ಯಲ್ಲಾಪುರ -ಮುಂಡಗೋಡ ಕ್ಷೇತ್ರದ ಪ್ರತ್ಯಕ್ಷ ವರದಿ : ಬಿಜೆಪಿ-ಕಾಂಗ್ರೆಸ್ ನೇರ ಜಿದ್ದಾಜಿದ್ದಿ; ಲೆಕ್ಕಕ್ಕಿಲ್ಲದ ಜೆಡಿಎಸ್

Karnataka By Elections 2019 yallapur - mundgod Ground Report ಭೀಮಣ್ಣ ನಾಯ್ಕ ಅವರಿಗೆ ಯಲ್ಲಾಪುರದವನ್ನು ಚೆನ್ನಾಗಿ ಬಲ ಮಾಜಿ ಸಚಿವ ಆರ್ ವಿ ದೇಶಪಾಂಡೆ ಬೆನ್ನೆಲುಬಾಗಿ ನಿಂತಿದ್ದಾರೆ. ಭೀಮಣ್ಣ ನಾಯ್ಕರ ಗೆಲುವಿನ ಜವಾಬ್ದಾರಿಯನ್ನು ವಹಿಸಿಕೊಂಡಿರುವ  ದೇಶಪಾಂಡೆ ಕೂಡ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

G Hareeshkumar | news18-kannada
Updated:November 26, 2019, 6:25 PM IST
ಯಲ್ಲಾಪುರ -ಮುಂಡಗೋಡ ಕ್ಷೇತ್ರದ ಪ್ರತ್ಯಕ್ಷ ವರದಿ : ಬಿಜೆಪಿ-ಕಾಂಗ್ರೆಸ್ ನೇರ ಜಿದ್ದಾಜಿದ್ದಿ; ಲೆಕ್ಕಕ್ಕಿಲ್ಲದ ಜೆಡಿಎಸ್
ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಹಾಗೂ ಬಿಜೆಪಿ ಅಭ್ಯರ್ಥಿ ಶಿವರಾಮ್​​​​ ಹೆಬ್ಬಾರ್​​
  • Share this:
ಕಾರವಾರ(ನ.26): ಯಲ್ಲಾಪುರ-ಮುಂಡಗೋಡ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. 

ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕ ಹಾಗೂ ಜೆಡಿಎಸ್ ನಿಂದ ಚೈತ್ರಾ ಗೌಡ ಅವರು ಚುನಾವಣಾ ಅಖಾಡದಲ್ಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರಿಗೆ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದು, ಜೆಡಿಎಸ್ ಈ ಚುನಾವಣೆಯಲ್ಲಿ ಇದ್ದು ಇಲ್ಲದಂತಾಗಿದೆ.

ಬಿಜೆಪಿಯ ಶಿವರಾಮ್ ಹೆಬ್ಬಾರ್ ಮತ್ತು ಕಾಂಗ್ರೆಸ್​ ಭೀಮಣ್ಣ ನಾಯ್ಕ ನಡುವೆ ನೇರ ಸ್ಪರ್ಧೆ ಇರುವುದರಿಂದ ಇಬ್ಬರಿಗೂ ಗೆಲುವು ಸುಲಭದ ಮಾತಲ್ಲ. ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಹೆಬ್ಬಾರ್ ಕ್ಷೇತ್ರದಲ್ಲಿ ವ್ಯಾಪಕ ಪ್ರಭಾವ ಹೊಂದಿದ್ದಾರೆ. ಆದರೆ, ಸ್ಥಳೀಯ ರಾಜಕೀಯ ಹಾಗೂ ಬಿಜೆಪಿಯ ಕೆಲ ನಾಯಕರೇ ಅಲ್ಲಲ್ಲಿ ಅವರ ವಿರುದ್ಧ ತಿರುಗಿ ಬಿದ್ದಿರುವುದು ಕೊಂಚ ಹಿನ್ನಡೆಯಾಗಿದೆ. ಪಕ್ಷದ ಹೊರತಾಗಿ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಮತ ಗಳಿಸಲುವ ತಾಕತ್ತು ಶಿವರಾಮ್ ಹೆಬ್ಬಾರ್ ಅವರಲ್ಲಿದೆ. ತಿರುಗಿ ಬಿದ್ದ ನಾಯಕರ ಮನ ಓಲೈಸುವ ಕಾಯಕದಲ್ಲಿ ಹೆಬ್ಬಾರ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿ ದಿನ ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಯಲ್ಲಾಪುರದಲ್ಲಿ ಬಿಜೆಪಿಗೆ ಸಂಕಷ್ಟ; ಮಾಜಿ ಶಾಸಕ ವಿ.ಎಸ್. ಪಾಟೀಲ್ ಪುತ್ರ ಕಾಂಗ್ರೆಸ್ ಸೇರಲು ನಿರ್ಧಾರ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಲ್ಲಾಪುರ - ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ 7 ಮಂದಿ ಕಣದಲ್ಲಿದ್ದರು, ಚುನಾವಣೆಯಲ್ಲಿ  ಒಟ್ಟು 1,40,271ಮತಗಳು ಚಲಾವಣೆಯಾಗಿದ್ದವು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಿವರಾಮ್​​​ ಹೆಬ್ಬಾರ್​​ 66,290 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ವಿ ಎಸ್​ ಪಾಟೀಲ್​​​ ಅವರನ್ನು 1,483 ಮತಗಳ ಅಂತರದಿಂದ ಸೋಲಿಸಿದ್ದರು. ಉಳಿದಂತೆ ಜೆಡಿಎಸ್​​​ನ ರವೀಂದ್ರ ನಾಯ್ಕ ಅವರು 6,263 ಮತಗಳನ್ನು ಪಡೆಯುವ ಮೂರನೇ ಸ್ಥಾನ ಗಳಿಸಿದ್ದರು.

ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು 87,942 ಹಾಗೂ ಮಹಿಳಾ ಮತದಾರರು 84,687  ಮತ್ತು ಸೇರಿ ಒಟ್ಟು ಒಟ್ಟು ಮತದಾರರು- 1,72,630 ಮತದಾರರಿದ್ದಾರೆ. 231 ಮತಗಟ್ಟೆಗಳನ್ನು ತೆರೆಯಲಾಗಿದೆ.

ಕ್ಷೇತ್ರದ ಜಾತಿವಾರು ಲೆಕ್ಕಾಚಾರಬ್ರಾಹ್ಮಣರು- 26,000, ಮರಾಠ -23,000, ಎಸ್.ಸಿ- 21,000, ಲಿಂಗಾಯತ- 21,000. ನಾಮದಾರಿ-20,000, ಮುಸ್ಲಿಂ-20,000, ಗೌಳಿ- 11,000, ಎಸ್‌ಟಿ- 8000, ಕ್ರಿಶ್ಚಿಯನ್-3000, ಗಂಗಾಮತ-3000, ಒಕ್ಕಲಿಗ-2000, ಕುರುಬ-1500, ಮಡಿವಾಳ- 1500, ಕುಣಬಿ-1500, ಜೈನ್ -800, ಸವಿತಾ ಸಮಾಜ-600, ನಾಡವರ-500, ರಜಪೂತ- 500, ಉಪ್ಪಾರ-500 ಮತದಾರರಿದ್ದಾರೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರಗಳ ಪೈಕಿ ಯಲ್ಲಾಪುರ ತಾಲೂಕಿನಲ್ಲಿ ಶಿವರಾಮ್ ಹೆಬ್ಬಾರ್ ಅತ್ಯಂತ ಹೆಚ್ಚು ಮತ ಪಡೆಯುವ ಸಾಧ್ಯತೆಗಳವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇಲ್ಲಿಹೆಚ್ಚು ಮತಗಳು ಚಲಾವಣೆಯಾಗಿರುವುದರಿಂದ ಬಿಜೆಪಿಯ ಅಭ್ಯರ್ಥಿಯಾಗಿರುವುದರಿಂದ ಈ ಬಾರಿ ಬಿಜೆಪಿಗ ಸಾಂಪ್ರದಾಯಕ ಮತಗಳು ಹೆಬ್ಬಾರ್​​ ಅವರಿಗೆ ಬೀಳಲಿವೆ. ಆದರೆ, ಮುಂಡಗೋಡ ಹಾಗೂ ಬನವಾಸಿ ಭಾಗದಲ್ಲಿ ಅವರು ಪಡೆಯುವ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸಲಿವೆ. ಮುಂಡಗೋಡ ಹಾಗೂ ಬನವಾಸಿ ಭಾಗದಲ್ಲಿ ಶಿವರಾಮ್ ಹೆಬ್ಬಾರ್ ಅವರ ವೈಯಕ್ತಿಕ ವರ್ಚಸ್ಸಿನ ಮತಗಳೇ ಅವರ ರಾಜಕೀಯ ಭವಿಷ್ಯ ಬರೆಯಲಿವೆ.

ಇದನ್ನೂ ಓದಿ : ಯಡಿಯೂರಪ್ಪ ಅಪರೇಷನ್ ಕಮಲದ ಪಿತಾಮಹ - ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ ; ಸಿದ್ಧರಾಮಯ್ಯ ಲೇವಡಿ

ಶಿವರಾಮ್ ಹೆಬ್ಬಾರ್ ಅವರ ಎದುರಾಳಿಯಾಗಿರುವ ಭೀಮಣ್ಣ ನಾಯ್ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಳೆದ 10 ವರ್ಷಗಳಿಂದ ಕೆಲಸ ಮಾಡಿದವರಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಅವರ ಚಿರಪರಿಚಿತರಾಗಿದ್ದು, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಅನೇಕ ಬೆಂಬಲಿಗರನ್ನು ಹೊಂದಿದ್ದಾರೆ.ಆದರೆ, ಈ ಭಾಗದಲ್ಲಿ ತಳಮಟ್ಟದ ಕಾರ್ಯಕರ್ತರು ಭೀಮಣ್ಣ ನಾಯ್ಕ ಅವರಿಗೆ ಪರಿಚಿತರಲ್ಲ. ಆದರೂ ನಾಯಕರ ಮೂಲಕ ಪ್ರಭಾವ ಬೀರಿ ಮತ ಪಡೆಯುವ ಪ್ರಯತ್ನದಲ್ಲಿ ಅವರು ತೊಡಗಿದ್ದಾರೆ. ಭೀಮಣ್ಣ ನಾಯ್ಕ ಅವರಿಗೆ ಯಲ್ಲಾಪುರದವನ್ನು ಚೆನ್ನಾಗಿ ಬಲ ಮಾಜಿ ಸಚಿವ ಆರ್ ವಿ ದೇಶಪಾಂಡೆ ಬೆನ್ನೆಲುಬಾಗಿ ನಿಂತಿದ್ದಾರೆ. ಭೀಮಣ್ಣ ನಾಯ್ಕರ ಗೆಲುವಿನ ಜವಾಬ್ದಾರಿಯನ್ನು ವಹಿಸಿಕೊಂಡಿರುವ  ದೇಶಪಾಂಡೆ ಕೂಡ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲೀಯೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಆರ್ ವಿ ದೇಶಪಾಂಡೆ ತಮ್ಮ ಮತಗಳನ್ನು ಭೀಮಣ್ಣ ನಾಯ್ಕ ಅವರಿಗೆ ಕೊಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕ್ಷೇತ್ರದ ವಿವಿಧೆಡೆ ಕಾಂಗ್ರೆಸ್​​ಗೆ ಸಾಂಪ್ರದಾಯಕ ಮತದಾರರಿರುವ ಜೊತೆಗೆ ಹಿಂದುಳಿದ ವರ್ಗದ ಮತದಾರರೂ ಅಧಿಕ ಪ್ರಮಾಣಲ್ಲಿದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರಿಗೆ ವರದಾನವಾಗಲಿದೆ.

ಇದನ್ನೂ ಓದಿ :  ಜೆಡಿಎಸ್ ಪಕ್ಷ ಕಷ್ಟದಲ್ಲಿದೆ; ನಮ್ಮ ಕೈ ಹಿಡಿಯಿರಿ ; ಮತದಾರರಿಗೆ ನಿಖಿಲ್​ ಕುಮಾರಸ್ವಾಮಿ ಮನವಿ

ಬಿಜೆಪಿ ನಾಯಕರ ಮೇಲೆ ಶಿವರಾಮ್ ಹೆಬ್ಬಾರ್ ಅವರನ್ನು ಗೆಲ್ಲಿಸುವ ಜವಾಬ್ದಾರಿ ಇದೆ. ಕಾಂಗ್ರೆಸ್ ನಾಯಕರಿಗೆ ಭೀಮಣ್ಣ ನಾಯ್ಕ ಗೆಲ್ಲಿಸುವ ಹೊಣೆ ಇದೆ. ಇಬ್ಬರ ಗೆಲುವು ಕೂಡ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಎಡು ಪಕ್ಷಗಳಿಗೆ ತಮ್ಮ ಅಭ್ಯರ್ಥಿ ಗೆಲ್ಲಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಶಿವರಾಮ್ ಹೆಬ್ಬಾರ್ ಹಾಗೂ ಭೀಮಣ್ಣ ನಾಯ್ಕ ಇಬ್ಬರ ವ್ಯಕ್ತಿತ್ವದ ಕುರಿತು ಸಾಕಷ್ಟು ಮಾತುಗಳಿವೆ. ಇಬ್ಬರ ಬಗ್ಗೆ ಕೊಡುಗೈ, ಧಾರಾಳ ವ್ಯಕ್ತಿತ್ವ ಎಂಬ ಮಾತುಗಳು ಕ್ಷೇತ್ರದಲ್ಲಿದೆ. ಹೀಗಾಗಿ ಸ್ಪರ್ಧೇ ಇನ್ನಷ್ಟು ತುರುಸಾಗಲಿದೆ.
First published: November 26, 2019, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading