ಇನ್ನೆರಡು ದಿನದಲ್ಲಿ ಆರ್​ಆರ್​ ನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ; ಸಿದ್ದರಾಮಯ್ಯ

ಆರ್.ಆರ್ ನಗರದಲ್ಲಿ ಆಕಾಂಕ್ಷಿಗಳು ಹಲವರಿದ್ದಾರೆ. ಎರಡು ದಿನಗಳ ಒಳಗಾಗಿ ಆರ್​.ಆರ್​. ನಗರ ಉಪಚುನಾವಣೆ ಅಭ್ಯರ್ಥಿ ಯಾರು ಎಂಬುದನ್ನು ಘೋಷಣೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು (ಅ. 3): ಆರ್​ಆರ್​ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಯಾವ ಪಕ್ಷದ ಜೊತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಹನುಮಂತರಾಯಪ್ಪ ನನ್ನನ್ನು ಭೇಟಿ ಮಾಡಿದ್ದು ನಿಜ. ಅವರು ವಾಪಾಸ್ ಕಾಂಗ್ರೆಸ್ ಸೇರುವ ಬಗ್ಗೆ ಇಂಗಿತ ಹೊಂದಿದ್ದಾರೆ. ಆರ್.ಆರ್ ನಗರ ಡಿ.ಕೆ ಸುರೇಶ್ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ಹನುಮಂತರಾಯಪ್ಪನವರಿಗೆ ಡಿ.ಕೆ ಸುರೇಶ್ ಹಾಗೂ ಡಿ.ಕೆ ಶಿವಕುಮಾರ್ ಭೇಟಿ ಮಾಡುವಂತೆ ಹೇಳಿ ಕಳಿಸಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಆರ್​.ಆರ್​. ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಅಂತಿಮವಾಗಿಲ್ಲ. ಆರ್.ಆರ್ ನಗರದಲ್ಲಿ ಆಕಾಂಕ್ಷಿಗಳು ಹಲವರಿದ್ದಾರೆ. ಎರಡು ದಿನಗಳ ಒಳಗಾಗಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಣೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದಿಂದ ನಡೆದ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಮ್ಮ ಹಿಂದುಳಿದ ವರ್ಗಗಳ ಒಕ್ಕೂಟವಿದೆ. ಎಲ್ಲಾ ಹಿಂದುಳಿದ ವರ್ಗಗಳು ಸದಸ್ಯರಾಗಿದ್ದಾರೆ. ನಾನು ಸಿಎಂ ಆಗಿದ್ದಾಗ ಅವರ ಸಭೆ ನಡೆಸುತ್ತಿದ್ದೆ. ಅವರ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದ್ದೆ. ನಾವು ಸಮಾಜದ ಎಲ್ಲಾ ಜಾತಿಗಳ ಸಮೀಕ್ಷೆ ಮಾಡಿಸಿದ್ದೆವು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಮಾಡಿಸಿದ್ದೆವು. ಮಂಡಲ ಆಯೋಗದ ವರದಿಯಂತೆ ಒಬಿಸಿ ಆಯೋಗವಿರಬೇಕು. ಎಲ್ಲಾ ರಾಜ್ಯಗಳಲ್ಲೂ ಹಿಂದುಳಿದ ಆಯೋಗಗಳಿವೆ. ಕೇಂದ್ರದಲ್ಲೂ ಹಿಂದುಳಿದ ಆಯೋಗವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: Iskcon Bangalore: ಅ. 5ರಿಂದ ತೆರೆಯಲಿದೆ ಬೆಂಗಳೂರು ಇಸ್ಕಾನ್ ದೇವಾಲಯದ ಬಾಗಿಲು

ಸರ್ಕಾರ ಜಾತಿಗಣತಿ ವರದಿ ರಿಸೀವ್ ಮಾಡಿಕೊಳ್ಳಬೇಕು. ಒಬಿಸಿ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಬೇಕು. ಆಯೋಗದ ಸದಸ್ಯರನ್ನ ಕೂಡಲೇ ನೇಮಿಸಬೇಕು. ಒಬಿಸಿ ಆಯೋಗ ಶಾಶ್ವತ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಹೀಗಾಗಿ ಸುಪ್ರೀಂ ಆದೇಶದಂತೆ ಸರ್ಕಾರ ನಡೆದುಕೊಳ್ಳಬೇಕು. ಇಲ್ಲವಾದರೆ ಹಿಂದುಳಿದ ವರ್ಗದವರು ಬೀದಿಗಿಳಿಯುತ್ತಾರೆ. ಅವರ ಪರವಾಗಿ ನಾನು ಬೆಂಬಲ ಕೊಡುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
Published by:Sushma Chakre
First published: