಭದ್ರತಾ ಸಿಬ್ಬಂದಿಗೆ ಸರಕಾರವೇ ಉಚಿತ ಊಟ ನೀಡುತ್ತದೆ.

ಅಧಿವೇಶನದ ಪ್ರಾಮುಖ್ಯತೆ ದೃಷ್ಟಿಯಿಂದ ನೋಡಿದರೆ ಈ ಎಲ್ಲಾ ಖರ್ಚುಗಳು ಗೌಣವಾಗುತ್ತವೆ. ಆದರೆ, ಪರಿಷತ್ ಕಲಾಪದಿಂದ ಜನರ ಎಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ? ಗಾಂಭೀರ್ಯತೆಯನ್ನೇ ಕಳೆದುಕೊಂಡ ಪರಿಷತ್ ಅಧಿವೇಶನಕ್ಕೆ ಯಾಕಿಷ್ಟು ಖರ್ಚು ಎಂಬ ಪ್ರಶ್ನೆ ಉದ್ಭವಿಸದೇ ಇರದು.
First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...